Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್.ಎಂ.ಸಿ.) ವಿಧೇಯಕಕ್ಕೆ ನಿರ್ದಿಷ್ಟ ತಿದ್ದುಪಡಿಗಳಿಗೆ ಸಂಪುಟ ಅನುಮೋದನೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ  ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್.ಎಂ.ಸಿ.) ವಿಧೇಯಕಕ್ಕೆ ನಿರ್ದಿಷ್ಟ ಅಧಿಕೃತ ತಿದ್ದುಪಡಿಗಳನ್ನು ತರಲು ಅನುಮೋದನೆ ನೀಡಲಾಗಿದೆ.

 

2018 ರ ಜನವರಿ 2 ರಂದು ಲೋಕಸಭೆಯಲ್ಲಿ ಪರಿಗಣನೆಗೆ ಬಂದ ಎನ್.ಎಂ.ಸಿ. ವಿಧೇಯಕ ಆ ಬಳಿಕ ಇಲಾಖಾ ಸಂಬಂಧಿ ಸಂಸದೀಯ ಸ್ಥಾಯೀ ಸಮಿತಿ (ಡಿ.ಆರ್.ಪಿ.ಎಸ್.ಸಿ.) ಪರಿಶೀಲನೆಗೆ ಕಳುಹಿಸಲ್ಪಟ್ಟ ಹಿನ್ನೆಲೆಯಲ್ಲಿ ಈ ತಿದ್ದುಪಡಿಗಳನ್ನು ಮಾಡಲಾಗಿದೆ.  ಸ್ಥಾಯಿ ಸಮಿತಿಯು ತನ್ನ ವರದಿಯಲ್ಲಿ  ಮಾಡಿದ ಶಿಫಾರಸುಗಳನ್ನು ಸದನದಲ್ಲಿ  20-03-2018 ರಂದು ಮಂಡಿಸಿದ್ದು, ಜನರ ಅದರಲ್ಲೂ  ವೈದ್ಯ ವಿದ್ಯಾರ್ಥಿಗಳು ಮತ್ತು ವೈದ್ಯ ವೃತ್ತಿ ಮಾಡುತ್ತಿರುವವರಿಂದ ವಿಧೇಯಕದ ನಿರ್ದಿಷ್ಟ ಪ್ರಸ್ತಾವನೆಗಳ ಬಗ್ಗೆ  ಹಿಮ್ಮಾಹಿತಿ ಪಡೆದು ಸರಕಾರ ಅದನ್ನು ಪರಿಗಣನೆಗೆ ತೆಗೆದುಕೊಂಡಿದೆ.

 

ವಿವರಗಳು:

 

ತಿದ್ದುಪಡಿ ಈ ಅಂಶಗಳನ್ನು ಒಳಗೊಂಡಿದೆ.

 

  • ಎಂ.ಬಿ.ಬಿ.ಎಸ್. ಅಂತಿಮ ಪರೀಕ್ಷೆಯನ್ನು ದೇಶಾದ್ಯಂತ ಸಾಮಾನ್ಯ ಪರೀಕ್ಷಾ ರೀತಿಯಲ್ಲಿ ನಡೆಸಬೇಕು ಮತ್ತು ಅದು ರಾಷ್ಟ್ರೀಯ ನಿರ್ಗಮನ ಪರೀಕ್ಷೆ (ನೆಕ್ಸ್ಟ್-ಎನ್.ಇ.ಎಕ್ಸ್.ಟಿ) ಯಂತೆ ಪರಿಗಣಿಸಲ್ಪಡಬೇಕು.:

 

ವೈದ್ಯವೃತ್ತಿ ಆರಂಭಿಸಲು ಅನುಮತಿ (ಲೈಸೆನ್ಸ್) ಪಡೆಯುವುದಕ್ಕೆ ಪ್ರತ್ಯೇಕ ಹೆಚ್ಚುವರಿ ಲೈಸೆನ್ಸ್ ಪಡೆಯುವ ಪರೀಕ್ಷೆಗೆ ತಮ್ಮನ್ನು ಗುರಿಪಡಿಸುವುದನ್ನು ತಪ್ಪಿಸಬೇಕು ಎಂದು ವಿದ್ಯಾರ್ಥಿಗಳಿಂದ ಬಂದಿರುವ ಬೇಡಿಕೆಯ ಹಿನ್ನೆಲೆಯಲ್ಲಿ, ಅದನ್ನು ಪರಿಗಣಿಸಿದ ಸಂಪುಟವು ಅಂತಿಮ ಎಂ.ಬಿ.ಬಿ.ಎಸ್. ಪರೀಕ್ಷೆಯನ್ನು ದೇಶಾದ್ಯಂತ ಸಾಮಾನ್ಯ ಪರೀಕ್ಷೆಯಾಗಿ ನಡೆಸುವುದಕ್ಕೆ ಮತ್ತು ಅದು ರಾಷ್ಟ್ರೀಯ ನಿರ್ಗಮನ ಪರೀಕ್ಷೆಯಾಗಿ ಪರಿಗಣಿಸಲ್ಪಡುವುದಕ್ಕೆ ಅನುಮೋದನೆ ನೀಡಿತು. ಇದರಿಂದ ವಿದ್ಯಾರ್ಥಿಗಳು ಎಂ ಬಿ.ಬಿ.ಎಸ್. ಬಳಿಕ ಪ್ರತ್ಯೇಕ ಪರೀಕ್ಷೆಯನ್ನು ವೈದ್ಯ ವೃತ್ತಿ ಮಾಡುವ ಲೈಸೆನ್ಸ್ ಪಡೆಯುವುದಕ್ಕಾಗಿ ಬರೆಯುವ ಆವಶ್ಯಕತೆ ಇರುವುದಿಲ್ಲ.’ ನೆಕ್ಸ್ಟ್” ವಿದೇಶೀ ವೈದ್ಯಕೀಯ ವಿದ್ಯಾರ್ಹತೆ ಹೊಂದಿರುವ  ವೈದ್ಯರಿಗೆ ಭಾರತದಲ್ಲಿ ವೈದ್ಯ ವೃತ್ತಿ ಮಾಡಲು ಪರಿಶೀಲನಾ ಪರೀಕ್ಷೆಯಂತೆ ಕೂಡಾ ಕೆಲಸ ಮಾಡುತ್ತದೆ.

