Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗಾಂಧೀನಗರದ ಗಿಫ್ಟ್ ಸಿಟಿಯಲ್ಲಿನ ಭಾರತ ಅಂತರಾಷ್ಟ್ರೀಯ ವಿನಿಮಯಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ ಪ್ರತಿ

ಗಾಂಧೀನಗರದ ಗಿಫ್ಟ್ ಸಿಟಿಯಲ್ಲಿನ ಭಾರತ ಅಂತರಾಷ್ಟ್ರೀಯ ವಿನಿಮಯಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ ಪ್ರತಿ

ಗಾಂಧೀನಗರದ ಗಿಫ್ಟ್ ಸಿಟಿಯಲ್ಲಿನ ಭಾರತ ಅಂತರಾಷ್ಟ್ರೀಯ ವಿನಿಮಯಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ ಪ್ರತಿ

ಗಾಂಧೀನಗರದ ಗಿಫ್ಟ್ ಸಿಟಿಯಲ್ಲಿನ ಭಾರತ ಅಂತರಾಷ್ಟ್ರೀಯ ವಿನಿಮಯಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ ಪ್ರತಿ


ಭಾರತದ ಮೊದಲ ಅಂತಾರಾಷ್ಟ್ರೀಯ ಷೇರು ವಿನಿಮಯ ಕೇಂದ್ರವಾದ ಭಾರತ ಅಂತಾರಾಷ್ಟ್ರೀಯ ವಿನಿಮಯಕ್ಕೆ ಗಿಫ್ಟ್ ಸಿಟಿಯಲ್ಲಿ ಚಾಲನೆ ನೀಡುತ್ತಿರುವುದು ನನಗೆ ಸಂತಸದ ವಿಷಯವಾಗಿದೆ. ಇದು ಭಾರತದ ಆರ್ಥಿಕ ಕ್ಷೇತ್ರದಲ್ಲೇ ಮಹತ್ವದ ಸಂದರ್ಭವಾಗಿದೆ. ನಿಮಗೆಲ್ಲಾ ತಿಳಿದಂತೆ ಈ ಯೋಜನೆ ಆರಂಭವಾಗಿದ್ದು 2007ರಲ್ಲಿ. ಜಾಗತಿಕ ಮಟ್ಟದ ಆರ್ಥಿಕ ಮತ್ತು ಮಾಹಿತಿ ತಂತ್ರಜ್ಞಾನ ವಲಯ ಸ್ಥಾಪಿಸಿ ಭಾರತಕ್ಕೆ ಮಾತ್ರವಲ್ಲದೇ ವಿಶ್ವಕ್ಕೇ ಸೇವೆ ಒದಗಿಸುವುದು ಈ ಯೋಜನೆಯ ಗುರಿಯಾಗಿತ್ತು.

ನಾನು ಎಲ್ಲೇ ಹೋದರು ಆಯಾ ದೇಶದ ಅತ್ಯುನ್ನತ ಆರ್ಥಿಕ ತಜ್ಞರನ್ನು ಭೇಟಿಯಾಗುತ್ತಿದ್ದೆ. ನ್ಯೂಯಾರ್ಕ್, ಲಂಡನ್, ಸಿಂಗಪುರ, ಹಾಂಕ್ಹಾಂಗ್ ಅಥವಾ ಅಬುಧಾಬಿಗಳಲ್ಲಿ ಭಾರತೀಯ ಮೂಲದವರನ್ನು ಕಾಣುತಿದ್ದೆ. ಅವರ ಆರ್ಥಿಕ ಪರಿಣಿತಿ ಮತ್ತು ಅವರು ನೆಲೆಸಿರುವ ದೇಶಕ್ಕೆ ನೀಡುತ್ತಿರುವ ಸೇವೆಯಿಂದ ಪ್ರಭಾವಿತನಾಗಿದ್ದೇನೆ.

ಆಗ ನಾನು ಯೋಚಿಸುತಿದ್ದದ್ದು, “ಈ ಪ್ರತಿಭೆಗಳನ್ನು ವಾಪಸ್ಸು ಕರೆತರುವುದರೊಂದಿಗೆ, ಜಾಗತಿಕ ನಾಯಕತ್ವ ನೀಡುವುದು ಹೇಗೆ?” ಎಂಬುದು.

