Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದಲ್ಲಿ ರಾಮಾಯಣ ದರ್ಶನಮ್ ಪ್ರದರ್ಶನವನ್ನು ಉದ್ಘಾಟಿಸುತ್ತ ವಿಡಿಯೋ ಕಾನ್ಫರೆನ್ಸ್ ಮೂಲಕ ದಿನಾಂಕ 13ನೇ ಜನವರಿ 2017 ರಂದು ಮಾನ್ಯ ಪ್ರಧಾನ ಮಂತ್ರಿಯವರು ಮಾಡಿದ ಭಾಷಣ.

ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದಲ್ಲಿ ರಾಮಾಯಣ ದರ್ಶನಮ್ ಪ್ರದರ್ಶನವನ್ನು  ಉದ್ಘಾಟಿಸುತ್ತ  ವಿಡಿಯೋ ಕಾನ್ಫರೆನ್ಸ್ ಮೂಲಕ ದಿನಾಂಕ 13ನೇ ಜನವರಿ 2017 ರಂದು ಮಾನ್ಯ ಪ್ರಧಾನ ಮಂತ್ರಿಯವರು ಮಾಡಿದ ಭಾಷಣ.


ಇಂದು ವಿವೇಕಾನಂದ ಕೇಂದ್ರದ ಸಂಸ್ಥಾಪಕರಾದ ಸ್ವರ್ಗೀಯ ಏಕನಾಥ ರಾನಡೆ ಅವರ ಬಿಂಬವೂ ಅನಾವರಣಗೊಳ್ಳುತ್ತಿದೆ. ಈ ಸಮಾರಂಭವನ್ನು ಆಯೋಜಿಸಿರುವುದಕ್ಕೆ ನಾನು ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

ಇಂದು ವಿವೇಕಾನಂದಪುರಮ್‌ನಲ್ಲಿ ರಾಮಾಯಣ ದರ್ಶನಮ್‌, ಭಾರತ ಮಾತಾ ಸದನಮ್‌ ಲೋಕಾರ್ಪಣೆಯಾಗುತ್ತಿದೆ. ಭಗವಾನ್ ಹನುಮನ 27 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸಲಾಗಿದೆ ಮತ್ತು ಏಕಶಿಲಾ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ನೀವು ನನಗೆ ಕಳುಹಿಸಿದ ವಿಡಿಯೋವನ್ನು ನೋಡಿದೆ, ಆ ವಿಡಿಯೋದಲ್ಲಿ ದಿವ್ಯತೆಯೂ ಇದೆ ಮತ್ತು ಭವ್ಯತೆಯೂ ಇದೆ. ಇಂದು ವಿವೇಕಾನಂದ ಕೇಂದ್ರದ ಸಂಸ್ಥಾಪಕರಾದ ಸ್ವರ್ಗೀಯ ಏಕನಾಥ ರಾನಡೆ ಅವರ ಬಿಂಬವೂ ಅನಾವರಣಗೊಳ್ಳುತ್ತಿದೆ. ಈ ಸಮಾರಂಭವನ್ನು ಆಯೋಜಿಸಿರುವುದಕ್ಕೆ ನಾನು ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

ಸಹೋದರ ಮತ್ತು ಸಹೋದರಿಯರೆ, ನೀವಿಂದು ನಿಂತಿರುವ ಸ್ಥಾನ ಸಾಮಾನ್ಯವಾದುದಲ್ಲ. ಈ ಭೂಮಿಯು ರಾಷ್ಟ್ರದ ತಪೋಭೂಮಿಯಂತಿದೆ. ಹನುಮಂತನಿಗೆ ತನ್ನ ಜೀವನದ ಉದ್ಧೇಶವೇನಾದರೂ(Purpose of life) ಸಿಕ್ಕಿದ್ದರೆ ಅದು ಈ ಭೂಮಿಯಲ್ಲಿ ಸಿಕ್ಕಿದ್ದು. ಜಾಂಬವಂತನು ಹನುಮಂತನಿಗೆ ನಿನ್ನ ಜನ್ಮವೇ ಭಗವಾನ್‌ ಶ್ರೀ ರಾಮನ ಸೇವೆಯನ್ನು ಮಾಡಲು ಆಗಿದೆ ಎಂದು ಹೇಳಿದ್ದನು. ಇದೇ ಭೂಮಿಯಲ್ಲಿ ತಾಯಿ ಪಾರ್ವತಿ ಕನ್ಯಾಕುಮಾರಿಗೆ ತನ್ನ ಜೀವನ ಉದ್ಧೇಶ ದೊರಕಿತ್ತು.

ಎರಡು ಸಾವಿರ ವರ್ಷಗಳ ಹಿಂದೆ ಇದೇ ಪವಿತ್ರ ಭೂಮಿಯಲ್ಲಿ ಮಹಾನ್ ಸಮಾಜ ಸುಧಾರಕ, ಸಂತ ಥಿರುವಳ್ಳುವರ್‌ ಅವರಿಗೆ ಜ್ಞಾನದ ಅಮೃತ ದೊರೆಕಿತ್ತು. ಇದೇ ಭೂಮಿಯಲ್ಲಿಯೇ ಸ್ವಾಮಿ ವಿವೇಕಾನಂದರಿಗೂ ಜೀವನದ ಉದ್ದೇಶದ ಅರಿವಾಗಿತ್ತು.ವಿವೇಕಾನಂದರಿಗೆ ಇಲ್ಲೇ ತಪವನ್ನಾಚರಿಸಿದಾಗ ತಮ್ಮ ಜೀವನದ ಗುರಿ ಮತ್ತು ಆ ಗುರಿಯನ್ನು ತಲುಪಲು ಮಾರ್ಗದರ್ಶನ ದೊರಿಕಿತ್ತು. ಏಕನಾಥ ರಾನಡೆ ಅವರಿಗೂ ಸಹ ತಮ್ಮ ಜೀವನ ಯಾತ್ರೆಯ ಹೊಸ ತಿರುವು ಇದೇ ಸ್ಥಾನದಲ್ಲಿದೊರಕಿತ್ತು. ನವನವೀನವಾದ ಒಂದು ಗುರಿ ಪ್ರತಿಷ್ಠಾಪಿತವಾಗಿತ್ತು. ಅವರು ತಮ್ಮ ಸಂಪೂರ್ಣ ಜೀವನದಲ್ಲಿ one life one mission ಇದೇ ಕಾರ್ಯಕ್ಕಾಗಿ ತಮ್ಮ ಬಲಿದಾನವನ್ನು ನೀಡಿದರು. ಇಂತಹ ಪವಿತ್ರ ಭೂಮಿ ಮತ್ತು ತಪೋ ಭೂಮಿಗೆ ನನ್ನ ನೂರಾರು ವಂದನೆಗಳು ಮತ್ತು ನಮನಗಳು.

