ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಲಖ್ನೋದಲ್ಲಿ ನಡೆದ 5ನೇ ಕೌಶಲ್ ದೀಕ್ಷಾಂತ ಸಮಾರೋಹ್ ನಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಷ್ಟು ಮಹತ್ವದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಲು ಲಖ್ನೋ ಆಯ್ಕೆಯಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು; ಉತ್ತರ ಪ್ರದೇಶದ ಸಂಸದರಾಗಿರುವುದರಿಂದ ತಮಗೂ ಇದು ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು.
ಪದವಿ ಪಡೆದ ಯುವಜನರು ತಮ್ಮ ಜೀವನದಲ್ಲಿ ಮಹತ್ವದ ಮೈಲಿಗಲ್ಲು ದಾಟಿ ಈಗ ನೇರವಾಗಿ ರಾಷ್ಟ್ರ ನಿರ್ಮಾಣ ಪ್ರಕ್ರಿಯೆಗೆ ಸೇರಲು ಸಿದ್ಧರಾಗಿದ್ದಾರೆ ಎಂದು ಹೇಳಿದ ಪ್ರಧಾನಮಂತ್ರಿ, ಐಟಿಐಗಳಲ್ಲಿ ಪಡೆದ ಕೌಶಲ್ಯ ಮತ್ತು ಕುಶಲತೆ ವಿಕಸಿತ ಭಾರತದ ಪ್ರಮುಖ ಚಾಲಕ ಶಕ್ತಿ ಎಂದು ಒತ್ತಿಹೇಳಿದರು. ಯಾವುದೇ ರಾಷ್ಟ್ರವು ತನ್ನ ಯುವಜನರ ಕೌಶಲ್ಯಗಳ ಮೂಲಕ ಈ ರೀತಿಯಲ್ಲಿ ಸಮರ್ಥವಾಗಿ ಮುಂದುವರಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಭಾರತದ ಕೈಗಾರಿಕೆ ಪಡೆದಿರುವ ದೀರ್ಘಕಾಲದ ಗೌರವವನ್ನು ಮುಖ್ಯವಾಗಿ ಪ್ರಸ್ತಾಪಿಸಿದ , ಅವರು ಲಖ್ನೋವಿನ ಚಿಕಂಕಾರಿ, ಸೂಕ್ಷ್ಮ ನಯವಾದ ಮುಸ್ಲಿನ್, ಬನಾರಸ್ ಮತ್ತು ಕಾಂಜೀವರಂ ರೇಷ್ಮೆ, ಕಾಶ್ಮೀರ ಪಶ್ಮಿನಾ (ಶಾಲು), ಹತ್ತಿ ಬಟ್ಟೆಗಳು, ಕಲಾಂಕಾರಿ, ವಿಶ್ವದ ಅತ್ಯುತ್ತಮ ಕತ್ತಿಗಳ ಉಕ್ಕು ಮತ್ತು ಕಂಚಿನ ಹಾಗು ಪಂಚಧಾತು ಮೂರ್ತಿಗಳು ನೂರಾರು ಪರಂಪರೆಯ ಕೈಗಾರಿಕೆಗಳಲ್ಲಿ ಸೇರಿವೆ ಎಂದೂ ಉಲ್ಲೇಖಿಸಿದರು, ಅವು ಒಂದು ಕಾಲದಲ್ಲಿ ಸಮಾಜದ ಮೂಲಭೂತ ಸ್ತಂಭಗಳಾಗಿದ್ದವು ಎಂದರು. “ದೀರ್ಘಕಾಲದಿಂದ, ವಿಶ್ವದಲ್ಲಿ ಭಾರತದ ಗುರುತಿಸುವಿಕೆ ಇಂತಹ ಕೌಶಲ್ಯಗಳ ಮೂಲಕ ಬಂದಿದೆ,” ಎಂದು ಪ್ರಧಾನಮಂತ್ರಿ ಮೋದಿ ನುಡಿದರು.
