Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿರುವ ಶೂಟರ್ ಗಳಾದ ರುದ್ರಾಂಕ್ಷ್ ಬಾಳಾಸಾಹೇಬ್ ಪಾಟೀಲ್, ಹಿಮಾಂಶು ಧಿಲ್ಲೋನ್ ಮತ್ತು ಪಾರ್ಥ್ ರಾಕೇಶ್ ಮಾನೆ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಏಷ್ಯನ್ ಗೇಮ್ಸ್ 2026ರಲ್ಲಿ ಪುರುಷರ 10 ಮೀಟರ್ ಏರ್ ರೈಫಲ್ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ರುದ್ರಾಂಕ್ಷ್ ಬಾಳಾಸಾಹೇಬ್ ಪಾಟೀಲ್, ಹಿಮಾಂಶು ಧಿಲ್ಲೋನ್ ಮತ್ತು ಪಾರ್ಥ್ ರಾಕೇಶ್ ಮಾನೆ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಕ್ರೀಡಾಪಟುಗಳ ಆದ್ಯ ಗಮನ, ಸ್ಥಿರತೆ ಮತ್ತು ತಂಡದ ಕೆಲಸವು ಭಾರತಕ್ಕೆ ಹೆಮ್ಮೆ ತಂದಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಶ್ರೀ ಮೋದಿ ಅವರ ಎಕ್ಸ್ ಪೋಸ್ಟ್ ಹೀಗಿದೆ:

ಏಷ್ಯನ್ ಕ್ರೀಡಾಕೂಟದ ಪುರುಷರ 10 ಮೀಟರ್ ಏರ್ ರೈಫಲ್ ತಂಡ ಸ್ಪರ್ಧೆಯಲ್ಲಿ ರಜತ ಪದಕ ಜಯಿಸಿರುವ ರುದ್ರಾಂಕ್ಷ್ ಬಾಳಾಸಾಹೇಬ್ ಪಾಟೀಲ್, ಹಿಮಾಂಶು ಧಿಲ್ಲೋನ್ ಮತ್ತು ಪಾರ್ಥ್ ರಾಕೇಶ್ ಮಾನೆ ಅವರಿಗೆ ಅಭಿನಂದನೆಗಳು.

ಉತ್ತಮ ಸಂಯೋಜಿತ ಅಂಕಗಳೊಂದಿಗೆ ನಿಜಕ್ಕೂ ಇದು ಶ್ಲಾಘನೀಯ ಪ್ರದರ್ಶನ. ಕೇಂದ್ರೀಕೃತ ಗಮನ, ಸ್ಥಿರತೆ ಮತ್ತು ತಂಡವಾಗಿ ಆಟದ ಪ್ರದರ್ಶನವು ಭಾರತ ಹೆಮ್ಮೆಪಡುವಂತೆ ಮಾಡಿದೆ. ಭವಿಷ್ಯದ ಅವರ ಪ್ರಯತ್ನಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi

 

*****