ಪಿಎಂಇಂಡಿಯಾ

ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆ (ಆಸಿಯಾನ್)ನ ಸದಸ್ಯ ರಾಷ್ಟ್ರಗಳ ಸರ್ಕಾರ/ರಾಷ್ಟ್ರದ ಮುಖ್ಯಸ್ಥರಾದ ನಾವು ಮತ್ತು ಭಾರತ ಗಣರಾಜ್ಯ 2018ರ ಜನವರಿ 25ರಂದು ನವ ದೆಹಲಿಯಲ್ಲಿ, ‘ಹಂಚಿಕೆಯ ಮೌಲ್ಯಗಳು, ಸಮಾನ ಗುರಿ’ ಎಂಬ ಧ್ಯೇಯದ ಅಡಿಯಲ್ಲಿ ಆಸಿಯಾನ್ – ಭಾರತ ಸಂವಾದದ ಬಾಂಧವ್ಯದ 25ನೇ ವಾರ್ಷಿಕೋತ್ಸವಕ್ಕಾಗಿ ನೆರೆದಿದ್ದೆವು.”;
ಆಸಿಯಾನ್ – ಭಾರತ ಸಂವಾದದ ಬಾಂಧವ್ಯವನ್ನು ವಿಶ್ವ ಸಂಸ್ಥೆಯ ಚಾರ್ಟರ್ ಮತ್ತು ಆಗ್ನೇಯ ಏಷ್ಯಾ ಸಹಕಾರ ಮತ್ತು ಅನ್ಯೋನ್ಯತೆಯ ಒಪ್ಪಂದ (ಟಿಎಸಿ), ಪರಸ್ಪರ ಉಪಯುಕ್ತವಾದ ನೀತಿಗಳ ಕುರಿತ ಮತ್ತು ಆಸಿಯಾನ್ ಭಾರತ ಸಂವಾದದ ಬಾಂಧವ್ಯದ 20ನೇ ವಾರ್ಷಿಕೋತ್ಸವದ ಅಂಗವಾಗಿ 2012ರ ಡಿಸೆಂಬರ್ 20ರಂದು ನಡೆದ ಆಸಿಯಾನ್ ಭಾರತ ಸ್ಮರಣಾರ್ಥ ಶೃಂಗಸಭೆಯಲ್ಲಿ ಅಳವಡಿಸಿಕೊಳ್ಳಲಾದ ಮುನ್ನೋಟದ ಹೇಳಿಕೆ ಮತ್ತು ಆಸಿಯಾನ್ ಚಾರ್ಟರ್ ಗೆ ಪೂರಕವಾದ ಪೂರ್ವ ಏಷ್ಯಾ ಶೃಂಗದ ಘೋಷಣೆ ನಲ್ಲಿ ಉಲ್ಲೇಖಿಸಲಾಗಿರುವ, ನೀತಿ, ಉದ್ದೇಶ, ಹಂಚಿಕೆಯ ಮೌಲ್ಯ ಮತ್ತು ನಿಯಮಗಳ ಮಾರ್ಗದರ್ಶನದ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ;
ಹಲವಾರು ಸಹಸ್ರಮಾನಗಳಿಂದ ಆಗ್ನೇಯ ಏಷ್ಯಾ ಮತ್ತು ಭಾರತ ನಡುವೆ ಇರುವ ಸಾಂಸ್ಕೃತಿಕ ವಿನಿಮಯ ಮತ್ತು ನಾಗರಿಕ ಸಂಪರ್ಕವು ಹೆಚ್ಚುತ್ತಿರುವ ಅಂತರ-ಸಂಪರ್ಕಿತ ವಿಶ್ವದಲ್ಲಿ ಆಸಿಯಾನ್ ಮತ್ತು ಭಾರತ ನಡುವಿನ ಸಹಕಾರಕ್ಕಾಗಿ ಬಲವಾದ ಅಡಿಪಾಯವಾಗಿದೆ;