ಭಾರತದ ಹಿಂದಿನ ಸಾಮಾಜಿಕ ವ್ಯವಸ್ಥೆ ಕೌಶಲ್ಯಗಳ ಸುತ್ತಲೂ ರೂಪುಗೊಂಡಿತ್ತು ಎಂದು ವಿವರಿಸಿದ ಪ್ರಧಾನಮಂತ್ರಿಯವರು, ಗುಜರಾತ್ ನ ವಾಸವಯ ಪರಂಪರೆಯ ಉದಾಹರಣೆಯನ್ನು ಹಂಚಿಕೊಂಡರು, ಇದರಲ್ಲಿ ನಿಪುಣ ಕಲಾವಿದರು ಹಳ್ಳಿಯ ಜೀವನವನ್ನು ಉಳಿಸಿಕೊಂಡು, ಹೊಸ ಹಳ್ಳಿ ಸ್ಥಾಪನೆಯಾದ ಎಲ್ಲೆಡೆ ನೆಲೆಸುತ್ತಿದ್ದರು. “ಇವರು ತುಂಬಾ ಕೌಶಲ್ಯವಂತರು, ಅವರಿಲ್ಲದೆ ಗ್ರಾಮೀಣ ಜೀವನವನ್ನು ಕಲ್ಪಿಸುವುದು ಕೂಡ ಕಷ್ಟವಾಗಿತ್ತು,” ಎಂದು ಶ್ರೀ ಮೋದಿ ಹೇಳಿದರು.
ಪ್ರಾಚೀನ ಕಾಲದಿಂದಲೂ ಭಾರತದ ಪ್ರತಿಯೊಂದು ಪ್ರದೇಶದಲ್ಲಿಯೂ ಇಂತಹ ವ್ಯವಸ್ಥೆ ಇದ್ದರೂ, ಅದು ಕ್ರಮೇಣ ಮಹತ್ವ ಕಳೆದುಕೊಂಡಿತು ಎಂದು ಹೇಳಿದ ಅವರು, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರಿಗಳಿಗೆ ನೀಡಲಾದ ಒಂದು ಕೆಲಸವನ್ನು ನೆನಪಿಸಿಕೊಂಡರು, ಎಚ್ಚರಿಕೆಯಿಂದ ನಿದ್ರೆಯವರೆಗೆ ಮತ್ತು ಜನನದಿಂದ ಮರಣದವರೆಗೆ ವ್ಯಕ್ತಿಗೆ ಅಗತ್ಯವಿರುವ ಪ್ರತಿಯೊಂದು ಕಾರ್ಯ ಮತ್ತು ಸೇವೆಯನ್ನು ಪಟ್ಟಿ ಮಾಡುವಂತೆ ಸೂಚಿಸಿದ, ಪರಿಣಾಮ ಇದು ಸಮಾಜವನ್ನು ಚಲನೆಯಲ್ಲಿರುವಂತೆ ಮಾಡುವ ಸುಮಾರು ಸಾವಿರ ಅಗತ್ಯ ಕೌಶಲ್ಯಗಳನ್ನು ಪಟ್ಟಿ ಮಾಡಿ ನೀಡಿತು. “ನಾನು ಅಧಿಕಾರಿಗಳಿಗೆ ಈ ವಿಷಯದ ಮೇಲೆ ಗಮನಹರಿಸಲು ಹೇಳಿದೆ ಮತ್ತು ಆ ನಂತರ ಗುಜರಾತಿನಲ್ಲಿ ಆಧುನಿಕ ಕೌಶಲ್ಯಾಭಿವೃದ್ಧಿ ಪರಿಸರವನ್ನು ರೂಪಿಸಲಾಯಿತು” ಎಂದು ನುಡಿದರು.
ಭಾರತದ ಕೌಶಲ್ಯ ಪರಿಸರ ವ್ಯವಸ್ಥೆಯ ಕುಸಿತಕ್ಕೆ ವಸಾಹತುಶಾಹಿ ಶಿಕ್ಷಣ ವ್ಯವಸ್ಥೆಯೇ ಕಾರಣವೆಂದು ಹೇಳಿದ ಅವರು, ಇದು ಕೌಶಲ್ಯಾಧಾರಿತ ಸಮಾಜವನ್ನು ಕಾಗದದ ಕ್ಲರ್ಕ್ ಗಳನ್ನು ಉತ್ಪಾದಿಸುವುದಕ್ಕೆ ಸೀಮಿತಗೊಳಿಸಿತು, ಆದರೆ ಬ್ರಿಟಿಷರು ತಮ್ಮ ಕೈಗಾರಿಕೆ ಮತ್ತು ಉತ್ಪಾದನೆಯನ್ನು ಮುಂದುವರೆಸಿದರು ಎಂದೂ ಹೇಳಿದರು, ಸ್ವಾತಂತ್ರ್ಯದ ನಂತರವೂ ಕಾರಕೂನಿಕೆಯ (ಕ್ಲರ್ಕ್) ಉದ್ಯೋಗಗಳು ಗೌರವಿಸಲ್ಪಟ್ಟವು ಮತ್ತು ನಿಪುಣ ಕರಕುಶಲಗಾರರು ಕೀಳರಿಮೆಯಿಂದಾಗಿ ತಮ್ಮ ವೃತ್ತಿಗಳಿಂದ ದೂರವಾಗಲು ಪ್ರಾರಂಭಿಸಿದರು. “ನಮ್ಮ ದೇಶವು ಈ ದಾಸ್ಯ ಮನೋಭಾವದಿಂದ ಭಾರೀ ನಷ್ಟವನ್ನು ಅನುಭವಿಸಬೇಕಾಯಿತು,” ಎಂದು ಶ್ರೀ ಮೋದಿ ಹೇಳಿದರು.
