Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಭಿವೃದ್ಧಿ ಯೋಜನೆಗಳ ಜಾರಿಗೆ ಬಾಂಗ್ಲಾದೇಶಕ್ಕೆ 4.5 ಶತಕೋಟಿ ಅಮೆರಿಕನ್ ಡಾಲರ್ ಮೂರನೇ ಲೈನ್ ಆಫ್ ಕ್ರೆಡಿಟ್ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಭಿವೃದ್ಧಿ ಯೋಜನೆಗಳ ಜಾರಿಗೆ ಬಾಂಗ್ಲಾದೇಶಕ್ಕೆ 4.5 ಶತಕೋಟಿ ಅಮೆರಿಕನ್ ಡಾಲರ್ ಮೂರನೇ ಲೈನ್ ಆಫ್ ಕ್ರೆಡಿಟ್ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದಕ್ಕೆ ಪ್ರಧಾನಮಂತ್ರಿಯವರು 2017ರ ಏಪ್ರಿಲ್ ನಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದ ವೇಳೆ ಅಂಕಿತ ಹಾಕಲಾಗಿತ್ತು.

ಈ ತಿಳಿವಳಿಕೆ ಒಪ್ಪಂದವು, ವ್ಯೂಹಾತ್ಮಕ ಪಾಲುದಾರಿಕೆಯನ್ನು ಹೆಚ್ಚಿಸಲು ಬಾಂಗ್ಲಾದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಬಾಂಗ್ಲಾದೇಶ ಮತ್ತು ಭಾರತ ನಡುವೆ ಸಂಪರ್ಕ ಸುಧಾರಣೆಗೆ ಅವಕಾಶ ಮಾಡಿಕೊಡುತ್ತದೆ, ಆ ಮೂಲಕ ನಮ್ಮ ಈಶಾನ್ಯ ವಲಯಕ್ಕೆ ಪ್ರವೇಶಾವಕಾಶವನ್ನೂ ಹೆಚ್ಚಿಸುತ್ತದೆ, ಜೊತೆಗೆ ಬಾಂಗ್ಲಾದೇಶದಲ್ಲಿ ಭಾರತೀಯ ಕಂಪನಿಗಳಿಗೆ ಹೊಸ ವಾಣಿಜ್ಯದ ಅವಕಾಶವನ್ನೂ ಒದಗಿಸುತ್ತದೆ.

ಬಾಂಗ್ಲಾದೇಶಕ್ಕೆ ರಿಯಾಯಿತಿಯ ಆರ್ಥಿಕ ನೆರವಿನ ವ್ಯವಸ್ಥೆಯು ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಮತ್ತು ಅಭಿವೃದ್ಧಿ ಸಹಕಾರದ ವರ್ಧನೆಯನ್ನು ಬಲಗೊಳಿಸುತ್ತದೆ.

ಈ ತಿಳಿವಳಿಕೆ ಒಪ್ಪಂದವು ರಿಯಾಯಿತಿ ಆರ್ಥಿಕ ನೆರವಿನ ವ್ಯವಸ್ಥೆಯಡಿ ಕೈಗೊಳ್ಳಬೇಕಾದ ಯೋಜನೆಗಳ ಪಟ್ಟಿಯನ್ನು ನಿರ್ದಿಷ್ಟಪಡಿಸುತ್ತದೆ. ಈ ಲೈನ್ ಆಫ್ ಕ್ರೆಡಿಟ್ ಅಡಿಯಲ್ಲಿ ಭಾರತದ ಹಿತದ ಯೋಜನೆಗಳನ್ನು ಕೈಗೊಳ್ಳುವ ಖಾತ್ರಿಯ ಅವಕಾಶವನ್ನೂ ಸಹ ಒದಗಿಸುತ್ತದೆ.

ಕೆಲವು ಯೋಜನೆಗಳು ತಾಯ್ನಾಡು ಮತ್ತು ತಾಯ್ನಾಡಿನ ಹೊರಗೆ ಭಾರತದ ಈಶಾನ್ಯ ವಲಯಕ್ಕೆ ಉತ್ತಮ ಮತ್ತು ವೇಗದ ಸಂಪರ್ಕದ ಖಾತ್ರಿಯನ್ನೂ ಒದಗಿಸುತ್ತವೆ. ಅದು ಭಾರತದ ಸುರಕ್ಷತೆಯನ್ನು ಖಾತ್ರಿಪಡಿಸುವುದಲ್ಲದೆ ಭಾರತೀಯ ಕಂಪನಿಗಳಿಗೆ ವಾಣಿಜ್ಯದ ಅವಕಾಶವನ್ನೂ ತೆರೆಯುತ್ತದೆ.

*****
AKT/VBA/SH