Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚೈನಾ ಮತ್ತು ಮ್ಯಾನ್ಮಾರ್ ಗೆ ಭೇಟಿ ನೀಡಲಿರುವ ಪ್ರಧಾನಿ (ಸೆಪ್ಟೆಂಬರ್ 3-7, 2017)


ಚೈನಾ ಗಣರಾಜ್ಯದ ಅಧ್ಯಕ್ಷರ ಆಹ್ವಾನದ ಮೇರೆಗೆ 9ನೇ ಬ್ರಿಕ್ಸ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸೆಪ್ಟೆಂಬರ್ 3-5, 2017 ರ ವರೆಗೆ ಚೈನಾದ ಫುಜಿಯಾನ್ ಪ್ರಾಂತ್ಯದ ಕ್ಸಿಯಾಮೆನ್ ಗೆ ಭೇಟಿ ನೀಡಲಿದ್ದಾರೆ.

ತದನಂತರ ಪ್ರಧಾನಮಂತ್ರಿಯವರು ಮ್ಯಾನ್ಮಾರ್ ಗಣತಂತ್ರ ಒಕ್ಕೂಟದ ಅಧ್ಯಕ್ಷ ಘನತೆವೆತ್ತ ಯು. ಹೆತಿನ್ ಕ್ವಾವ್ ಅವರ ಆಹ್ವಾನದ ಮೇರೆಗೆ ಸೆಪ್ಟೆಂಬರ್ 5-7, 2017ರವರೆಗೆ ಮ್ಯಾನ್ಮಾರ್ ಗೆ ಭೇಟಿ ನೀಡಲಿದ್ದಾರೆ. ಇದು ಮ್ಯಾನ್ಮಾರ್ ಗೆ ಪ್ರಧಾನಮಂತ್ರಿ ಮೋದಿ ಅವರ ಪ್ರಥಮ ದ್ವಿಪಕ್ಷೀಯ ಭೇಟಿ ಆಗಿದೆ. ಈ ಭೇಟಿಯ ವೇಳೆ ಪ್ರಧಾನಮಂತ್ರಿಯವರು ಸ್ಟೇಟ್ ಛಾನ್ಸಲರ್ ಡಾವ್ ಆಂಗ್ ಸಾನ್ ಸೂ ಕಿ ಅವರೊಂದಿಗೆ ಪರಸ್ಪರ ಹಿತಾಸಕ್ತಿಯ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಮತ್ತು ಅಧ್ಯಕ್ಷ ಯು. ಹೆತಿನ್ ಕ್ವಾವ್ ಅವರನ್ನು ಭೇಟಿ ಮಾಡಲಿದ್ದಾರೆ. ರಾಜಧಾನಿ ನಗರಿ ನೇ ಪೇ ಥ್ವಾನಲ್ಲಿ ತಮ್ಮ ಕಾರ್ಯಕ್ರಮಗಳ ಹೊರತಾಗಿ ಪ್ರಧಾನಿಯವರು ಯಾಂಗೋನ್ ಮತ್ತು ಬಗಾನ್ ಗೆ ಭೇಟಿ ನೀಡಲಿದ್ದಾರೆ.

***