Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜರ್ಮನಿಯ ವಾಣಿಜ್ಯ ಸಭೆಯಲ್ಲಿ ಪ್ರಧಾನ ಮಂತ್ರಿಯವರ ಭಾಷಣ ( 30 ಮೇ 2017)

ಜರ್ಮನಿಯ ವಾಣಿಜ್ಯ ಸಭೆಯಲ್ಲಿ ಪ್ರಧಾನ ಮಂತ್ರಿಯವರ ಭಾಷಣ ( 30 ಮೇ 2017)


ಘನತೆವೆತ್ತ ಡಾ. ಏಂಜೆಲಾ ಮರ್ಖೆಲ್ ಅವರೇ,

ಜಾಗತಿಕ ವಾಣಿಜ್ಯ ಸಮುದಾಯದ ನಾಯಕರೇ,

ಮಹಿಳೆಯರೇ ಮತ್ತು ಮಹನೀಯರೇ!

ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತಿರುವುದು ಅತೀವ ಸಂತಸ ತಂದಿದೆ. ಚಾನ್ಸೆಲರ್ ಮೆರ್ಕೆಲ್ ರಂತಹ ಪ್ರಬುದ್ಧ ನಾಯಕನ ಉಪಸ್ಥಿತಿಯಲ್ಲಿ ನಿಮ್ಮೊಂದಿಗೆ ಮಾತನಾಡಲು ಇನ್ನೂ ಹೆಚ್ಚು ಸಂತೋಷವಾಗುತ್ತದೆ. ನಾನು ಅವರನ್ನು ಭೇಟಿ ಮಾಡುವ ಯಾವುದೇ ಅವಕಾಶ ತಪ್ಪಿಸಿಕೊಳ್ಳುವುದಿಲ್ಲ. 2015ರ ಏಪ್ರಿಲ್ ನಲ್ಲಿ ಹನ್ನೋವರ್ ಉತ್ಸವದ ವೇಳೆ ಅವರೊಂದಿಗೆ ನಡೆಸಿದ ಮಾತುಕತೆಯನ್ನು ಸ್ಮರಿಸುತ್ತೇನೆ. ಭಾರತವು ಆ ಉತ್ಸವದಲ್ಲಿ ಪಾಲುದಾರ ರಾಷ್ಟ್ರವಾಗಿತ್ತು. ಇದಾದ ಬಳಿಕ ಛಾನ್ಸಲರ್ ಮಾರ್ಕಲ್ ಅವರು 2015ರ ಅಕ್ಟೋಬರ್ ನಲ್ಲಿ ಭಾರತಕ್ಕೆ ಬೇಟಿ ನೀಡಿದ್ದರು. ನಾವು ಜರ್ಮನಿ ಮತ್ತು ಭಾರತದ ಸಿಇಓಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದವು. ಇಂದು ಮತ್ತೆ, ಈ ಸಭಾಂಗಣದಲ್ಲಿ ತುಂಬು ಉತ್ಸಾಹ ಮತ್ತು ಚೈತನ್ಯ ಕಾಣುತ್ತಿದ್ದೇನೆ. ಇಲ್ಲಿ ಹಲವು ಭಾರತೀಯ ಸಿಇಓಗಳು ಹಾಜರಿರುವುದನ್ನೂ ನಾನು ಕಾಣುತ್ತಿದ್ದೇನೆ.

 

ಸ್ನೇಹಿತರೆ,

 

