Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಂಕಿಅಂಶಗಳ ಸಂಗ್ರಹಣೆ ಕಾಯಿದೆ, 2008 (7/2009) ತಿದ್ದುಪಡಿಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ,ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುವ ಪಟ್ಟಿ I (ಕೇಂದ್ರ ಪಟ್ಟಿ) ಮತ್ತು ಸಂವಿಧಾನದ (ಜಮ್ಮು ಕಾಶ್ಮೀರಕ್ಕೆ ಅನ್ವಯಿಸುವ) ಆದೇಶ 1954ಅಡಿಯಲ್ಲಿನ ಸಂವಿಧಾನದ ಏಳನೆಯ ಪರಿಚ್ಛೇದದಲ್ಲಿ ಪಟ್ಟಿ- III (ಸಮಕಾಲೀನ ಪಟ್ಟಿ)ರಲ್ಲಿ ನಮೂದಿಸಿರುವ ಸೂಕ್ತವೆನಿಸುವ ಯಾವುದೇ, ವಿಷಯಕ್ಕೆ ಸಂಬಂಧಿಸಿದ ಅಂಕಿ ಅಂಶಗಳ ಸಂಗ್ರಹಣೆ ಕಾಯಿದೆ 2008ರ ವ್ಯಾಪ್ತಿಯನ್ನು ಜಮ್ಮು ಮತ್ತು ಕಾಶ್ಮೀರಕ್ಕೂ ವಿಸ್ತರಿಸುವ ಕುರಿತಂತೆ ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಈ ತಿದ್ದುಪಡಿಯು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ದತ್ತಾಂಶ ಸಂಗ್ರಹಣೆಯ ವ್ಯವಸ್ಥೆಯನ್ನು ಬಲಪಡಿಸಲಿದೆ.

ತಿದ್ದುಪಡಿಗಳು:

(a)ಸಂವಿಧಾನದ (ಜಮ್ಮು ಮತ್ತು ಕಾಶ್ಮೀರದ ಅನ್ವಯಿಕಗಳು) ಆದೇಶ 1954ರನ್ವಯ ರಾಜ್ಯಕ್ಕೆ ಮೀಸಲಾಗಿಲ್ಲದ ವಿಷಯಗಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೂ ವ್ಯಾಪ್ತಿಯನ್ನು ವಿಸ್ತರಿಸುವುದು;

(b)ದತ್ತಾಂಶ ಸಂಗ್ರಹಣೆ ಚಟುವಟಿಕೆಗೆ ಸಮರ್ಥವಾಗಿ ಸಹಯೋಗ ನೀಡಲು ಮತ್ತು ಅನಗತ್ಯ ನಕಲು ಪ್ರತಿ ಇತ್ಯಾದಿಗಳನ್ನು ತಡೆಯಲು ಸರ್ಕಾರಿ ಇಲಾಖೆಗಳಿಗೆ ಸಲಹೆ ನೀಡಲು ಕೇಂದ್ರ ಮತ್ತು ಪ್ರತಿಯೊಂದು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಡಲ್ ಅಧಿಕಾರಿಗಳ ನೇಮಕಕ್ಕೆ ಅವಕಾಶ ಒದಗಿಸಲು.

ಹಿನ್ನೆಲೆ

ಅಂಕಿ ಅಂಶಗಳ ಸಂಗ್ರಹಣೆ ಕಾಯಿದೆ 2008ನ್ನು ಆರ್ಥಿಕ, ಜನಸಂಖ್ಯೆ, ಸಾಮಾಜಿಕ, ವೈಜ್ಞಾನಿಕ ಮತ್ತು ಪರಿಸರಾತ್ಮಕ ವಿಚಾರಗಳು ಇತ್ಯಾದಿ ದತ್ತಾಂಶ ಸಂಗ್ರಹಣೆಗಾಗಿ ಜಾರಿಗೆ ತರಲಾಗಿದೆ. ಈ ಕಾಯಿದೆ ಜಮ್ಮು ಮತ್ತು ಕಾಶ್ಮೀರ ರಾಜ್ಯ ಹೊರತು ಪಡಿಸಿ ದೇಶದ ಎಲ್ಲ ಭಾಗಗಕ್ಕೂ ಅನ್ವಯವಾಗುತ್ತದೆ. ಜಮ್ಮು ಮತ್ತು ಕಾಶ್ಮೀರ ಅಂಕಿ ಅಂಶ ಸಂಗ್ರಹಣೆ ಕಾಯಿದೆ 2010ನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶಾಸನ ಸಭೆ ಜಾರಿ ಮಾಡಿದ್ದು, ಇದು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಪೂರ್ತಿ ಅನ್ವಯಿಸುತ್ತದೆ ಆದರೆ, ಜಮ್ಮು ಮತ್ತು ಕಾಶ್ಮೀರ ಅಂಕಿ ಅಂಶ ಸಂಗ್ರಹಣೆ ಕಾಯಿದೆ 2010, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಂವಿಧಾನದ (ಜಮ್ಮು ಮತ್ತು ಕಾಶ್ಮೀರದ ಆನ್ವಯಿಕಗಳು) ಆದೇಶ 1954ರಡಿ ಕೇಂದ್ರದ ಪಟ್ಟಿಯಲ್ಲಿರುವ ಅಂಕಿ ಅಂಶಗಳ ವಿಷಯದಲ್ಲಿ ಅನ್ವಯಿಸುವುದಿಲ್ಲ. ಇದು ಶಾಸನಾತ್ಮಕವಾದ ಕಂದಕ ಸೃಷ್ಟಿಸಿತ್ತು, ಮಿಗಿಲಾಗಿ ಅಂಕಿ ಅಂಶ ಸಂಗ್ರಹಣೆ ಕಾಯಿದೆ 2008ರಲ್ಲಿ ಕೇಂದ್ರ ಸರ್ಕಾರ ನಿರ್ಧರಿಸಬಹುದಾದ ಸಮಕಾಲೀನ ವ್ಯಾಪ್ತಿಯನ್ನು ಸಹ ಒದಗಿಸಲಾಗಿರಲಿಲ್ಲ. ಈ ಕಂದಕವನ್ನು ನಿವಾರಿಸಲು ಈ ತಿದ್ದುಪಡಿಯಲ್ಲಿ ಉದ್ದೇಶಿಸಲಾಗಿದೆ.

***