ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬಾಹ್ಯಾಕಾಶ ಇಲಾಖೆ /ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಡಿ.ಓ.ಎಸ್. /ಐ.ಎಸ್.ಆರ್.ಓ) ಮತ್ತು ಕೆನಡಾದ ಬಾಹ್ಯಾಕಾಶ ಸಂಸ್ಥೆ (ಸಿ.ಎಸ್.ಎ) ನಡುವಿನ ಬಾಹ್ಯಾಕಾಶ ಸಹಕಾರದ ತಿಳಿವಳಿಕೆ ಒಪ್ಪಂದದ ಮೌಲ್ಯ ಮಾಪನ ನಡೆಸಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2015ರ ಏಪ್ರಿಲ್ 15ರಂದು ಒಟ್ಟಾವಾದಲ್ಲಿ ಅಂಕಿತ ಹಾಕಲಾಗಿತ್ತು.
ಇಸ್ರೋ ಮತ್ತು ಸಿ.ಎಸ್.ಎ.ಯಿಂದ ಸದಸ್ಯರನ್ನು ತೆಗೆದುಕೊಂಡು ಜಂಟಿ ತಂಡ ರಚಿಸಲು ಈ ತಿಳಿವಳಿಕೆ ಒಪ್ಪಂದ ಅವಕಾಶ ನೀಡಲಿದೆ, ಈ ಒಪ್ಪಂದವು ಪರಿಶೀಲನೆ ಮತ್ತು ಸಹಕಾರ ಯೋಜನೆ ಮತ್ತು ಕಾಲಮಿತಿ ಸೇರಿದಂತೆ ಕಾರ್ಯಯೋಜನೆಯ ಕುರಿತು ಪರಿಶೀಲಿಸಲಿದೆ. ಬಾಹ್ಯಾಕಾಶ ತಂತ್ರಜ್ಞಾನವನ್ನು ಶಾಂತಿಯುತ ಬಳಕೆಯ ಕ್ಷೇತ್ರದ ವಿಭಿನ್ನ ಸಂಶೋಧನೆಯ ಅವಕಾಶಗಳನ್ನೂ ಇದು ಒದಗಿಸಲಿದೆ.
ಹಿನ್ನೆಲೆ
ಆಸ್ಟ್ರೋಸ್ಯಾಟ್ ಖಗೋಳಶಾಸ್ತ್ರ ಅಭಿಯಾನಕ್ಕೆ ಬೆಂಬಲವಾಗಿ ಅನುಕ್ರಮವಾಗಿ 2003ರ ಡಿಸೆಂಬರ್ ಮತ್ತು 2004ರ ಜೂನ್ ನ ಎರಡು ಜಾರಿ ಸಿದ್ಧತೆಗಳ ಕ್ಷೇತ್ರಗಳಾದ ಉಪಗ್ರಹ ನಿಗಾ ಜಾಲ ಕಾರ್ಯಾಚರಣೆ ಮತ್ತು ಅಲ್ಟ್ರಾ ವಯಲೆಟ್ ಇಮೇಜಿಂಗ್ ಟೆಲಿಸ್ಕೋಪ್ (ಯು.ವಿ.ಐ.ಟಿ.) ಪತ್ತೆ ಉಪ ವ್ಯವಸ್ಥೆ ಕ್ಷೇತ್ರಗಳ ಮೂಲಕ ಯಶಸ್ವೀ ಬಾಹ್ಯಾಕಾಶ ಸಹಕಾರವನ್ನು ಪರಾಮರ್ಶಿಸಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಪುನರ್ಚಾಲನೆ ನೀಡಲು ಮತ್ತು ಎರಡೂ ರಾಷ್ಟ್ರಗಳ ಸರ್ಕಾರ ಮತ್ತು ಕೈಗಾರಿಕೆ ಮತ್ತು ಶೈಕ್ಷಣಿಕ ಹಂತದಲ್ಲಿ ಬಾಂಧವ್ಯ ಹಾಗೂ ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶದ ಒಳ ಮತ್ತು ಹೊರಗಿನ ಪ್ರದೇಶ ಬಳಕೆಯ ಭವಿಷ್ಯದ ಸಹಕಾರದ ಗುರಿಯನ್ನು ಇದು ಹೊಂದಿದೆ..
***