Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಂಡಿಯಾ ಐಡಿಯಾಸ್ ಶೃಂಗಸಭೆ 2020: ಪ್ರಧಾನಿಯವರ ಭಾಷಣ


 

ನಮಸ್ಕಾರ!

ಉದ್ಯಮ ಮುಖಂಡರೇ,

ವಿಶೇಷ ಅತಿಥಿಗಳೇ,

ಇಂಡಿಯಾ ಐಡಿಯಾಸ್ ಶೃಂಗಸಭೆಯನ್ನು‘ ಉದ್ದೇಶಿಸಿ ಮಾತನಾಡಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಯುಎಸ್ಇಂಡಿಯಾ ಬಿಸಿನೆಸ್ ಕೌನ್ಸಿಲ್ ಗೆ ನಾನು ಧನ್ಯವಾದ ಹೇಳುತ್ತೇನೆ ವರ್ಷ ತನ್ನ ನಲವತ್ತೈದನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಯುಎಸ್ಐಬಿಸಿಗೆ ನನ್ನ ಅಭಿನಂದನೆಗಳುದಶಕಗಳಿಂದಯುಎಸ್ಐಬಿಸಿ ಭಾರತ ಮತ್ತು ಅಮೇರಿಕಾದ ವ್ಯವಹಾರವನ್ನು ಹತ್ತಿರಕ್ಕೆ ತಂದಿದೆ ವರ್ಷದ ಐಡಿಯಾಸ್ ಶೃಂಗಸಭೆಯ ಯುಎಸ್ಐಬಿಸಿ ವಿಷಯವಾದ ಉತ್ತಮ ಭವಿಷ್ಯದ ನಿರ್ಮಾಣಕೂಡ ತುಂಬಾ ಪ್ರಸ್ತುತವಾಗಿದೆ.

ಸ್ನೇಹಿತರೇ,

ಜಗತ್ತಿಗೆ ಉತ್ತಮ ಭವಿಷ್ಯದ ಅವಶ್ಯಕತೆಯಿದೆ ಎಂಬುದನ್ನು ನಾವೆಲ್ಲರೂ ಒಪ್ಪುತ್ತೇವೆನಾವೆಲ್ಲರೂ ಒಟ್ಟಾಗಿ ಭವಿಷ್ಯವನ್ನು ರೂಪಿಸಬೇಕಾಗಿದೆಭವಿಷ್ಯದ ಬಗೆಗಿನ ನಮ್ಮ ವಿಧಾನವು ಮುಖ್ಯವಾಗಿ ಹೆಚ್ಚು ಮಾನವ ಕೇಂದ್ರಿತವಾಗಿರಬೇಕು ಎಂದು ನಾನು ದೃಢವಾಗಿ ನಂಬುತ್ತೇನೆನಮ್ಮ ಬೆಳವಣಿಗೆಯ ಕಾರ್ಯಸೂಚಿಯು ಬಡವರನ್ನು ಮತ್ತು ದುರ್ಬಲರನ್ನು ಪ್ರಮುಖವಾಗಿಸಿಕೊಳ್ಳಬೇಕು. ‘ಸುಗಮ ಜೀವನವು’‘ಸುಗಮ ವ್ಯವಹಾರದಷ್ಟೇ ಮುಖ್ಯವಾಗಿದೆ.