ಕಳೆದ 25 ವರ್ಷಗಳಲ್ಲಿ ಆಸಿಯಾನ್ – ಭಾರತ ಸಂವಾದದ ಬಾಂಧವ್ಯದಲ್ಲಿ ಮೂರು ಆಸಿಯಾನ್ ಸಮುದಾಯ ಸ್ತಂಬಗಳಾದ ರಾಜಕೀಯ ಭದ್ರತೆ, ಆರ್ಥಿಕ ಮತ್ತು ಸಾಮಾಜಿಕ – ಸಾಂಸ್ಕೃತಿಕದಲ್ಲಿ ಮಾಡಿರುವ ಸಾಧನೆಯನ್ನು ಮೆಚ್ಚುಗೆಯೊಂದಿಗೆ ಗುರುತಿಸಲಾಯಿತು;
ಶಾಂತಿ, ಪ್ರಗತಿ ಮತ್ತು ಹಂಚಿಕೆಯ ಪ್ರಗತಿ (2016-2020) ಗಾಗಿ ಆಸಿಯಾನ್ ಭಾರತ ಪಾಲುದಾರಿಕೆ ಅನುಷ್ಠಾನಕ್ಕೆ ಕ್ರಿಯಾ ಯೋಜನೆಯ ಅನುಷ್ಠಾನದ ಪ್ರಗತಿಯ ಬಗ್ಗೆ ಮತ್ತು 2016-2018ಗಾಗಿ ಆದ್ಯತೆಯ ಪಟ್ಟಿಯ ಜಾರಿಗೆ ಆಸಿಯಾನ್ – ಭಾರತ ಕ್ರಿಯಾ ಯೋಜನೆಯನ್ನು ಸಂತೃಪ್ತಿಯಿಂದ ಉಲ್ಲೇಖಿಸಲಾಯಿತು;
ವಿಕಸಿಸುತ್ತಿರುವ ಪ್ರಾದೇಶಿಕ ವಾಸ್ತುಶೈಲಿಯಲ್ಲಿ ಆಸಿಯಾನ್ ಕೇಂದ್ರೀತತ್ವಕ್ಕೆ ಮತ್ತು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸಮೃದ್ಧಿಗೆ ನಿರಂತರ ಬೆಂಬಲ ಮತ್ತು ಆಸಿಯಾನ್ಸಮನ್ವಯತೆಗೆ ಮತ್ತು ಆಸಿಯಾನ್2025 ರ ಅನುಷ್ಠಾನಕ್ಕೆ ಬೆಂಬಲ ನೀಡುವುದೂ ಸೇರಿದಂತೆಆಸಿಯಾನ್ಸಮುದಾಯ ನಿರ್ಮಾಣ ಪ್ರಕ್ರಿಯೆಗೆ ಭಾರತದ ಬೆಂಬಲವನ್ನು ಅಭಿನಂದಿಸಲಾಯಿತು. ಆಸಿಯಾನ್ ಸಂಪರ್ಕ (ಎಂ.ಪಿ.ಎ.ಸಿ)2025, ಮತ್ತು ಆಸಿಯಾನ್ಸಮನ್ವಯತೆ (ಐಎಐ) ಕಾರ್ಯ ಯೋಜನೆ III ನ ಉಪಕ್ರಮಕ್ಕೆ ಅಭಿನಂದಿಸಲಾಯಿತು;
