Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೌಲಾಲಂಪುರಕ್ಕೆ ಆಗಮಿಸಿದ ಪ್ರಧಾನಮಂತ್ರಿ ಅವರನ್ನು ಮಲೇಷ್ಯಾ ಪ್ರಧಾನಮಂತ್ರಿ ಸ್ವಾಗತಿಸಿ ಬರಮಾಡಿಕೊಂಡರು

ಕೌಲಾಲಂಪುರಕ್ಕೆ ಆಗಮಿಸಿದ ಪ್ರಧಾನಮಂತ್ರಿ ಅವರನ್ನು ಮಲೇಷ್ಯಾ ಪ್ರಧಾನಮಂತ್ರಿ ಸ್ವಾಗತಿಸಿ ಬರಮಾಡಿಕೊಂಡರು


ಮಲೇಷ್ಯಾ ಪ್ರಧಾನಮಂತ್ರಿ ಗೌರವಾನ್ವಿತ ಡಾಟೋ’ಸೆರಿ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 7-8, 2026 ರಂದು ಮಲೇಷ್ಯಾಕ್ಕೆ ಈ ಭೇಟಿ ನೀಡುತ್ತಿದ್ದಾರೆ. 2015 ರಿಂದ ಇದು ಪ್ರಧಾನಮಂತ್ರಿ ಅವರ ಮಲೇಷ್ಯಾಕ್ಕೆ ಮೂರನೇ ಭೇಟಿಯಾಗಿದೆ.

ವಿಶೇಷವಾಗಿ, ಕೌಲಾಲಂಪುರಕ್ಕೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ಪ್ರಧಾನಿ ಡಾಟೋ’ಸೆರಿ ಅನ್ವರ್ ಇಬ್ರಾಹಿಂ ಅವರು ಮಲೇಷ್ಯಾದ ಮಾನವ ಸಂಪನ್ಮೂಲ ಸಚಿವರಾದ ಡಾಟೋ’ಶ್ರೀ ರಮಣನ್ ರಾಮಕೃಷ್ಣನ್ ಮತ್ತು ಮಲೇಷ್ಯಾದ ಉಪ ವಿದೇಶಾಂಗ ಸಚಿವರಾದ ಡಾಟೋ’ಲುಕಾನಿಸ್ಮನ್ ಬಿನ್ ಅವಾಂಗ್ ಸೌನಿ ಅವರೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು. ಇದರ ನಂತರ ಎರಡೂ ದೇಶಗಳ ಹಂಚಿಕೆಯ ಪರಂಪರೆಯನ್ನು ಉಲ್ಲೇಖಿಸುವ ವರ್ಣರಂಜಿತ ಸಾಂಸ್ಕೃತಿಕ ಸ್ವಾಗತ ಕಾರ್ಯಕ್ರಮ ನಡೆಯಿತು.

2024ರಲ್ಲಿ ಸ್ಥಾಪಿಸಲಾದ ಭಾರತ-ಮಲೇಷ್ಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಈ ಭೇಟಿ ಪ್ರಯತ್ನಿಸುತ್ತದೆ. ಇದು ಭಾರತ-ಮಲೇಷ್ಯಾ ಸಂಬಂಧಗಳನ್ನು ಬಲಪಡಿಸುವ ಭಾರತದ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಇದು ನಮ್ಮ “ಆಕ್ಟ್ ಈಸ್ಟ್ ನೀತಿ”, “ಇಂಡೋ-ಪೆಸಿಫಿಕ್ ದೃಷ್ಟಿಕೋನ” ಮತ್ತು “ಮಹಾಸಾಗರ” ಯೋಜನೆಯ ಪ್ರಮುಖ ಆಧಾರಸ್ತಂಭವಾಗಿದೆ.

 

*****