ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಬಹ್ರೇನ್ ನಡುವಿನ ಒಪ್ಪಂದ(ಎಂಓಯು)ಕ್ಕೆ ಸಂಪುಟವು ಸಮ್ಮತಿ ನೀಡಿದೆ.
ಒಪ್ಪಂದವು ಕೆಳಕಂಡ ಕ್ಷೇತ್ರಗಳಲ್ಲಿ ಸಹಕಾರವನ್ನು ಒಳಗೊಂಡಿರಲಿದೆ:
1. ಪ್ರಕಟಣೆ ಹಾಗೂ ಸಂಶೋಧನೆಯ ಫಲಿತಾಂಶ ಸೇರಿದಂತೆ ಮಾಹಿತಿ ವಿನಿಮಯ
2. ಸರ್ಕಾರಿ ಅಧಿಕಾರಿಗಳು, ಅಕಡೆಮಿಕ್ ಸಿಬ್ಬಂದಿ, ವಿದ್ವಾಂಸರು, ಶಿಕ್ಷಕರು, ತಜ್ಞರು ಹಾಗೂ ವಿದ್ಯಾರ್ಥಿಗಳ ಭೇಟಿಗಳ ವಿನಿಮಯ
3. ಕಾರ್ಯಾಗಾರಗಳು ಹಾಗೂ ತರಬೇತಿ ಕೋರ್ಸ್‍ಗಳಲ್ಲಿ ಪಾಲ್ಗೊಳ್ಳುವಿಕೆ
4. ಖಾಸಗಿ ಕ್ಷೇತ್ರ ಹಾಗೂ ಅಕಡೆಮಿಕ್ ಹಂತದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನೆ ಚಟುವಟಿಕೆಗಳಿಗೆ ಉತ್ತೇಜನ; ಹಾಗೂ
5. ಪರಸ್ಪರ ನಿರ್ಧಾರದ ಮೂಲಕ ತೆಗೆದುಕೊಂಡ ಯಾವುದೇ ರೀತಿಯ ಸಹಕಾರ
ಒಪ್ಪಂದದಲ್ಲಿನ ಸಹಕಾರದ ವಿವರಗಳನ್ನು ವಿಷಾದಪಡಿಸಲು ಹಾಗೂ ಅನುಷ್ಠಾನದ ಮೇಲ್ವಿಚಾರಣೆಗೆ ಕಾರ್ಯಕಾರಿ ಗುಂಪೊಂದನ್ನು ನೇಮಿಸಲು ನಿರ್ಧರಿಸಲಾಯಿತು.