ಶ್ರಮೇವಾ ಜಯತೆ ಮನೋಭಾವದಿಂದ ಚಾಲಿತವಾದ ಸರ್ಕಾರದ ಕ್ರಮಬದ್ಧ ಉಪಕ್ರಮಗಳನ್ನು ಮುಖ್ಯವಾಗಿ ಪ್ರಸ್ತಾಪಿಸಿದ ಪ್ರಧಾನಿ, ಕಾಲೇಜು ಮತ್ತು ವಿಶ್ವವಿದ್ಯಾಲಯ ಪದವೀಧರರ ಹೊರತಾಗಿ ಐಟಿಐ ಕೌಶಲ್ಯ ಪ್ರಮಾಣಪತ್ರ ಪಡೆದವರಿಗೂ ಘಟಿಕೋತ್ಸವ ಸಮಾರಂಭಗಳ ಪರಂಪರೆಯನ್ನು ವಿಸ್ತರಿಸುವುದು ಮತ್ತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲ್ಯ ಅಭಿವೃದ್ಧಿಗೆ ಬಲವಾದ ಒತ್ತು ನೀಡಿರುವುದು ಸೇರಿದಂತೆ, ಕರಕುಶಲಕತೆ ಮತ್ತು ಕೌಶಲ್ಯಗಳನ್ನು ಗೌರವಿಸುವ ಮಹತ್ವವನ್ನು ಒತ್ತಿಹೇಳಿದರು. “21ನೇ ಶತಮಾನದ ಭಾರತವು ಕೌಶಲ್ಯಕ್ಕೆ ಗೌರವ ನೀಡುವುದರಿಂದ ಮಾತ್ರ ಮುಂದುವರಿಯಬಹುದು” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.
ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ ಎಂಬ ಬಗ್ಗೆ ವ್ಯಾಪಕ ಚರ್ಚೆಗಳು ಮತ್ತು ಆತಂಕಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಕೋವಿಡ್ ಮಹಾಮಾರಿಯ ಸಮಯದಲ್ಲಿ ಎಲ್ಲರೂ ಅಸಾಹಯಕತೆಯ ಭಾವನೆಯಲ್ಲಿದ್ದಾಗ, ಪ್ರಮುಖ ಕಾರ್ಯಾಚರಣೆಗಳನ್ನು ನಿರ್ವಹಿಸಿ ಎಲ್ಲ ಕೆಲಸಗಳು ಸುಸೂತ್ರವಾಗಿ ನಡೆಯುವಂತೆ ಮಾಡಿದವರು ನಿಪುಣ ಕಾರ್ಮಿಕರು ಎಂದು ನೆನಪಿಸಿಕೊಂಡರು. “ನನ್ನ ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ: ಯಾರಿಗೆ ಕೌಶಲ್ಯವಿದೆಯೋ, ಯಾರೂ ಅವರ ಉದ್ಯೋಗವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ಶ್ರೀ ಮೋದಿ ದೃಢಪಡಿಸಿದರು.