2014 ರಲ್ಲಿ ನಾವು ಏನಕಾಥ ರಾನಡೆ ಅವರ ಜನ್ಮಶತಾಬ್ದಿಯನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ನಾನು ಇದು ಯುವಕರ ಮನವನ್ನು ಜಾಗೃತಗೊಳಿಸುವ ಸಮಯವೆಂದು ಹೇಳಿದ್ದೆ. ನಮ್ಮ ಭಾರತವು ಯುವಜನತೆಯಿಂದ ಕೂಡಿದೆ. ಅದು ದಿವ್ಯವೂ ಆಗಬೇಕು ಮತ್ತು ಭವ್ಯವೂ ಆಗಬೇಕು. ಇಂದು ಪ್ರಪಂಚವು ಭಾರತದಿಂದ ವಿಶೇಷ ದಿವ್ಯತೆಯ ಅನುಭವವನ್ನು ಅಪೇಕ್ಷಿಸುತ್ತದೆ ಮತ್ತು ಭಾರತದ ಬಡವ, ದಲಿತ, ಪೀಡಿತ, ಶೋಷಿತ, ವಂಚಿತರನೇಕರು ಭಾರತದ ಭವ್ಯತೆಯನ್ನು ಅಪೇಕ್ಷಿಸುತ್ತಾರೆ. ವಿಶ್ವಕ್ಕಾಗಿ ದಿವ್ಯತೆ, ದೇಶದ ಒಳಗೆ ಭವ್ಯತೆ ಮತ್ತು ಇವೆರಡರ ಸಮ್ಮಿಶ್ರಣ ಮಾಡಿ ರಾಷ್ಟ್ರನಿರ್ಮಾಣದ ದಿಕ್ಕಿನಲ್ಲಿ ನಾವು ಮುಂದುವರೆಯಬೇಕಿದೆ.

ಸಹೋದರ ಸಹೋದರಿಯರೇ, ವಿಶ್ವದೆಲ್ಲೆಡೆ ಭಾರತವಿಂದು ಎಲ್ಲಕ್ಕಿಂತ young country ಆಗಿದೆ. ಯುವ ದೇಶವಾಗಿದೆ. 80 ಕೋಟಿಗಿಂತ ಹೆಚ್ಚು ಜನಸಂಖ್ಯೆ 35 ವರ್ಷಗಳಿಗಿಂತ ಕಡಿಮೆageಪ್ರಾಯದ್ದಾಗಿದೆ. ಸ್ವಾಮಿ ವಿವೇಕಾನಂದರು ಇಂದು ನಮ್ಮ ಮಧ್ಯದಲ್ಲಿಲ್ಲ. ಅವರ ದೈಹಿಕವಾಗಿ ನಮ್ಮೊಂದಿಗಿರದಿರಬಹುದು ಆದರೆ ಅವರ ವಿಚಾರಗಳಲ್ಲಿ ಇರುವ ಶಕ್ತಿಹಾಗೂ ಪ್ರೇರಣೆ ಈ ದೇಶದ youth ಯುವಜನತೆಗೆ ಸಂಘಟಿಸಿ nation building ದೇಶನಿರ್ಮಾಣಕ್ಕೆ ದಾರಿಯನ್ನು ತೋರಿಸುತ್ತಿದೆ.

ಏಕನಾಥ ರಾನಡೆ ಅವರು ಯುವಕರ ಈ ಶಕ್ತಿಯನ್ನು ಒಟ್ಟುಗೂಡಿಸುವುದಕ್ಕಾಗಿ ವಿವೇಕಾನಂದ ಕೇಂದ್ರ ಮತ್ತು ಸ್ವಾಮಿ ವಿವೇಕಾನಂದ ರಾಕ್ ಮೆಮೋರಿಯಲ್‌ನ ಸ್ಥಾಪನೆ ಮಾಡಿಸಿದ್ದರು. ನಮಗೆ ಸ್ವಾಮಿ ವಿವೇಕಾನಂದರು ಇಷ್ಟವಾಗುತ್ತಾರೆ ಎಂದು ಹೇಳುವುದರಿಂದ ಏನೂ ಆಗುವುದಿಲ್ಲ ಎಂದು ಏಕನಾಥ ರಾನಡೆ ಅವರು ಹೇಳುತ್ತಿದ್ದರು. ದೇಶಕ್ಕಾಗಿ ಸ್ವಾಮಿ ವಿವೇಕಾನಂದರ ಕಲ್ಪನೆಗಳನ್ನು ಸಾಕಾರಗೊಳಿಸಲು ಸತತ ಪ್ರಯತ್ನವನ್ನು ಮಾಡುವುದು important ಬಹುಮುಖ್ಯವೆಂದು ತಿಳಿದಿದ್ದರು.

ಸ್ವಾಮಿ ವಿವೇಕಾನಂದರು ಹೇಗೆ ಯುವಕರ ನಿರ್ಮಾಣದಲ್ಲಿ ತೊಡಗಿದ್ದರೋ, ಅದೇ ರೀತಿ ಏಕನಾಥರವರು ಒಂದು ಗುರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟುಕೊಂಡಿದ್ದರು. ಸ್ವಾಮಿ ವಿವೇಕಾನಂದರ ರಾಷ್ಟ್ರನಿರ್ಮಾಣದ ethics or values ಮೌಲ್ಯಗಳನ್ನಿಟ್ಟುಕೊಂಡು ಅವರು ಯುವಕರಲ್ಲಿ ಅದೇ ಆದರ್ಶವನ್ನು ಪ್ರತಿಷ್ಠಾಪಿಸಲು ನಿರಂತರ ಪ್ರಯತ್ನ ಮಾಡಿದರು. ನನ್ನ ಜೀವನದ ಅನೇಕ ವರ್ಷಗಳವರೆಗೆ ನನಗೆ ಏಕನಾಥ್ ಅವರೊಂದಿಗೆ ನಿಕಟವರ್ತಿಯಾಗಿ ಅವರ ಜೊತೆಗಾರನಾಗಿ ಕಾರ್ಯ ನಿರ್ವಹಿಸಿದ ಬಹುದೊಡ್ಡ ಸೌಭಾಗ್ಯ ನನ್ನದಾಗಿದೆ. ಇದೇ ಸ್ಥಳದಲ್ಲಿ ಅವರ ಸಾನ್ನಿಧ್ಯದಲ್ಲಿ ಜೀವನವನ್ನು ನಿಖರಗೊಳಿಸಿಕೊಳ್ಳುವ ಅವಕಾಶ ನನಗೆ ಒದಗುತ್ತಿತ್ತು.