ಜರ್ಮನಿಯು ದ್ವಿಪಕ್ಷೀಯವಾಗಿ ಮತಮತು ಜಾಗತಿಕ ನಿಟ್ಟಿನಲ್ಲಿ ಭಾರತದ ಮಹತ್ವದ ಪಾಲುದಾರ ರಾಷ್ಟ್ರವಾಗಿದೆ. ಭಾರತದ ಅಭಿವೃದ್ಧಿಯ ಗಾಥೆಯಲ್ಲಿ ಜರ್ಮನಿಯ ಕಂಪನಿಗಳ ಪಾಲುದಾರಿಕೆಗೆ ಸಂತೋಷ ಪಡುತ್ತೇನೆ. ಅದೇ ರೀತಿ ಭಾರತೀಯ ಕಂಪನಿಗಳು ಕೂಡ ಜರ್ಮನಿಯಲ್ಲಿ ತಮ್ಮ ಛಾಪು ಮೂಡಿಸಿವೆ. ಭಾರತದಲ್ಲಿ ಹೂಡಿಕೆ ಮಾಡುವ ವಿದೇಶಗಳ ಸಾಲಿನಲ್ಲಿ ಜರ್ಮನಿ 7ನೇ ಸ್ಥಾನದಲ್ಲಿದೆ. ಜರ್ಮನಿಯಿಂದ ನೇರ ವಿದೇಶೀ ಬಂಡವಾಳ ಆಕರ್ಷಿಸುತ್ತಿರುವ ವಲಯಗಳು ಎಂಜಿನಿಯರಿಂಗ್, ರಾಸಾಯನಿಕ ಮತ್ತು ಸೇವಾವಲಯ ಆಗಿದೆ. ಸುಮಾರು 600 ಭಾರತ- ಜರ್ಮನಿ ಜಂಟಿ ಸಹಭಾಗಿತ್ವ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಅವು 200 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿವೆ. ಆದಾಗ್ಯೂ ಭಾರತ- ಜರ್ಮನಿ ಆರ್ಥಿಕ ಸಹಯೋಗದಲ್ಲಿ ಅದ್ಭುತ ಅವಕಾಶಗಳಿವೆ. ಇದನ್ನು ಹೆಚ್ಚಿಸಲು, ಭಾರತದಲ್ಲಿ ನಾವು ಮುಕ್ತ ಬಾಹುಗಳಿಂದ ಜರ್ಮನಿಯ ಕಂಪನಿಗಳನ್ನು ಸ್ವಾಗತಿಸುತ್ತೇವೆ. ಜರ್ಮನಿಯ ಕಂಪನಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ, ನಾವು ತ್ವರಿತಗತಿಯ ವ್ಯವಸ್ಥೆಯನ್ನು ತಂದಿದ್ದೇವೆ. ನಾವು ಜರ್ಮನಿಯ ಪಾಲುದಾರಿಕೆಯನ್ನು ಗೌರವಿಸುತ್ತೇವೇ ಹೀಗಾಗಿ ಇದನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ.

 

ಸ್ನೇಹಿತರೇ,

 

ನಾವು ಭಾರತವನ್ನು ಒಂದು ಜಾಗತಿಕ ಉತ್ಪಾದನಾ ತಾಣವಾಗಿ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ಈಗಾಗಲೇ ಭಾರತದಲ್ಲಿ ಉತ್ಪಾದನೆಗೆ ಒಂದು ಉತ್ತಮ ಪರಿಸರ ನಿರ್ಮಾಣವಾಗಿದೆ. ಭಾರತವು ಈಗಾಗಲೇ ಈ ಕೆಳಗಿನ ಅವಕಾಶ ಕಲ್ಪಿಸಿದೆ:

  • ಜಾಗತಿಕವಾಗಿ ಸ್ಪರ್ಧಾತ್ಮಕ ದರದ ಉತ್ಪಾದನೆಯ ಪರಿಸರ ವ್ಯವಸ್ಥೆ.
  • ಚೈತನ್ಯ ಮತ್ತು ಜ್ಞಾನದಿಂದ ಕೂಡಿದ ವಿಸ್ತೃತ ವೃತ್ತಿಪರರ ದಂಡು
  • ವಿಶ್ವದರ್ಜೆಯ ಎಂಜಿನಿಯರಿಂಗ್ ಶಿಕ್ಷಣದ ನೆಲೆ ಮತ್ತು ಬಲವಾದ ಸಂಶೋಧನೆ ಹಾಗೂ ಅಭಿವೃದ್ಧಿ ಸೌಕರ್ಯ.
  • ಜಿಡಿಪಿಯಲ್ಲಿನ ಹೆಚ್ಚಳ ಮತ್ತು ಖರೀದಿಸುವ ಶಕ್ತಿಯಿಂದ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ವೃದ್ಧಿ.
  • ವಿಶ್ವದ ಅತ್ಯಂತ ಉದಾರೀಕೃತ ಎಫ್.ಡಿ.ಐ. ಆಡಳಿತಗಳಲ್ಲಿ ಒಂದು.
  • ಸುಲಭವಾಗಿ ವಾಣಿಜ್ಯ ನಡೆಸುವ ಪರಿಸರವನ್ನು ಮತ್ತಷ್ಟು ಉತ್ತಮ ಪಡಿಸುವತ್ತ ಸರ್ಕಾರದ ಗಮನ.

