ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ಸಮಕಾಲೀನ ಮೌಲ್ಯಮಾಪನ ಜಾಲ(ಸಿ.ಇ.ಎನ್.ಇ.ಟಿ.) ವನ್ನು ನಿರ್ವಹಿಸುವ ಸಲುವಾಗಿ ಸಮಕಾಲೀನ ಮೌಲ್ಯಮಾಪನ ಕಚೇರಿ(ಸಿ.ಇ.ಓ.)ಯನ್ನು ಸ್ಥಾಪಿಸುವ ತನ್ನ ಮೊದಲ ನಿರ್ಧಾರವನ್ನು ಹಿಂಪಡೆಯಲು ಸಮ್ಮತಿಸಿದೆ. ಈ ಹಿಂದಿನ ಯೋಜನಾ ಆಯೋಗದ ಸ್ವತಂತ್ರ ಮೌಲ್ಯಮಾಪನ ಕಚೇರಿ (ಐಇಓ) ಜೊತೆಯಲ್ಲಿ ಸಹವರ್ತಿಯಾಗಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಮೌಲ್ಯಮಾಪನ ನಡೆಸಲು ಸಿಇಒ ರೂಪಿಸಲಾಗಿತ್ತು.
ಈ ನಿರ್ಧಾರವು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಮೌಲ್ಯಮಾಪನ ಅಧ್ಯಯನ ಕೈಗೊಳ್ಳಲು ಮತ್ತು ನಿರ್ವಹಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ಆರ್ಥಿಕ ಮತ್ತು ನಿಗಾ ಘಟಕವನ್ನು ಅಗತ್ಯಕ್ಕೆ ಅನುಗುಣವಾಗಿ ಬಲಪಡಿಸಲು ಅವಕಾಶ ಮಾಡಿಕೊಡುತ್ತದೆ.