ಕಲೆ,ಕೌಶಲ್ಯಗಳ ಕಲಿಕೆ ಕೈಗಾರಿಕಾ ಯಂತ್ರಗಳನ್ನು ನಿಭಾಯುಸುವುದಕ್ಕಿಂತ ಹೆಚ್ಚಿನದು, ಅದು ಜನರ ಜೀವನವನ್ನು ಸುಲಭಗೊಳಿಸುವುದರ ಜೊತೆಗೆ ರಾಷ್ಟ್ರೀಯ ಸಾಮರ್ಥ್ಯ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವುದಾಗಿ ಒತ್ತಿಹೇಳಿದರು, 2014 ರಿಂದ ಐಟಿಐಗಳ ಮೇಲೆ ಅಭೂತಪೂರ್ವ ಗಮನವನ್ನು ನೀಡಲಾಗಿದೆ ಎಂದರು. ಒಂದು ದಶಕದಲ್ಲಿ ಸುಮಾರು 5,000 ಹೊಸ ಐಟಿಐಗಳನ್ನು ನಿರ್ಮಿಸಲಾಗಿದೆ ಎಂಬುದರತ್ತಲೂ ಅವರು ಗಮನ ಸೆಳೆದರು. “ಐಟಿಐಗಳಲ್ಲಿ ಅಧ್ಯಯನ ಮಾಡುವವರ ಸಂಖ್ಯೆ 5 ಲಕ್ಷಕ್ಕಿಂತ ಹೆಚ್ಚಾಗಿದೆ, ಮತ್ತು ಹುಡುಗಿಯರ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು
ಹಳೆಯ ಕಲಿಕಾ ಮಾದರಿಗಳಿಂದ ಹಿಂದುಳಿದಿದ್ದ ಐ.ಟಿ.ಐ.ಗಳನ್ನು ತರಬೇತಿ, ಗುಣಮಟ್ಟ, ಅಧ್ಯಾಪಕರು ಮತ್ತು ಮೂಲಸೌಕರ್ಯಗಳ ಮೇಲೆ ಗಮನ ಹರಿಸಿ ಸುಧಾರಿಸಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಈಗ 30ಕ್ಕೂ ಹೆಚ್ಚು ಹೊಸ ಯುಗದ ವೃತ್ತಿಗಳನ್ನು ಪರಿಚಯಿಸಲಾಗಿದೆ, ಇದರಲ್ಲಿ ವಿಮಾನಯಾನ ರಚನೆ, ಕೃತಕ ಬುದ್ಧಿಮತ್ತೆ ಸಹಾಯಕ, ಸೈಬರ್ ಭದ್ರತಾ ಸಹಾಯಕ, ಡ್ರೋನ್ ತಂತ್ರಜ್ಞ, ಹಸಿರು ಹೈಡ್ರೋಜನ್ ತಂತ್ರಜ್ಞ, ಕೈಗಾರಿಕಾ ರೋಬೋಟಿಕ್ಸ್, ವಿದ್ಯುತ್ ವಾಹನಗಳು, ಅನಿಮೇಶನ್ ಮತ್ತು ವಿಶೇಷ ಪರಿಣಾಮಗಳು, ಮತ್ತು ಸೆಮಿಕಂಡಕ್ಟರ್ ತಂತ್ರಜ್ಞರು ಕೋರ್ಸ್ ಗಳು ಸೇರಿವೆ, ಇವು ಭಾರತ ಮತ್ತು ಜಾಗತಿಕ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲ್ಪಟ್ಟಿವೆ, ಜೊತೆಗೆ ಭಾರತದ ನಿರಂತರ ವ್ಯಾಪಾರ ಒಪ್ಪಂದಗಳು ಮತ್ತು ಮುಕ್ತ ವ್ಯಾಪಾರ ಮಾತುಕತೆಗಳಿಗೆ ಅನುಗುಣವಾಗಿ ಮರುರೂಪಿಸಲ್ಪಟ್ಟಿವೆ “ಇವು ಎಲ್ಲವೂ ನಿಮಗಾಗಿ, ಯುವಜನರಿಗಾಗಿ ಮಾಡಲಾಗುತ್ತಿದೆ.ನಿಮ್ಮ ಭವಿಷ್ಯಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ,” ಎಂದು ಶ್ರೀ ಮೋದಿ ದೃಢಪಡಿಸಿದರು.