ಈ ಶಕ್ತಿಯಿಂದಾಗಿ, ಯುಎನ್.ಐ.ಡಿ.ಓ. ಹೇಳಿರುವಂತೆ ಭಾರತ ಈಗಾಗಲೇ ವಿಶ್ವದ 6ನೇ ಅತಿ ದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಇದನ್ನು ಉತ್ತಮಪಡಿಸಲು ನಾವು ವಿವಿಧ ಅನುಭವಗಳ ಮೇಲೆ ಕಾರ್ಯೋನ್ಮುಖರಾಗಿದ್ದೇವೆ. 

 

ನಮ್ಮ ಮೇಕ್ ಇನ್ ಇಂಡಿಯಾ ಉಪಕ್ರಮದ ಮೂಲಕ ನಾವು ಭಾರತವನ್ನು ಜಾಗತಿಕ ಮೌಲ್ಯ ಸರಣಿಯ ಪ್ರಮುಖ ಪಾತ್ರದಾರನನ್ನಾಗಿ ಮಾಡಲು ಬದ್ಧರಾಗಿದ್ದೇವೆ. ನಮ್ಮ ಮುಖ್ಯ ಉದ್ದೇಶ ಉದ್ಯೋಗ ಸೃಷ್ಟಿ ಮತ್ತು ಸಮಾಜದ ಶ್ರೀಮಂತ ಮತ್ತು ಕೆಳ ವರ್ಗದ ನಡುವಿನ ಕಂದಕ ನಿವಾರಣೆ. ಮೇಕ್ ಇನ್ ಇಂಡಿಯಾ ಈಗಾಗಲೇ ಬಲವಾದ ಪರಿಣಾಮ ಬೀರಿದೆ.

 

ಜರ್ಮನಿಯು ಮೇಕ್ ಇನ್ ಇಂಡಿಯಾದ ಯಶಸ್ಸಿಗೆ ದೊಡ್ಡ ರೀತಿಯಲ್ಲಿ ಕೊಡುಗೆ ನೀಡಿದೆ. ಅದರಲ್ಲೂ ಹನ್ನೋವರ್ ಉತ್ಸವದಲ್ಲಿ ಪಾಲುದಾರ ರಾಷ್ಟ್ರವಾಗಿ ಭಾರತದ ಪಾಲ್ಗೊಳ್ಳುವಿಕೆ ಭಾರತ-ಜರ್ಮನಿ ಪಾಲುದಾರಿಕೆಗೆ ದೊಡ್ಡ ಉತ್ತೇಜನ ನೀಡಿದೆ. ಹನ್ನೋವರ್ ಮೆಸ್ಸೆ ವೇಳೆ ಸಹಯೋಗಕ್ಕೆ ಪರಸ್ಪರರು ನಿರ್ದಿಷ್ಟ ಕ್ಷೇತ್ರಗಳನ್ನು ಗುರುತಿಸಿದ್ದೇವೆ. ಇದರಲ್ಲಿ ಉತ್ಪಾದನೆ, ಕೌಶಲ ಅಭಿವೃದ್ಧಿ, ರೈಲು, ನದಿಗಳ ಶುದ್ಧೀಕರಣ, ನವೀಕರಿಸಬಹುದಾದ ಇಂಧನ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನವೂ ಸೇರಿದೆ. ಇದರ ಜೊತೆಗೆ 2015ರ ಸೆಪ್ಟೆಂಬರ್ ನಿಂದ ನಾವು ವ್ಯೂಹಾತ್ಮಕ ಮಾರುಕಟ್ಟೆ ಪ್ರವೇಶ ಬೆಂಬಲ ಕಾರ್ಯಕ್ರಮವನ್ನು ಜಾರಿ ಮಾಡುತ್ತಿದ್ದೇವೆ. ಇದನ್ನು ಎಂ.ಐ.ಐಎಂ ಎಂದು (ಮೇಕ್ ಇನ್ ಮಿಟ್ಟೆಲ್ ಸ್ಟ್ಯಾಂಡ್) ಕರೆಲಾಗುತ್ತದೆ. ಇದು ಮುಖ್ಯವಾಗಿ ಜರ್ಮನಿಯ ಮಿಟ್ಟೆಲ್  ಸ್ಟ್ಯಾಂಡ್ ಕಂಪನಿಗಳಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ನೆರವಾಗುವುದಾಗಿದೆ.

