ಪಿಎಂಇಂಡಿಯಾ
ಒಡಿಶಾ ಮತ್ತು ಪಂಜಾಬ್ ನಲ್ಲಿನ ರಸ್ತೆ ಯೋಜನೆಗಳಿಗೆ ಸಿಸಿಇಎ ಅನುಮೋದನೆಯು ಆ ರಾಜ್ಯಗಳಲ್ಲಿ ಸಂಪರ್ಕ ಮತ್ತು ಮೂಲಸೌಕರ್ಯ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಸರಣಿ ಟ್ವೀಟ್ ನಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
“ಸಿಸಿಇಎ ಪಂಜಾಬ್ ನ ಪಗ್ವಾರಾ – ರೂಪ್ ನಗರ್ ವಿಭಾಗದ ರಾಷ್ಟ್ರೀಯ ಹೆದ್ದಾರಿ 344ಎ ಚತುಷ್ಪಥ ಮಾರ್ಗದ ಅಭಿವೃದ್ಧಿಗೆ ತನ್ನ ಅನುಮೋದನೆ ನೀಡಿದೆ.
ಇದರ ಅಂದಾಜು ವಚ್ಚ 1444.42 ಕೋಟಿ ರೂಪಾಯಿಗಳು ಮತ್ತು ಅಭಿವೃದ್ಧಿ ಪಡಿಸಲಾಗುವ ರಸ್ತೆಯ ಒಟ್ಟು ಉದ್ದ ಸುಮಾರು 80.820 ಕಿಲೋ ಮೀಟರ್.
ಈ ಯೋಜನೆ ಪಂಜಾಬ್ ನಲ್ಲಿ ಮೂಲಸೌಕರ್ಯ ಸುಧಾರಣೆ ಮಾಡುವುದಲ್ಲದೆ ರಾಜ್ಯದ ಈ ವಲಯದ ಸಾಮಾಜಿಕ – ಆರ್ಥಿಕ ಸ್ಥಿತಿಯನ್ನು ಮೇಲೆತ್ತಲೂ ಸಹಕಾರಿ ಆಗಲಿದೆ.
ಸಿಸಿಇಎ ಒಡಿಶಾದ ಅಂಗುಲ್ – ಸಂಬಾಲ್ ಪುರ ವಿಭಾಗದಲ್ಲಿ ಎನ್.ಎಚ್ 42 (ಹೊಸ ಎನ್.ಎಚ್. 55) ನ್ನು ಚತುಷ್ಪಥವಾಗಿ ಅಭಿವೃದ್ಧಿ ಪಡಿಸಲೂ ಒಪ್ಪಿಗೆ ನೀಡಿದೆ.
ಇದರ ವೆಚ್ಚ ಅಂದಾಜು 2491.53 ಕೋಟಿ ರೂಪಾಯಿಗಳು ಮತ್ತು ಅಭಿವೃದ್ಧಿಪಡಿಸಲಾಗುವ ರಸ್ತೆಯ ಒಟ್ಟು ಉದ್ದ ಅಂದಾಜು 151 ಕಿಲೋ ಮೀಟರ್ ಗಳು.
ಈ ಯೋಜನೆ ಒಡಿಶಾದಲ್ಲಿ ಮೂಲಸೌಕರ್ಯ ಸುಧಾರಣೆಯ ವಿಸ್ತರಣೆಗೆ ಸಹಕಾರಿಯಾಗಲಿದೆ ಮತ್ತು ಸಂಚಾರದ ಒತ್ತಡ ನಿವಾರಿಸಿ, ಅದರಲ್ಲೂ ಅಂಗುಲ ಮತ್ತು ಸಂಬಾಲ್ಪುರ್ ವಿಭಾಗದಲ್ಲಿ ಭಾರೀ ಸಂಚಾರದಟ್ಟಣೆ ನಿವಾರಿಸಿ ಪ್ರಯಾಣ, ಸಮಯ ಮತ್ತು ವೆಚ್ಚವನ್ನು ತಗ್ಗಿಸಲಿದೆ.
ಸಿಸಿಇಎ ಮಹಾರಾಷ್ಟ್ರದ ಔರಂಗಾಬಾದ್ – ತೆಲವಾಡಿ ವಿಭಾಗದ ಎನ್.ಎಚ್. 211ನ್ನು ಚತುಷ್ಪಥವಾಗಿ ಅಭಿವೃದ್ಧಿ ಪಡಿಸಲೂ ತನ್ನ ಅನುಮೋದನೆ ನೀಡಿದೆ.
ಇದರ ಅಂದಾಜು ವೆಚ್ಚ 2028.91 ಕೋಟಿ ರೂಪಾಯಿಗಳಾಗಲಿದೆ ಮತ್ತು ಅಭಿವೃದ್ಧಿ ಪಡಿಸಲಾಗುವ ರಸ್ತೆಯ ಉದ್ದ ಸುಮಾರು 87 ಕಿಲೋ ಮೀಟರ್ ಗಳು.
ಈ ಮಾರ್ಗದ ಅಭಿವೃದ್ಧಿಯಿಂದಾಗಿ ಸಾಮಾಜಿಕ-ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ ಮತ್ತು ಜನರಿಗೆ ಉದ್ಯೋಗದ ಸಾಮರ್ಥ್ಯ ಹೆಚ್ಚಿಸುತ್ತದೆ. ”
CCEA, chaired by PM approved the development of four laning of Phagwara-Rupnagar Section of NH-344A in Punjab. #TransformingIndia
— PMO India (@PMOIndia) June 29, 2016
The cost is estimated to be Rs.1444.42 crore & total length of the road to be developed is approximately 80.820 kms. #TransformingIndia
— PMO India (@PMOIndia) June 29, 2016
Project will improve infrastructure in Punjab & will also help in uplifting the socio-economic condition of this region in the State.
— PMO India (@PMOIndia) June 29, 2016
CCEA approved the development of four laning of Angul-Sambalpur Section of NH-42 (New NH-55) in Odisha. #TransformingIndia
— PMO India (@PMOIndia) June 29, 2016
The cost is estimated to be Rs.2491.53 crore & total length of the road to be developed is approximately 151 kms. #TransformingIndia
— PMO India (@PMOIndia) June 29, 2016
The project will help in expediting the improvement of infrastructure in Odisha and in reducing the time & cost of travel for traffic (1/2)
— PMO India (@PMOIndia) June 29, 2016
...particularly heavy traffic, plying between Angul and Sambalpur section. (2/2) #TransformingIndia
— PMO India (@PMOIndia) June 29, 2016