ಐಟಿಐ ಪಠ್ಯಕ್ರಮಗಳು ಮತ್ತು ಯಂತ್ರೋಪಕರಣಗಳನ್ನು ಆಧುನೀಕರಿಸುವ ಪ್ರಯತ್ನಗಳು, ಹೊಸ ತಂತ್ರಜ್ಞಾನಗಳಲ್ಲಿ ಶಿಕ್ಷಕರಿಗೆ ತರಬೇತಿ ನೀಡುವುದು ಮತ್ತು ತರಬೇತಿ ಹಾಗು ಕೈಗಾರಿಕೆಯ ನಡುವೆ ನೇರ ಸಂಪರ್ಕಗಳನ್ನು ನಿರ್ಮಿಸುವ ಪ್ರಯತ್ನಗಳನ್ನು ವಿವರಿಸಿದ ಪ್ರಧಾನಮಂತ್ರಿ ಪಿ.ಎಂ.-ಸೇತು (PM-SETU) ಯೋಜನೆಯಡಿ 60,000 ಕೋಟಿ ರೂ. ಹೂಡಿಕೆಯನ್ನು ಪ್ರಮುಖವಾಗಿ ಉಲ್ಲೇಖ ಮಾಡಿದರು. “ನಮ್ಮ ಯುವಜನರು ಇದರಿಂದ ಅಪಾರ ಲಾಭ ಪಡೆಯಲಿದ್ದಾರೆ” ಎಂದು ಪ್ರಧಾನಮಂತ್ರಿ ಮೋದಿ ದೃಢಪಡಿಸಿದರು.
ಭಾರತದ ವೇಗವಾದ ಅಭಿವೃದ್ಧಿಯು ಕೌಶಲ್ಯವಂತ ಕಾರ್ಮಿಕರಿಗೆ ವಿಶಾಲ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಗಮನಿಸಿದ ಪ್ರಧಾನಮಂತ್ರಿಯವರು, ಕಳೆದ 12 ರಿಂದ 13 ವರ್ಷಗಳಲ್ಲಿ ಸರ್ಕಾರದ ಸೌಲಭ್ಯಗಳ ಮೂಲಕ 50 ಕೋಟಿ ಜನರನ್ನು ಬಡತನದಿಂದ ಹೊರತೆಗೆಯಲಾಗಿದೆ, ಇದು ಅವರಲ್ಲಿ ಆತ್ಮವಿಶ್ವಾಸವನ್ನು ಹುಟ್ಟಿಸಿದೆ ಎಂಬ ಅಂಶದತ್ತ ಗಮನ ಸೆಳೆದರು. ಬಡವರಿಗಾಗಿ 4 ಕೋಟಿ ಮನೆಗಳನ್ನು ನಿರ್ಮಿಸುವುದು, ನೀರಿನ ಪೈಪ್ ಲೈನ್ ಗಳನ್ನು ಹಾಕುವುದು, ಮತ್ತು ಮೊದಲ ಬಾರಿಗೆ ವಿದ್ಯುತ್ ಲೈನ್ ಗಳನ್ನು ಒದಗಿಸುವುದು- ಇವುಗಳಲ್ಲಿ ವಿದ್ಯುತ್ ತಂತ್ರಜ್ಞರು, ಬಡಗಿ ಕೆಲಸದವರು ಮತ್ತು ಇತರ ಕೌಶಲ್ಯವಂತ ಯುವಜನರು ಕೆಲಸ ಕಂಡುಕೊಂಡರು ಎಂಬುದನ್ನು ಉಲ್ಲೇಖಿಸಿ, ಉದ್ಯೋಗ ಸೃಷ್ಟಿಯ ವ್ಯಾಪ್ತಿಯನ್ನು ಅವರು ಒತ್ತಿಹೇಳಿದರು. “ಈ ಮಹಾ ಅಭಿಯಾನದಲ್ಲಿ, ದೇಶದಲ್ಲಿ ಕೌಶಲ್ಯವಂತ ಕಾರ್ಮಿಕರಿಗೆ ಲಕ್ಷಾಂತರ ಮತ್ತು ಲಕ್ಷಾಂತರ ಹೊಸ ಅವಕಾಶಗಳೂ ಸೃಷ್ಟಿಯಾದವು” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಉದಯೋನ್ಮುಖ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಕೌಶಲ್ಯ ಬೇಡಿಕೆಯನ್ನು ಉಲ್ಲೇಖಿಸಿದ ಅವರು, ಕೆಲವು ತಿಂಗಳುಗಳ ಹಿಂದೆ ಪಶ್ಚಿಮ ಏಷ್ಯಾ ಸಂಘರ್ಷದ ಸಮಯದಲ್ಲಿ ಅನಿಲ ಸರಬರಾಜು ವ್ಯತ್ಯಯಗೊಂಡಿದ್ದು, ಸರ್ಕಾರ ದಿನಕ್ಕೆ ಕನಿಷ್ಠ ಒಂದು ಲಕ್ಷ ಪಿಎನ್ಜಿ ಸಂಪರ್ಕಗಳನ್ನು ಗುರಿಯಾಗಿಸಿಕೊಂಡಿತ್ತು, ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಪ್ಲಂಬರ್ ಗಳ ಕೊರತೆ ಗುರಿಗಳನ್ನು ಸಾಧಿಸಲು ಅಡ್ಡಿಯಾಗುತ್ತಿದೆ.