 

ಆಯುಷ್ ವೈದ್ಯ ವೃತ್ತಿ ಕೈಗೊಂಡಿರುವ ವೈದ್ಯರಿಗೆ ಆಧುನಿಕ ವೈದ್ಯಕೀಯ ವೃತ್ತಿ ಕೈಗೊಳ್ಳಲು ಅನುಕೂಲವಾಗುವಂತೆ ಇದ್ದ ಬ್ರಿಡ್ಜ್ ಕೋರ್ಸ್ ವ್ಯವಸ್ಥೆಯನ್ನು ತೆಗೆದು ಹಾಕಲಾಗಿದೆ.

 

ಆಯುಷ್ ವೈದ್ಯರು ಒಂದು ಮಿತಿಯವರೆಗೆ ಆಧುನಿಕ ವೈದ್ಯಕೀಯ ವೃತ್ತಿ ಕೈಗೊಳ್ಳಲು ಅನುಕೂಲವಾಗುವಂತೆ ಇದ್ದ ಬ್ರಿಡ್ಜ್ ಕೋರ್ಸ್ ವ್ಯವಸ್ಥೆಯನ್ನು ತೆಗೆದು ಹಾಕಲಾಗಿದೆ . ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಸೇವೆ ಲಭ್ಯ ಇರುವಂತೆ ಮಾಡಲು  ಅವಶ್ಯ ಕ್ರಮ ಕೈಗೊಳ್ಳುವ ಹೊಣೆಗಾರಿಕೆಯನ್ನು ಆಯಾ ರಾಜ್ಯ ಸರಕಾರಗಳ ಸುಪರ್ದಿಗೆ ಬಿಡಲಾಗಿದೆ.

 

ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಮತ್ತು  ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ 50 % ಸೀಟುಗಳಿಗೆ ಶುಲ್ಕ ನಿಯಂತ್ರಣ.

 

ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ನಿಯಂತ್ರಿತ ಶುಲ್ಕದಲ್ಲಿ ಗರಿಷ್ಟ 40 % ಸೀಟುಗಳನ್ನು ನೀಡುವಂತೆ ವಿಧಿಸಲಾಗಿದ್ದ ಪ್ರಮಾಣವನ್ನು 50 % ಗೇರಿಸಲಾಗಿದೆ. ಜತೆಗೆ ಈ ಶುಲ್ಕವು ಕಾಲೇಜು ವಸೂಲಿ ಮಾಡುವ ಇತರ ಎಲ್ಲಾ ಶುಲ್ಕಗಳನ್ನು ಒಳಗೊಂಡಿರಬೇಕಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

 

ಎನ್.ಎಂ.ಸಿ.ಯಲ್ಲಿ  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಾಮಕರಣ ಸದಸ್ಯರ ಸಂಖ್ಯೆಯನ್ನು 3 ರಿಂದ 6  ಕ್ಕೆ ಏರಿಸಲಾಗಿದೆ. ಎನ್.ಎಂ.ಸಿ.ಯಲ್ಲಿ ಪ್ರಾತಿನಿಧ್ಯ ಹೆಚ್ಚಿಸುವಂತೆ ರಾಜ್ಯಗಳಿಂದ ಬಂದ ಒತ್ತಾಯದ ಹಿನ್ನೆಲೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳ ಸಂಖ್ಯೆಯನ್ನು 3 ರಿಂದ 6 ಕ್ಕೇರಿಸಲಾಗಿದೆ. ಎನ್.ಎಂ.ಸಿ.ಯು 25 ಸದಸ್ಯರನ್ನು ಹೊಂದಿರುತ್ತದೆ ಮತ್ತು ಅವರಲ್ಲಿ ಕನಿಷ್ಟ 21  ಮಂದಿ ವೈದ್ಯರು ಇರುತ್ತಾರೆ.

