ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆ, ರೈಲ್ವೆ ಸಚಿವಾಲಯದ ಒಟ್ಟು 24,815 ಕೋಟಿ ರೂಪಾಯಿ (ಅಂದಾಜು) ವೆಚ್ಚದ 02 (ಎರಡು) ಯೋಜನೆಗಳಿಗೆ ತನ್ನ ಅನುಮೋದನೆ ನೀಡಿದೆ. ಈ ಯೋಜನೆಗಳೆಂದರೆ :
|
ಗಾಜಿಯಾಬಾದ್-ಸೀತಾಪುರ 3ನೇ ಮತ್ತು 4ನೇ ಮಾರ್ಗ |
403 |
859 |
14,926 |
|
ರಾಜಮಂಡ್ರಿ (ನಿಡಡಾವೊಲು-ವಿಶಾಖಪಟ್ಟಣಂ(ದುವ್ವಾಡ) 3ನೇ ಮತ್ತು 4ನೇ ಮಾರ್ಗ |
198 |
458 |
9,889 |
|
ಒಟ್ಟು |
601 |
1,317 |
24,815 |
ಯೋಜನೆಯ ಹೆಸರು | ಮಾರ್ಗದ ಉದ್ದ (ಕಿಲೋ ಮೀಟರ್ ಗಳಲ್ಲಿ) | ಟ್ರ್ಯಾಕ್ ನ ಉದ್ದ (ಕಿಲೋಮೀಟರ್ ಗಳಲ್ಲಿ) | ಪೂರ್ಣಗೊಳಿಸುವಾಗ ವೆಚ್ಚ (ರೂ. ಕೋಟಿಗಳಲ್ಲಿ) |
|---|
ವರ್ಧಿತ ಮಾರ್ಗದ ಸಾಮರ್ಥ್ಯವು ಚಲನಶೀಲತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಇದರ ಪರಿಣಾಮವಾಗಿ ಭಾರತೀಯ ರೈಲ್ವೆಯ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಸುಧಾರಿಸುತ್ತದೆ. ಈ ಬಹು-ಟ್ರ್ಯಾಕಿಂಗ್ ಪ್ರಸ್ತಾಪಗಳು ಕಾರ್ಯಾಚರಣೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ದಟ್ಟಣೆಯನ್ನು ನಿವಾರಿಸಲು ಸಜ್ಜಾಗಿವೆ. ಈ ಯೋಜನೆಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನವ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿವೆ, ಇದು ಈ ಪ್ರದೇಶದ ಜನರನ್ನು ಸಮಗ್ರ ಅಭಿವೃದ್ಧಿಯ ಮೂಲಕ “ಆತ್ಮನಿರ್ಭರ” ರನ್ನಾಗಿ ಮಾಡುತ್ತದೆ, ಇದು ಅವರ ಉದ್ಯೋಗ / ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.
ಸಮಗ್ರ ಯೋಜನೆ ಮತ್ತು ಮಧ್ಯಸ್ಥಗಾರರ/ಭಾಗೀದಾರರ ಸಮಾಲೋಚನೆಗಳ ಮೂಲಕ ಬಹು-ಮಾದರಿ ಸಂಪರ್ಕ ಮತ್ತು ಲಾಜಿಸ್ಟಿಕ್ ದಕ್ಷತೆಯನ್ನು ಹೆಚ್ಚಿಸುವತ್ತ ಗಮನ ಹರಿಸುವ ಮೂಲಕ ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆಯಡಿಯಲ್ಲಿ ಯೋಜನೆಗಳನ್ನು ಯೋಜಿಸಲಾಗಿದೆ. ಈ ಯೋಜನೆಗಳು ಜನರು, ಸರಕು ಮತ್ತು ಸೇವೆಗಳ ಚಲನೆಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತವೆ.
ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ ರಾಜ್ಯಗಳ 15 ಜಿಲ್ಲೆಗಳನ್ನು ಒಳಗೊಂಡ 02 (ಎರಡು) ಯೋಜನೆಗಳು ಭಾರತೀಯ ರೈಲ್ವೆಯ ಹಾಲಿ ಜಾಲವನ್ನು ಸುಮಾರು 601 ಕಿ.ಮೀ.ಗಳಷ್ಟು ಹೆಚ್ಚಿಸುತ್ತವೆ.
