ಪಿಎಂಇಂಡಿಯಾ
ಅಂತಾರಾಷ್ಟ್ರೀಯ ಯೋಗದಿನ 2017ರ ಅಂಗವಾಗಿ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಲಖನೌನಲ್ಲಿ ನಡೆದ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು.
ಸತತ ಮಳೆಯ ನಡುವೆಯೂ ನಗರದ ರಾಮಾಭಾಯಿ ಅಂಬೇಡ್ಕರ್ ಮೈದಾನದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.
ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಕೂಗುತ್ತಿದ್ದ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ದೇಶಾದ್ಯಂತ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಎಲ್ಲರಿಗೂ ಶುಭಾಶಯ ತಿಳಿಸಿದರು.
ಇಂದು ಯೋಗ ಹಲವು ಜನರ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದರು. ಭಾರತದ ಹೊರಗೆ ಕೂಡ ಯೋಗದ ಜನಪ್ರಿಯತೆ ಉತ್ತುಂಗದಲ್ಲಿದೆ ಮತ್ತು ಯೋಗ ಭಾರತವನ್ನು ವಿಶ್ವದೊಂದಿಗೆ ಬೆಸೆದಿದೆ ಎಂದರು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಹಲವು ಯೋಗ ಸಂಸ್ಥೆಗಳು ಸ್ವರೂಪ ಪಡೆದುಕೊಂಡಿರುವುದು ಸಂತಸ ತಂದಿದೆ, ಯೋಗ ಶಿಕ್ಷಕರಿಗೆ ಬೇಡಿಕೆ ಹೆಚ್ಚಾಗಿದೆ ಎಂದರು. ದೇಹದಾರ್ಢ್ಯದ ಜೊತೆಗೆ, ಕ್ಷೇಮವೂ ಮಹತ್ವದ್ದಾಗಿದೆ ಎಂದು ಪ್ರಧಾನಿ, ಯೋಗ ಕ್ಷೇಮವನ್ನು ಸಾಧಿಸುವ ಸಾಧನ ಎಂದರು.
ಪ್ರತಿಯೊಬ್ಬರೂ ಯೋಗವನ್ನು ತಮ್ಮ ಬದುಕಿನ ಭಾಗ ಮಾಡಿಕೊಳ್ಳುವಂತೆ ಮನವಿ ಮಾಡಿದ ಪ್ರಧಾನಿ, ಆರೋಗ್ಯದ ಖಾತ್ರಿ ಒದಗಿಸುತ್ತದೆ ಮತ್ತು ಇದರ ಅಭ್ಯಾಸ ದುಬಾರಿಯೂ ಅಲ್ಲ ಎಂದರು.
ಇದಕ್ಕೂ ಮುನ್ನ ಪ್ರಧಾನಮಂತ್ರಿಯವರನ್ನು ಲಖನೌಗೆ ಸ್ವಾಗತಿಸಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಯೋಗ ನಮ್ಮ ಸಂಪ್ರದಾಯದ ಭಾಗ ಮತ್ತು ಇದು ನಮ್ಮನ್ನು ಒಗ್ಗೂಡಿಸುತ್ತದೆ ಎಂದರು.
***
VBA/HS
From Lucknow I convey my greetings to all those joining the #YogaDay2017 celebrations all over India: PM @narendramodi
— PMO India (@PMOIndia) June 21, 2017
Today, Yoga has become a part of so many lives. Yoga's popularity outside India is high & has connected the world with India: PM
— PMO India (@PMOIndia) June 21, 2017
I am glad to see several Yoga institutes take shape over the last three years. Demand for Yoga teachers is increasing: PM @narendramodi
— PMO India (@PMOIndia) June 21, 2017
In addition to fitness, wellness is important. Yoga is a medium to achieve wellness: PM @narendramodi #YogaDay2017 https://t.co/YX4OefXGoB
— PMO India (@PMOIndia) June 21, 2017
I urge everyone to make Yoga a part of their lives: PM @narendramodi #YogaDay2017
— PMO India (@PMOIndia) June 21, 2017
Yoga is about health assurance. It is not even expensive to practice: PM @narendramodi #YogaDay2017 https://t.co/YX4OefXGoB
— PMO India (@PMOIndia) June 21, 2017
PM @narendramodi takes part in #YogaDay2017 programme. https://t.co/YX4OefXGoB
— PMO India (@PMOIndia) June 21, 2017
I am delighted to see the vigour & enthusiasm with which people are joining the #YogaDay2017 celebrations all across India & the world.
— Narendra Modi (@narendramodi) June 21, 2017
Let us pledge today to make Yoga an integral part of our daily routine & practice Yoga regularly. The benefits are tremendous. #YogaDay2017
— Narendra Modi (@narendramodi) June 21, 2017
Rain did not dampen the spirit of the #YogaDay2017 celebrations in Lucknow. pic.twitter.com/7KvxQYam9A
— Narendra Modi (@narendramodi) June 21, 2017
Here are some more photos from Lucknow. #YogaDay2017 pic.twitter.com/H9OMo5d046
— Narendra Modi (@narendramodi) June 21, 2017
Sharing my speech at the #YogaDay2017 programme in Lucknow. https://t.co/TWwInTP5I5
— Narendra Modi (@narendramodi) June 21, 2017