Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಪ್ರಿಲ್ 02,2016 ರಂದು ರಿಯಾದ್ ಸೌದಿ ಅರೇಬಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಭಾಷಣ.

ಏಪ್ರಿಲ್ 02,2016 ರಂದು ರಿಯಾದ್ ಸೌದಿ ಅರೇಬಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ  ಶ್ರೀ   ನರೇಂದ್ರ ಮೋದಿಯವರ ಭಾಷಣ.


ನನ್ನ ಪ್ರೀತಿಯ ದೇಶವಾಸಿಗಳೇ ನಾನು ಎರಡು ದಿನಗಳ ಪ್ರವಾಸಕ್ಕಾಗಿ ಸೌದಿ ಅರೇಬಿಯಾಕ್ಕೆ ಬಂದಿದ್ದೇನೆ. ಇಂದು ಭಾರತದ ಆರ್ಥಿಕ ಪ್ರಗತಿಯು ಇಡೀ ವಿಶ್ವದ ಗಮನ ಸೆಳೆದಿದೆ. ಒಂದೂಕಾಲು ಕೋಟಿ ಜನಸಂಖ್ಯೆಯ ದೇಶ ಪ್ರಪಂಚಕ್ಕೆ ಬಹಳಷ್ಟು ನೀಡಬಲ್ಲದು ಹಾಗೂ ಪ್ರಪಂಚಕ್ಕಾಗಿ ಬೇಕಾದಷ್ಟು ಮಾಡಬಲ್ಲದು. ಇಂದು ಇಡೀ ಪ್ರಪಂಚವೇ ಎಲ್ಲರ ಜತೆ – ಎಲ್ಲರ ವಿಕಾಸ ಎಂಬ ಯಾವ ಮಂತ್ರದೊಡನೆ ಪ್ರಜಾತಾಂತ್ರಿಕ ಮೌಲ್ಯಗಳೊಡನೆ ಭಾರತ ಮಾಡುತ್ತಿರುವ ಪ್ರಯತ್ನದ ಬಗ್ಗೆ , ಮಾನವೀಯ ಮೌಲ್ಯಗಳ ಮೇಲೆ ನಂಬಿಕೆ ಇಟ್ಟಿರುವ ಇಡೀ ವಿಶ್ವಕ್ಕೇ ಒಂದು ವಿಶ್ವಾಸ, ಒಂದು ಆಸೆಯನ್ನು  ನೀಡಿದೆ .   ಬಹಳ ಕಡಿಮೆ ಸಮಯದಲ್ಲಿ ಭಾರತವು ವಿಶ್ವದಲ್ಲಿ ಮತ್ತೊಮ್ಮೆ ಒಂದು ಹೊಸ ಆಸೆಯನ್ನು ಬಿತ್ತುವಲ್ಲಿ ಯಶಸ್ವಿಯಾಗಿದೆ. ಇಲ್ಲದಿದ್ದರೆ ನಾವೂ ಕೂಡ ಪ್ರಪಂಚದ ಅನೇಕ ದೇಶಗಳಲ್ಲಿ ಒಬ್ಬರಾಗಿಬಿಡುತ್ತಿದ್ದೆವು. ಇಂದು ಭಾರತವನ್ನು ಒಂದು ಮಹತ್ವಪೂರ್ಣ ದೇಶವೆಂದು ಪ್ರಪಂಚವು ಸ್ವೀಕರಿಸಿದೆ. ಇದಕ್ಕೆ ಕಾರಣವಂದರೆ , ಮೊದಲನೆಯದಾಗಿ ಹಿಂದೂಸ್ತಾನದಲ್ಲಿ  ರಾಜನೈತಿಕ ಸ್ಥಾಯಿತ್ವ, ಸುಮಾರು 30 ವರ್ಷಗಳ ನಂತರ ಒಂದು ಪೂರ್ಣ ಬಹುಮತವಿರುವ ಸರ್ಕಾರ ರಚನೆಯಾಗಿದೆ.  ಸಂಪೂರ್ಣ ವಿಶ್ವವೇ ಇಂದು ಆರ್ಥಿಕ ಅಸ್ಥಿರತೆಯಲ್ಲಿ ಸಿಲುಕಿದೆ ಹಾಗೂ ಎರಡನೆಯದಾಗಿ  ವಿಶ್ವದ ಐ ಎಂ ಎಫ್ , ವಿಶ್ವ ಬ್ಯಾಂಕ್ ಹಾಗೂ ಕ್ರೆಡಿಟ್  ರೇಟಿಂಗ್  ಏಜನ್ಸಿಗಳಲ್ಲಿ ಪ್ರತಿಯೊಂದೂ ಭಾರತವನ್ನು ಆರ್ಥಿಕ ಜಗತ್ತಿನ ಒಂದು ಮಿನುಗು ತಾರೆಯೆಂಬಂತೆ ಆಸೆಕಂಗಳಿಂದ ಬಿಂಬಿಸುತ್ತಿವೆ. ಭಾರತವು ಇಂತಹ ವಿಪರೀತ ಪರಿಸ್ಥಿತಿಯಲ್ಲಿ ಕೂಡಾ ತನ್ನ ವಿಕಾಸದ ಸ್ಥಿತಿಯನ್ನು ಮತ್ತಷ್ಟು ಬಲಗೊಳ್ಳಿಸುತ್ತಿದೆ. 
ಭಾರತದ ಮೂರನೆಯ ಎಲ್ಲಕ್ಕಿಂತ ಹೆಚ್ಚಿನ ಬಲ ಎಂಟುನೂರು ಮಿಲಿಯ .35ಕ್ಕಿಂತ ಕಡಿಮೆ ವಯಸ್ಸಿನ ಯುವಕರು. ಇಡೀ ಪ್ರಪಂಚಕ್ಕೇ ಇಂದು ಪ್ರತಿಭಾನ್ವಿತರಾದ, ಆಧುನಿಕ ತಂತ್ರಜ್ಞಾನ ನಿಪುಣರಾದ, ಕಾರ್ಯಪಡೆಯ ಅಗತ್ಯವಿದೆ, ಭಾರತವು ಈ ದಿಶೆಯಲ್ಲಿ ಬಹಳ ವೇಗವಾಗಿ ಮುನ್ನಡೆಯುತ್ತಿದೆ. ಭಾರತದ ಕೃಷಿ ಕ್ಷೇತ್ರವಾಗಿರಬಹುದು, ಭಾರತದ ಔದ್ಯೋಗಿಕ ಕ್ಷೇತ್ರವಾಗಿರಬಹುದು, ಭಾರತದ ಸೇವಾ ಕ್ಷೇತ್ರವಾಗಿರಬಹುದು ಇತ್ತೀಚಿನ ದಿನಗಳಲ್ಲಿ ಮೂರೂ ಬಹಳ ದೃಢ  ಹೆಜ್ಜೆಗಳನ್ನಿಡುತ್ತಾ ಮುಂದುವರೆಯುತ್ತಿವೆ. 
 
ತಮ್ಮೆಲ್ಲರನ್ನೂ ಭೇಟಿಮಾಡುವ ಅವಕಾಶ ನನಗೆ ದೊರೆಯಿತು, ತಮಗೆಲ್ಲಾ ನನ್ನ ಅನೇಕಾನೇಕ ಶುಭ ಹಾರೈಕೆಗಳು.
***