Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಔಷಧ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಸಹಕಾರದ ಪ್ರಮುಖ ಕ್ಷೇತ್ರಗಳು ಈ ಕೆಳಕಂಡಂತಿವೆ:

1. ಮಲೇರಿಯಾ ಮತ್ತು ಟಿಬಿಯಂಥ ಸಾಂಕ್ರಾಮಿಕ ರೋಗಗಳು;

2. ಮಾನಸಿಕ ಆರೋಗ್ಯ ಮತ್ತು ಸಾಂಕ್ರಾಮಿಕವಲ್ಲದ ರೋಗಗಳು;

3. ಆಂಟಿ – ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಮತ್ತು ಸಾರ್ವಜನಿಕ ಆರೋಗ್ಯದ ತುರ್ತುಗೆ ಸ್ಪಂದಿಸುವುದು;

4. ಔಷಧಗಳು, ಲಸಿಕೆಗಳು ಮತ್ತು ವೈದ್ಯಕೀಯ ಉಪಕರಣಗಳ ನಿಯಂತ್ರಣ;

5. ಡಿಜಿಟಲ್ ಆರೋಗ್ಯ;

6. ತಂಬಾಕು ನಿಯಂತ್ರಣ; ಮತ್ತು

7. ಎರಡೂ ರಾಷ್ಟ್ರಗಳು ಪರಸ್ಪರ ನಿರ್ಧರಿಸುವ ಬೇರೆ ಯಾವುದೇ ಕ್ಷೇತ್ರದ ಸಹಕಾರ.

ಈ ತಿಳಿವಳಿಕೆ ಒಪ್ಪಂದವು ಆರೋಗ್ಯ ವಲಯದಲ್ಲಿನ ಜಂಟಿ ಉಪಕ್ರಮಗಳ ಮೂಲಕ ಸಹಕಾರವನ್ನು ಒಳಗೊಂಡಿದೆ ಮತ್ತು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸಲಿದೆ.

****

AKT/VBA/SH