Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 78 ಕೆಜಿ ಕುರಾಶ್ ನಲ್ಲಿ ಕಂಚಿನ ಪದಕ ಗಳಿಸಿದ ಪಿಂಕಿ ಬಲ್ಹಾರಾ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಏಷ್ಯನ್ ಗೇಮ್ಸ್ ನ ಮಹಿಳೆಯರ 78 ಕೆಜಿ ಕುರಾಶ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಪಿಂಕಿ ಬಲ್ಹಾರಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.

ಸ್ಪರ್ಧೆಯುದ್ದಕ್ಕೂ ಅವರು ಅದ್ಭುತ ಧೈರ್ಯ ಮತ್ತು ಸಂಕಲ್ಪವನ್ನು ಪ್ರದರ್ಶಿಸಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಹೊಸ ಎತ್ತರಕ್ಕೆ ಏರಲಿ ಮತ್ತು ಮತ್ತಷ್ಟು ಕೀರ್ತಿಗಳನ್ನು ತರಲಿ ಎಂದು ಶ್ರೀ ನರೇಂದ್ರ ಮೋದಿ ಹಾರೈಸಿದರು.

ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಹಂಚಿಕೊಂಡಿದೆ:

“ಮಹಿಳೆಯರ 78 ಕೆ.ಜಿ ಕುರಾಶ್ ಏಷ್ಯನ್ ಗೇಮ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಪಿಂಕಿ ಬಲ್ಹಾರಾ ಅವರಿಗೆ ಅಭಿನಂದನೆಗಳು. ಅವರು ಅದ್ಭುತ ಧೈರ್ಯ ಮತ್ತು ಸಂಕಲ್ಪವನ್ನು ಪ್ರದರ್ಶಿಸಿದರು. ಅವರು ಹೊಸ ಎತ್ತರವನ್ನು ಏರುವುದನ್ನು ಮುಂದುವರಿಸಲಿ ಮತ್ತು ಮುಂದಿನ ದಿನಗಳಲ್ಲಿ ಮತ್ತಷ್ಟು ಕೀರ್ತಿಗಳನ್ನು ತರಲಿ: ಪ್ರಧಾನಮಂತ್ರಿ @narendramodi”

 

*****