ಸ್ನೇಹಿತರೇ,

ಜಾಗತಿಕ ಆರ್ಥಿಕತೆಯು ದಕ್ಷತೆ ಮತ್ತು ಪರಿಣಾಮದ ಮೇಲೆ ಹೆಚ್ಚು ಕೇಂದ್ರೀಕರಿಸಿದೆ ಎಂದು ಇತ್ತೀಚಿನ ಅನುಭವವು ನಮಗೆ ಕಲಿಸಿದೆದಕ್ಷತೆ ಒಳ್ಳೆಯದೇಆದರೆ  ದಾರಿಯಲ್ಲಿಅಷ್ಟೇ ಮುಖ್ಯವಾದ ಬೇರಾವುದನ್ನೋ ನಾವು ಮರೆತಿದ್ದೇವೆಅದು ಬಾಹ್ಯ ಆಘಾತಗಳ ವಿರುದ್ಧದ ಸ್ಥಿತಿಸ್ಥಾಪಕತ್ವಸ್ಥಿತಿಸ್ಥಾಪಕತ್ವ ಎಷ್ಟು ಮುಖ್ಯ ಎಂಬುದನ್ನು ಜಾಗತಿಕ ಸಾಂಕ್ರಾಮಿಕವು ನಮಗೆ ನೆನಪಿಸಿದೆ.

ಸ್ನೇಹಿತರೇ,

ಬಲವಾದ ದೇಶೀಯ ಆರ್ಥಿಕ ಸಾಮರ್ಥ್ಯಗಳಿಂದ ಜಾಗತಿಕ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಸಾಧಿಸಬಹುದುಇದರರ್ಥ ಉತ್ಪಾದನೆಗಾಗಿ ಸುಧಾರಿತ ದೇಶೀಯ ಸಾಮರ್ಥ್ಯಹಣಕಾಸು ವ್ಯವಸ್ಥೆಯನ್ನು ಪುನಃಸ್ಥಾಪನೆ ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ವೈವಿಧ್ಯೀಕರಣ.

ಸ್ನೇಹಿತರೇ,

ಆತ್ಮನಿರ್ಭರ ಭಾರತ ಮೂಲಕ ಭಾರತವು ಸಮೃದ್ಧ ಮತ್ತು ಚೇತರಿಕೆಯ ಜಗತ್ತಿಗೆ ಕೊಡುಗೆ ನೀಡುತ್ತಿದೆಅದಕ್ಕಾಗಿನಿಮ್ಮ ಪಾಲುದಾರಿಕೆಗಾಗಿ ನಾವು ಕಾಯುತ್ತಿದ್ದೇವೆ!

ಸ್ನೇಹಿತರೇ,

ಇಂದುಭಾರತದ ಬಗ್ಗೆ ಜಗತ್ತಿಗೆ ಆಶಾವಾದವಿದೆಭಾರತವು ಮುಕ್ತತೆಅವಕಾಶಗಳು ಮತ್ತು ಆಯ್ಕೆಗಳ ಪರಿಪೂರ್ಣ ಸಂಯೋಜನೆಯನ್ನು ನೀಡುತ್ತಿರುವುದು ಇದಕ್ಕೆ ಕಾರಣಇದನ್ನು ನಾನು ವಿಸ್ತಾರವಾಗಿ ಹೇಳುತ್ತೇನೆಭಾರತವು ಜನರಲ್ಲಿ ಮತ್ತು ಆಡಳಿತದಲ್ಲಿ ಮುಕ್ತತೆಯನ್ನು ತಂದಿದೆಮುಕ್ತ ಮನಸ್ಸುಗಳು ಮುಕ್ತ ಮಾರುಕಟ್ಟೆಗಳನ್ನು ನಿರ್ಮಿಸುತ್ತವೆಮುಕ್ತ ಮಾರುಕಟ್ಟೆಗಳು ಹೆಚ್ಚಿನ ಸಮೃದ್ಧಿಗೆ ಕಾರಣವಾಗುತ್ತವೆಇವು ಭಾರತ ಮತ್ತು ಅಮೆರಿಕಾ ಎರಡೂ ಒಪ್ಪುವ ತತ್ವಗಳಾಗಿವೆ.