ಏಕನಾಥರವರ ಜನ್ಮಶತಾಬ್ದಿಯ ಪರ್ವದ ಸಮಯದಲ್ಲಿಯೇ ನಾವು Culture ಸಂಸ್ಕೃತಿ ಮತ್ತು ನಮ್ಮ thought process ವಿಚಾರಧಾರೆಯನ್ನು ಆಶ್ರಯಿಸಿಯೇ ರಾಮಾಯಣದ ಪ್ರಭಾವನ್ನು ಹೊರಸೂಸುವ ಪ್ರದರ್ಶನವನ್ನು ಪ್ರಾರಂಭಿಸಲಾಗಿದೆ. ಇಂದು ರಾಮಾಯಣದರ್ಶನಮ್‌ನ ಭವ್ಯ ರೂಪ ನಮ್ಮೆದುರಿಗಿದೆ. ಈ ರಾಮಾಯಣ ದರ್ಶನಮ್‌ ರಾಕ್‌ ಮೆಮೋರಿಯಲ್‌ಗೆ ಬರುವ ದೇಶ ಮತ್ತು ವಿದೇಶದ ಬಹುಶಃ ಎಲ್ಲ ಯಾತ್ರಿಗಳನ್ನು ಹೆಚ್ಚು ಪ್ರೇರಣೆ ಮತ್ತು ಪ್ರಭಾವಕ್ಕೊಳಪಡಿಸುತ್ತದೆಂಬ ವಿಶ್ವಾಸ ನನಗಿದೆ. ಶ್ರೀರಾಮಭಾರತದ ಕಣ ಕಣದಲ್ಲಿಯೂ ಇದ್ದಾನೆ. ಜನ ಜನರ ಮನಸ್ಸಿನಲ್ಲಿದ್ದಾನೆ. ಹಾಗೆಯೇ ನಾವು ಶ್ರೀರಾಮನ ಬಗ್ಗೆ ಯೋಚನೆ ಮಾಡಿದಾಗ ಶ್ರೀರಾಮ ಒಬ್ಬ ಆದರ್ಶ ಪುತ್ರ-ಸಹೋದರ-ಪತಿ, ಮಿತ್ರ ಮತ್ತು ಆದರ್ಶ ರಾಜನಾಗಿದ್ದ. ಅಯೋಧ್ಯೆಯು ಒಂದು ಆದರ್ಶ ನಗರವಾಗಿದ್ದಾಗ ರಾಮರಾಜ್ಯ ಒಂದು ಆದರ್ಶ ಶಾಸನ ವ್ಯವಸ್ಥೆಯಾಗಿತ್ತು. ಆದ್ದರಿಂದಲೇ ಭಗವಾನ್ ರಾಮ ಮತ್ತು ಅವನ ರಾಜ್ಯದ ಆಕರ್ಷಣೆಯು ಕಾಲಕಾಲಕ್ಕನುಸಾರ ದೇಶದ ಮಹಾನ್‌ ವ್ಯಕ್ತಿಗಳನ್ನು ತಮ್ಮ ದಾಟಿಯಲ್ಲಿಯೇ ವ್ಯಾಖ್ಯಾನಿಸಲು ಪ್ರೇರಣೆ ನೀಡುತ್ತಿರುತ್ತದೆ. ಈ ವ್ಯಖ್ಯಾನಗಳ ಬೆಳಕು ಈಗ ರಾಮಾಯಣ ದರ್ಶನಮ್‌ನಲ್ಲಿ ಕಾಣುತ್ತದೆ.

ಮಹಾಕವಿ ಕಂಬನು ಕೌಶಲ ರಾಜ್ಯವನ್ನ ಸುಶಾಸಿತ ರಾಜ್ಯವೆಂದು ತನ್ನ ಕಂಬ ರಾಮಾಯಣದಲ್ಲಿ ತಿಳಿಸಿದ್ದಾನೆ. ಅವನ ತಮಿಳಿನ ಪದದ ಇಂಗ್ಲೀಷ್ ಅನುವಾದ ಹೀಗಿದೆ –

None were generous in that land as

None was needy;

None seemed brave as none defied;

Truth was unnoticed as there were no liars;

No learning stood out as all were learned.

Since no one in that City ever stopped learning

None was ignorant and none fully learned;

Since all alike had all the wealth

None was poor and none was rich.

ಇದು ಕಂಬನು ಹೇಳಿದ ರಾಮರಾಜ್ಯದ presentation ಆಗಿದೆ. ಮಹಾತ್ಮಾ ಗಾಂಧಿಯವರು ಸಹ ಈ ವಿಶೇಷತೆಗಳನ್ನಿಟ್ಟುಕೊಂಡೇ ರಾಮರಾಜ್ಯವನ್ನು ಉಲ್ಲೇಖಿಸುತ್ತಿದ್ದರು. ನಿಜವಾಗಿಯೂ ಅದು ಎಂತಹ ಆಡಳಿತವಾಗಿತ್ತೆಂದರೆ, ಅಲ್ಲಿ person important ಆಗಿರಲಿಲ್ಲ, principle important ಆಗಿರುತ್ತಿತ್ತು.

ಗೋಸ್ವಾಮಿ ತುಳಸಿದಾಸರೂ ಸಹ ರಾಮಚರಿತಮಾನಸ ಗ್ರಂಥದಲ್ಲಿ ರಾಮರಾಜ್ಯವನ್ನು ವಿಸ್ತಾರವಾಗಿ ವರ್ಣಿಸಿದ್ದಾರೆ. ಎಲ್ಲಿ ಬಡವರಿಲ್ಲವೋ, ದುಃಖಿತರಿಲ್ಲವೋ, ಎಲ್ಲಿ ಎಲ್ಲರೂ ಸ್ವಸ್ಥ ಮತ್ತು ಸುಶಿಕ್ಷಿತರಿರುವರೋ, ಅದೇ ರಾಮರಾಜ್ಯ. ಎಲ್ಲಿ ಪ್ರಕೃತಿ ಮತ್ತು ಮನುಷ್ಯರೊಂದಿಗೆ ಹೊಂದಾಣಿಕೆಯಿದೆಯೋ ಅದು ರಾಮರಾಜ್ಯವಾಗಿದೆ. ಅವರು ಹೀಗೆ ಹೇಳಿದ್ದಾರೆ-

