Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಓಬಿಸಿಗಳ ಒಳಗೆ ಉಪ-ವರ್ಗೀಕರಣವನ್ನು ಪರಿಶೀಲಿಸುವ ಸಲುವಾಗಿ ಆಯೋಗ ಸ್ಥಾಪಿಸಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಇತರ ಹಿಂದುಳಿದ ವರ್ಗಗಳ (ಓಬಿಸಿಗಳ)ಲ್ಲಿನ ಉಪ –ವರ್ಗೀಕರಣ ವಿಚಾರದ ಪರಿಶೀಲನೆಗಾಗಿ ಸಂವಿಧಾನದ ವಿಧಿ 340ರ ಅಡಿಯಲ್ಲಿ ಆಯೋಗವನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿದ 12 ವಾರಗಳ ಒಳಗಾಗಿ ಆಯೋಗವು ತನ್ನ ವರದಿಯನ್ನು ಸಲ್ಲಿಕೆ ಮಾಡಲಿದೆ. ಈ ಆಯೋಗವನ್ನು ಇತರ ಹಿಂದುಳಿದ ವರ್ಗಗಳ ಉಪ ವರ್ಗೀಕರಣ ಪರಿಶೀಲನಾ ಆಯೋಗ ಎಂದು ಕರೆಯಲಾಗುತ್ತದೆ.

ಉದ್ದೇಶಿತ ಆಯೋಗದ ಉಲ್ಲೇಖಿತ ನಿಯಮಗಳು ಈ ಕೆಳಕಂಡಂತಿವೆ:

(i) ಕೇಂದ್ರಿಯ ಪಟ್ಟಿಯಲ್ಲಿ ಸೇರಿಸಲಾಗಿರುವ ಓಬಿಸಿಗಳಿಗೆ ಸಂಬಂಧಿಸಿದಂತೆ, ಓಬಿಸಿಗಳ ವಿಸ್ತೃತ ವರ್ಗದಲ್ಲಿ ಸೇರಿಸಲಾಗಿರುವ ಜಾತಿ/ಸಮುದಾಯಗಳ ನಡುವೆ ಮೀಸಲಾತಿಯ ಪ್ರಯೋಜನಗಳ ಅಸಮಾನವಾಗಿ ಹಂಚಿಕೆ ಮಾಡಿರುವ ಕುರಿತು ಪರಿಶೀಲಿಸಲು.

(ii) ಅಂತಹ ಓಬಿಸಿಗಳಲ್ಲಿನ ಉಪ ವರ್ಗೀಕರಣಕ್ಕೆ ಒಂದು ವ್ಯವಸ್ಥೆ, ಮಾನದಂಡಗಳು ಮತ್ತು ನಿಯಮ ಹಾಗೂ ಮಾನದಂಡಗಳಿಗೆ, ಒಂದು ವೈಜ್ಞಾನಿಕ ದೃಷ್ಟಿಕೋನ ನೀಡಲು, ಮತ್ತು,

(iii) ಕೇಂದ್ರೀಯ ಪಟ್ಟಿಯಲ್ಲಿನ ಒಬಿಸಿಗಳ ಆಯಾ ಜಾತಿಗಳು / ಸಮುದಾಯಗಳು / ಉಪ-ಜಾತಿಗಳು / ಸಮಾನಾರ್ಥಕಗಳನ್ನು ಗುರುತಿಸುವ ಮತ್ತು ಅವುಗಳನ್ನು ಉಪ-ವರ್ಗಗಳಾಗಿ ವರ್ಗೀಕರಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲು.

ಸರ್ವೋನ್ನತ ನ್ಯಾಯಾಲಯವು ಡಬ್ಲ್ಯು.ಪಿ.(ಸಿ) ನಂ.930/1990 (ಇಂದ್ರ ಸಾವ್ನಿ ಮತ್ತು ಇತರರು ಹಾಗು ಭಾರತ ಸರ್ಕಾರ)ಕ್ಕೆ ಸಂಬಂಧಿಸಿದಂತೆ ದಿನಾಂಕ 16.11.1992ರಲ್ಲಿ ನೀಡಿರುವ ಆದೇಶದಲ್ಲಿ ರಾಜ್ಯಗಳಿಗೆ ಹಿಂದುಳಿದ ವರ್ಗಗಳನ್ನು ಹಿಂದುಳಿದ ಅಥವಾ ಅತಿ ಹಿಂದುಳಿದ ವರ್ಗ ಎಂದು ವರ್ಗೀಕರಿಸಲು ಯಾವುದೇ ಸಂವಿಧಾನಾತ್ಮಕ ಅಥವಾ ಕಾನೂನುಬದ್ಧ ನಿಬಂಧನೆಗಳಿಲ್ಲ ಮತ್ತು ಒಂದು ರಾಜ್ಯವು ಅದನ್ನು (ಉಪ ವರ್ಗೀಕರಣ) ಮಾಡಲು ಆಯ್ಕೆ ಮಾಡಿಕೊಂಡರೆ ಅದು ಕಾನೂನು ಸಮ್ಮತವಾಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ದೇಶದ ಒಂಬತ್ತು ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಕರ್ನಾಟಕ, ಹರಿಯಾಣ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ ಮತ್ತು ತಮಿಳುನಾಡು ಈಗಾಗಲೇ ಇತರ ಹಿಂದುಳಿದ ವರ್ಗಗಳಿಗೆ ಉಪ ವರ್ಗೀಕರಣವನ್ನು ಮಾಡಿಯಾಗಿದೆ