Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಮೊಜಾಂಬಿಕ್ ನಡುವೆ ವಾಯು ಸೇವೆಗಳ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟ ಒಪ್ಪಿಗೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತ ಮತ್ತು ಮೊಜಾಂಬಿಕ್ ನಡುವೆ ವಾಯು ಸೇವೆಗಳ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಒಪ್ಪಿಗೆ ನೀಡಿದೆ.

ಪ್ರಸ್ತುತ ಭಾರತ ಮತ್ತು ಮೊಜಾಂಬಿಕ್ ನಡುವೆ ವಾಯು ಸೇವೆಗಳ ಯಾವುದೇ ಒಪ್ಪಂದ ಇರುವುದಿಲ್ಲ. ಎರಡೂ ದೇಶಗಳ ನಡುವೆ ವಾಯು ಸಂಪರ್ಕ ಉತ್ತೇಜಿಸಲು, ವಾಯು ಸೇವೆಗಳ ಒಪ್ಪಂದದ ಪಠ್ಯವನ್ನು ಆಖೈರುಗೊಳಿಸಲು ಎರಡೂ ದೇಶಗಳು 2011ರಲ್ಲಿ ಮಾತುಕತೆಯ ಪ್ರಕ್ರಿಯೆ ಆರಂಭಿಸಿದ್ದವು.

ವಾಯು ಸೇವೆಗಳ ಒಪ್ಪಂದ(ಎ.ಎಸ್.ಎ.)ದ ಕರಡನ್ನು ಹಣಕಾಸು ಸಚಿವಾಲಯ (ಕಂದಾಯ ಇಲಾಖೆ/ಆರ್ಥಿಕ ವ್ಯವಹಾರಗಳ ಇಲಾಖೆ), ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಕಾನೂನು ಹಾಗೂ ನ್ಯಾಯ ಸಚಿವಾಲಯ (ಕಾನೂನು ವ್ಯವಹಾರಗಳ ಇಲಾಖೆ)ಗಳೊಂದಿಗೆ ಸಮಾಲೋಚಿಸುವ ಮೂಲಕ ಆಖೈರುಗೊಳಿಸಲಾಗಿದೆ. ಈ ಒಪ್ಪಂದದ ಪ್ರಮುಖ ಅಂಶಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ.:-

ಎ) ಎರಡೂ ಕಡೆಯಿಂದ ಏರ್ ಲೈನ್ಸ್ ನ ಬಹು ನಿಯೋಜನೆಗಳು.

ಬಿ) ಎರಡೂ ಕಡೆಯ ನಿಯೋಜಿತ ಏರ್ ಲೈನ್ ಗಳು ತಮ್ಮದೇ ಕಡೆಯ ನಿಯೋಜಿತ ವೈಮಾನಿಕ ಸಂಸ್ಥೆ, ಇತರ ಸಂಸ್ಥೆ ಅಥವಾ ಮೂರನೇ ವ್ಯಕ್ತಿಯೊಂದಿಗೆ ಸಹಕಾರ ಮಾರುಕಟ್ಟೆ ಒಪ್ಪಂದ ಮಾಡಿಕೊಳ್ಳಬಹುದಾಗಿದೆ.

ಸಿ) ಈ ಒಪ್ಪಂದವು ಎರಡೂ ದೇಶಗಳ ನಿಯೋಜಿತ ಏರ್ಲೈನ್ಸ್ ಗಳಿಗೆ ತಮ್ಮ ವಾಯು ಸೇವೆಗಳ ಮಾರಾಟವನ್ನು ಉತ್ತೇಜಿಸಲು ಅನ್ಯ ರಾಷ್ಟ್ರದ ಪ್ರದೇಶದಲ್ಲಿ ತಮ್ಮ ಕಚೇರಿ ಸ್ಥಾಪಿಸಲು ಅವಕಾಶ ನೀಡುತ್ತದೆ.

ಡಿ) ಎರಡೂ ರಾಷ್ಟ್ರಗಳ ನಿಯೋಜಿತ ಏರ್ಲೈನ್ಸ್ ಗಳು ನಿರ್ದಿಷ್ಟ ಮಾರ್ಗಗಳಲ್ಲಿ ಒಪ್ಪಿಗೆ ನೀಡಲಾದ ಸೇವೆಗಳ ಕಾರ್ಯಾಚರಣೆಯ ನ್ಯಾಯ ಸಮ್ಮತ ಮತ್ತು ಸಮಾನ ಅವಕಾಶ ಹೊಂದಿರುತ್ತವೆ.

ಇ) ಮೇಲೆ ಹೇಳಲಾದ ಅಂಶಗಳ ಜೊತೆಗೆ, ಎ.ಎಸ್.ಎ.ಯು ಭಾರತೀಯ ಮಾದರಿಯ ಎ.ಎಸ್.ಎಂ.ನಲ್ಲಿ ಅಂತರ್ಗತವಾಗಿರುವ ನಿಬಂಧನೆಗಳ ನಿಟ್ಟಿನಲ್ಲಿಯೇ ಕಾರ್ಯಾಚರಣೆ ಅಧಿಕಾರವನ್ನು, ಒಪ್ಪಿತ ಸೇವೆಗಳ ತತ್ವಗಳ ಆಡಳಿತ ಕಾರ್ಯಾಚರಣೆಗಳನ್ನು, ವಾಣಿಜ್ಯ ಕಾರ್ಯಾಚರಣೆಗಳು, ಸುರಕ್ಷತೆ ಮತ್ತು ರಕ್ಷಣೆ ಸಂಬಂಧಿತ ಷರತ್ತು ಇತ್ಯಾದಿ ಅಮಾನತುಗೊಳಿಸುವ ಅಥವಾ ಹಿಂಪಡೆಯುವ ಅವಕಾಶ ಹೊಂದಿದೆ.

***

AKT/SHB