2026 ರ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಪುರುಷರ ಡಿಸ್ಕಸ್ ಥ್ರೋ ಎಫ್ 51/52/53 ಸ್ಪರ್ಧೆಯಲ್ಲಿ ದಾಖಲೆಯ ಎಸೆತದೊಂದಿಗೆ ಚಿನ್ನದ ಪದಕ ಗೆದ್ದ ಪ್ರಣವ್ ಸೂರ್ಮಾ ಅವರ ಅಸಾಧಾರಣ ಪ್ರದರ್ಶನಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.
“ಹೊಸ ಏಷ್ಯನ್ ದಾಖಲೆಯನ್ನು ಸ್ಥಾಪಿಸುವುದು ಈ ಪ್ರತಿಷ್ಠಿತ ಪದಕ ಮತ್ತು ವಿಜಯವನ್ನು ಇನ್ನಷ್ಟು ಅಸಾಧಾರಣವಾಗಿಸುತ್ತದೆ” ಎಂದು ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು , “ಪ್ರಣವ್ ಅವರ ಶಕ್ತಿ, ದೃಢನಿಶ್ಚಯ ಮತ್ತು ಸ್ಪರ್ಧಾತ್ಮಕ ಮನೋಭಾವವು ಸ್ಫೂರ್ತಿಯಾಗಿದೆ” ಎಂದು ಹೇಳಿದರು ಮತ್ತು ಈ ಐತಿಹಾಸಿಕ ಸಾಧನೆಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ತಾಣದಲ್ಲಿ ಹಂಚಿಕೊಂಡಿರುವ ಮಾಹಿತಿ ಹೀಗಿದೆ:
“ಪ್ರತಿಷ್ಠಿತ ಪದಕ ಮತ್ತು ಏಷ್ಯನ್ ಗೇಮ್ಸ್ ದಾಖಲೆ!
ಪ್ರಣವ್ ಸೂರ್ಮ ಅವರು ಏಷ್ಯನ್ ಪ್ಯಾರಾ ಗೇಮ್ಸ್ 2026 ರಲ್ಲಿ ಪುರುಷರ ಡಿಸ್ಕಸ್ ಥ್ರೋ ಎಫ್ 51/52/53 ಸ್ಪರ್ಧೆಯಲ್ಲಿ ದಾಖಲೆಯ ಥ್ರೋ ಮೂಲಕ ಚಿನ್ನ ಗೆದ್ದಿದ್ದಾರೆ. ಹೊಸ ಏಷ್ಯನ್ ದಾಖಲೆಯನ್ನು ಸ್ಥಾಪಿಸುವುದು ಈ ವಿಜಯವನ್ನು ಇನ್ನಷ್ಟು ಅಸಾಧಾರಣವಾಗಿಸುತ್ತದೆ. ಪ್ರಣವ್ ಅವರ ಶಕ್ತಿ, ದೃಢನಿಶ್ಚಯ ಮತ್ತು ಸ್ಪರ್ಧಾತ್ಮಕ ಮನೋಭಾವವು ಸ್ಫೂರ್ತಿಯಾಗಿದೆ. ಈ ಐತಿಹಾಸಿಕ ಸಾಧನೆಗಾಗಿ ಅವರಿಗೆ ಅಭಿನಂದನೆಗಳು: ಪ್ರಧಾನಮಂತ್ರಿ @narendramodi”
*****
A prestigious Medal and Asian Games Record! Pranav Soorma has given an exceptional performance at the Asian Para Games 2026, winning Gold in the Men's Discus Throw F51/52/53 event with a record-breaking throw. Setting a new Asian Record makes this triumph even more extraordinary. Pranav's strength, determination and competitive spirit are an inspiration. Congratulations to him on this historic accomplishment: PM @narendramodi
— PMO India (@PMOIndia) October 20, 2026