ದೈಹಿದ ದೈವಿಕ ಭೌತಿಕ ತಾಪಾ, ರಾಮ ರಾಜ ನಹಿಂ ಕಾಹುಹಿ ವ್ಯಾಪಾ।

ಸಬ್ ನರ ಕರಹಿಂ ಪರಸ್ಪರ ಪ್ರೀತಿ, ಚಲಹಿಂ ಸ್ವಧರ್ಮ ನಿರತ ಶ್ರುತಿ ನೀತಿ।

ಅಲ್ಪಮೃತ್ಯು ನಹಿಂ ಕವನಿಉ ಪೀರಾ, ಸಬ್ ಸುಂದರ ಸಬ್ ಬಿರುಜ್ ಸರೀರಾ।

ನಹಿಂ ದರಿದ್ರ ಕೋಉ ದುಃಖಿ ನ ದೀನಾ, ನಹಿಂ ಕೋಉ ಅಬುಧ ನ ಲಚ್ಚನ ಹೀನಾ।

ರಾಮ ರಾವಣನನ್ನು ಸೋಲಿಸಿ ದೊಡ್ಡ ವ್ಯಕ್ತಿಯಾಗಲಿಲ್ಲ. ರಾಮನು ರಾಮನಾಗಿದ್ದು ಸರ್ವರನ್ನು ತನ್ನೊಂದಿಗೆ ತೆಗೆದುಕೊಂಡು ಮುನ್ನೆಡೆದಿದ್ದಕ್ಕೆ, ಹಲವು ಪ್ರಕಾರಗಳಿಂದ ಅವರೆಲ್ಲ ಸೋತಿದ್ದರು. ಸೌಲಭ್ಯವಂಚಿತರಾಗಿದ್ದರು.ಶ್ರೀರಾಮ ಅವರೆಲ್ಲರ ಆತ್ಮಗೌರವವನ್ನು ಹೆಚ್ಚಿಸಿದ ಮತ್ತು ವಿಜಯದ ವಿಶ್ವಾಸಕ್ಕೆ ಜನ್ಮಕೊಟ್ಟ. ಭಗವಾನ್ ರಾಮನುತನ್ನ ಜೀವನದಲ್ಲಿ ವಂಶ-ಪರಂಪರೆಗಳಿಂದ ಬಂದಂತಹ ನೆಲೆಗಟ್ಟನ್ನು ಸ್ವೀಕರಿಸಲಿಲ್ಲ. ಪ್ರತ್ಯೇಕ ಸಂದರ್ಭಗಳಲ್ಲಿಯೂ ಅನೇಕ ವಿಷಯಗಳನ್ನು ನಾವು ತಿಳಿದಿರುತ್ತೇವೆ. ಅವರು ಅಯೋದ್ಯೆಯಿಂದ ಹೊರಡಲು ಅಣಿಯಾಗಿದ್ದರು. ಇನ್ನೂ ನಗರದ ಗಡಿಯನ್ನೂ ದಾಟಿರಲಿಲ್ಲ, ಆದರೆ, ಸಂಪೂರ್ಣ ವಿಶ್ವ, ಸಂಪೂರ್ಣ ಮಾನವತೆಯನ್ನು ತನ್ನಲ್ಲಿ ಒಳತುಂಬಿಕೊಂಡು ಆದರ್ಶವೆಂದರೇನು ಮತ್ತು ಮೌಲ್ಯಗಳೆಂದರೇನೆಂಬುದನ್ನು ತಿಳಿಸಿದರು. ಜೀವನವನ್ನುಮೌಲ್ಯಗಳಿಗಾಗಿ ಹೇಗೆ ಸಮರ್ಪಿಸಿಕೊಳ್ಳಬೇಕೆಂದು ತಾವೇ ಜೀವಿಸಿ ತೋರಿಸಿದ್ದರು. ಹಾಗಾಗಿ ತನ್ನಲ್ಲಿ ತಾನೇ ಈ ರಾಮಾಯಣದರ್ಶನಮ್ ವಿವೇಕಾನಂದಪುರಂನಲ್ಲಿರುವುದು ಸಂದರ್ಭಕ್ಕನುಸಾರವಾದುದೆಂದು ನಾನು ತಿಳಿದಿದ್ದೇನೆ. ಅದರಂತೆಯೇರಾಜ್ಯವುಪ್ರಗತಿ ಪಥದಲ್ಲಿ ಎಷ್ಟು ಸಬಲವಾಗಿರಬೇಕೋ ಅಷ್ಟೇ ಸುರಾಜ್ಯವಾಗಿಯೂ ಇರಬೇಕು.

ರಾಮನನ್ನು ನೆನೆದಾಗ ವ್ಯಕ್ತಿಯ ವಿಕಾಸ, ವ್ಯವಸ್ಥೆಯ ವಿಕಾಸಗಳು ಸಹಜವಾಗಿಯೇ ಕಂಡುಬರುತ್ತವೆ.

ಸಹೋದರ ಸಹೋದರಿಯರೇ, ಏಕನಾಥರು ಯಾವಾಗಲೂ ದೇಶದ Spiritual power ನ್ನು ಜಾಗೃತಗೊಳಿಸಿ ದೇಶದ ಕರ್ಮಶಕ್ತಿ ಅಥವಾ working power ನ್ನು constructive ಕಾರ್ಯಗಳಿಗೆ ತೊಡಗಿಸಬೇಕೆಂದು ಬಯಸಿದ್ದರು. ಇಂದು ವಿವೇಕಾನಂದ ಕೇಂದ್ರದಲ್ಲಿ ಹನುಮರ ಮೂರ್ತಿ ಪ್ರತಿಷ್ಠಾಪಿತವಾಗುತ್ತಿರುವುದನ್ನು ನೋಡಿದರೆ, ಅವರ ಈ ಹೇಳಿಕೆಯ inspiration ಕೂಡ ನಮಗೆ ತಿಳಿಯುತ್ತದೆ.

ಹನುಮಂತ ಎಂದರೆ ಸೇವೆ, ಹನುಮಂತ ಎಂದರೆ ಸಮರ್ಪಣ ಭಕ್ತಿಯ ರೂಪವಾಗಿದ್ದ. ಸೇವೆಯೇ ಅವನ ಪರಮ ಧರ್ಮವಾಗಿತ್ತು. ಸಮುದ್ರವನ್ನು ದಾಟುವಾಗ ಮೈನಾಕಪರ್ವತವು ಅವನ ಮಧ್ಯದಲ್ಲಿ ಬಂದು ವಿಶ್ರಾಂತಿಯನ್ನು ಕೊಡಬಯಸಿತ್ತು. ಆದರೆ ಸಂಕಲ್ಪ ಸಿದ್ಧಿಯ ಹಾದಿಯಲ್ಲಿ ಹನುಮಂತನಿಗೆ ಯಾವುದೇ ಶಿಥಿಲತೆಯ ಪ್ರಶ್ನೆ ಇರಲಿಲ್ಲ. ತನ್ನ ಗುರಿ ಮುಟ್ಟುವವರೆಗೆ ಅವನು ವಿಶ್ರಮಿಸಲಿಲ್ಲ.

ಭಾರತ ರತ್ನ ಸಿ. ರಾಜಗೋಪಾಲಾಚಾರಿಯವರು ಹನುಮಂತನ ಸೇವಾಭಾವದ ಬಗ್ಗೆ ತಮ್ಮ ರಾಮಾಯಣದಲ್ಲಿ ಉಲ್ಲೇಖಿಸಿದ್ದಾರೆ. ಹನುಮಂತನು ಸೀತಾಮಾತೆಯನ್ನು ಭೇಟಿಯಾಗಿ ಹಿಂದಿರುಗಿ ಅವರು ಕುಶಲವಾಗಿದ್ದಾರೆಂದು ಹೇಳಿದಾಗ ರಾಮ ಹೀಗೆ ಹೇಳುತ್ತಾನೆ-
“The deed done by Hanumaan none else in the world could even conceive of attempting-crossing the sea, entering Lanka protected by Raavana and his formidable hosts and accomplishing the task set him by his king not only fully but beyond the fondest hopes of all.”

