ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (ಎನ್.ಬಿ.ಎಫ್.ಸಿ.ಗಳು) ವಿದೇಶೀ ಬಂಡವಾಳ ಹೂಡಿಕೆಗಾಗಿ ನಿಯಂತ್ರಣಗಳಿಗೆ ತಿದ್ದುಪಡಿ ಮಾಡಲು ತನ್ನ ಅನುಮೋದನೆ ನೀಡಿದೆ.
ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್.ಬಿ.ಎಫ್.ಸಿ.ಗಳು) ಮೇಲಿನ ಹಾಲಿ ಇರುವ ವಿದೇಶೀ ವಿನಿಮಯ ನಿರ್ವಹಣೆ (ಭಾರತದ ಹೊರಗೆ ನೆಲೆಸಿರುವ ವ್ಯಕ್ತಿ ಭದ್ರತೆಗಳನ್ನು ಬಿಡುಗಡೆ ಅಥವಾ ವರ್ಗಾವಣೆ ಮಾಡುವುದು) ನಿಯಂತ್ರಣದ ತಿದ್ದುಪಡಿಯು “ಇತರ ಹಣಕಾಸು ಸೇವೆಗಳ’’ಲ್ಲಿ ವಿದೇಶೀ ಬಂಡವಾಳದ ಹರಿವಿಗೆ ಅವಕಾಶ ನೀಡುತ್ತದೆ, ಯಾಂತ್ರಿಕ ಮಾರ್ಗದಲ್ಲಿ ಒದಗಿಸಲಾಗುವ ಅಂಥ ಸೇವೆಗಳನ್ನು ಯಾವುದೇ ಹಣಕಾಸು ವಲಯದ ನಿಯಂತ್ರಕರು (ಆರ್.ಬಿ.ಐ, ಸೆಬಿ, ಪಿ.ಎಫ್.ಆರ್.ಡಿ.ಎ. ಇತ್ಯಾದಿ) /ಸರ್ಕಾರಿ ಸಂಸ್ಥೆಗಳು ನಿಯಂತ್ರಿಸುತ್ತವೆ. “ಇತರ ಹಣಕಾಸು ಸೇವೆಗಳ”ಲ್ಲಿನ ವಿದೇಶೀ ಹೂಡಿಕೆಗೆ ಯಾವುದೇ ನಿಯಂತ್ರಕರ/ ಹಣಕಾಸು ಸಂಸ್ಥೆಗಳ ನಿಯಂತ್ರಣ ಇರುವುದಿಲ್ಲ, ಅದಕ್ಕೆ ಅನುಮೋದಿತ ಮಾರ್ಗದಲ್ಲಿ ಮಾಡಬಹುದಾಗಿದೆ.
ಜೊತೆಗೆ ಈಗಾಗಲೇ ಬಹುತೇಕ ನಿಯಂತ್ರಕರು ಕನಿಷ್ಠ ಬಂಡವಾಳ ನಿಯಮ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ಎಫ್.ಡಿ.ಐ. ನೀತಿಯಡಿ ಕಡ್ಡಾಯವಾಗಿದ್ದ ಕನಿಷ್ಠ ಬಂಡವಾಳದ ನಿಯಮಗಳನ್ನು ತೆಗೆದುಹಾಕಲಾಗಿದೆ. ಇದು ಎಫ್.ಡಿ.ಐ.ಗೆ ಪ್ರೇರಣೆ ನೀಡುತ್ತದೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುತ್ತದೆ. ಇದು ಇಡೀ ಭಾರತವನ್ನು ವ್ಯಾಪಿಸುತ್ತದೆ ಹಾಗೂ ಇದು ಯಾವುದೇ ರಾಜ್ಯ/ಜಿಲ್ಲೆಗೆ ಸೀಮಿತವಾಗಿರುವುದಿಲ್ಲ.
ಹಿನ್ನೆಲೆ
2016-17ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಗೌರವಾನ್ವಿತ ಹಣಕಾಸು ಸಚಿವರು, 18 ನಿರ್ದಿಷ್ಟ ಎನ್.ಬಿ.ಎಫ್.ಸಿ. ಚಟುವಟಿಕೆಗಳಾಚೆ, ವಿದೇಶೀ ನೇರ ಬಂಡವಾಳಕ್ಕೆ ಯಾಂತ್ರಿಕ ಮಾರ್ಗದಲ್ಲಿ ಅವಕಾಶ ನೀಡುಲಾಗುವುದು, ಇನ್ನು ಇತರ ಚಟುವಟಿಕೆಗಳಲ್ಲಿ ಹಣಕಾಸು ವಲಯದ ನಿಯಂತ್ರಕರು ನಿಯಂತ್ರಿಸುತ್ತಾರೆ” ಎಂದು ಪ್ರಕಟಿಸಿದ್ದರು. ಬ್ಯಾಂಕೇತರ ಹಣಕಾಸು ಕಂಪನಿಗಳ ಮೇಲಿನ ಪ್ರಸಕ್ತ ನಿಯಂತ್ರಣಗಳು ಸೂಚಿತ ಕನಿಷ್ಠ ಬಂಡವಾಳ ನಿಯಮಗಳನ್ನು ಪೂರೈಸಿದ ಕೇವಲ 18 ನಿರ್ದಿಷ್ಟ ಎನ್.ಬಿ.ಎಫ್.ಸಿ. ಚಟುವಟಿಕೆಗಳಿಗೆ ಮಾತ್ರ ವಿದೇಶೀ ನೇರ ಬಂಡವಾಳಕ್ಕೆ ಯಾಂತ್ರಿಕ ಮಾರ್ಗದಲ್ಲಿ ಅವಕಾಶ ನೀಡಲಾಗಿತ್ತು. ಈಗ ಉದ್ದೇಶಿತ ನಿಯಂತ್ರಣದಲ್ಲಿ ಎಫ್.ಡಿ.ಐ.ಅನ್ನು ಇತರ ಹಣಕಾಸು ಸೇವೆಗಳಿಗೂ ಯಾಂತ್ರಿಕ ಮಾರ್ಗದಲ್ಲಿ ವಿಸ್ತರಿಸಲು ಅವಕಾಶ ನೀಡಲಾಗಿದೆ. ಅಂಥ ಸೇವೆಗಳನ್ನು ನಿಯಂತ್ರಕರು (ಆರ್.ಬಿ.ಐ., ಸೆಬಿ, ಪಿಎಫ್.ಆರ್.ಡಿ.ಎ ಇತ್ಯಾದಿ)/ಸರ್ಕಾರಿ ಸಂಸ್ಥೆಗಳು ನಿಯಂತ್ರಿಸುತ್ತವೆ. ಜೊತೆಗೆ ಈಗಾಗಲೇ ಬಹುತೇಕ ನಿಯಂತ್ರಕರು ಕನಿಷ್ಠ ಬಂಡವಾಳ ನಿಯಮ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ಎಫ್.ಡಿ.ಐ. ನೀತಿ ಅಡಿ ಕಡ್ಡಾಯ ಮಾಡಿದ್ದ ಕನಿಷ್ಠ ಬಂಡವಾಳ ನಿಯಮ ಕೈಬಿಡಲಾಗಿದೆ.
AD/VBA/SH