ಗಣಿತಶಾಸ್ತ್ರದಲ್ಲಿ ಭಾರತೀಯರಿಗೆ ದೀರ್ಘ ಸಂಪ್ರದಾಯವಿದೆ. ಎರಡು ಸಾವಿರ ವರ್ಷಗಳ ಹಿಂದೆಯೇ ಭಾರತೀಯರು ‘ಸೊನ್ನೆ’ ಮತ್ತು ‘ದಶಮಾಂಶ ವ್ಯವಸ್ಥೆ’ ಆವಿಷ್ಕರಿಸಿದ್ದಾರೆ. ಹಾಗಾಗಿ ‘ಸೊನ್ನೆ’ ಬಹುಮುಖ್ಯ ಕಾರ್ಯನಿರ್ವಹಿಸುವ ಮಾಹಿತಿ ತಂತ್ರಜ್ಞಾನ ಮತ್ತು ಆರ್ಥಿಕ ವಲಯದಲ್ಲಿ ಭಾರತೀಯರೇ ಮುಂಚೂಣಿಯಲ್ಲಿರುವುದು ಆಶ್ಚರ್ಯವೇನಲ್ಲ.

ಗಿಫ್ಟ್ ಸಿಟಿಯ ಪರಿಕಲ್ಪನೆ ಸಮಯದಲ್ಲಿ ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದೆ. ತಂತ್ರಜ್ಞಾನ ಪ್ರಗತಿ ವೇಗವನ್ನು ತ್ವರಿತಗೊಳಿಸಿದೆ. ಜಾಗತಿಕ ಮಟ್ಟದ ಭಾರತೀಯ ಪ್ರತಿಭೆಗಳು ದೇಶದೊಳಗೆ ಮತ್ತು ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನದಲ್ಲಿ ಭಾರತ ಮುಂಚೂಣಿಯಲ್ಲಿತ್ತು. ಆರ್ಥಿಕತೆ ದಿನೇ ದಿನೇ ತಂತ್ರಜ್ಞಾನದೊಂದಿಗೆ ಬೆಸೆದುಕೊಳ್ಳುತ್ತಿದೆ. ಆರ್ಥಿಕತೆ, ತಂತ್ರಜ್ಞಾನ ಮಿಶ್ರಿತ ‘ಫಿನ್ಟೆಕ್’ ಪರಿಕಲ್ಪನೆ ಭಾರತದ ಭವಿಷ್ಯದ ಅಭಿವೃದ್ಧಿಗೆ ಪ್ರಮುಖ ಎಂಬುದು ನನಗೆ ಮನವರಿಕೆಯಾಗಿತ್ತು.

ಭಾರತವನ್ನು ಆರ್ಥಿಕತೆಯ ಮುಂಚೂಣಿ ನಾಯಕನಾಗಿ ಮಾಡುವುದು ಹೇಗೆಂದು ಹಲವಾರು ತಜ್ಞರೊಂದಿಗೆ ಚರ್ಚಿಸಿದ್ದೇನೆ. ಪ್ರಪಂಚದ ಎಲ್ಲಾ ಮಾರುಕಟ್ಟೆಗಳೊಂದಿಗಿನ ವ್ಯವಹಾರ ಮತ್ತು ಅತ್ಯುತ್ತಮ ಸೌಲಭ್ಯ ನೀಡುವುದು ಅವಶ್ಯಕವೆನ್ನುವುದು ನಿಚ್ಚಳ. ಇದೇ ಆಲೋಚನೆಯೊಂದಿಗೆ ಗಿಫ್ಟ್ ಸಿಟಿ ಹೊರಹೊಮ್ಮಿದೆ. ಭಾರತದ ಜಾಗತಿಕ ಆರ್ಥಿಕ ಮತ್ತು ತಂತ್ರಜ್ಞಾನ ಪ್ರತಿಭೆಗಳಿಗೆ ಜಾಗತಿಕ ಸೌಲಭ್ಯ ಒದಗಿಸುವುದು ನಮ್ಮ ಗುರಿ. ಇಂದಿನ ಉದ್ಘಾಟನೆಯೊಂದಿಗೆ ನಮ್ಮ ಗುರಿಯ ಹಾದಿಯ ಬಹುಮುಖ್ಯ ಘಟ್ಟವನ್ನು ತಲುಪಿದ್ದೇವೆ.

