ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಿ.ಎ.ಯು.ಇಂಫಾಲ್ ವ್ಯಾಪ್ತಿಗೆ ನಾಗಾಲ್ಯಾಂಡ್ ಅನ್ನು ಸೇರಿಸಲು ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಕಾಯಿದೆ (ಸಿ.ಎ.ಯು.) 1992ರ ಸಂಬಂಧಿತ ಖಂಡಗಳ ತಿದ್ದಪಡಿಗಳಿಗೆ ತನ್ನ ಅನುಮೋದನೆ ನೀಡಿದೆ.
ಇಂಫಾಲದ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ನಾಗಾಲ್ಯಾಂಡ್ ರಾಜ್ಯವನ್ನು ಸೇರ್ಪಡೆ ಮಾಡುವುದರಿಂದ ನಾಗಾಲ್ಯಾಂಡ್ ನ ಪಶುವೈದ್ಯ ವಿಜ್ಞಾನ ಕಾಲೇಜು, ಪಶು ಸಂಗೋಪನಾ ಕ್ಷೇತ್ರದಲ್ಲಿ ಅಗತ್ಯವಾಗಿ ಬೇಕಾಗಿರುವ ಮಾನವ ಶಕ್ತಿಯನ್ನು ಉತ್ಪಾದಿಸಲಿದೆ ಮತ್ತು ಈ ವಲಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೂ ಅವಕಾಶ ಕಲ್ಪಿಸುತ್ತದೆ. ಹೊಸ ಕಾಲೇಜು ರೈತರಿಗೆ ಹೊಸ ತಂತ್ರಜ್ಞಾನಗಳ ಪರಿಚಯ ಮಾಡಿಕೊಳ್ಳಲು, ಆ ಮೂಲಕ ನಾಗಾಲ್ಯಾಂಡ್ ರಾಜ್ಯದಲ್ಲಿ ಉತ್ಪಾದನೆಗೆ ಮತ್ತು ಸಾಕು ಪ್ರಾಣಿಗಳ ಉತ್ಪಾದಕತೆಗೆ ಕೊಡುಗೆ ನೀಡಲಿದೆ.
ಈ ತಿದ್ದುಪಡಿಯು ನಾಗಾಲ್ಯಾಂಡ್ ರಾಜ್ಯಕ್ಕೆ ಸಿ.ಎ.ಯು., ಮಣಿಪುರದ ಪ್ರಯೋಜನ ಪಡೆಯಲೂ ನೆರವಾಗಲಿದೆ. ಇದನ್ನು ಇಡೀ ಈಶಾನ್ಯ ವಲಯಕ್ಕಾಗಿ ಸ್ಥಾಪಿಸಲಾಗಿದೆ.