ಅದರಿಂದ ತಡವಾಗುತ್ತಿದೆ ಎಂಬುದು ಗಮನಕ್ಕೆ ಬಂತು ಎಂದರು. ಜೊತೆಗೆ ಸೌರಶಕ್ತಿ ಮತ್ತು ಕ್ರೀಡಾ ಉಪಕರಣಗಳ ತಯಾರಿಕೆ ಮತ್ತು ಫಿಟ್ನೆಸ್ ಕ್ಷೇತ್ರವನ್ನು ವ್ಯಾಪಿಸಿದಂತೆ ಕ್ರೀಡಾ ಆರ್ಥಿಕತೆಯಲ್ಲಿ ಭಾರೀ ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲ ಅಗತ್ಯವಿದೆ ಎಂದರು. “ನೀವು ಕೌಶಲ್ಯವಂತರಾಗಿದ್ದರೆ, ಉದ್ಯೋಗ ಪಡೆಯಲು ಇನ್ನಷ್ಟು ಅವಕಾಶಗಳಿವೆ,” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.
ಭಾರತವು ಜಗತ್ತಿನ ಕೌಶಲ್ಯ ರಾಜಧಾನಿಯಾಗಲು ಹವಣಿಸಿ ಮುಂದುವರೆಯುತ್ತಿದೆ ಎಂದು ಘೋಷಿಸಿದ ಪ್ರಧಾನಮಂತ್ರಿಯವರು, 2027ರಲ್ಲಿ ಗ್ರೇಟರ್ ನೋಯ್ಡಾದಲ್ಲಿ ವರ್ಲ್ಡ್ ಸ್ಕಿಲ್ಸ್ ಏಷ್ಯಾ ಸ್ಪರ್ಧೆಯ ಆತಿಥ್ಯವನ್ನು ಭಾರತ ವಹಿಸಲಿದೆ ಎಂದು ಹೇಳುವ ಮೂಲಕ ಯುವಜನರು ಮತ್ತು ಉತ್ತರ ಪ್ರದೇಶಕ್ಕೆ ಒಳ್ಳೆಯ ಸುದ್ದಿಯನ್ನು ಹಂಚಿಕೊಂಡರು, ಇದಕ್ಕೆ ಅನೇಕ ದೇಶಗಳ ಯುವಜನರನ್ನು ಸ್ವಾಗತಿಸಲಾಗುತ್ತದೆ ಎಂದರು. “ಇದಕ್ಕಾಗಿ ನಾನು ಉತ್ತರ ಪ್ರದೇಶಕ್ಕೂ ಮುಂಚಿತವಾಗಿ ಶುಭಾಶಯಗಳನ್ನು ಸಲ್ಲಿಸುತ್ತೇನೆ,” ಎಂದು ಶ್ರೀ ಮೋದಿ ಹೇಳಿದರು.
ರಾಷ್ಟ್ರೀಯ ಅಭಿವೃದ್ಧಿಯನ್ನು ವೇಗಗೊಳಿಸಿದ ಉತ್ತರ ಪ್ರದೇಶವನ್ನು ಪ್ರಶಂಸಿಸಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಪ್ರಸ್ತುತ ಸರ್ಕಾರ ರಾಜ್ಯವನ್ನು ಅನೇಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ಪ್ರಮುಖ ವಿಶ್ವವಿದ್ಯಾಲಯಗಳು, ಸಮೃದ್ಧ ಪ್ರವಾಸೋದ್ಯಮ, ದೊಡ್ಡ ಮೊಬೈಲ್ ಉತ್ಪಾದನಾ ಘಟಕಗಳು, ಬರಲಿರುವ ಚಿಪ್ ಕಾರ್ಖಾನೆ ಮತ್ತು ಬ್ರಹ್ಮೋಸ್ ತಯಾರಿಕೆ ಹೊಂದಿರುವ ಎಕ್ಸ್ಪ್ರೆಸ್ ವೇಗದ ರಾಜ್ಯವಾಗಿ ಪರಿವರ್ತಿಸಿದುದಕ್ಕೆ ಪ್ರಧಾನಮಂತ್ರಿ ಅವರು ಯೋಗಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿದರು, ಬ್ರಹ್ಮೋಸ್ -ಇದು ಆಪರೇಷನ್ ಸಿಂದೂರ್ ನಲ್ಲಿ ಶತ್ರುಗಳನ್ನು ಕದಡಿದೆ. “ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಕಾರಣದಿಂದ, ಯುವಜನರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ” ಎಂದು ಪ್ರಧಾನಮಂತ್ರಿ ಮೋದಿ ಗಮನಿಸಿದರು.