ಆಸಿಯಾನ್ – ಭಾರತ ವ್ಯೂಹಾತ್ಮಕ ಪಾಲುದಾರಿಕೆಯನ್ನು ಆಸಿಯಾನ್ – ಭಾರತ ಯುವ ಶೃಂಗ ಆಯೋಜನೆ, ಆಸಿಯಾನ್ – ಭಾರತ ಯುವ ಪ್ರಶಸ್ತಿ ಮತ್ತು ಯುವ ನಾಯಕತ್ವ ಕಾರ್ಯಕ್ರಮ ಮತ್ತು ಆಸಿಯಾನ್ ಭಾರತ ಸಂಗೀತೋತ್ಸವದ ಮೂಲಕ ಯವಜನರ ಬಳಿಗೆ ಮತ್ತು ನಮ್ಮ ಸಮುದಾಯಗಳ ಬಳಿಗೆ ತಂದ ಆಸಿಯಾನ್ ಸದಸ್ಯ ರಾಷ್ಟ್ರಗಳಲ್ಲಿ ಮತ್ತು ಭಾರತದಲ್ಲಿ 2017ರಾದ್ಯಂತ ಮತ್ತು 2018ರ ಆರಂಭದಲ್ಲಿ ನಡೆದ ವಿವಿಧ ಸ್ಮರಣಾರ್ಥ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು;
ಈ ಕೆಳಗಿನವುಗಳಿಗೆ ಈ ಮೂಲಕ ಒಪ್ಪಿಗೆ ಸೂಚಿಸಲಾಯಿತು:
ರಾಜಕೀಯ ಮತ್ತು ಭದ್ರತೆಯ ಸಹಕಾರ
5.ಭಾರತದೊಂದಿಗೆ ಪಿಎಂಸಿ+1, ಎ.ಆರ್.ಎಫ್., ಇ.ಎ.ಎಸ್., ಎಡಿಎಂಎಂ ಪ್ಲಸ್, ಮತ್ತು ಬಹುರಾಷ್ಟ್ರೀಯ ಅಪರಾಧ ಕುರಿತಂತೆ ಆಸಿಯಾನ್ ಹಿರಿಯ ಅಧಿಕಾರಿಗಳ ಸಭೆ (ಎಸ್.ಓಎಂ.ಟಿ.ಸಿ.)+ ಭಾರತದ ಸಮಾಲೋಚನೆ ಸೇರಿದಂತೆ ಹಾಲಿ ಇರುವ ಆಸಿಯಾನ್ ನೇತೃತ್ವದ ಚೌಕಟ್ಟು ಮತ್ತು ವ್ಯವಸ್ಥೆಯಲ್ಲಿಸಮಾನ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಸುರಕ್ಷತೆ ಕುರಿತ ಪರಸ್ಪರ ಕಾಳಜಿಯ ವಿಚಾರಗಳಲ್ಲಿ ಮತ್ತು ಮುಕ್ತ, ಪಾರದರ್ಶಕ, ಸಮಗ್ರ ಮತ್ತು ನಿಯಮ ಆಧಾರಿತ ಪ್ರಾದೇಶಿಕ ವಾಸ್ತುವಿನ್ಯಾಸಕ್ಕೆ ಆಪ್ತವಾಗಿ ಮತ್ತು ಒಗ್ಗೂಡಿ ಶ್ರಮಿಸುವ ಬದ್ಧತೆಯ ಪುನರುಚ್ಚಾರ.