2013ರ ಜೂನ್ ನಲ್ಲಿ ಪುಸ್ತಕ ಬಿಡುಗಡೆಗಾಗಿ ನಾನು ಬಾಂಬೆ ಷೇರು ವಿನಿಮಯಕ್ಕೆ ಭೇಟಿ ನೀಡಿದ್ದೆ. ಆ ಸಮಯದಲ್ಲಿ ಜಾಗತಿಕ ಉತ್ಕ್ರುಷ್ಟ ಅಂತರಾಷ್ಟ್ರೀಯ ಷೇರು ವಿನಿಮಯ ಸ್ಥಾಪಿಸಲು ಆಹ್ವಾನಿಸಿದ್ದೆ. 2015ರ ವೈಬ್ರೆಂಟ್ ಗುಜರಾತ್ ಉತ್ಸವದ ಸಮಯದಲ್ಲಿ ಗುಜರಾತ್ ಸರ್ಕಾರದೊಂದಿಗೆ ಪರಸ್ಪರ ಒಪ್ಪಂದವೊಂದಕ್ಕೆ ಸಹಿ ಹಾಕಲಾಯಿತು. ಇಂದು ಹೊಸ ಅಂತಾರಾಷ್ಟ್ರೀಯ ವಿನಿಮಯ ಕೇಂದ್ರವನ್ನು ಉದ್ಘಾಟಿಸಲು ನನಗೆ ಸಂತಸವಾಗುತ್ತಿದೆ. 21ನೇ ಶತಮಾನದ ಮೂಲಸೌಕರ್ಯಗಳನ್ನು ನಿರ್ಮಿಸಲು ಇದು ಗಿಫ್ಟ್ ಸಿಟಿಗೆ ಮಾತ್ರವಲ್ಲ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.

ಈ ವಿನಿಮಯ ಕೇಂದ್ರ ಷೇರು ಮಾರುಕಟ್ಟೆ, ಸರಕು, ನೋಟು ಮತ್ತು ಬಡ್ಡಿ ದರ ಉತ್ಪನ್ನಗಳ ಮಾರಾಟದಲ್ಲಿ ತೊಡಗಿಕೊಳ್ಳಲಿದೆ ಎಂದು ನನಗೆ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ, ಈ ಕೇಂದ್ರ ಭಾರತೀಯ ಮತ್ತು ವಿದೇಶಿ ಕಂಪೆನಿಗಳ ಷೇರು ವ್ಯವಹಾರದಲ್ಲಿ ತೊಡಗಿಕೊಳ್ಳಲಿದೆ. ಇಲ್ಲಿ ಮಸಾಲ ಬಾಂಡ್ಗಳು ಕೂಡ ವ್ಯವಹರಿಸಲ್ಪಡುತ್ತವೆ ಎಂದು ನನಗೆ ತಿಳಿಸಲಾಗಿದೆ. ಏಷ್ಯಾ, ಆಫ್ರಿಕಾ ಮತ್ತು ಯೂರೋಪಿನ ಹಲವಾರು ದೇಶಗಳು ಈ ಪ್ರಮುಖ ಹಣಕಾಸು ಕೇಂದ್ರದಿಂದ ಬಂಡವಾಳ ಪಡೆಯಲು ಅನುಕೂಲವಾಗಲಿದೆ. ಜಾಗತಿಕವಾಗಿ ಅತ್ಯಾಧುನಿಕ ವ್ಯವಹಾರ, ಪಾವತಿ ಸೌಲಭ್ಯಗಳನ್ನು ಹೊಂದಿದ ಶೀಘ್ರ ವಿನಿಮಯ ಕೇಂದ್ರಗಳಲ್ಲಿ ಈ ಕೇಂದ್ರವೂ ಸೇರಿದೆ. ಪೂರ್ವ ಮತ್ತು ಪಶ್ಚಿಮದ ನಡುವೆ ಭಾರತದ ಕಾಲಮಾನ ಸೂಕ್ತವಾಗಿದೆ. ಹಗಲು-ರಾತ್ರಿ ಈ ಕೇಂದ್ರದಲ್ಲಿ ಆರ್ಥಿಕ ಸೇವೆಗಳನ್ನು ಒದಗಿಸಬಹುದು. ಜಪಾನ್ ಮಾರುಕಟ್ಟೆ ಸಮಯದಲ್ಲಿ ಆರಂಭವಾಗಿ, ಅಮೆರಿಕಾದ ಮಾರುಕಟ್ಟೆ ವಹಿವಾಟು ಅಂತ್ಯದ ಸಮಯದವರೆಗೆ, ಅಂದರೆ 20 ಗಂಟೆಗಳ ಕಾಲ ಈ ಕೇಂದ್ರ ಕಾರ್ಯವನಿರ್ವಹಿಸಲಿದೆ. ಎಲ್ಲಾ ಕಾಲಮಾನದಲ್ಲೂ ಕಾರ್ಯನಿರ್ವಹಿಸುವ ಮೂಲಕ ಈ ಕೇಂದ್ರ ಗುಣಮಟ್ಟದ ಹೊಸ ಮಾನದಂಡಗಳನ್ನು ಸೃಷ್ಟಿಸಲಿದೆ.