 

ನಿಯಮ ಪಾಲಿಸದ  ವೈದ್ಯಕೀಯ ಕಾಲೇಜುಗಳಿಗೆ ಹಣಕಾಸು ದಂಡ ವಿಧಿಸುವ ಮಾನದಂಡಗಳನ್ನು  ವಿವಿಧ ದಂಡದ ಪ್ರಸ್ತಾವನೆಗಳೊಂದಿಗೆ ಸ್ಥಳಾಂತರಿಸಲಾಗಿದೆ.

 

ಭಾಗೀದಾರರ ಜತೆಗಿನ ಸಮಾಲೋಚನೆಯಲ್ಲಿ ಕಂಡು ಬಂದ ಇನ್ನೊಂದು ಪ್ರಮುಖ ಅಂಶವೆಂದರೆ ವಿವಿಧ ಮಾದರಿಯ ದಂಡಗಳು. ಒಂದು ತಂಡದಿಂದ ವಾರ್ಷಿಕ ಶುಲ್ಕದ ಒಂದೂವರೆ ಪಟ್ಟಿನಿಂದ ಹಿಡಿದು ಹತ್ತು ಪಟ್ಟು ದಂಡ ವಸೂಲಿಯ ವ್ಯವಸ್ಥೆ ಇದ್ದಿತು.  ಮಾನದಂಡಗಳನ್ನು ಅಳವಡಿಸಿಕೊಳ್ಳದಿದ್ದರೆ ವೈದ್ಯಕೀಯ ಕಾಲೇಜಿನ ಮೇಲೆ ಶ್ರೇಣೀಕೃತ ರೀತಿಯಲ್ಲಿ ದಂಡ ವಿಧಿಸಲಾಗುತ್ತಿತ್ತು. ಈ ನಿಬಂಧನೆಯನ್ನು ವಿವಿಧ ಮಾದರಿಯ ಎಚ್ಚರಿಕೆ ನೀಡುವಿಕೆ, ಯೋಗ್ಯ ರೀತಿಯಲ್ಲಿ ಹಣಕಾಸು ದಂಡ ವಿಧಿಸುವಿಕೆ, ವಿದ್ಯಾರ್ಥಿ ಸೇರ್ಪಡೆ ಸಂಖ್ಯೆಯಲ್ಲಿ ಕಡಿತ ಮಾಡುವಿಕೆ, ವಿದ್ಯಾರ್ಥಿ ಸೇರ್ಪಡೆ ತಡೆ ಹಿಡಿದು  ಮಾನ್ಯತೆ ಹಿಂಪಡೆಯುವ ಹಂತಕ್ಕೆ ಹೋಗುವಂತಹ ಕ್ರಮಗಳೊಂದಿಗೆ ಸ್ಥಳಾಂತರಿಸಲಾಗಿದೆ.

 

ವಿದ್ಯಾರ್ಹತೆ ಇಲ್ಲದೆ ವೈದ್ಯ ವೃತ್ತಿ ಮಾಡಿದರೆ, ನಕಲಿ ಪಂಡಿತ ಅಥವಾ  ನಕಲಿ  ವೈದ್ಯ ವೃತ್ತಿ ಮಾಡಿದರೆ ಕಠಿಣ ಶಿಕ್ಷೆ  

 

ಸರಕಾರವು ನಾಗರಿಕರಿಗೆ ಲಭ್ಯ ಇರುವ ಆರೋಗ್ಯ ರಕ್ಷಣಾ ವ್ಯವಸ್ಥೆಯ ಸುರಕ್ಷೆ  ಮತ್ತು ಗುಣಮಟ್ಟದ ಬಗ್ಗೆ ಕಾಳಜಿ ಹೊಂದಿದೆ ಮತ್ತು ಅದು ನಕಲಿ ವೈದ್ಯರ ಅಥವಾ ಸೂಕ್ತ ವಿದ್ಯಾರ್ಹತೆ ಇಲ್ಲದೆ ವೈದ್ಯ ವೃತ್ತಿ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಮನಗಂಡಿದೆ. ಅನಧಿಕೃತವಾಗಿ ವೈದ್ಯ ವೃತ್ತಿ ನಡೆಸುವವರ ವಿರುದ್ಧ ಒಂದು ವರ್ಷದ ಜೈಲು ವಾಸದ ಶಿಕ್ಷೆ ಸಹಿತ 5  ಲಕ್ಷ ರೂ, ಗಳವರೆಗೆ ದಂಡ ವಿಧಿಸುವ ಪ್ರಸ್ತಾವನೆಗಳ ಮೂಲಕ ಶಿಕ್ಷೆಯ ಪ್ರಮಾಣವನ್ನು ಕಠಿಣಗೊಳಿಸಲಾಗಿದೆ.