6. ಶಾಂತಿ, ಸ್ಥಿರತೆ, ಸಾಗರ ಸುರಕ್ಷತೆ ಮತ್ತು ಭದ್ರತೆ, ಸಾಗರಯಾನದ ಸ್ವಾತಂತ್ರ್ಯ ಮತ್ತು ವಲಯದ ಮೇಲೆ ವಿಮಾನ ಹಾರಾಟ ಮತ್ತು ಸಾಗರದ ಇತರ ಕಾನೂನು ಬದ್ಧ ಬಳಕೆ ಮತ್ತು ತಡೆರಹಿತ ಕಾನೂನುಸಮ್ಮತ ಸಾಗರ ವಾಣಿಜ್ಯಮತ್ತು ಸಾಗರದ ಕುರಿತ ಕಾನೂನುಗಳಿಗೆ ಸಂಬಂಧಿಸಿದಂತೆ 1982 ರ ವಿಶ್ವಸಂಸ್ಥೆಯ ನಿರ್ಣಯ (ಯು.ಎನ್. ಸಿ.ಎಲ್.ಓ.ಎಸ್) ಮತ್ತು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಓ)ದ ಮತ್ತು ಅಂತಾರಾಷ್ಟ್ರೀಯ ಸಾಗರ ಸಂಸ್ಥೆ (ಐಎಂಓ)ನ ಸಂಬಂಧಿತ ಗುಣಮಟ್ಟ ಮತ್ತು ಶಿಫಾರಸು ಮಾಡಲಾದ ಪದ್ಧತಿಗಳೂ ಸೇರಿದಂತೆ ಸಾರ್ವತ್ರಿಕವಾಗಿ ಮಾನ್ಯತೆ ಪಡೆದ ಅಂತಾರಾಷ್ಟ್ರೀಯ ಕಾನೂನಿನ ನೀತಿಗಳಿಗೆ ಅನುಗುಣವಾಗಿ ವಿವಾದಗಳ ಶಾಂತಿಯುತ ಇತ್ಯರ್ಥಕ್ಕೆ ಉತ್ತೇಜನ ಮತ್ತು ನಿರ್ವಹಣೆಯ ಮಹತ್ವವನ್ನು ಪುನರುಚ್ಚರಿಸುವುದು. ಈ ನಿಟ್ಟಿನಲ್ಲಿ, ನಾವು ದಕ್ಷಿಣ ಚೀಣಾ ಸಾಗರದಪಕ್ಷಕಾರರ ನಡವಳಿಕೆಯ ಕುರಿತ ಘೋಷಣೆ (ಡಿಓಸಿ)ಯ ಸಮರ್ಥ ಮತ್ತು ಸಂಪೂರ್ಣ ಅನುಷ್ಠಾನಕ್ಕೆ ಬೆಂಬಲ ನೀಡುತ್ತೇವೆ ಹಾಗೂ ದಕ್ಷಿಣ ಚೀನಾ ಸಾಗರ (ಸಿಓಸಿ)ಯ ನಡೆವಳಿಕೆ ಸಂಹಿತೆ ಕುರಿತಂತೆ ಶೀರ್ಘ ಇತ್ಯರ್ಥಕ್ಕೆ ಎದಿರು ನೋಡುತ್ತೇವೆ.
7. ಸಮಾನ ಸಾಗರ ಸವಾಲುಗಳನ್ನು ಎದುರಿಸಲು ಆಸಿಯಾನ್ ಸಾಗರ ವೇದಿಕೆ (ಇ.ಎ.ಎಂ.ಎಫ್.) ವಿಸ್ತರಣೆಯೂ ಸೇರಿದಂತೆಹಾಲಿ ಇರುವ ಸೂಕ್ತ ವ್ಯವಸ್ಥೆಗಳ ಮೂಲಕ ಸಾಗರ ಸಹಕಾರವನ್ನು ಬಲಪಡಿಸುವುದು.
10. ಶಾಂತಿ, ಭದ್ರತೆ, ನೆಲದ ಕಾನೂನು ಎತ್ತಿಹಿಡಿಯಲು, ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ, ಸಮಾನ ಅಭಿವೃದ್ಧಿ ಮತ್ತು ಸಾಮಾಜಿಕ ಸಾಮರಸ್ಯ ಉತ್ತೇಜನಕ್ಕಾಗಿ ಗ್ಲೋಬಲ್ ಮೂವ್ ಮೆಂಟ್ ಆಫ್ ಮಾಡರೇಟ್ಸ್ ಕುರಿತ ಲ್ಯಾಂಗಕ್ವಿ ಘೋಷಣೆಯ ಅನುಷ್ಠಾನಕ್ಕೆ ಬೆಂಬಲ.