ಗಿಫ್ಟ್ ಸಿಟಿಯಲ್ಲಿನ ಕೇಂದ್ರ ಅಂತರಾಷ್ಟ್ರೀಯ ಆರ್ಥಿಕ ಸೇವೆಗಳ ಕೇಂದ್ರ, ಐಎಫ್ಎಸ್ಸಿಯ ಭಾಗವಾಗಿದೆ.

ಐಎಫ್ಎಸ್ಸಿಯ ಪರಿಕಲ್ಪನೆ ಸರಳವಾಗಿದ್ದರೂ ಸಶಕ್ತ ಕೇಂದ್ರವಾಗಿ ಹೊರಹೊಮ್ಮಲಿದೆ. ದೇಶಿಯ ಪ್ರತಿಭೆಗಳನ್ನು ಅಂತರಾಷ್ಟ್ರೀಯ ತಾಂತ್ರಿಕತೆ ಮತ್ತು ನಿಯಂತ್ರಣ ಚೌಕಟ್ಟಿನೊಂದಿಗೆ ತರುವುದು ಈ ಕೇಂದ್ರದ ಉದ್ದೇಶ. ಈ ಪ್ರಕ್ರಿಯೆ, ಭಾರತೀಯ ಸಂಸ್ಥೆಗಳು ಅಂತಾರಾಷ್ಟ್ರೀಯ ಆರ್ಥಿಕ ಕೇಂದ್ರಗಳೊಂದಿಗೆ ಸರಿಸಮನಾಗಿ ಸಂವಹಿಸಲು ಅನುವು ಮಾಡಿಕೊಡಲಿದೆ. ಗಿಫ್ಟ್ ಸಿಟಿ, ಐಎಫ್ಎಸ್ಸಿ ಕೇಂದ್ರ ಯಾವುದೇ ಅಂತಾರಾಷ್ಟ್ರೀಯ ಆರ್ಥಿಕ ಕೇಂದ್ರಕ್ಕೆ ಸಮನಾಗಿ ಸೌಲಭ್ಯಗಳನ್ನು ಮತ್ತು ನಿಯಮಗಳನ್ನು ಒದಗಿಸಲಿದೆ.

