Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅನ್ಯ ಇಲಾಖೆಗೆ ವರ್ಗಾಯಿಸುವ ಕಾರ್ಯಕ್ರಮಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತಿಳಿವಳಿಕೆ ಒಪ್ಪಂದ (ಎಂ.ಓ.ಯು.ಗಳು)ದ ಅಂಕಿತಕ್ಕೆ ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಆರ್ಥಿಕ ವ್ಯವಹಾರಗಳ ಇಲಾಖೆ (ಭಾರತೀಯ ಆರ್ಥಿಕ ಸೇವೆಗಳ ಕೇಡರ್) ಮತ್ತು ಆಸ್ಟ್ರೇಲಿಯಾ ಸರ್ಕಾರದ ಖಜಾನೆ ನಡುವೆ ಮೂರು ತಿಂಗಳುಗಳ ಅವಧಿಗೆ ಅನ್ಯ ಇಲಾಖೆಗೆ ವರ್ಗಾಯಿಸುವ ಕಾರ್ಯಕ್ರಮದ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ಕಾರ್ಯಕ್ರಮದಡಿ, ಆಸ್ಟ್ರೇಲಿಯಾ ಖಜಾನೆಯ ಒಬ್ಬ ಅಧಿಕಾರಿ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಗೆ ಎರಡನೆಯವರಾಗಿ ಮತ್ತು ಐಇಎಸ್ ನಿಂದ ಒಬ್ಬ ಅಧಿಕಾರಿ (ಉಪ ಕಾರ್ಯದರ್ಶಿ/ನಿರ್ದೇಶಕ ದರ್ಜೆ)ಯನ್ನು ಆರ್ಥಿಕ ವ್ಯವಹಾರಗಳ ಇಲಾಖೆಯ ಐಇಎಸ್ ಕೇಡರ್ ನಿಂದ ಆಸ್ಟ್ರೇಲಿಯಾ ಸರ್ಕಾರದ ಆಸ್ಟ್ರೇಲಿಯಾ ಖಜಾನೆಗೆ ಎರಡನೆಯವರಾಗಿ 15.1.2018ರಿಂದ ಅಥವಾ ನಂತರದಿಂದ ಆರಂಭವಾಗುವಂತೆ ಮೂರು ತಿಂಗಳುಗಳ ಅವಧಿಗೆ ನಾಮಾಂಕನಗೊಳಿಸಲಾಗುತ್ತದೆ. ಈ ತಿಳಿವಳಿಕೆ ಒಪ್ಪಂದಗಳೆರಡರ ಅವಧಿ ಮೂರು ತಿಂಗಳುಗಳ ನಿಯೋಜನೆ ಅವಧಿ ಬಳಿಕ ಕೊನೆಗೊಳ್ಳುತ್ತದೆ ಮತ್ತು ಅದನ್ನು ವಿಸ್ತರಿಸಲೂ ಬಹುದಾಗಿದೆ. ಈ ಕಾರ್ಯಕ್ರಮವನ್ನು ನಂತರದ ವರ್ಷಗಳಲ್ಲಿ ಪರಸ್ಪರ ಸಮ್ಮತಿಯಿಂದ ಮತ್ತು ಎರಡೂ ಕಡೆಯ ಒಪ್ಪಂದದ ಬಳಿಕ ಪುನರಾವರ್ತಿಸಬಹುದಾಗಿದೆ.

ಪ್ರಮುಖ ಪರಿಣಾಮ:

ಆಸ್ಟ್ರೇಲಿಯಾವು ಭಾರತದ ಮಹತ್ವದ ದ್ವಿಪಕ್ಷೀಯ ಪಾಲುದಾರ ರಾಷ್ಟ್ರವಾಗಿದೆ. ಈ ಪ್ರಸ್ತಾಪಿತ ಕಾರ್ಯಕ್ರಮವು ಎರಡೂ ರಾಷ್ಟ್ರಗಳಲ್ಲಿನ ಪ್ರಸಕ್ತ ಆರ್ಥಿಕ ನೀತಿಯ ವಿಷಯಗಳನ್ನು ಆಳವಾಗಿ ಅರಿಯಲು ನೆರವಾಗುತ್ತದೆ ಮತ್ತು ಭವಿಷ್ಯದ ಸಹಯೋಗ ಮತ್ತು ಕಾರ್ಯಕ್ರಮಗಳಿಗೆ ಮತ್ತಷ್ಟು ಅವಕಾಶಗಳನ್ನು ಅನ್ವೇಷಿಸುತ್ತದೆ. ಈ ಕಾರ್ಯಕ್ರಮವು ಎರಡನೇ ಅಧಿಕಾರಿಗಳಿಗೆ ಮೌಲ್ಯಯುತ ಮತ್ತು ಅನನ್ಯ ಅಭಿವೃದ್ಧಿಯ ಅವಕಾಶಗಳನ್ನು ಒದಗಿಸುತ್ತದೆ ಮತ್ತು ಜಾಗತಿಕ ಉತ್ತಮ ಪದ್ಧತಿಗಳೊಂದಿಗೆ ಮಾನ್ಯತೆ ಒದಗಿಸುತ್ತದೆ.

***