Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಂಜಿನಿಯರುಗಳ ದಿನದಂದು ಪ್ರಧಾನಿ ಶುಭಾಶಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎಂಜಿನಿಯರುಗಳ ದಿನದಂದು ತಮ್ಮ ಶುಭ ಕೋರಿದ್ದಾರೆ. ಭಾರತದಲ್ಲಿ ಭಾರತರತ್ನ ಎಂ. ವಿಶ್ವೇಶ್ವರಾಯ ಅವರ ಜನ್ಮ ದಿನವನ್ನು ಎಂಜಿನಿಯರುಗಳ ದಿನವಾಗಿ ಆಚರಿಸುತ್ತಿದ್ದು, ಪ್ರಧಾನಿಯವರು ವಿಶ್ವೇಶ್ವರಾಯ ಅವರನ್ನೂ ಸ್ಮರಿಸಿದ್ದಾರೆ.

“ಎಂಜಿನಿಯರುಗಳ ದಿನದಂದು, ಎಲ್ಲ ಎಂಜಿನಿಯರುಗಳಿಗೆ ಶುಭಾಶಯಗಳು. ಅವರ ಬುದ್ಧಿಶಕ್ತಿ, ಸಮರ್ಪಣೆ ಮತ್ತು ಕೌತುಕ ಹಲವಾರು ನಾವೀನ್ಯತೆಗಳಿಗೆ ಕಾರಣವಾಗಿದೆ.

ನಾವು ಭಾರತರತ್ನ ಎಂ. ವಿಶ್ವೇಶ್ವರಾಯ ಅವರಿಗೆ ಅವರ ಜನ್ಮ ದಿನದ ಸಂದರ್ಭದಲ್ಲಿ ಗೌರವ ಮತ್ತು ಹರ್ಷದೊಂದಿಗೆ ಅವರಿಗೆ ವಂದಿಸುತ್ತೇವೆ. ಅವರನ್ನು ಅಗ್ರಗಣ್ಯ ಎಂಜಿನಿಯರ್ ಆಗಿ ಗೌರವಿಸಲಾಗುತ್ತದೆ ಮತ್ತು ಸ್ಮರಿಸಲಾಗುತ್ತದೆ “, ಎಂದು ಪ್ರಧಾನಿ ತಿಳಿಸಿದ್ದಾರೆ.