ಸ್ನೇಹಿತರೇ,

ಕಳೆದ ಆರು ವರ್ಷಗಳಲ್ಲಿನಮ್ಮ ಆರ್ಥಿಕತೆಯನ್ನು ಹೆಚ್ಚು ಮುಕ್ತ ಮತ್ತು ಸುಧಾರಣಾ ಆಧಾರಿತವಾಗಿಸಲು ನಾವು ಅನೇಕ ಪ್ರಯತ್ನಗಳನ್ನು ಮಾಡಿದ್ದೇವೆಸುಧಾರಣೆಗಳು ಹೆಚ್ಚಿನ ಸ್ಪರ್ಧಾತ್ಮಕತೆವರ್ಧಿತ ‘ಪಾರದರ್ಶಕತೆವಿಸ್ತರಿತ ‘ಡಿಜಿಟಲೀಕರಣ’, ಹೆಚ್ಚಿನ ‘ನಾವೀನ್ಯತೆ’ ಮತ್ತು ಹೆಚ್ಚು ‘ನೀತಿ ಸ್ಥಿರತೆಯನ್ನು ಖಾತ್ರಿಪಡಿಸಿವೆ.

ಸ್ನೇಹಿತರೇ,

ಭಾರತವು ಅವಕಾಶಗಳ ತಾಣವಾಗಿ ಹೊರಹೊಮ್ಮುತ್ತಿದೆತಂತ್ರಜ್ಞಾನ ಕ್ಷೇತ್ರದ ಒಂದು ಉದಾಹರಣೆ ನೀಡುತ್ತೇನೆಇತ್ತೀಚೆಗೆ ಭಾರತದಲ್ಲಿ ಒಂದು ಕುತೂಹಲಕಾರಿ ವರದಿ ಬಂತುನಗರಗಳ ಅಂತರ್ಜಾಲ ಬಳಕೆದಾರರಿಗಿಂತ ಮೊದಲ ಬಾರಿಗೆ ಗ್ರಾಮೀಣ ಅಂತರ್ಜಾಲ ಬಳಕೆದಾರರು ಹೆಚ್ಚಾಗಿದ್ದಾರೆ ಎಂದು  ವರದಿ ಹೇಳಿದೆಇದರ ಪ್ರಮಾಣವನ್ನು ಕಲ್ಪಿಸಿಕೊಳ್ಳಿಭಾರತದಲ್ಲಿ ಈಗ ಸುಮಾರು ಅರ್ಧ ಶತಕೋಟಿ ಸಕ್ರಿಯ ಅಂತರ್ಜಾಲ ಬಳಕೆದಾರರಿದ್ದಾರೆಅರ್ಧ ಶತಕೋಟಿ ಸಂಪರ್ಕಿತ ಜನರುಇದು ನಿಮಗೆ ದೊಡ್ಡದು ಎನ್ನಿಸುತ್ತಿಲ್ಲವೇನಿಮ್ಮ ಉಸಿರು ಬಿಗಿಹಿಡಿದುಕೊಳ್ಳಿಏಕೆಂದರೆಸಂಪರ್ಕ ಪಡೆದಿರುವ ಅರ್ಧ ಶತಕೋಟಿಗೂ ಹೆಚ್ಚು ಜನರಿದ್ದಾರೆತಂತ್ರಜ್ಞಾನದಲ್ಲಿನ ಅವಕಾಶಗಳು 5 ಜಿಬಿಗ್ ಡಾಟಾ ಅನಾಲಿಟಿಕ್ಸ್ಕ್ವಾಂಟಮ್ ಕಂಪ್ಯೂಟಿಂಗ್ಬ್ಲಾಕ್ಚೈನ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ನಂತಹ ವಸ್ತುಗಳ ಮುಂಚೂಣಿ ತಂತ್ರಜ್ಞಾನಗಳಲ್ಲಿನ ಅವಕಾಶಗಳನ್ನು ಸಹ ಒಳಗೊಂಡಿವೆ.

