Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಸ್ಸಾಂಗೆ ನಾಳೆ ಭೇಟಿ ನೀಡಲಿರುವ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ನಾಳೆ ಅಸ್ಸಾಂಗೆ ಭೇಟಿ ನೀಡಲಿದ್ದಾರೆ.

ಪ್ರಧಾನಮಂತ್ರಿಯವರು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ತಿನ್ ಸುಕಿಯಾ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ದೋಲಾ- ಸಡಿಯಾ  ಸೇತುವೆಯನ್ನು ಉದ್ಘಾಟಿಸಲಿದ್ದಾರೆ.

ಪ್ರಧಾನಿಯವರು ಎರಡು ಪ್ರಮುಖ ಅಭಿವೃದ್ಧಿ ಯೋಜನೆಗಳಾದ ಗುವಾಹಟಿ ಎ.ಐ.ಐ.ಎಂ.ಎಶ್. ಮತ್ತು ಐಎಆರ್.ಐ, ಗೋಗಮುಖ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ ಖಾನಪಾರಾದಲ್ಲಿ ಪ್ರಧಾನಿಯವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಪ್ರಧಾನಮಂತ್ರಿಯವರು ಸರಣಿ ಟ್ವೀಟ್ ಮೂಲಕ ತಮ್ಮ ಅಸ್ಸಾಂ ಭೇಟಿಯ ಕಾರ್ಯಕ್ರಮಗಳ ಕುರಿತು ಪ್ರಕಟಿಸಿದ್ದು,  ಅಸ್ಸಾಂ ಜನರೊಂದಿಗೆ ಸಂವಾದ ನಡೆಸುವ ಈ ಅವಕಾಶಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

 “ನಾನು ನಾಳೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅಸ್ಸಾಂನಲ್ಲಿರುತ್ತೇನೆ. ನಾನು ಅಸ್ಸಾಂ ಜನತೆಯೊಂದಿಗೆ ಸಂವಾದ ನಡೆಸುವ ಈ ಅವಕಾಶಕ್ಕೆ ಕಾತರದಿಂದ ಎದಿರು ನೋಡುತ್ತಿದ್ದೇನೆ.

ನಾನು ಎರಡು ಪ್ರಮುಖ ಯೋಜನೆಗಳಾದ – ಏಮ್ಸ್ ಮತ್ತು ಐ.ಎ.ಆರ್.ಐ.ಗೆ ಶಂಕುಸ್ಥಾಪನೆ ನೆರವೇರಿಸಲಿದ್ದೇನೆ. ಈ ಎರಡೂ ಯೋಜನೆಗಳು ಅಸ್ಸಾಂ ಮತ್ತು ಈಶಾನ್ಯದ ಅಭಿವೃದ್ಧಿಗೆ ವೇಗ ನೀಡುತ್ತವೆ.

ದೋಲಾ – ಸಡಿಯಾ ಸೇತುವೆ ನಾಳೆ ಉದ್ಘಾಟನೆ ಆಗಲಿದೆ. ಇದು ನಮ್ಮ ದೇಶದ ಒಂದು ಮಹತ್ವದ ಮೂಲಸೌಕರ್ಯ ಯೋಜನೆ ಆಗಿದೆ.

ಸಂಜೆ ನಾನು ಖಾನಾಪಾರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದೇನೆ. ನೀವು ನಿಮ್ಮ ಮೊಬೈಲ್ ನಲ್ಲಿ http://nm4.in/dnldapp ”, ಇದನ್ನು ನೋಡಬಹುದು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

 ***

AKT/NT