ಯಾರೂ ಕಲ್ಪಿಸಿಕೊಳ್ಳಲೂ ಅಸಾಧ್ಯವಾದ ಕಾರ್ಯವನ್ನು ಹನುಮಂತನು ಮಾಡಿದ್ದಾನೆಂದು ರಾಜಗೋಪಾಲಾಚಾರಿ ಅವರು ತಿಳಿಸಿದ್ದಾರೆ. ಕಠಿನತೆಗಳ ಯಾವ ಸಮುದ್ರವನ್ನು ಹನುಮಂತನು ದಾಟಿದ್ದಾನೋ, ಅದನ್ನು ಯಾರೂ ಯೋಚಿಸಲೂ ಸಾಧ್ಯವಿಲ್ಲ.

ನನ್ನ ಸಹೋದರ ಸಹೋದರಿಯರೇ, ಹಾಗಾಗಿ ನಾವೂ ಕೂಡ ಎಲ್ಲರ ಜೊತೆಗೆ ಎಲ್ಲರ ವಿಕಾಸಕ್ಕಾಗಿ ಎಂಬ Guiding Principal ತತ್ತ್ವದಡಿಯಲ್ಲಿ ಮುನ್ನೆಡೆಯುತ್ತಿದ್ದೇವೆ. ಅವನು ಬಡವರಲ್ಲಿ ಕಡುಬಡವನಾಗಿದ್ದರೂ ಕೂಡ ಜನಧನ ಯೋಜನೆಯ ಮೂಲಕ ಅವರನ್ನು ಬ್ಯಾಂಕಿಂಗ್‌ ವ್ಯವಸ್ಥೆಯೊಂದಿಗೆ ಜೋಡಿಸಿ ಪ್ರಗತಿಯ ಮಾರ್ಗದಲ್ಲಿ ಮುನ್ನೆಡೆಸಲು ಪ್ರಯತ್ನಿಸಿದೆವು. ಇದಕ್ಕಾಗಿಯೇ ವಿಮೆ ಮಾಡಿಸುವ ಅವಕಾಶವಿದೆ. ರೈತರಿಗೆ ಇದರಿಂದ ಲಾಭವಾಗಿದೆ. ರೈತರಿಗೆ ಅತ್ಯಂತ ಕಡಿಮೆ ಪ್ರೀಮಿಯಮ್ ಕಂತಿನಲ್ಲಿ ಬೆಳೆ ವಿಮೆ ಯೋಜನೆಯನ್ನು ಕೊಡಲಾಗಿದೆ. ಹೆಣ್ಣುಮಕ್ಕಳನ್ನು ಸಂರಕ್ಷಿಸಲು ಅವರಿಗೆ ವಿದ್ಯಾಭ್ಯಾಸವನ್ನು ನೀಡಲು ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಗರ್ಭವತಿ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ನೀಡಲು ದೇಶವ್ಯಾಪಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ದೇಶದ 5 ಕೋಟಿ ಕುಟುಂಬಗಳುಕಟ್ಟಿಗೆ ಒಲೆಯನ್ನು ಹೊತ್ತಿಸಿ ತಾಯಂದಿರು ಅಡುಗೆ ಮಾಡುತ್ತಿದ್ದರು. ಅಲ್ಲದೇ ಕಟ್ಟಿಗೆ ಒಲೆಯ ಬೆಂಕಿಯಿಂದ ದಿನಕ್ಕೆ ನಾಲ್ಕು ನೂರು ಸಿಗರೇಟುಗಳ ಹೊಗೆ ಆ ತಾಯಂದಿರ ಶರೀರವನ್ನು ಸೇರುತ್ತಿತ್ತು. ಆ ತಾಯಂದಿರಿಗೆ ಉತ್ತಮ ಆರೋಗ್ಯವನ್ನು ಒದಗಿಸುವ ಪ್ರಾಥಮಿಕ ಸೌಲಭ್ಯವನ್ನು ಕಲ್ಪಿಸಲು 5 ಕೋಟಿ ಕುಟುಂಬಗಳಿಗೆ Gas connection ಕೊಡಿಸುವ ಉದ್ದೇಶವನ್ನು ಹೊಂದಿದ್ದೇವಲ್ಲದೇ ಈಗಾಗಲೇ ಒಂದೂವರೆ ಕೋಟಿ ಜನರಿಗೆ ಗ್ಯಾಸ್ ಸಂಪರ್ಕವನ್ನು ಕಲ್ಪಿಸಲಾಗಿದೆ.

ದಲಿತ, ಪೀಡಿತ, ವಂಚಿತರ ಸೇವೆಯೇ ಜನ ಸೇವೆ ಪ್ರಭು ಸೇವೆಯ ಮಂತ್ರವನ್ನು ಕೊಡುತ್ತದೆ. ನಮ್ಮ ದೇಶದ ದಲಿತ ಯುವಕರನ್ನು stand-up India, start-up-India ಯೋಜನೆಗಳ ಮೂಲಕ empower ಸಶಕ್ತಗೊಳಿಸಲಾಗುತ್ತಿದೆ. ಮುದ್ರಾ ಯೋಜನೆಯ ಮೂಲಕ ಸಣ್ಣ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲದ ವ್ಯವಸ್ಥೆಯನ್ನು ಮಾಡಲಾಗಿದೆ. ಬಡವನನ್ನು ಸಶಕ್ತಗೊಳಿಸದಾಗಲೇ empower ಬಡವನ ಬಡತನ ದೂರವಾಗುತ್ತದೆ. ಬಡವ ಸಶಕ್ತನಾದಾಗ ತಾನೇ ಬಡತನವನ್ನು ಸೋಲಿಸುತ್ತಾನೆ. ಹಾಗೆಯೇ ಬಡತನದಿಂದ ಮುಕ್ತಿ ಹೊಂದಿದ ಆನಂದವನ್ನು ಪಡೆದು ಹೊಸ ಶಕ್ತಿಯೊಂದಿಗೆ ಮುಂದುವರೆಯುವನು.

