Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಈಶಾನ್ಯಕ್ಕಾಗಿ ಮಾರ್ಚ್ 2020ರವರೆಗೆ ಎನ್.ಎಲ್.ಸಿ.ಪಿ.ಆರ್. ಯೋಜನೆ ಮುಂದುವರಿಸಲು ಸಂಪುಟದ ಅನುಮೋದನೆ 2020ರ ಮಾರ್ಚ್ ವರೆಗೆ ಎನ್.ಇ.ಎಸ್.ಐ.ಡಿ.ಎಸ್. ಎಂಬ ಹೊಸ ಯೋಜನೆ ಪರಿಚಯಿಸಲೂ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಹಾಲಿ ಇರುವ ಕೈತಪ್ಪದ ಕೇಂದ್ರೀಯ ಸಂಪನ್ಮೂಲ ನಿಧಿ (ಎನ್.ಎಲ್.ಸಿ.ಪಿ.ಆರ್.) ಯೋಜನೆಯನ್ನು 2020ರವರೆಗೆ 5300 ಕೋಟಿ ರೂಪಾಯಿ ಹಂಚಿಕೆಯೊಂದಿಗೆ 90:10ಅನುಪಾತದಲ್ಲಿ ಮುಂದುವರಿಸಲು ತನ್ನ ಅನುಮೋದನೆ ನೀಡಿದೆ. ಇದು ಪ್ರಗತಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಸಹಕಾರಿಯಾಗಲಿದೆ.

ಅಲ್ಲದೆ ಕೇಂದ್ರ ಸಚಿವ ಸಂಪುಟವು 2020 ಮಾರ್ಚ್ ವರೆಗೆ ನಿರ್ದಿಷ್ಟ ಮೂಲಸೌಕರ್ಯ ಸೃಷ್ಟಿಯ ಕೊರತೆ ತುಂಬಲು 2017-18ರಿಂದ ಪ್ರತಿಶತ 100ರಷ್ಟು ಕೇಂದ್ರ ಸರ್ಕಾರದ ಹೂಡಿಕೆಯೊಂದಿಗೆ “ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆ” (ಎನ್ಇಎಸ್ಐಡಿಎಸ್) ಎಂಬ ಹೊಸ ಯೋಜನೆ ಆರಂಭಿಸಲು ತನ್ನ ಸಮ್ಮತಿ ಸೂಚಿಸಿದೆ.

ಎನ್.ಐ.ಎಸ್.ಐ.ಡಿ.ಎಸ್. ಮುಖ್ಯಾಂಶಗಳು:

ಈ ಹೊಸ ಯೋಜನೆಯು ಈ ಕೆಳಗಿನ ವಲಯಗಳಲ್ಲಿ ಮೂಲಸೌಕರ್ಯ ಸೃಷ್ಟಿಯ ವ್ಯಾಪಕ ವ್ಯಾಪ್ತಿ ಹೊಂದಿದೆ:-

a)ನೀರು ಪೂರೈಕೆ, ವಿದ್ಯುತ್, ಸಂಪರ್ಕ ಮತ್ತು ಪ್ರವಾಸೋದ್ಯಮ ಉತ್ತೇಜಿಸುವಂಥ ನಿರ್ದಿಷ್ಟ ಯೋಜನೆಗಳಿಗೆ ಸಂಬಂಧಿಸಿದ ಭೌತಿಕ ಮೂಲಸೌಕರ್ಯ.;

b) ಶಿಕ್ಷಣ ಮತ್ತು ಆರೋಗ್ಯದಂಥ ಸಾಮಾಜಿಕ ವಲಯದ ಮೂಲಸೌಕರ್ಯ.

ಎನ್.ಐ.ಎಸ್.ಐ.ಡಿ.ಎಸ್. ಪ್ರಯೋಜನಗಳು:

ಎನ್.ಐ.ಎಸ್.ಐ.ಡಿ.ಎಸ್. ಹೊಸ ಯೋಜನೆಯಡಿ ಸೃಷ್ಟಿಸಲಾಗುವ ಆಸ್ತಿಗಳು ವಲಯದಲ್ಲಿ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಸೌಲಭ್ಯಗಳನ್ನಷ್ಟೇ ಬಲಪಡಿಸುವುದಿಲ್ಲ ಜೊತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ, ತನ್ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುತ್ತದೆ. ಮುಂಬರುವ ವರ್ಷಗಳಲ್ಲಿ ಈ ಯೋಜನೆಯು ವಲಯದ ಸರ್ವಾಂಗೀಣ ಅಭಿವೃದ್ಧಿಗೆ ವೇಗವರ್ಧಕವಾಗಿ ಕಾರ್ಯ ನಿರ್ವಹಿಸಲಿದೆ.

*****