Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಲ್ಲ ಪ್ರಮುಖ ಬಂದರು ಟ್ರಸ್ಟ್ ಮತ್ತು ಹಡಗುಕಟ್ಟೆ ಕಾರ್ಮಿಕರ ಮಂಡಳಿ ನೌಕರರು/ಕಾರ್ಮಿಕರಿಗೆ 2015-16ರಿಂದ 2017-18ರ ಅವಧಿಗೆ ಉತ್ಪಾದಕತೆ ಸಂಪರ್ಕಿತ ನೂತನ ಬಹುಮಾನ ಯೋಜನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎಲ್ಲ ಪ್ರಮುಖ ಬಂದರು ಟ್ರಸ್ಟ್ ಮತ್ತು ಹಡಗುಕಟ್ಟೆ ಕಾರ್ಮಿಕರ ಮಂಡಳಿ ನೌಕರರು/ ಕಾರ್ಮಿಕರಿಗೆ 2015-16ರಿಂದ 2017-18ರ ಅವಧಿಗೆ ಉತ್ಪಾದಕತೆ ಸಂಪರ್ಕಿತ ನೂತನ ಬಹುಮಾನ ಯೋಜನೆಗೆ ತನ್ನ ಅನುಮೋದನೆ ನೀಡಿದೆ.

ಈ ಹೊಸ ಪಿ.ಎಲ್.ಆರ್. ಯೋಜನೆಯು 2015-16 ರಿಂದ 2017-18ರ ಅವಧಿಗೆ ಅನ್ವಯವಾಗಲಿದ್ದು, ವಾರ್ಷಿಕ 49.58 ಕೋಟಿ ರೂ. ಮೌಲ್ಯದ ರವಾನೆಯಾಗುವ ಪ್ರಮುಖ ಬಂದರು ಟ್ರಸ್ಟ್ ಗಳು ಹಾಗೂ ಹಡಗು ಕಟ್ಟೆಯ ಸುಮಾರು 37870 ನೌಕರರು/ಕಾರ್ಮಿಕರಿಗೆ ಲಾಭದಾಯಕವಾಗಿದೆ.

ಹಡಗು ಸಚಿವಾಲಯವು ಎಲ್ಲ ಪ್ರಮುಖ ಬಂದರು ಟ್ರಸ್ಟ್ ಗಳು ಮತ್ತು ಹಡಗು ಕಟ್ಟೆ ಮಂಡಳಿಯ ನೌಕರರು/ಕಾರ್ಮಿಕರಿಗಾಗಿ ಹೊಸ ಉತ್ಪಾದಕತೆ ಸಂಪರ್ಕಿತ ಬಹುಮಾನ (ಪಿ.ಎಲ್.ಆರ್.) ಯೋಜನೆಯನ್ನು 2015-16 ರಿಂದ 2017-18ಅವಧಿಗೆ ರೂಪಿಸಿದೆ. ಪಿ.ಎಲ್.ಆರ್. ಅನ್ನು ಹೆಚ್ಚಳವಾಗಿರುವ ವೇತನದ ಮಿತಿಯ ಆಧಾರದ ಮೇಲೆ ಮಾಸಿಕ ಬೋನಸ್ ರೂ.7000/-ರೀತ್ಯ ಲೆಕ್ಕ ಹಾಕಲಾಗುತ್ತದೆ. ಪಿ.ಎಲ್.ಆರ್. ಅನ್ನು ಬಂದರುಗಳ ವೈಯಕ್ತಿಕ ಕಾರ್ಯನಿರ್ವಹಣೆಯ ಆಧಾರದ ಮೇಲೆ ವಾರ್ಷಿಕ ಶೇ.50ರ ಪ್ರಾಮುಖ್ಯತೆಗನುಗುಣವಾಗಿ ನೀಡಲಾಗುತ್ತದೆ. ಪ್ರಮುಖ ಬಂದರು ಟ್ರಸ್ಟ್ ಗಳು ಮತ್ತು ಹಡಗು ಕಟ್ಟೆ ಮಂಡಳಿಯ ನೌಕರರು/ಕಾರ್ಮಿಕರಿಗೆ ಬೋನಸ್ ನ ಲೆಕ್ಕಾಚಾರಕ್ಕಾಗಿ 2014-15ನೇ ಸಾಲಿನ ಬಾಕಿ ಪಾವತಿಯನ್ನು ಹಾಲಿ ಇರುವ ಅಖಿಲ ಭಾರತ ಬಂದರುಗಳ ಕಾರ್ಯ ನಿರ್ವಹಣೆಯ ಸಾಧನೆಯ ಮಾಸಿಕ 3500 ರೂ. ಪದ್ಧತಿಯ ಬದಲಿಗೆ ಹೆಚ್ಚಳವಾಗಿರುವ ವೇತನದ ರೂ.7000/- ಮಿತಿಯಂತೆ ಲೆಕ್ಕ ಹಾಕಲಾಗುತ್ತದೆ.

