ಏಷ್ಯನ್ ಪ್ಯಾರಾ ಗೇಮ್ಸ್ನ ಪುರುಷರ ಹೈ ಜಂಪ್ T47 ವಿಭಾಗದಲ್ಲಿ, ಹೊಸ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡ ನಿಶಾದ್ ಕುಮಾರ್ ಅವರ ಅಸಾಧಾರಣ ಕ್ರೀಡಾ ಸಾಧನೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ನಿಶಾದ್ ಅವರು ಎರಡು ಚಿನ್ನದ ಪದಕಗಳನ್ನು ಗೆಲ್ಲುವುದರೊಂದಿಗೆ ಇಡೀ ರಾಷ್ಟ್ರದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಬಹುಮುಖ ಪ್ರತಿಭೆ ಮತ್ತು ಶ್ರೇಷ್ಠತೆಯ ಕಡೆಗಿನ ಅವರ ನಿರಂತರ ಪ್ರಯತ್ನ ನಿಜಕ್ಕೂ ಗಮನಾರ್ಹವಾಗಿದೆ ಎಂದು ಉಲ್ಲೇಖಿಸಿದ ಶ್ರೀ ಮೋದಿ ಅವರು, ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದರು.
ಪ್ರಧಾನಮಂತ್ರಿಯವರ ಕಾರ್ಯಾಲಯವು ‘ಎಕ್ಸ್’ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ:
“ನಿಶಾದ್ ಅವರಿಂದ ಅಸಾಧಾರಣ ಕ್ರೀಡಾ ಪ್ರದರ್ಶನ!
ಪುರುಷರ ಹೈ ಜಂಪ್ T47 ವಿಭಾಗದಲ್ಲಿ ಹೊಸ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಪ್ರತಿಭಾವಂತ ನಿಶಾದ್ ಕುಮಾರ್ ಅವರಿಗೆ ಅಭಿನಂದನೆಗಳು. ಈಗಾಗಲೇ ಲಾಂಗ್ ಜಂಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅವರು, ಇದೀಗ ಒಟ್ಟು ಎರಡು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದು, ಇಡೀ ರಾಷ್ಟ್ರದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಬಹುಮುಖ ಪ್ರತಿಭೆ ಮತ್ತು ಶ್ರೇಷ್ಠತೆಯ ಕಡೆಗಿನ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಅವರಿಗೆ ಅಭಿನಂದನೆಗಳು ಮತ್ತು ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ: ಪ್ರಧಾನಮಂತ್ರಿ @narendramodi”
*****
Exceptional sporting performances by Nishad! Congratulations to the talented Nishad Kumar for winning a Gold in the Men's High Jump T47 with a new Games Record. Having already won Gold in the Long Jump, he finishes with two Gold Medals and the admiration of the entire nation. His versatility and pursuit of excellence are truly remarkable. Congratulations to him and all the best for the upcoming endeavours: PM @narendramodi
— PMO India (@PMOIndia) October 20, 2026