ಸ್ನೇಹಿತರೇ,

ಭಾರತದಲ್ಲಿ ಹೂಡಿಕೆಯ ಆಯ್ಕೆಗಳು ವಿಸ್ತಾರವಾಗಿವೆನಮ್ಮ ರೈತರ ಕಠಿಣ ಪರಿಶ್ರಮದಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆಭಾರತ ಇತ್ತೀಚೆಗೆ ಕೃಷಿ ಕ್ಷೇತ್ರದಲ್ಲಿ ಐತಿಹಾಸಿಕ ಸುಧಾರಣೆಗಳನ್ನು ಮಾಡಿದೆಕೃಷಿ ಸಾಧನಗಳು ಮತ್ತು ಯಂತ್ರೋಪಕರಣಗಳುಕೃಷಿ ಪೂರೈಕೆ ಸರಪಳಿ ನಿರ್ವಹಣೆತಿನ್ನಲು ಸಿದ್ಧಪಡಿಸಿದ ವಸ್ತುಗಳುಮೀನುಗಾರಿಕೆ ಮತ್ತು ಸಾವಯವ ಉತ್ಪನ್ನಗಳಲ್ಲಿ ಹೂಡಿಕೆಯ ಅವಕಾಶಗಳಿವೆ.  2025  ವೇಳೆಗೆ ಭಾರತದ ಆಹಾರ ಸಂಸ್ಕರಣಾ ಕ್ಷೇತ್ರವು ಅರ್ಧ ಟ್ರಿಲಿಯನ್ ಡಾಲರ್ಗಿಂತ ಹೆಚ್ಚಿನದಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆಹೆಚ್ಚಿನ ಆದಾಯದ ಮೂಲಗಳನ್ನು ವೃದ್ಧಿಸಲುಭಾರತೀಯ ಕೃಷಿ ಕ್ಷೇತ್ರದಲ್ಲಿನ ಹೂಡಿಕೆಯ ಅವಕಾಶಗಳನ್ನು ಬಳಸಿಕೊಳ್ಳಲು ಈಗ ಉತ್ತಮ ಸಂದರ್ಭವಾಗಿದೆ!

ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆಭಾರತದಲ್ಲಿ ಆರೋಗ್ಯ ಕ್ಷೇತ್ರವು ಪ್ರತಿವರ್ಷ ಶೇಕಡಾ 22 ಕ್ಕಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿದೆನಮ್ಮ ಕಂಪನಿಗಳು ವೈದ್ಯಕೀಯತಂತ್ರಜ್ಞಾನಟೆಲಿಮೆಡಿಸಿನ್ ಮತ್ತು ಡಯಾಗ್ನೋಸ್ಟಿಕ್ಸ್ ನಲ್ಲಿ ಪ್ರಗತಿ ಸಾಧಿಸುತ್ತಿವೆಭಾರತ ಮತ್ತು ಅಮೆರಿಕಾ ಈಗಾಗಲೇ ಫಾರ್ಮಾ ಕ್ಷೇತ್ರದಲ್ಲಿ ದೃಢವಾದ ಪಾಲುದಾರಿಕೆಯನ್ನು ಹೊಂದಿವೆಪ್ರಮಾಣ ಮತ್ತು ವೇಗವನ್ನು ಸಾಧಿಸಲುಭಾರತದ ಆರೋಗ್ಯರಕ್ಷಣಾ ಕ್ಷೇತ್ರದಲ್ಲಿ ನಿಮ್ಮ ಹೂಡಿಕೆಯನ್ನು ವಿಸ್ತರಿಸಲು ಇದೀಗ ಉತ್ತಮ ಸಮಯವಾಗಿದೆ!

ಭಾರತವು ನಿಮ್ಮನ್ನು ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಹ್ವಾನಿಸುತ್ತದೆಭಾರತವು ಅನಿಲ ಆಧಾರಿತ ಆರ್ಥಿಕತೆಯಾಗಿ ವಿಕಸನಗೊಳ್ಳುತ್ತಿರುವುದರಿಂದಅಮೆರಿಕಾ ಕಂಪನಿಗಳಿಗೆ ದೊಡ್ಡ ಹೂಡಿಕೆಯ ಅವಕಾಶಗಳಿವೆಶುದ್ಧ ಇಂಧನ ಕ್ಷೇತ್ರದಲ್ಲಿಯೂ ದೊಡ್ಡ ಅವಕಾಶಗಳಿವೆನಿಮ್ಮ ಹೂಡಿಕೆಗೆ ಹೆಚ್ಚಿನ ಶಕ್ತಿ ತುಂಬಲು,  ಭಾರತದ ವಿದ್ಯುತ್ ಕ್ಷೇತ್ರಕ್ಕೆ ಪ್ರವೇಶಿಸಲು ಇದು ಅತ್ಯುತ್ತಮ ಸಮಯ!

ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆನಮ್ಮ ರಾಷ್ಟ್ರವು ಇತಿಹಾಸದಲ್ಲಿಯೇ ಅತಿದೊಡ್ಡ ಮೂಲಸೌಕರ್ಯ ನಿರ್ಮಾಣಕ್ಕೆ ಸಾಕ್ಷಿಯಾಗಿದೆಬನ್ನಿಲಕ್ಷಾಂತರ ಜನರಿಗೆ ವಸತಿ ನಿರ್ಮಿಸಲು ಅಥವಾ ನಮ್ಮ ರಾಷ್ಟ್ರದಲ್ಲಿ ರಸ್ತೆಗಳುಹೆದ್ದಾರಿಗಳು ಮತ್ತು ಬಂದರುಗಳನ್ನು ನಿರ್ಮಿಸಲು ಪಾಲುದಾರರಾಗಿ.

ನಾಗರಿಕ ವಿಮಾನಯಾನವು ಹೆಚ್ಚಿನ ಸಂಭಾವ್ಯ ಬೆಳವಣಿಗೆಯ ಮತ್ತೊಂದು ಕ್ಷೇತ್ರವಾಗಿದೆಮುಂದಿನ 8 ವರ್ಷಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆಪ್ರಮುಖ ಖಾಸಗಿ ಭಾರತೀಯ ವಿಮಾನಯಾನ ಸಂಸ್ಥೆಗಳು ಮುಂಬರುವ ದಶಕದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹೊಸ ವಿಮಾನಗಳನ್ನು ಸೇರಿಸಲು ಯೋಜಿಸಿವೆಭಾರತದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಆಯ್ಕೆ ಮಾಡುವ ಯಾವುದೇ ಹೂಡಿಕೆದಾರರಿಗೆ ಇದು ಒಂದು ದೊಡ್ಡ ಅವಕಾಶವಾಗಿದೆಇದು ಪ್ರಾದೇಶಿಕ ಮಾರುಕಟ್ಟೆಗಳನ್ನು ಪೂರೈಸುವ ನೆಲೆಯಾಗಬಹುದುನಿರ್ವಹಣೆ ದುರಸ್ತಿ ಮತ್ತು ಕಾರ್ಯಾಚರಣೆ ಸೌಲಭ್ಯಗಳನ್ನು ಸ್ಥಾಪಿಸಲೂ ಸಹ ಇದೇ ರೀತಿಯ ಅವಕಾಶಗಳಿವೆನಿಮ್ಮ ವಾಯುಯಾನ ಗುರಿಗಳಿಗೆ ವೇಗ ನೀಡಲುಭಾರತದ ವಾಯುಯಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ.