12. ಭಯೋತ್ಪಾದನೆ ನಿಗ್ರಹ ಕುರಿತಂತೆವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸೂಕ್ತ ನಿರ್ಣಯಗಳು ಮತ್ತು ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಗ್ರ ಸಮಾವೇಶದ ಮಾತುರಕತೆಯ ಪ್ರಯತ್ನಗಳ ಉಲ್ಲೇಖ(ಸಿಸಿಐಟಿ)ದ ಅನುಸರಣೆಯ ಖಾತ್ರಿಗಾಗಿ ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಸಮುದಾಯಗಳೊಂದಿಗೆ ಒಗ್ಗೂಡಿ ಶ್ರಮಿಸುವುದು.
ಆರ್ಥಿಕ ಸಹಕಾರ
19.ಅನುಕ್ರಮವಾಗಿ ಆಸಿಯಾನ್ ಸಂಪರ್ಕ 2025 ಮತ್ತು ಆಸಿಯಾನ್ ಐಸಿಟಿ ಮಾಸ್ಟರ್ ಪ್ಲಾನ್ 2020ರ ಸಹಕಾರ್ಯದೊಂದಿಗೆ ಐಸಿಟಿ ನೀತಿಗಳನ್ನು ಹೆಚ್ಚಿಸಲು, ಸಾಮರ್ಥ್ಯ ವರ್ಧಿಸಲು, ಡಿಜಿಟಲ್ ಸಂಪರ್ಕ, ಮೂಲಸೌಕರ್ಯ ಮತ್ತು ಸೇವೆಗಳನ್ನು ಸುಧಾರಿಸಲು, ಆಸಿಯಾನ್ ನ ಕೆಲವು ಸದಸ್ಯ ರಾಷ್ಟ್ರಗಳಲ್ಲಿ ತಂತ್ರಾಂಶ ಅಭಿವೃದ್ಧಿ ಮತ್ತು ತರಬೇತಿಯಲ್ಲಿ ಉತ್ಕೃಷ್ಟತಾ ಕೇಂದ್ರ (ಸಿ.ಇ.ಎಸ್.ಡಿ.ಟಿ.)ಗಳನ್ನು ಸ್ಥಾಪಿಸುವ ಮೂಲಕ ಐಸಿಟಿ ಮಾನವ ಸಂಪನ್ಮೂಲವನ್ನು ರೂಪಿಸಲು, ಐಸಿಟಿ ನವೋದ್ಯಮಗಳನ್ನು ಉತ್ತೇಜಿಸಲು, ಅಳವಡಿಕೆಗೆ ಹೊರಹೊಮ್ಮುವ ತಂತ್ರಜ್ಞಾನಗಳನ್ನು ಅನ್ವೇಷಿಸಲು;
21.ಕೃಷಿ ಮತ್ತು ಇಂಧನ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಮೂಲಕ ನಮ್ಮ ವಲಯದಲ್ಲಿ ದೀರ್ಘಕಾಲೀನ ಆಹಾರ ಮತ್ತು ಶಕ್ತಿಯ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಸಹಕಾರವನ್ನು ಮುಂದುವರಿಕೆ ಹೆಚ್ಚಿಸಲು; ಎಲ್ಲಿ ಅನ್ವಯಿಸುತ್ತದೆಯೋ ಅಲ್ಲಿ ಅಂತಾರಾಷ್ಟ್ರೀಯ ಸೌರ ಸಹಯೋಗ (ಐಎಸ್.ಎ) ಸೇರಿದಂತೆ ಅಂತಾರಾಷ್ಟ್ರೀಯ ವೇದಿಕೆಗಳ ಮೂಲಕ ನವೀಕರಿಸಬಹುದಾದ ಇಂಧನ ತಂತ್ರಜ್ಞಾನ ಅಭಿವೃದ್ಧಿ ಉತ್ತೇಜಿಸಲು.
