ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ರಸಕ್ತ 2018ರ ಜೂನ್ 20ರವರೆಗಿದ್ದ ಕೇಂದ್ರೀಯ ಪಟ್ಟಿಯಲ್ಲಿನ ಇತರ ಹಿಂದುಳಿದ ವರ್ಗಗಳ ಅವಧಿಯನ್ನು 2018ರ ಜುಲೈ 31ರವರೆಗೆ ಅಂತಿಮವಾಗಿ ವಿಸ್ತರಿಸಲು ತನ್ನ ಅನುಮೋದನೆ ನೀಡಿದೆ.
ರಾಜ್ಯ ಸರ್ಕಾರಗಳು, ರಾಜ್ಯ ಹಿಂದುಳಿದ ವರ್ಗಗಳ ಆಯೋಗಗಳು, ವಿವಿಧ ಸಮುದಾಯದ ಸಂಘಟನೆಗಳು ಮತ್ತು ವಿವಿಧ ಹಿಂದುಳಿದ ವರ್ಗಗಳ ಮತ್ತು ಸಮುದಾಯಗಳಿಗೆ ಸೇರಿದ ಶ್ರೀಸಾಮಾನ್ಯರು ಸೇರಿ ವಿವಿಧ ಬಾಧ್ಯಸ್ಥರೊಂದಿಗೆ ಆಯೋಗ ವ್ಯಾಪಕ ಸಭೆಗಳನ್ನು ನಡೆಸಿದೆ. ಆಯೋಗವು ಉನ್ನತ ಶೈಕ್ಷಣಿಕ ಸಂಸ್ಥೆಯಲ್ಲಿ ಪ್ರವೇಶ ಪಡೆದ ಓಬಿಸಿಗಳ ಜಾತಿ-ವರ್ಗಗಳ ದಾಖಲೆಯ ಜೊತೆಗೆ ಕೇಂದ್ರೀಯ ಇಲಾಖೆಗಳು, ಕೇಂದ್ರೀಯ ಸಾರ್ವಜನಿಕ ವಲಯದ ಉದ್ಯಮಗಳು, ಸಾರ್ವಜನಿಕ ವಲಯ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ನೇಮಕಾತಿಯಲ್ಲಿನ ಜಾತಿವಾರು ಮಾಹಿತಿಯ ದಾಖಲೆಗಳನ್ನೂ ಪಡೆದುಕೊಂಡಿದೆ.
ಸಂಗ್ರಹಿತ ದಾಖಲೆಗಳನ್ನು ಸವಿಸ್ತಾರವಾಗಿ ನೋಡಲು ಆಯೋಗ 2018ರ ಜುಲೈ 31ರವರೆಗೆ ಅವಧಿ ವಿಸ್ತರಣೆ ಕೋರಿತ್ತು.
*****
AKT/VBA