ರಕ್ಷಣೆ ಮತ್ತು ಬಾಹ್ಯಾಕಾಶದಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ನಾವು ವಿದೇಶಿ ನೇರ ಹೂಡಿಕೆ ಮಿತಿಯನ್ನು  ಶೇಕಡಾ 74 ಕ್ಕೆ ಹೆಚ್ಚಿಸುತ್ತಿದ್ದೇವೆರಕ್ಷಣಾ ಉಪಕರಣಗಳು ಮತ್ತು ಸಾಧನಗಳ ಉತ್ಪಾದನೆಯನ್ನು ಉತ್ತೇಜಿಸಲು ಭಾರತ ಎರಡು ರಕ್ಷಣಾ ಕಾರಿಡಾರ್ಗಳನ್ನು ಸ್ಥಾಪಿಸಿದೆಖಾಸಗಿ ಮತ್ತು ವಿದೇಶಿ ಹೂಡಿಕೆದಾರರಿಗೆ ನಾವು ವಿಶೇಷ ಪ್ರೋತ್ಸಾಹ ನೀಡುತ್ತೇವೆಕೆಲವು ವಾರಗಳ ಹಿಂದೆನಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಮುಖ ಸುಧಾರಣೆಗಳನ್ನು ತಂದಿದ್ದೇವೆಬನ್ನಿ ಮುಂಬರುವ ಕ್ಷೇತ್ರಗಳ ಒಂದು ಭಾಗವಾಗಿ.

ಹಣಕಾಸು ಮತ್ತು ವಿಮೆಯಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆಭಾರತವು ವಿಮೆಯಲ್ಲಿ ಹೂಡಿಕೆ ಮಾಡಲು ವಿದೇಶಿ ನೇರ ಹೂಡಿಕೆ ಮಿತಿಯನ್ನು  ಶೇ.49 ಕ್ಕೆ ಹೆಚ್ಚಿಸಿದೆವಿಮಾ ಮಧ್ಯವರ್ತಿಗಳಲ್ಲಿ ಹೂಡಿಕೆ ಮಾಡಲು ಈಗ 100 ಪ್ರತಿಶತ ಎಫ್ಡಿಐಗೆ ಅನುಮತಿ ಇದೆಭಾರತದಲ್ಲಿ ವಿಮಾ ಮಾರುಕಟ್ಟೆ ಶೇಕಡಾ 12 ಕ್ಕಿಂತ ಹೆಚ್ಚು ದರದಲ್ಲಿ ಬೆಳೆಯುತ್ತಿದೆ ಮತ್ತು 2025  ವೇಳೆಗೆ 250 ಬಿಲಿಯನ್ ಡಾಲರ್ಗಳಿಗೆ ಬೆಳೆಯುವ ನಿರೀಕ್ಷೆಯಿದೆನಮ್ಮ ಆರೋಗ್ಯ ಭರವಸೆ ಯೋಜನೆ ಆಯುಷ್ಮಾನ್ ಭಾರತದ ಯಶಸ್ಸು,  ನಮ್ಮ ಬೆಳೆ ವಿಮಾ ಯೋಜನೆಯಾದ ಪಿಎಂ ಫಸಲ್ ಬೀಮಾ ಯೋಜನೆ ಮತ್ತು ಜನ ಸುರಕ್ಷಾ ಅಥವಾ ಸಾಮಾಜಿಕ ಭದ್ರತಾ ಯೋಜನೆಗಳುವಿಮಾ ಉತ್ಪನ್ನಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳಲು ಮತ್ತು ಸ್ವೀಕರಿಸಲು ಸರ್ಕಾರವು ನೆಲೆ ಕಲ್ಪಿಸಿದೆಆರೋಗ್ಯಕೃಷಿವ್ಯವಹಾರ ಮತ್ತು ಜೀವ ವಿಮೆಯಲ್ಲಿ ವಿಮಾ ರಕ್ಷಣೆಯನ್ನು ಹೆಚ್ಚಿಸಲು ದೊಡ್ಡ ಅವಕಾಶಗಳಿವೆದೀರ್ಘಾವಧಿಯ ಮತ್ತು ಭರವಸೆಯ ಆದಾಯವನ್ನು ಗಳಿಸಲುಭಾರತೀಯ ವಿಮಾ ಕ್ಷೇತ್ರವು ಇದೀಗ ಉತ್ತಮ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ!

ನಾನು ನಿಮಗೆ ಯಾವುದೇ ಸಲಹಾ ಶುಲ್ಕವಿಲ್ಲದೆ ಕೆಲವು ಆಯ್ಕೆಗಳನ್ನು ನೀಡಿದ್ದೇನೆ.