ಸಾಮಾಜಿಕ – ಸಾಂಸ್ಕೃತಿಕ ಸಹಕಾರ
25.ನೀತಿ ನಿರೂಪಕರು, ವ್ಯವಸ್ಥಾಪಕರು ಮತ್ತು ಸ್ಪಷ್ಟವಾದ ಹಾಗೂ ಅಸ್ಪಷ್ಟವಾದ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ಶಿಕ್ಷಣತಜ್ಞರ ನಡುವೆ ಜ್ಞಾನ ವಿನಿಮಯಕ್ಕಾಗಿ ವೇದಿಕೆಗಳನ್ನು ಒದಗಿಸುವ ಮೂಲಕ ಆಸಿಯಾನ್ಮತ್ತು ಭಾರತ ನಡುವಿನ ನಾಗರಿಕ ಮತ್ತು ಐತಿಹಾಸಿಕ ಸಂಪರ್ಕಗಳ ನಂಟಿಗೆ ಸಹಕರಿಸುವುದು;ಮೆಕಾಂಗ್ ನದಿಯ ಉದ್ದಕ್ಕೂ ಶಾಸನಗಳ ಮ್ಯಾಪಿಂಗ್ ಗಾಗಿ ಭಾರತದ ಪ್ರಸ್ತಾಪ ಹಾಗೂ ಆಸಿಯಾನ್ ಭಾರತ ಸಾಂಸ್ಕೃತಿಕ ಮತ್ತು ನಾಗರಿಕತೆಯ ನಂಟಿನ ಕುರಿತ ಚಟುವಟಿಕೆಗಳು ಮತ್ತು ಸಮಾವೇಶಗಳನ್ನು ಆಯೋಜಿಸುವುದೂ ಸೇರಿದಂತೆ ಪರಸ್ಪರರಿಗೆ ಉಪಯುಕ್ತವಾದ ಆಸಿಯಾನ್ ಭಾರತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಪರ್ಕವನ್ನು ಬಿಂಬಿಸುವ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಕೇತಗಳು ಮತ್ತು ಸ್ಮಾರಕಗಳನ್ನು ಪುನರ್ ಸ್ಥಾಪಿಸುವ ಮತ್ತು ಸಂರಕ್ಷಿಸುವ ಪ್ರಯತ್ನ ತ್ವರಿತಗೊಳಿಸುವುದು.
28. ಇಂಗ್ಲಿಷ್ ಭಾಷಾ ತರಬೇತಿ, ಉದ್ಯಮಶೀಲತಾ ಅಭಿವೃದ್ಧಿ ಮತ್ತು ವೃತ್ತಿಪರ ತರಬೇತಿ ಕೇಂದ್ರಗಳು, ವಾರ್ಷಿಕ ವಿದ್ಯಾರ್ಥಿ ವೇತನ ಮಂಜೂರು, ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ (ಐಟಿಇಸಿ) ವಿದ್ಯಾರ್ಥಿವೇತನ, ಆಸಿಯಾನ್ ಭಾರತ ಗುಡ್ ವಿಲ್ ವಿದ್ಯಾರ್ಥಿ ವೇತನ, ನಲಂದ ವಿದ್ಯಾರ್ಥಿ ವೇತನ, ಆಸಿಯಾನ್ ಭಾರತ ಜಾಲದ ವಿಶ್ವವಿದ್ಯಾಲಯ ಸ್ಥಾಪನೆ ಸಾಧ್ಯತೆಯ ಅನ್ವೇಷಣೆ ಮತ್ತು ಆಸಿಯಾನ್ ವಿಶ್ವವಿದ್ಯಾಲಯ ಜಾಲವೂ ಸೇರಿದಂತೆ ವಿಶ್ವವಿದ್ಯಾಲಯಗಳ ನಡುವೆ ವಿನಿಮಯಕ್ಕೆ ಇತರ ವಿಶ್ವವಿದ್ಯಾಲಯಗಳಿಗೆ ಉತ್ತೇಜನದ ಮೂಲಕ,ಶಿಕ್ಷಣ ಮತ್ತು ಯುವ ವಲಯದಲ್ಲಿ ಸಹಕಾರವರ್ಧಿಸುವುದು.
