ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು ಟೆಲ್ ಅವೀವ್ ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ವಿಸ್ತೃತ ಅಧಿಕೃತ ಸ್ವಾಗತ ಸಮಾರಂಭದ ಭಾಗವಾಗಿ, ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು, ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಸ್ವಾಗತಿಸಿದರು. ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಗೌರವರಕ್ಷೆ ಪರಿವೀಕ್ಷಿಸಿದರು.
ಪ್ರಧಾನಮಂತ್ರಿ ನೆತನ್ಯಾಹು ಅವರು ತಮ್ಮ ಪತ್ರಿಕಾ ಹೇಳಿಕೆಯನ್ನು “आपका स्वागत है मेरे दोस्त.”(ನಿಮಗೆ ಸ್ವಾಗತ ನನ್ನ ಗೆಳೆಯರೇ) ಎಂಬ ಹಿಂದಿಯ ವಾಕ್ಯದೊಂದಿಗೆ ಆರಂಭಿಸಿದರು. ಪ್ರಧಾನಮಂತ್ರಿಯವರನ್ನು ಮುಕ್ತ ಬಾಹುಗಳಿಂದ ಸ್ವಾಗತಿಸುತ್ತಿರುವುದಾಗಿ ಮತ್ತು ಎರಡೂ ದೇಶಗಳ ನಡುವಿನ ಸಹಕಾರಕ್ಕೆ ಆಕಾಶವೂ ಕೂಡ ಮಿತಿಯಲ್ಲ ಎಂದು ಹೇಳಿದರು. ಪ್ರಧಾನಮಂತ್ರಿ ಮೋದಿ ಅವರು ಒಬ್ಬ ಶ್ರೇಷ್ಠ ನಾಯಕ ಮತ್ತು ‘ವಿಶ್ವ ನಾಯಕ’ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ, ‘ಶಲೋಮ್ ಲೆ ಕುಲಮ್’ ಎಂಬ ಹೆಬ್ರ್ಯೂ ಶುಭಾಶಯದೊಂದಿಗೆ ತಮ್ಮ ಮಾತು ಆರಂಭಿಸಿದರು. ಹೆಬ್ರ್ಯೂವಿನಲ್ಲಿ ಮತ್ತಷ್ಟು ಮಾತನಾಡಿದ ಅವರು ಇಸ್ರೇಲ್ ನಲ್ಲಿ ಇರುವುದು ತಮಗೆ ಹರ್ಷ ತಂದಿದೆ ಎಂದರು.
ಸರಿಯಾಗಿ 41 ವರ್ಷಗಳ ಹಿಂದೆ ಜುಲೈ 4ರಂದು ಎಂಟೆಬ್ಬೆಯಲ್ಲಿನ ಇಸ್ರೇಲೀ ಕಾರ್ಯಾಚರಣೆಯನ್ನು ಸ್ಮರಿಸಿದ ಅವರು, ಅಲ್ಲಿ ನೆತನ್ಯಾಹು ಅವರ ಹಿರಿಯ ಸೋದರ, ಹಲವು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ತಮ್ಮ ಪ್ರಾಣಾರ್ಪಣೆ ಮಾಡಿದ್ದರು ಎಂದು ತಿಳಿಸಿದರು.
ಸುಸ್ಥಿರ ಉನ್ನತ ಪ್ರಗತಿ ಮತ್ತು ಸರ್ವಾಂಗೀಣ ಅಭಿವೃದ್ಧಿಯ ನಮ್ಮ ಹಾದಿಯಲ್ಲಿ, ಭಾರತವು ಇಸ್ರೇಲ್ ಅನ್ನು ತನ್ನ ಮಹತ್ವದ ಪಾಲುದಾರ ಎಂದು ಪರಿಗಣಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಎರಡೂ ಕಡೆ ವಿನಿಮಯಿತ ಆರ್ಥಿಕ ಪ್ರಗತಿಯ ಪಾಲುದಾರಿಕೆಯ ಜೊತೆಗೆ, ನಮ್ಮ ಸಮಾಜವನ್ನು ಸಮಾನ ಭೀತಿಯಾದ ಭಯೋತ್ಪಾದನೆಯಿಂದ ಸುರಕ್ಷಿತಗೊಳಿಸುವ ಸಹಕಾರವನ್ನೂ ನಿರ್ಮಿಸಲಿದ್ದೇವೆ ಎಂದೂ ಅವರು ಹೇಳಿದರು.
ಇಸ್ರೇಲ್ ನಲ್ಲಿರುವ ಭಾರತೀಯ ಸಮುದಾಯವನ್ನು ಭೇಟಿ ಮಾಡುವ ತಮ್ಮ ತವಕವನ್ನು ವ್ಯಕ್ತಪಡಿಸಿದ ಪ್ರಧಾನಿ, ಭಾರತೀಯ ಮೂಲದ ಯಹೂದಿಗಳು ನಮ್ಮ ಎರಡೂ ಸಮಾಜವನ್ನು ಶ್ರೀಮಂತಗೊಳಿಸಿವೆ ಎಂದರು.
***
AKT/NT
Partners for peace and prosperity, partners for a better future for humanity...PM @netanyahu welcomes PM @narendramodi to Israel. pic.twitter.com/mZgl8pAqz2
— PMO India (@PMOIndia) July 4, 2017
Welcome to Israel...Aapka Swagat Hai Mere Dost. We have been waiting for you, for a long time. We love India: PM @netanyahu to PM Modi
— PMO India (@PMOIndia) July 4, 2017
I remember what you told me in our first meeting- when it comes to India & Israel relations, the sky is the limit: PM @netanyahu to PM Modi
— PMO India (@PMOIndia) July 4, 2017
But now, Prime Minister, let me add- we are also cooperating in space: PM @netanyahu to PM @narendramodi
— PMO India (@PMOIndia) July 4, 2017
You are a great leader of India and a great world leader: PM @netanyahu to PM @narendramodi
— PMO India (@PMOIndia) July 4, 2017
Together, we can do even more and even better (for India-Israel ties): PM @netanyahu to PM @narendramodi
— PMO India (@PMOIndia) July 4, 2017
I thank my friend PM @netanyahu for receiving me. My visit is about the strength of our societies and our strong partnership: PM
— PMO India (@PMOIndia) July 4, 2017
My honour to be the 1st ever Indian PM to undertake this ground breaking visit to Israel: PM @narendramodi
— PMO India (@PMOIndia) July 4, 2017
India is an old civilisation but young nation. We have a talented and skilled youth, who are our driving force: PM @narendramodi
— PMO India (@PMOIndia) July 4, 2017
We consider Israel an important development partner: PM @narendramodi
— PMO India (@PMOIndia) July 4, 2017
We have to secure our societies against the common threat of terrorism: PM @narendramodi
— PMO India (@PMOIndia) July 4, 2017
This is an exciting journey that we will undertake together, for the good of our people and our society: PM @narendramodi to PM @netanyahu
— PMO India (@PMOIndia) July 4, 2017