ಸ್ನೇಹಿತರೇ,

ಮಾರುಕಟ್ಟೆಗಳು ತೆರೆದಾಗಅವಕಾಶ ಹೆಚ್ಚಾದಾಗ ಮತ್ತು ಆಯ್ಕೆಗಳು ಅಪಾರವಾಗಿ ಇದ್ದಾಗಆಶಾವಾದವು ಹಿಂಬಾಲಿಸುತ್ತದೆಪ್ರಮುಖ ವ್ಯಾಪಾರ ಶ್ರೇಯಾಂಕದಲ್ಲಿ ಭಾರತ ಏರಿದಾಗ ನೀವು ಆಶಾವಾದವನ್ನು ನೋಡಬಹುದುವಿಶೇಷವಾಗಿ ವಿಶ್ವ ಬ್ಯಾಂಕಿನ ಸುಗಮ ವ್ಯವಹಾರದ ಶ್ರೇಯಾಂಕಗಳು.

ಹೂಡಿಕೆಯು ಆತ್ಮವಿಶ್ವಾಸದ ಅತ್ಯುತ್ತಮ ನಿದರ್ಶನವಾಗಿದೆಪ್ರತಿ ವರ್ಷನಾವು ವಿದೇಶಿ ನೇರ ಹೂಡಿಕೆಯಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದೇವೆಪ್ರತಿ ವರ್ಷ ಹಿಂದಿನ ವರ್ಷಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. 2019-20ರಲ್ಲಿ ಭಾರತದಲ್ಲಿ ವಿದೇಶಿ ನೇರ ಹೂಡಿಕೆಯು 74 ಬಿಲಿಯನ್ ಡಾಲರ್ ಆಗಿತ್ತುಇದು ಹಿಂದಿನ ವರ್ಷಕ್ಕಿಂತ ಶೇಕಡಾ 20 ರಷ್ಟು ಹೆಚ್ಚಾಗಿದೆಅಮೆರಿಕಾದ ‘ವಾಗ್ದಾನ ಹೂಡಿಕೆಯು ಈಗಾಗಲೇ  ವರ್ಷ 40 ಬಿಲಿಯನ್ ಡಾಲರ್ಗಳನ್ನು ದಾಟಿದೆ ಎಂದು ಯುಎಸ್ಐಬಿಸಿಯ ಸ್ನೇಹಿತರು ತಿಳಿಸಿದ್ದಾರೆಸದ್ಯದ ಸಾಂಕ್ರಾಮಿಕ ಸಂದರ್ಭದಲ್ಲಿ ಸಹ ಏನಾಗಿದೆ ಎಂಬುದನ್ನು ನೋಡಿಕೋವಿಡ್ನ ನಡುವೆಯೂಭಾರತವು 2020 ಏಪ್ರಿಲ್ ಮತ್ತು ಜುಲೈ ನಡುವೆ 20 ಶತಕೋಟಿ ಡಾಲರ್ಗಿಂತ ಹೆಚ್ಚಿನ ವಿದೇಶಿ ಹೂಡಿಕೆಯನ್ನು ಆಕರ್ಷಿಸಿದೆ!

ಆದರೆಭಾರತ ಇನ್ನೂ ಹಲವು ಅವಕಾಶಗಳನ್ನು ನೀಡುತ್ತದೆಜಾಗತಿಕ ಆರ್ಥಿಕ ಚೇತರಿಕೆಗೆ ಶಕ್ತಿ ತುಂಬುವುದು ನಮಗೆ ಬೇಕಾಗಿದೆ.