29. ವಲಯದ ವಿಪತ್ತು ನಿರ್ವಹಣೆಯಲ್ಲಿ ಉತ್ತಮ ಸಹಯೋಗಕ್ಕಾಗಿ ಎ.ಎಚ್.ಎ. ಕೇಂದ್ರದೊಂದಿಗೆ ಮತ್ತು ಅದರ ಭಾರತದ ಸಹವರ್ತಿಯೊಂದಿಗೆ ಆಪ್ತ ಪಾಲುದಾರಿಕೆ ಸ್ಥಾಪಿಸಲು ಆಸಿಯಾನ್ ವಲಯದೊಳಗೆ ಮತ್ತು ವಲಯದ ಹೊರಗೆ ವಿಪತ್ತಿನ ಸಂದರ್ಭದಲ್ಲಿ ಒಂದಾಗಿ ಸ್ಪಂದಿಸುವ ಕುರಿತಒಂದು ಆಸಿಯಾನ್, ಒಂದೇ ಸ್ಪಂದನೆಯ ಆಸಿಯಾನ್ ಘೋಷಣೆಯಯ ಸಾಕಾರಕ್ಕಾಗಿವಿಪತ್ತು ನಿರ್ವಹಣೆ ಕುರಿತ ಮಾನವೀಯ ನೆರವಿನ ಆಸಿಯಾನ್ ಸಹಯೋಗ ಕೇಂದ್ರ (ಎ.ಎಚ್.ಎ. ಕೇಂದ್ರ)ದ ಕಾರ್ಯವನ್ನು ಬೆಂಬಲಿಸುವುದೂ ಸೇರಿದಂತೆ ವಿಪತ್ತು ನಿರ್ವಹಣೆ ಮತ್ತು ಮಾನವೀಯ ನೆರವಿಗಾಗಿಆಸಿಯಾನ್ ಭಾರತ ಸಹಕಾರವನ್ನು ಬಲಪಡಿಸುವುದು.
ಸಂಪರ್ಕ
34. ಎಂಪಿಎಸಿ 2025 ಮತ್ತು ಎ.ಐ.ಎಂ.2020ರ ನಿಟ್ಟಿನಲ್ಲಿ, ಭೌತಿಕ ಮೂಲ ಸೌಕರ್ಯ ಮತ್ತು ಡಿಜಿಟಲ್ ಸಂಪರ್ಕ ಉತ್ತೇಜನಕ್ಕಾಗಿ ಭಾರತ ಘೋಷಿಸಿರುವ 1 ಶತಕೋಟಿ ಅಮೆರಿಕನ್ ಡಾಲರ್ ಲೈನ್ ಆಫ್ ಕ್ರೆಡಿಟ್ ಮೂಲಕ ಭೌತಿಕ ಮತ್ತು ಡಿಜಿಟಲ್ ಸಂಪರ್ಕದ ಹೆಚ್ಚಳಕ್ಕಾಗಿ ನಮ್ಮ ಬದ್ಧತೆಯ ಪುನರುಚ್ಚಾರ.
ಅಭಿವೃದ್ಧಿಯ ಕಂದಕವನ್ನು ತಗ್ಗಿಸಲು ಸಹಕಾರ
ಎರಡು ಸಾವಿರದ ಹದಿನೆಂಟನೇ ಇಸವಿ ಜನವರಿ ಇಪ್ಪತ್ತ ಐದನೇ ದಿನದಂದು ನವದೆಹಲಿಯಲ್ಲಿ ಅಳವಡಿಸಿಕೊಳ್ಳಲಾಗಿದೆ.