ಉದ್ದೇಶಿತ ಸಾಮರ್ಥ್ಯ ವರ್ಧನೆಯು ದೂಧೇಶ್ವರನಾಥ ದೇವಾಲಯ, ಗರ್ಮುಕ್ತೇಶ್ವರ ಗಂಗಾ ಘಾಟ್, ದರ್ಗಾ ಶಾ ವಿಲಾಯತ್ ಜಾಮಾ ಮಸೀದಿ (ಅಮ್ರೋಹಾ), ನೈಮಿಶಾರಣ್ಯ (ಸೀತಾಪುರ), ಅನ್ನಾವರಂ, ಅಂತರವೇದಿ, ದ್ರಾಕ್ಷಾರಾಮಂ ಸೇರಿದಂತೆ ದೇಶದ ಹಲವಾರು ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕವನ್ನು ಸುಧಾರಿಸುತ್ತದೆ.
ಉದ್ದೇಶಿತ ಯೋಜನೆಗಳು ಕಲ್ಲಿದ್ದಲು, ಆಹಾರ ಧಾನ್ಯಗಳು, ಸಿಮೆಂಟ್, ಪಿಒಎಲ್, ಕಬ್ಬಿಣ ಮತ್ತು ಉಕ್ಕು, ಕಂಟೇನರ್, ರಸಗೊಬ್ಬರಗಳು, ಸಕ್ಕರೆ, ರಾಸಾಯನಿಕ ಲವಣಗಳು, ಸುಣ್ಣದ ಕಲ್ಲು ಮುಂತಾದ ಸರಕುಗಳ ಸಾಗಣೆಗೆ ಅವಶ್ಯವಾದ ಮಾರ್ಗಗಳಾಗಿವೆ. ರೈಲ್ವೆಯು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷ ಸಾರಿಗೆ ವಿಧಾನವಾಗಿದ್ದು, ಹವಾಮಾನ ಗುರಿಗಳನ್ನು ಸಾಧಿಸಲು ಮತ್ತು ದೇಶದ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಕಾರ್ಬನ್ ಡೈ ಆಕ್ಸೈಡ್ (180.31ಕೋಟಿ ಕಿ.ಗ್ರಾಂ) ಹೊರಸೂಸುವಿಕೆಯನ್ನುಕಡಿಮೆ ಮಾಡುತ್ತದೆ. ಇದು 7.33 ಕೋಟಿ ಗಿಡಗಳನ್ನು ನೆಡುವುದಕ್ಕೆ ಸಮನಾಗಿರುತ್ತದೆ.
ಗಾಜಿಯಾಬಾದ್ – ಸೀತಾಪುರ 3 ನೇ ಮತ್ತು 4 ನೇ ಮಾರ್ಗ (403 ಕಿ.ಮೀ)
ಘಾಜಿಯಾಬಾದ್ – ಸೀತಾಪುರ್ 3ನೇ ಮತ್ತು 4ನೇ ಮಾರ್ಗಗಳು (403 ಕಿಮೀ)


ರಾಜಮಂಡ್ರಿ (ನಿಡದವೋಲು) – ವಿಶಾಖಪಟ್ಟಣಂ (ದುವ್ವಾಡ) 3ನೇ ಮತ್ತು 4ನೇ ಮಾರ್ಗಗಳು (198 ಕಿಮೀ)
आर्थिक सशक्तिकरण:
ರಾಜಮಂಡ್ರಿ (ನಿಡದವೋಲು) – ವಿಶಾಖಪಟ್ಟಣಂ (ದುವ್ವಾಡ) 3ನೇ ಮತ್ತು 4ನೇ ಮಾರ್ಗಗಳು (198 ಕಿಮೀ)


ರೈಲ್ವೆಯ ಮೇಲೆ ಪ್ರಧಾನಮಂತ್ರಿಯವರ ಗಮನ:
*****