ದೊಡ್ಡ ದೇಶೀಯ ಮಾರುಕಟ್ಟೆಯನ್ನು ಹೊಂದಿರುವ ಭಾರತದಂತಹ ರಾಷ್ಟ್ರದಲ್ಲಿ ವಿದೇಶದಂತಹ ವಾತಾವರಣವನ್ನು ನಿರ್ಮಿಸುವುದು ಸುಲಭವೇನಲ್ಲ. ಭಾರತವನ್ನು ಸಣ್ಣ ನಗರಗಳ ದೇಶಕ್ಕೆ ಹೋಲಿಸಲು ಸಾಧ್ಯವಿಲ್ಲ. ಅಂತಹ ದೇಶಗಳಲ್ಲಿ ಸಣ್ಣ ಪ್ರಮಾಣದ ಸ್ಥಳೀಯ ಮಾರುಕಟ್ಟೆಗಳಿರುತ್ತವೆ ಹಾಗೂ ತನ್ನದೇ ಆದ ವಿಶೇಷ ಅನುಕೂಲಕರ ತೆರಿಗೆ ಮತ್ತು ನಿಯಂತ್ರಣ ವ್ವವಸ್ಥೆಗಳನ್ನು ಹೊಂದಿರುತ್ತವೆ. ಬೃಹತ್ ದೇಶಗಳನ್ನು ಹಾಗೆ ಮಾಡಲು ಸಾಧ್ಯವಿಲ್ಲ. ದೇಶದೊಳಗೇ ವಿದೇಶದಂತಹ ಕೇಂದ್ರವನ್ನು ಸೃಷ್ಠಿಸುವುದಕ್ಕೆ ನಿಯಂತ್ರಣ ಸವಾಲುಗಳು ಎದುರಾಗುತ್ತವೆ. ಈ ನಿಯಂತ್ರಣ ಸಮಸ್ಯೆಗಳಿಗೆ ಆರ್ಥಿಕ ಸಚಿವಾಲಯ, ರಿಸರ್ವ್ ಬ್ಯಾಂಕ್ ಮತ್ತು ಸೆಬಿ ಪರಿಹಾರ ಕಂಡುಕೊಂಡಿರುವುದು ಸಂತಸದ ವಿಷಯ.

ಭಾರತದಲ್ಲಿನ ಬಹುತೇಕ ವಹಿವಾಟು ವಿದೇಶದಲ್ಲೇ ನಡೆಯುತ್ತದೆ ಎನ್ನುವುದು ದೀರ್ಘಕಾಲದ ಟೀಕೆ. ತನ್ನದೇ ಹಲವು ಉತ್ಪನ್ನಗಳಿಗೆ ಭಾರತ ಬೆಲೆ ನಿಗದಿಪಡಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ ಎನ್ನಲಾಗುತ್ತದೆ. ಇಂತಹ ಹಲವು ಟೀಕೆಗಳನ್ನು ಗಿಫ್ಟ್ ಸಿಟಿ ಸ್ಥಳಾಂತರಿಸಲಿದೆ. ಗಿಫ್ಟ್ ಸಿಟಿಯ ನನ್ನ ದೂರದರ್ಶಿತ್ವ ಹಾಲಿ ಪರಿಕಲ್ಪನೆಗಿಂತಾ ವಿಸ್ತಾರವಾದದ್ದು. ಮುಂದಿನ ಹತ್ತು ವರ್ಷಗಳಲ್ಲಿ ಸರಕು, ನೋಟು, ಷೇರು, ಬಡ್ಡಿದರ ಅಥವಾ ಇನ್ನಿತರೆ ಆರ್ಥಿಕ ಉತ್ಪನ್ನಗಳ ಜಾಗತಿಕ ದರವನ್ನು ನಿಗದಿಪಡಿಸುವಂತೆ ಭಾರತವನ್ನು ಮಾಡುವುದೇ ನನ್ನ ಗುರಿ.

