Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರಿಕರ ಮೇಲಿನ ದಾಳಿಯನ್ನು ಖಂಡಿಸಿದ ಪ್ರಧಾನಿ; ಜೆ ಮತ್ತು ಕೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಯೊಂದಿಗೆ ಮಾತುಕತೆ ಮತ್ತು ಎಲ್ಲ ಅಗತ್ಯ ನೆರವಿನ ಭರವಸೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರಿಕರ ಮೇಲೆ ನಡೆದಿರುವ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ. ಪ್ರಧಾನಿಯವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಶ್ರೀ. ಎನ್.ಎಸ್. ವೋರಾ ಮತ್ತು ಮುಖ್ಯಮಂತ್ರಿ ಶ್ರೀಮತಿ ಮೆಹಬೂಬಾ ಮುಫ್ತಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಎಲ್ಲ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ.

“ಇಂತಹ ಹೇಡಿತನದ ದಾಳಿ ಮತ್ತು ದ್ವೇಷದ ದುಷ್ಟ ಕೃತ್ಯಗಳಿಗೆ ಭಾರತವು ಎಂದಿಗೂ ಕುಗ್ಗಿ ಹೋಗುವುದಿಲ್ಲ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಈ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ನನ್ನ ಸಂವೇದನೆ ಇದೆ. ಗಾಯಾಳುಗಳೊಂದಿಗೆ ನನ್ನ ಪ್ರಾರ್ಥನೆ ಇದೆ.

ಜೆ ಮತ್ತು ಕೆನಲ್ಲಿ ಶಾಂತಿಯುತವಾಗಿ ಸಾಗಿದ್ದ ಅಮರನಾಥ್ ಯಾತ್ರಿಕರ ಮೇಲೆ ಹಠಾತ್ತನೆ ನಡೆದಿರುವ ದಾಳಿಗೆ ಪದಗಳಾಚೆಯೂ ನೋವಿದೆ. ಈ ದಾಳಿ ಪ್ರತಿಯೊಬ್ಬರೂ ಬಲವಾಗಿ ಖಂಡಿಸುವಂಥದ್ದು.
ನಾನು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ಎಲ್ಲ ಅಗತ್ಯ ನೆರವಿನ ಭರವಸೆ ನೀಡಿದ್ದೇನೆ”, ಎಂದು ಪ್ರಧಾನಿ ಹೇಳಿದ್ದಾರೆ.

***

AKT/AK