Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಂಗಾಂಗ ಕಸಿ ಸೇವೆಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಸ್ಪೇನ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸ್ಪೇನ್ ನ ಆರೋಗ್ಯ, ಸಾಮಾಜಿಕ ಸೇವೆ ಮತ್ತು ಸಮಾನತೆ ಸಚಿವಾಲಯದ ರಾಷ್ಟ್ರೀಯ ಕಸಿ ಸಂಸ್ಥೆ ಮತ್ತು ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯದ ನಡುವೆ ಅಂಗಾಂಗ ಕಸಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ಸಹಿ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು ಅಂಗಾಂಗ ಮತ್ತು ಅಂಗಾಂಶ ಸಂಗ್ರಹಣೆ ಮತ್ತು ಕಸಿ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರ ಮತ್ತು ಎರಡೂ ರಾಷ್ಟ್ರಗಳ ನಡುವಿನ ಉತ್ತಮ ಅರಿವಿಗೆ ಅವಕಾಶ ನೀಡುತ್ತದೆ. ಇದರಿಂದ ಪಡೆಯಲಾಗುವ ಜ್ಞಾನವು ಅಂಗಾಂಗಗಳ ವೈಫಲ್ಯದಿಂದ ಕೊನೆ ಹಂತದಲ್ಲಿ ನರಳುತ್ತಿರುವ ರೋಗಿಗಳಿಗೆ ಒದಗಿಸುವ ಸೇವೆಯ ಸುಧಾರಣೆಗೆ ನೆರವಾಗುತ್ತದೆ.

ಈ ತಿಳಿವಳಿಕೆ ಒಪ್ಪಂದಕ್ಕೆ ಸ್ಪೇನ್ ಜೊತೆಗೆ ನಡೆಯಲಿರುವ ಮುಂಬರುವ ದ್ವಿಪಕ್ಷೀಯ ಸಭೆಯಲ್ಲಿ ಅಂಕಿತ ಹಾಕಲಾಗುತ್ತದೆ.

*****

AKT/SH