ರಾಮಾಯಣದ ಸಂದರ್ಭದಲ್ಲಿ ಆಡಳಿತಕ್ಕೆ ಸಂಬಂಧಿಸಿದಂತೆ ಭಗವಾನ್‌ ರಾಮ ಮತ್ತು ಭರತರ ನಡುವೆ ಮಾತುಕತೆ ನಡೆದಾಗ ಭಗವಾನ್‌ ರಾಮ ಭರತನಿಗೆ ಹೀಗೆ ಹೇಳುತ್ತಾನೆ-

ಕಚ್ಚದ್ ಅರ್ಥಮ್ ವಿನಿಶ್ಚಿತ್ಯ ಲಘು ಮೂಲಮ್ ಮಹಾ ಉದಯಮ।ಕ್ಷಿಪ್ರಂ ಆರಭಸೆ ಕತೃಮ್ ನ ದೀರ್ಘಯಸಿ ರಾಘವ ।।
ಅಂದರೆ- ಹೇ ಭರತನೇ, ಕಡಿಮೆ ಎಂದರೆ ಕಡಿಮೆ ವ್ಯಯದಲ್ಲಿ ಹೆಚ್ಚು ಹೆಚ್ಚು ಜನರಿಗೆ ಲಾಭವಾಗುವಂತೆ ಯೋಜನೆಗಳನ್ನು ಜಾರಿಗೊಳಿಸು. ಯೋಜನೆಗಳನ್ನು ಜಾರಿಗೊಳಿಸುವಾಗ ಯಾವುದೇ ಕಾರಣಕ್ಕೆ ವಿಳಂಬನೀತಿಯನ್ನು ಅನುಸರಿಸಬೇಡ ಎಂದು ರಾಮನು ಭರತನಿಗೆ ಹೇಳಿದ್ದನು.

ಆಯಃ ತೆ ವಿಪುಲಃ ಕಚ್ಚಿತ್ ಕಚ್ಚಿದ್ ಅಲ್ಪತರೋ ವ್ಯಯಃ। ಅಪಾತ್ರೇಷು ನ ತೆ ಕಚ್ಚತ್ ಕೋಶೋ ಗಗ್ಚ್ಛತಿ ರಾಘವಃ।।
ಅಂದರೆ- ಭರತನೇ, ಹೆಚ್ಚು ಲಾಭ ಮತ್ತು ಕಡಿಮೆ ಖರ್ಚುನ ಬಗ್ಗೆ ಗಮನಹರಿಸು. ಅಪಾತ್ರರಿಗೆ undeserving ರಾಜ್ಯ ಕೋಶದ ಲಾಭ ಸಿಗಬಾರದೆಂಬ ಬುದ್ಧಿಮಾತನ್ನೂ ಹೇಳಿದ್ದಾನೆ.

ಅಪಾತ್ರರಿಂದ ಸರ್ಕಾರಿ ಖಜಾನೆಯನ್ನು ಉಳಿಸುವುದೂ ಸರ್ಕಾರದ ಕಾರ್ಯಸಂಸ್ಕೃತಿಯ ಒಂದು ಭಾಗವಾಗಿದೆ. ನಿಮ್ಮಆಧಾರ್‌ ಕಾರ್ಡನ್ನು ಬ್ಯಾಂಕ್‌ ಖಾತೆಯೊಡನೆ ಜೋಡಿಸಿ ಸರ್ಕಾರಿ ಆರ್ಥಿಕ ಸಹಾಯವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವುದು, ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸುವುದು, ನಕಲಿ ಗ್ಯಾಸ್ ಕನೆಕ್ಷನ್‌ಗಳನ್ನು ರದ್ದುಗೊಳಿಸುವುದು, ನಕಲಿ ಶಿಕ್ಷಕರನ್ನು ದೂರವಿಡುವುದು, ಇನ್ನೊಬ್ಬರ ಅಧಿಕಾರಗಳನ್ನು ಕಿತ್ತುಕೊಳ್ಳುವವರನ್ನು ದೂರವಿಡುವುದು, ಸರ್ಕಾರದ ಮಿಶನ್ ಮೋಡ್‌ನಲ್ಲಿ ಇಂತಹ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಸಹೋದರ ಸಹೋದರಿಯರೇ,ಇಂದು ಭಾರತಮಾತಾ ಸದನದಲ್ಲಿ ನಿರ್ಮಿತ ಪಂಚಲೋಹದ ತಾಯಿ ಭಾರತಿಯ ಪ್ರತಿಮೆಯಅನಾವರಣವಾಗುತ್ತಿದೆ. ತಾಯಿ ಭಾರತಿಯ ಪ್ರತೀಕ ಈ ಪ್ರತಿಮೆಯ ಲೋಕಾರ್ಪಣೆ ನನಗೆ ಸೌಭಾಗ್ಯ ವಿಷಯವಾಗಿದೆ. ಈ ವಿಶೇಷ ಯಜ್ಞದಲ್ಲಿ ಯಾವ ಗಣ್ಯರು ತೊಡಗಿದ್ದಾರೋ ಅವರೆಲ್ಲರ ಈ ಪುಣ್ಯಕಾರ್ಯಕ್ಕೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಗೆಳೆಯರೆ, ವಿವೇಕಾನಂದ ರಾಕ್‌ ಮೆಮೋರಿಯಲ್ ಬಳಿ ಸಂತ ನಿರ್ಮಾಣವಾದ ಸಂತ ಥಿರುವಳ್ಳುವರ್‌ ಪ್ರತಿಮೆಗೆ ನಮಸ್ಕರಿಸುತ್ತೇನೆ. ಥಿರುವಳ್ಳುವರ್‌ ಅವರ ಸೂಕ್ತಿಗಳು ಮತ್ತು ಮಂತ್ರಸಮವಾಕ್ಯಗಳು ಇಂದೂ ಕೂಡ ಔಚಿತ್ಯಪೂರ್ಣವಾಗಿವೆ, relevant ಆಗಿವೆ. ಯುವಕರಿಗೆ ಅವರು ಕೊಟ್ಟ ಸಂದೇಶವೆಂದರೆ-

“In sandy soil, when deep you delve, you reach the springs below; The more you learn, the freer streams of wisdom flow.”

ಇದರರ್ಥ- ಮರಳು ಮಿಶ್ರಿತ ಭೂಮಿಯಲ್ಲಿ ಅಗೆಯುತ್ತ ಹೋದಾಗ ಒಂದಲ್ಲ ಒಂದು ದಿನ ನೀರಿನ ಸೆಲೆ ಸಿಕ್ಕೆ ಸಿಗುವುದು.

ಅದರಂತೆಯೇ ನಾವು ಎಷ್ಟು ಹೆಚ್ಚು ಹೆಚ್ಚು ಕಲಿಯುತ್ತಾ ಹೋಗುತ್ತೇವೆಯೊ ಅಷ್ಟೇ ಬೇಗ ಜ್ಞಾನ- ಶಿಕ್ಷಣದ ಗಂಗೆಯೆಡೆಗೆ ಸಾಗುತ್ತೇವೆ.