ಸ್ನೇಹಿತರೇ,

ಭಾರತದ ಪ್ರಗತಿ ಎಂದರೆನೀವು ನಂಬಬಹುದಾದ ರಾಷ್ಟ್ರದೊಂದಿಗಿನ ವ್ಯಾಪಾರ ಅವಕಾಶಗಳ ಪ್ರಗತಿಹೆಚ್ಚುತ್ತಿರುವ ಮುಕ್ತತೆಯೊಂದಿಗೆ ಜಾಗತಿಕ ಏಕೀಕರಣದ ಪ್ರಗತಿಬೃಹತ್ ಪ್ರಮಾಣದ ಮಾರುಕಟ್ಟೆಯ ಲಭ್ಯತೆಯೊಂದಿಗೆ ನಿಮ್ಮ ಸ್ಪರ್ಧಾತ್ಮಕತೆಯ ಪ್ರಗತಿ ಮತ್ತು ಕೌಶಲ್ಯಭರಿತಮಾನವ ಸಂಪನ್ಮೂಲಗಳ ಲಭ್ಯತೆಯೊಂದಿಗೆ ಹೂಡಿಕೆಯ ಮೇಲಿನ ನಿಮ್ಮ ಆದಾಯದ ಪ್ರಗತಿ.

ಸ್ನೇಹಿತರೇ,

 ದೃಷ್ಟಿಕೋನಕ್ಕೆಅಮೇರಿಕಾಕ್ಕಿಂತ ಕೆಲವು ಉತ್ತಮ ಪಾಲುದಾರರಿದ್ದಾರೆಭಾರತ ಮತ್ತು ಅಮೆರಿಕಾ ಹಂಚಿಕೆಯ ಮೌಲ್ಯಗಳೊಂದಿಗೆ ಎರಡು ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿವೆನಾವು ಸಹಜ ಪಾಲುದಾರರುಅಮೆರಿಕಾಭಾರತ ಸ್ನೇಹವು  ಹಿಂದೆಯೂ ಅನೇಕ ಎತ್ತರಗಳನ್ನು ಮುಟ್ಟಿದೆಸಾಂಕ್ರಾಮಿಕ ರೋಗದ ನಂತರ ಜಗತ್ತು ವೇಗವಾಗಿ ಪುಟಿದೇಳಲು ಸಹಾಯ ಮಾಡುವಲ್ಲಿ ನಮ್ಮ ಪಾಲುದಾರಿಕೆ ಪ್ರಮುಖ ಪಾತ್ರ ವಹಿಸುವ ಸಮಯ ಬಂದಿದೆಅಮೇರಿಕಾದ ಹೂಡಿಕೆದಾರರು ಸಾಮಾನ್ಯವಾಗಿ ಒಂದು ವಲಯ ಅಥವಾ ದೇಶವನ್ನು ಪ್ರವೇಶಿಸಲು ಸೂಕ್ತ ಸಮಯವನ್ನು ನೋಡುತ್ತಾರೆಅವರಿಗೆನಾನು ಹೇಳಲು ಬಯಸುವುದೆಂದರೆಭಾರತದಲ್ಲಿ ಹೂಡಿಕೆ ಮಾಡಲು ಇದಕ್ಕಿಂತ ಉತ್ತಮ ಸಂದರ್ಭ ಯಾವಾಗಲೂ ಬಂದಿರಲಿಲ್ಲ!

ಭಾರತಅಮೆರಿಕಾ ಆರ್ಥಿಕ ಸಹಭಾಗಿತ್ವವನ್ನು ಹೆಚ್ಚಿಸುವ ಬದ್ಧತೆಯ ಯುಎಸ್ಐಬಿಸಿ ನಾಯಕತ್ವಕ್ಕೆ ನಾನು ಮತ್ತೊಮ್ಮೆ ಧನ್ಯವಾದ ಹೇಳುತ್ತೇನೆಯುಎಸ್ಐಬಿಸಿ ಹೊಸ ಎತ್ತರವನ್ನು ತಲುಪಲಿ!

ಭಾರತಅಮೆರಿಕಾ ಸ್ನೇಹ ಇನ್ನಷ್ಟು ವೃದ್ಧಿಸಲಿ!

ನಮಸ್ತೆ!

ಧನ್ಯವಾದಗಳು!