ಬನಾರಸ್ ನ ತಮ್ಮ ಸಂಸತ್ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಕಾರ್ಖಾನೆ ಉದ್ಘಾಟನೆಯ ವೇಳೆ ನಡೆದ ಸಂವಾದವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಅಲ್ಲಿ ಒಬ್ಬ ಯುವತಿ ತಾನು ಈಗ ರಾತ್ರಿ 11 ಗಂಟೆಗೆ ಸಹ ಆರಾಮವಾಗಿ ಮನೆಗೆ ಮರಳಬಹುದಾಗಿದೆ ಎಂದು ಹೇಳಿದಳು, ಯೋಗಿ ಆದಿತ್ಯನಾಥ್ ನೇತೃತ್ವದ ಪ್ರಸ್ತುತ ಸರ್ಕಾರ ಇಂತಹ ಭದ್ರತೆಯ ವಾತಾವರಣವನ್ನು ಸೃಷ್ಟಿಸಿದೆ ಎಂದು ಶ್ಲಾಘಿಸಿದರು. ಭದ್ರತೆಯ ಭಾವನೆ ಮತ್ತು ಸಮೃದ್ಧಿಯ ಆತ್ಮವಿಶ್ವಾಸವು ವಿಕಸಿತ ಭಾರತವನ್ನು ನಿರ್ಮಿಸುತ್ತದೆ ಎಂದು ಹೇಳಿದ ಅವರು, ಎಲ್ಲಾ ಯುವಜನರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. “ಈ ಸಮಯದಲ್ಲಿ ಸಂಪೂರ್ಣ ಆಕಾಶ ನಿಮ್ಮ ಮುಂದೆ ಇದೆ; ದೊಡ್ಡ ಕನಸು ಕಾಣಿರಿ, ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಲು ನಿಮ್ಮ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸಿರಿ ,” ಎಂದು ಶ್ರೀ ಮೋದಿ ಹೇಳಿದರು.
*****
Celebrating the hard work and achievements of India's skilled youth at the Kaushal Deekshant Samaroh in Lucknow. https://t.co/HJ8DAt1bpY
— Narendra Modi (@narendramodi) November 21, 2026
21वीं सदी का भारत कौशल को, स्किल को सम्मान देकर ही आगे बढ़ सकता है। इसलिए, बीते वर्षों में हमारी सरकार ने श्रमेव जयते की भावना से एक के बाद एक कई कदम उठाए हैं: PM @narendramodi
— PMO India (@PMOIndia) November 21, 2026
जब आप कोई हुनर सीखते हैं, तो आप केवल मशीनों पर काम नहीं करते। आप लोगों की जिंदगी को आसान बनाते हैं। आप देश का सामर्थ्य बढ़ाते हैं: PM @narendramodi during Kaushal Deekshant Samaroh in Lucknow
— PMO India (@PMOIndia) November 21, 2026
आज भारत, विश्व की स्किल कैपिटल बनने की तरफ आगे बढ़ रहा है: PM @narendramodi at Kaushal Deekshant Samaroh in Lucknow
— PMO India (@PMOIndia) November 21, 2026
मैं देश के हर युवा से कहता हूं कि आपके सामने इस समय पूरा आसमान है…बड़े सपने देखिए, अपने कौशल का विकास करिए और अपने सपनों को पूरा करने के लिए पूरी ताकत लगा दीजिए: PM @narendramodi at Kaushal Deekshant Samaroh in Lucknow
— PMO India (@PMOIndia) November 21, 2026