ಯುವದಿನದ ಈ ಸಂದರ್ಭದಲ್ಲಿ ನನ್ನ ದೇಶದ ಯುವಜನತೆಯಲ್ಲಿ ಅಪೇಕ್ಷಿಸುವುದೇನೆಂದರೆ- ಕಲಿಕೆಯ ಈ ಪ್ರಕ್ರಿಯೆಯನ್ನು, learning ನ process ನ್ನು ಎಂದೂ ನಿಲ್ಲಿಸಬೇಡಿ. ನಿಮ್ಮೊಳಗಿನ ವಿದ್ಯಾರ್ಥಿಯನ್ನು ಎಂದೂ ಸಾಯಲು ಬಿಡಬೇಡಿ. ನೀವು ಎಷ್ಟು ಕಲಿಯುತ್ತೀರೋ ಅಷ್ಟೇ ನಿಮ್ಮ spiritual power ನ್ನು develop ಮಾಡಿಕೊಳ್ಳುತ್ತೀರ. ನಿಮ್ಮ skills ಗಳನ್ನು ನೀವು ಎಷ್ಟು develop ಮಾಡಿಕೊಳ್ಳುವಿರೋ, ಅಷ್ಟೇ ನಿಮ್ಮ ವಿಕಾಸವಾಗುತ್ತದೆ ಅದರೊಂದಿಗೆ ದೇಶದ ವಿಕಾಸವೂ ಆಗುತ್ತದೆ.

ಕೆಲವರಿಗೆ spiritual powerವಿಷಯವನ್ನು ತಿಳಿಸುವಾಗ ಅದರ ಬಗ್ಗೆ ಅವರಿಗೆ ಅರ್ಥವಾಗುವುದಿಲ್ಲ ಮತ್ತು ಅದನ್ನು ಒಂದು ಪಂಗಡದ ಒಳಗಿಟ್ಟು ನೋಡುತ್ತಾರೆ. ಆದರೆ ಈ spiritual power ಎಂಬುದುಪಂಗಡಗಳಿಂದ ಹೊರತಾದದ್ದು ಹಾಗೂಬಂಧನಗಳಿಂದ ಹೊರತಾದದ್ದು. ಇದರ ನೇರ ಸಂಬಂಧಮಾನವೀಯ ಮೌಲ್ಯಗಳೊಂದಿಗಿದೆ. ದೈವಿಕ ಶಕ್ತಿಯೊಂದಿಗಿದೆ. ನಮ್ಮ ಮಾಜಿ ರಾಷ್ಟ್ರಪತಿಗಳು ಮತ್ತು ನಿಮ್ಮ ನಾಡಿನ ಸುಪುತ್ರರಾದ ಡಾ. ಅಬ್ದುಲ್‌ ಕಲಾಮ್‌ರವರು ಹೀಗೆ ಹೇಳುತ್ತಿದ್ದರು –

“Spirituality to me is the way we relate to God and the Divine. Staying connected with our spiritual life keep us grounded and always be reminded of the value of life and important values such as honesty, loving our neighbours, and many other important traits that will make the workplace a positive environment”.

ಅನೇಕ ದಶಕಗಳಿಂದ ವಿವೇಕಾನಂದ ಕೇಂದ್ರವು ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿರುವುದು ನನಗೆ ಸಂತೋಷದ ವಿಷಯವಾಗಿದೆ. ಇಂದು ವಿವೇಕಾನಂದ ಕೇಂದ್ರದ ಎರಡು ನೂರಕ್ಕೂ ಹೆಚ್ಚು ಶಾಖೆಗಳಿವೆ. ದೇಶದೆಲ್ಲೆಡೆ 800 ಕ್ಕೂ ಹೆಚ್ಚು ಸ್ಥಳಗಳಲ್ಲಿ ಕೇಂದ್ರದ ಪ್ರೋಜೆಕ್ಟ್‌ಗಳು ನಡೆಯುತ್ತಿವೆ. ಆರೋಗ್ಯ, ಶಿಕ್ಷಣ, ಗ್ರಾಮೀಣ ಭಾರತ ಮತ್ತು ಸಂಸ್ಕೃತಿಗಳಂತಹ ಮಹತ್ವಪೂರ್ಣ ಕ್ಷೇತ್ರಗಳಲ್ಲಿ ನಿರಂತರ ಕೆಲಸ ಕಾರ್ಯಗಳು ನಡೆಯುತ್ತಿವೆ.

ಪಟನಾದಿಂದ ಹಿಡಿದು ಪೋರ್ಟಬ್ಲೇರ್‌ವರೆಗೆ, ಅರುಣಾಚಲ ಪ್ರದೇಶದ ಕಾರ್ಬಿ ಆಂಗ್ಲಾಂಗದಿಂದ ಹಿಡಿದು ಕಾಶ್ಮೀರದ ಅನಂತನಾಗ್‌ವರೆಗೆ, ರಾಮೇಶ್ವರದಿಂದ ಹಿಡಿದು ರಾಜಕೋಟ್‌ನವರೆಗೆ ಈ ಕೇಂದ್ರದ ನೆಲೆಯನ್ನು ಕಾಣಬಹುದು. ಈ ಕೇಂದ್ರದ ಮೂಲಕ ಅತಿ ದೂರದ ಪ್ರದೇಶಗಳಲ್ಲಿ ಸುಮಾರು 28 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ.

ನಾನು ವಿಶೇಷವಾಗಿ ಉತ್ತರ ಪೂರ್ವ ರಾಜ್ಯಗಳಲ್ಲಿ ವಿವೇಕಾನಂದ ಕೇಂದ್ರದ ಕಾರ್ಯಗಳನ್ನು ಪ್ರಶಂಸಿಸುತ್ತೇನೆ. ಏಕನಾಥರವರು ಇರುವಾಗಲೇ ಅರುಣಾಚಲ ಪ್ರದೇಶದ 7 ಕ್ಕೂ ಹೆಚ್ಚು ಸ್ಥಳಗಳಲ್ಲಿ ಮುಕ್ತ ಶಾಲೆಗಳನ್ನು ತೆರೆಯಲಾಗಿತ್ತು. ವಿವೇಕಾನಂದ ಕೇಂದ್ರವುಇಂದು ಉತ್ತರ ಪೂರ್ವದಲ್ಲಿ 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಅಗಣಿತ ವಿದ್ಯಾರ್ಥಿಗಳು, ಆಯ್‌ಆಯ್‌ಟಿ ವಿದ್ಯಾರ್ಥಿಗಳು, ವೈದ್ಯರು ಮತ್ತು ಅನೇಕ ಪ್ರೊಫೆಶನಲ್ಸ್‌ (ವಿಶೇಷ ವೃತ್ತಿಪರರು) ಸ್ವಇಚ್ಛೆಯಿಂದ ವಿವೇಕಾನಂದ ಕೇಂದ್ರಗಳಲ್ಲಿ ಸೇವಾವ್ರತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಯಾವುದೇ ವೇತನವನ್ನು ಪಾವತಿಸಲಾಗುತ್ತಿಲ್ಲ, ಸೇವಾ ಮನೋಭಾವನೆಯಿಂದ ಎಲ್ಲ ಕಾರ್ಯಗಳನ್ನು ಮಾಡಲಾಗುತ್ತದೆ. ನಿಸ್ವಾರ್ಥ ಭಾವದಿಂದ ಸಮಾಜ ಸೇವೆ ಮಾಡುತ್ತಿರುವ ಈ ಸೇವಾವ್ರತಿಗಳು ನಮ್ಮೆಲ್ಲರಿಗೆ ಪ್ರೇರಣೆಯಾಗಿದ್ದಾರೆಂದು ನಾನು ತಿಳಿದಿದ್ದೇನೆ. ಸಾಮಾನ್ಯ ಜೀವನವನ್ನು ನೆಡೆಸುತ್ತಿರುವ ಇವರ ಸಮಾಜ ಸೇವೆಯು ಆದರ್ಶಕ್ಕೆ ಉದಾಹರಣೆಯಾಗಿದೆ. ದೇಶದ ಯುವಕರಿಗಿದು ಹೊಸ ದಿಕ್ಕಿನಂತಿದೆ, ದಾರಿ ತೋರಿಸಿದಂತಿದೆ.

