Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಸಿಮ್ರಾನ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


2026ರ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಮಹಿಳೆಯರ 200 ಮೀಟರ್ ಟಿ 12 ಸ್ಪರ್ಧೆಯಲ್ಲಿ ಹೊಸ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಅದ್ಭುತ ಪ್ರದರ್ಶನ ನೀಡಿದ್ದಕ್ಕಾಗಿ ಸಿಮ್ರಾನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ಹಿಂದಿನ ಕ್ರೀಡಾ ಆವೃತ್ತಿಯಲ್ಲಿ ಬೆಳ್ಳಿ ಪದಕದ ಗೆಲುವಿನಿಂದ ಈಗ ದಾಖಲೆಯ ಪ್ರದರ್ಶನದೊಂದಿಗೆ ಚಿನ್ನದ ಪದಕ ಗೆಲುವಿನ ವರೆಗಿನ ಅವರ ಕ್ರೀಡಾ ಪ್ರಯಾಣವು ಶ್ರೇಷ್ಠತೆಯ ಮನೋಭಾವವನ್ನು ಸಾಕಾರಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಗಮನಿಸಿದರು, ಹಾಗೂ, ಅವರು ಅಡೆತಡೆಗಳನ್ನು ಮುರಿದು ಹೊಸ ಮಾನದಂಡಗಳನ್ನು ಸ್ಥಾಪಿಸುವುದನ್ನು ಮುಂದುವರಿಸಲಿ ಎಂದು ಶುಭ ಹಾರೈಸಿದರು.

ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ತಾಣದಲ್ಲಿ , ಈ ಕೆಳಗಿನವುಗಳನ್ನು ಹಂಚಿಕೊಂಡಿದೆ:

“ಚಿನ್ನದ ಪದಕ ಮತ್ತು ಹೊಸ ದಾಖಲೆ!

ಏಷ್ಯನ್ ಪ್ಯಾರಾ ಕ್ರೀಡಾಕೂಟ 2026 ರಲ್ಲಿ ಮಹಿಳೆಯರ 200 ಮೀಟರ್ ಟಿ12 ರಲ್ಲಿ ಸಿಮ್ರಾನ್ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು.

ಹಿಂದಿನ ಕ್ರೀಡಾ ಆವೃತ್ತಿಯಲ್ಲಿ ಬೆಳ್ಳಿ ಪದಕದಿಂದ ಈ ಬಾರಿ ದಾಖಲೆಯ ಪ್ರದರ್ಶನದೊಂದಿಗೆ ಚಿನ್ನದ ಪದಕದವರೆಗೆ, ಅವರ ಕ್ರೀಡಾ ಪ್ರಯಾಣವು ಶ್ರೇಷ್ಠತೆಯ ಮನೋಭಾವವನ್ನು ಸಾಕಾರಗೊಳಿಸುತ್ತದೆ. ಅವರು ಅಡೆತಡೆಗಳನ್ನು ದಾಟಿ ಹೊಸ ಮಾನದಂಡಗಳನ್ನು ಸ್ಥಾಪಿಸುವುದನ್ನು ಮುಂದುವರಿಸಲಿ: ಪ್ರಧಾನಮಂತ್ರಿ @narendramodi”

 

*****