Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬಂಡವಾಳ ಆಸ್ತಿ ಸೃಷ್ಟಿಗಾಗಿ ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ ಸ್ಥಾಪನೆಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿ ಗುಣಮಟ್ಟದ ಉನ್ನತ ದರ್ಜೆಯ ಮೂಲಸೌಕರ್ಯ ಸೃಷ್ಟಿಸಲು ತೀವ್ರ ಉತ್ತೇಜನ ನೀಡುವ ಸಲುವಾಗಿ ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ (ಎಚ್.ಇ.ಎಫ್.ಎ.) ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ.

ಗುರಿತಸಲಾದ ಪ್ರವರ್ತಕರು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂ.ಎಚ್.ಆರ್.ಡಿ.) ಜಂಟಿಯಾಗಿ ಎಚ್.ಇ.ಎಫ್.ಎ.ಯನ್ನು 2 ಸಾವಿರ ಕೋಟಿ ರೂಪಾಯಿ ಅಧಿಕೃತ ಬಂಡವಾಳದೊಂದಿಗೆ ಆರಂಭಿಸಲಿವೆ. ಇದರಲ್ಲಿ ಸರ್ಕಾರದ ಈಕ್ವಿಟಿ 1 ಸಾವಿರ ಕೋಟಿ ರೂಪಾಯಿ ಆಗಿರುತ್ತದೆ.

ಎಚ್.ಇ.ಎಫ್.ಎ.ಯನ್ನು ಎಸ್.ಪಿ.ವಿ.ಯಾಗಿ ಪಿ.ಎಸ್.ಯು ಬ್ಯಾಂಕ್/ಸರ್ಕಾರಿ ಒಡೆತನದ ಎನ್.ಬಿ.ಎಫ್.ಸಿ.(ಪ್ರವರ್ತಕ)ದಲ್ಲಿ ರಚಿಸಲಾಗುತ್ತದೆ. ಇದು ಐಐಟಿಗಳು/ಐಐಎಂಗಳು/ಎನ್.ಐ.ಟಿಗಳು ಮತ್ತು ಆ ಸ್ವರೂಪದ ಇತರ ಸಂಸ್ಥೆಗಳಿಗೆ ವಿಶ್ವದರ್ಜೆಯ ಪ್ರಯೋಗಾಲಯ ಅಭಿವೃದ್ಧಿ ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಹಣ ನೀಡಲು ಈಕ್ವಿಟಿಯನ್ನು 20 ಸಾವಿರ ಕೋಟಿ ರೂಪಾಯಿಗಳವರೆಗೆ ಹೆಚ್ಚಳ ಮಾಡಲು ನೆರವಾಗುತ್ತದೆ.

ಎಚ್.ಇ.ಎಫ್.ಎ. ಯು ಇಂಥ ಸಂಸ್ಥೆಗಳಲ್ಲಿ ಅನುಧಾನದ ಆಧಾರದ ಮೇಲೆ ಸಂಶೋಧನೆ ಮತ್ತು ನಾವಿನ್ಯ ಉತ್ತೇಜನಕ್ಕೆ ಪಿ.ಎಸ್.ಯುಗಳು/ಸಾಂಸ್ಥಿಕ ಸಂಸ್ಥೆಗಳಿಂದ ಸಿ.ಎಸ್.ಆರ್. ನಿಧಿ ಹೊಂದಿಸುತ್ತದೆ.

ಎಚ್.ಇ.ಎಫ್.ಎ ನಾಗರಿಕ ಮತ್ತು ಪ್ರಯೋಗಾಲಯ ಮೂಲಸೌಕರ್ಯ ಯೋಜನೆಗಳಿಗೆ ಹತ್ತು ವರ್ಷಗಳ ಸಾಲದ ಮೂಲಕ ಆರ್ಥಿಕ ನೆರವು ನೀಡುತ್ತದೆ. ಸಾಲದ ಪ್ರಮುಖ ಭಾಗವನ್ನು ಸಂಸ್ಥೆಗಳ ‘ಆಂತರಿಕ ಸಂಚಯಗಳ’ (ಶುಲ್ಕ, ಸಂಶೋಧನಾ ಆದಾಯದ ಮೂಲಕ ಗಳಿಸಿದ) ಮೂಲಕ ಮರು ಪಾವತಿಸಲಾಗುತ್ತದೆ. ಸರ್ಕಾರವು ನಿಯಮಿತ ಯೋಜನಾ ನೆರವಿನ ಮೂಲಕ ಬಡ್ಡಿಯ ಭಾಗವನ್ನು ಒದಗಿಸುತ್ತದೆ.

ಎಲ್ಲ ಕೇಂದ್ರ ಸರ್ಕಾರದ ಆರ್ಥಿಕ ನೆರವಿನ ಉನ್ನತ ಶಿಕ್ಷಣ ಸಂಸ್ಥೆಗಳು ಎಚ್.ಇ.ಎಫ್.ಎ.ಯಲ್ಲಿ ಸದಸ್ಯರಾಗಿ ಸೇರಲು ಅರ್ಹವಾಗಿರುತ್ತವೆ. ಸದಸ್ಯನಾಗಿ ಸೇರಲು, ಸಂಸ್ಥೆಗಳು ತಮ್ಮ ಆಂತರಿಕ ಸಂಚನಯನದಿಂದ ನಿರ್ದಿಷ್ಟ ಮೊತ್ತವನ್ನು ಹತ್ತು ವರ್ಷಗಳ ಅವಧಿವರೆಗೆ ಎಚ್.ಇ.ಎಫ್.ಎ.ಗೆ ನೀಡಲು ಒಪ್ಪಿಕೊಳ್ಳಬೇಕಾಗುತ್ತದೆ. ಈ ಸುರಕ್ಷಿತ ಭವಿಷ್ಯದ ಹರಿವನ್ನು ಎಚ್.ಇ.ಎಫ್.ಎ. ಮಾರುಕಟ್ಟೆಗೆ ಹಣ ಹೊಂದಿಸಲು ಖಾತರೀಕರಿಸುತ್ತದೆ. ಪ್ರತಿಯೊಂದು ಸದಸ್ಯ ಸಂಸ್ಥೆಯ ಆಂತರಿಕ ಸಂಚಯನಕ್ಕೆ ಅನುಗುಣವಾಗಿ ಒಪ್ಪಿತ ಮೊತ್ತದ ಆಧಾರದ ಮೇಲೆ ಎಚ್.ಇ.ಎಫ್.ಎ. ಸಾಲದ ಮಿತಿಯನ್ನು ನಿಗದಿ ಪಡಿಸುತ್ತದೆ.