ವಿವೇಕಾನಂದ ಕೇಂದ್ರದ ಜೊತೆಗಿರುವ ಜನರು ರಾಷ್ಟ್ರನಿರ್ಮಾಣದಲ್ಲಿ ಮಹತ್ವಪೂರ್ಣ ದೇಣಿಗೆಯನ್ನು ನೀಡುತ್ತಿದ್ದಾರೆ. ಈ ಕೇಂದ್ರಗಳು ಹೀಗೆಯೇ ಇಲ್ಲಿಗೆ ಬರುವ ಪೀಳಿಗೆಯಲ್ಲಿ ಹೊಸ ವಿವೇಕಾನಂದರ ನಿರ್ಮಾಣ ಮಾಡುತ್ತಾರೆಂಬ ಭರವಸೆ ನನಗಿದೆ.

ಇಂದು ರಾಷ್ಟ್ರ ನಿರ್ಮಾಣದಲ್ಲಿ pro-active ಆಗಿ ತಮ್ಮ duty ಕರ್ತವ್ಯ ನಿಭಾಯಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ವಿವೇಕಾನಂದರಾಗಿದ್ದಾರೆ. ದಲಿತ-ಪೀಡಿತ-ಶೋಷಿತ ಮತ್ತು ವಂಚಿತರ development ಗೋಸ್ಕರದುಡಿಯುವ ಪ್ರತಿಯೊಬ್ಬ ವ್ಯಕ್ತಿಯೂ ವಿವೇಕಾನಂದರಾಗಿದ್ದಾರೆ. ತನ್ನ energyನ್ನು, ತನ್ನ ideas ಗಳನ್ನು, ತನ್ನ innovationಗಳನ್ನು ಸಮಾಜದ ಹಿತಕ್ಕಾಗಿ ತೊಡಗಿಸಿದ ಪ್ರತಿಯೊಬ್ಬ ವ್ಯಕ್ತಿಯೂ ವಿವೇಕಾನಂದರಾಗಿದ್ದಾರೆ.

ನಿಮ್ಮನ್ನು ನೀವು ತೊಡಗಿಸಿಕೊಂಡಿರುವ ಈ ಮಿಷನ್ ಸಂಪೂರ್ಣ ಮಾನವತೆಗೆ, ನಮ್ಮ ಸಮಾಜಕ್ಕಾಗಿ, ನಮ್ಮ ದೇಶಕ್ಕಾಗಿ ಬಹು ದೊಡ್ಡ ತಪಸ್ಸಿನಂತಿದೆ. ನೀವೆಲ್ಲ ಇದೇ ರೀತಿ ದೇಶ ಸೇವೆ ಮಾಡುತ್ತಿರಬೇಕೆಂದು ನನ್ನ ಬಯಕೆಯಾಗಿದೆ.

ವಿವೇಕಾನಂದರ ಜನ್ಮದಿನದ, ಯುವ ದಿನದ ಈ ಸಂದರ್ಭದಲ್ಲಿ ನಿಮ್ಮಲ್ಲರಿಗೂ ಪುನಃ ನನ್ನ ಹೃತ್ಪೂರ್ವಕ ಶುಭಾಶಯಗಳು. ಬಾಪುವಿಗೆ ನನ್ನ ಜೈಶ್ರೀರಾಮ್‌, ಅಲ್ಲಿ ಪರಮೇಶ್ವರಮ್‌ಸಹಿತ ಎಲ್ಲರಿಗೆ ನಮಸ್ಕರಿಸುತ್ತ ನನ್ನ ನುಡಿಗಳಿಗೆ ವಿರಾಮವನ್ನು ಕೊಡುತ್ತಿದ್ದೇನೆ. ಕನ್ಯಾಕುಮಾರಿಗೆ ಬರಲು ನನಗೆ ಆಮಂತ್ರಣ ನೀಡಲಾಯಿತು. ಇದು ನನ್ನ ಮನೆಯಂತಿದೆ. ಯಾವಾಗ ಅವಕಾಶ ಒದಗುವುದೋ ನೋಡೋಣ, ಪ್ರಯಾಣ ಮಾಡುತ್ತಿರುತ್ತೇನೆ. ಹೀಗೆಯೇ ಪ್ರಯಾಣದ ಮಧ್ಯದಲ್ಲಿ ಒಂದೆರಡು ಅವಕಾಶಗಳು ಒದಗಿ ಬರುತ್ತವೆ. ಆ ಪವಿತ್ರ ಪುಣ್ಯ ಭೂಮಿಗೆ ನಮಿಸಲು ಖಂಡಿತವಾಗಿ ಬರುತ್ತೇನೆ. ನಿಮ್ಮೆಲ್ಲರೊಡನೆ ಸಮಯವನ್ನು ಕಳೆಯುತ್ತೇನೆ. ಈ ಸಂದರ್ಭದಲ್ಲಿ ನಾನು ನಿಮ್ಮೆಲ್ಲರೊಡನಿಲ್ಲವೆಂಬ ಖೇದವಿದೆ. ಆದರೆ ದೂರದಿಂದಲಾದರೂ ಸರಿ. ದಿಲ್ಲಿಯಲ್ಲಿಂದು ಚಳಿಯಿದೆ ಅಲ್ಲಿ ಬಿಸಿಲಿನ ಬೇಗೆಯಿದೆ.

ಇವೆರಡರ ನಡುವೆ ನಾವು ಹೊಸ ಶಕ್ತಿ ಮತ್ತು ಉತ್ಸಾಹದೊಂದಿಗೆ ಮುಂದುವರೆಯೋಣ.

ಇದೇ ವಿಶ್ವಾಸದೊಂದಿಗೆ ಈ ಪವಿತ್ರ ಪರ್ವದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಅನೇಕಾನೇಕ ಶುಭಾಶಯಗಳು. ಧನ್ಯವಾದಗಳು.