ಮುಂದಿನ ಇಪ್ಪತ್ತು ವರ್ಷಗಳಲ್ಲಿ ಕನಿಷ್ಠ 30 ಕೋಟಿ ಉದ್ಯೋಗಗಳನ್ನು ಭಾರತ ಸೃಷ್ಠಿಸಬೇಕಿದೆ. ಇದು ಬಹುದೊಡ್ಡ ಪ್ರಯತ್ನ. ಕೌಶಲ್ಯ ಮತ್ತು ಉತ್ತಮ ಸಂಬಳ ನೀಡುವ ಸೇವಾ ವಲಯದ ಉದ್ಯೋಗಗಳು ಈ ಕ್ರಾಂತಿಯ ಭಾಗವಾಗಬೇಕಿದೆ. ಭಾರತೀಯ ಯವಜನತೆ ಇದನ್ನು ಮಾಡಬಹುದು. ಗಿಫ್ಟ್ ಸಿಟಿಯ ಮೂಲಕ ದೊರೆಯುವ ಅಂತಾ ರಾಷ್ಟ್ರಿಯ ಮಾನ್ಯತೆಯಿಂದಾಗಿ ಯವಜನತೆ ಹೆಚ್ಚುಹೆಚ್ಚು ಪಾಲ್ಗೊಳ್ಳುವಂತೆ ಮಾಡುತ್ತದೆ. ಅಗಾಧ ಪ್ರಮಾಣದ ಅನುಭವಿಗಳನ್ನು ಮತ್ತು ಜಾಗತಿಕ ಸ್ಪರ್ಧೆಯ ಆರ್ಥಿಕ ವೃತ್ತಿಪರರನ್ನು ಸೃಷ್ಟಿಸಲು ಭಾರತೀಯ ಕಂಪೆನಿಗಳಿಗೆ, ವಿನಿಮಯ ಮತ್ತು ನಿಯಂತ್ರಕರಿಗೆ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ಹೊಸ ಕೇಂದ್ರದ ಹೊರಗೂ ಕಾರ್ಯನಿರ್ವಹಿಸುವ ಮತ್ತು ಜಗತ್ತಿಗೆ ಸೇವೆ ಒದಗಿಸಲು ಸಾಧ್ಯವಿದೆ. ಮುಂದಿನ ಹತ್ತು ವರ್ಷಗಳಲ್ಲಿ ಈ ಕೇಂದ್ರ ಹಲವಾರು ಲಕ್ಷ ಉದ್ಯೋಗಗಳನ್ನು ಸೃಷ್ಠಿಸಲಿದೆ ಎಂದು ನಂಬಿದ್ದೇನೆ.

ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ನಾನು ನೀಡುತ್ತಿರುವ ಪ್ರಾಮುಖ್ಯತೆ ನಿಮಗೆ ತಿಳಿದಿದೆ. ಗಿಫ್ಟ್ ಸಿಟಿ ಹೇಗೆ ಜಾಗತಿಕ ಸಂಸ್ಥೆಯಾಗಿ ಹೊರಹೊಮ್ಮಲಿದೆ ಎಂಬುದು ಎಲ್ಲಾ 100 ಸ್ಮಾರ್ಟ್ ಸಿಟಿಗಳ ಅನುಭವಕ್ಕೆ ಬರಲಿದೆ. ಭಾರತ ಒಂದೇ ತಲೆಮಾರಿನಲ್ಲಿ ಮುಂದುವರೆದ ದೇಶವಾಗಬಹುದಾಗಿದೆ ಎಂದು ಈ ಹಿಂದೆ ಹೇಳಿದ್ದೇನೆ. ನಮ್ಮ ಕನಸಿನ ನವಭಾರತದ ನಿರ್ಮಾಣದಲ್ಲಿ ಹೊಸ ನಗರಗಳ ಪಾತ್ರ ಮಹತ್ವದ್ದು:

-ವಿಶ್ವಾಸನೀಯ ಭಾರತ

-ಪ್ರಗತಿಯ ಭಾರತ

-ಎಲ್ಲರನ್ನು ಒಳಗೊಂಡ ಭಾರತ

-ನಮ್ಮ ಭಾರತ

ಭಾರತೀಯ ಅಂತಾರಾಷ್ಟ್ರೀಯ ವಿನಿಮಯ ಕೇಂದ್ರಕ್ಕೆ ಚಾಲನೆ ದೊರೆತಿದೆ ಎಂದು ಘೋಷಿಸುತ್ತಿದ್ದೇನೆ. ಗಿಫ್ಟ್ ಸಿಟಿ ಮತ್ತು ಭಾರತೀಯ ಅಂತಾರಾಷ್ಟ್ರೀಯ ವಿನಿಮಯ ಕೇಂದ್ರಕ್ಕೆ ನಾನು ಶುಭಕೋರುತ್ತೇನೆ.

ಧನ್ಯವಾದಗಳು.

***