2014-15ನೇ ವರ್ಷಕ್ಕೆ, ಈಗಾಗಲೇ 3500 ರೂ. ಮಿತಿಗನುಗುಣವಾಗಿ 25.93 ಕೋಟಿ ರೂಪಾಯಿ ಮೊತ್ತವನ್ನು 41,492 ಪ್ರಮುಖ ಬಂದರು ಮತ್ತು ಹಡಗುಕಟ್ಟೆ ಕಾರ್ಮಿಕರು/ಸಿಬ್ಬಂದಿಗೆ ಪಾವತಿಸಲಾಗಿದೆ. ಎಲ್ಲ ಪ್ರಮುಖ ಬಂದರು ಮತ್ತು ಹಡಗು ಕಟ್ಟೆ ಕಾರ್ಮಿಕರು/ನೌಕರರಿಗೆ 2014-15ನೇ ಸಾಲಿನ ಪಿ.ಎಲ್.ಆರ್. ಬಾಕಿಯನ್ನು ಹೆಚ್ಚಿಸಲಾದ ವೇತನದ ರೂ.7000 ಮಿತಿಯಂತೆ ಪಾವತಿಸಲಾಗುತ್ತಿದ್ದು, ಇದು ಸುಮಾರು 25.93 ಕೋಟಿ ರೂಪಾಯಿ ಆಗಲಿದೆ.

ಹಾಲಿ ಪ್ರಮುಖ ಬಂದರು ಟ್ರಸ್ಟ್ ಗಳು ಮತ್ತು ಹಡಗುಕಟ್ಟೆ ಕಾರ್ಮಿಕ ಮಂಡಳಿ ನೌಕರರಿಗೆ/ಕಾರ್ಮಿಕರಿಗೆ ಉತ್ಪಾದಕತೆ ಸಂಪರ್ಕಿತ ಬಹುಮಾನ ಯೋಜನೆ (ಪಿ.ಎಲ್.ಆರ್.) ಇದ್ದು, ಅದರಲ್ಲಿ ಉತ್ಪಾದಕತೆ ಸಂಪರ್ಕಿತ ಬಹುಮಾನ (ಪಿ.ಎಲ್.ಆರ್.) ಅನ್ನು ಪ್ರಮುಖ ಬಂದರು ಟ್ರಸ್ಟ್ ಗಳ ಆಡಳಿತ ಮಂಡಳಿ ಮತ್ತು ಕಾರ್ಮಿಕ ಒಕ್ಕೂಟಗಳ ನಡುವೆ ಆಗುವ ಒಪ್ಪಂದದಂತೆ ವಾರ್ಷಿಕ ಆಧಾರದ ಮೇಲೆ ಮಂಜೂರು ಮಾಡಲಾಗುತ್ತದೆ.
ಹೊಸ ಪಿ.ಎಲ್.ಆರ್. ಯೋಜನೆ ತ್ವರಿತ ಕೈಗಾರಿಕಾ ಬಾಂಧವ್ಯ ಮತ್ತು ಬಂದರು ವಲಯಕ್ಕೆ ಸರಿಹೊಂದುವಂತಹ ವಾತಾವರಣವನ್ನು ಕಲ್ಪಿಸುವುದರ ಜೊತೆಗೆ ಉತ್ತಮ ಉತ್ಪಾದಕತೆಗೂ ನೆರವಾಗಲಿದೆ.

****

AKT/VBA/SH