 

ಎಂ.ಐಐಎಂ ಕಾರ್ಯಕ್ರಮವು ವಿಸ್ತೃತ ಶ್ರೇಣಿಯ ವ್ಯಾಪಾರದ ಬೆಂಬಲ ಸೇವೆಗಳ ಅವಕಾಶ ನೀಡುತ್ತದೆ. ಈ ಉಪಕ್ರಮವು ಭಾರತದಲ್ಲಿ ಜರ್ಮನಿಯ ಕಂಪನಿಗಳ ಆಸಕ್ತಿಯ ಹೆಚ್ಚಳಕ್ಕೆ ಕಾರಣವಾಗಿದೆ.

 

ಈ ಅಲ್ಪಾವಧಿಯಲ್ಲಿ ಇದರ ಫಲಶ್ರುತಿ ಕೆಳಕಂಡಂತಿದೆ: 

 

  • 83 ಕಂಪನಿಗಳು ಈ ಕಾರ್ಯಕ್ರಮ ಸೇರಲು ತಮ್ಮ ಆಸಕ್ತಿ ತೋರಿವೆ.
  • 73 ಕಂಪನಿಗಳು ಅಧಿಕೃತ ಸದಸ್ಯರಾಗಿ ನೋಂದಣಿ ಮಾಡಿಕೊಂಡಿವೆ.
  • 47 ಕಂಪನಿಗಳು ಹೂಡಿಕೆಯ ಅನುಷ್ಠಾನದ ಮುಂದುವರಿದ ಹಂತದಲ್ಲಿವೆ;

ಭಾರತ ಮತ್ತು ಜರ್ಮನಿಯ ನಡುವೆ ಮತ್ತೊಂದು ಕಾರ್ಯಗತವಾಗಿರುವ ಯಶಸ್ವಿ ಕಾರ್ಯಕ್ರಮ, ಭಾರತ- ಜರ್ಮನಿ ಮ್ಯಾನೇಜರ್ಸ್ ತರಬೇತಿ ಕಾರ್ಯಕ್ರಮ. ಇದು ಮುಖ್ಯವಾಗಿ ಭಾರತೀಯ ಎನಸ್.ಎಂ.ಇ.ಗಳ ವಾಣಿಜ್ಯ ನಿರ್ವಾಹಕರ ಮುಂದುವರಿತ ತರಬೇತಿಯಾಗಿದೆ. ಈ ಕಾರ್ಯಕ್ರಮದ ಫಲಶ್ರುತಿ ಇಂದಿದೆ:

  • ಎರಡೂ ರಾಷ್ಟ್ರಗಳ ನಡುವೆ ಹೆಚ್ಚಿನ ಹೂಡಿಕೆ, ಹೊಸ ಜಂಟಿ ಸಹಭಾಗಿತ್ವ ಮತ್ತು ಬಿ2ಬಿ ಸಂಪರ್ಕದ ಹೆಚ್ಚಳ.
  • ಸುಮಾರು 500 ಭಾರತೀಯ ಮ್ಯಾನೇಜರ್ ಗಳಿಗೆ ಈ ಕಾರ್ಯಕ್ರಮದಿಂದ ಈವರೆಗೆ ಲಾಭವಾಗಿದೆ.

ಇದರ ಜೊತೆಗೆ ಉತ್ತಮ ವಾತಾವರಣವೂ ಇದೆ. ಕೆಲವು ಉದಾಹರಣೆಗಳು ಈ ಕೆಳಗಿನಂತಿವೆ:

  • ಬಾಷ್, ಸಿಮನ್ಸ್, ಬಿ.ಎ.ಎಸ್.ಎಫ್. ಮತ್ತು ಎಸ್.ಎ.ಪಿ. ಗಳು ಭಾರತದಲ್ಲಿ ನಿರ್ದಿಷ್ಟ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಾಚರಣೆ ನಡೆಸುತ್ತಿವೆ.
  • ಮರ್ಸಿಡೀಸ್ ಬೆಂಜ್ ಇಂಡಿಯಾ ತನ್ನ ಎರಡನೇ ಉತ್ಪಾದನೆ ಸೌಲಭ್ಯವನ್ನು 2015ರ ಜುಲೈನಲ್ಲಿ ಚಕನ್ ನಲ್ಲಿ ಆರಂಭಿಸಿದೆ. ಇದು ಘಟಕ ವಾರ್ಷಿಕ 20,000 ಯುನಿಟ್ ಗಳ ಸಾಮರ್ಥ್ಯವನ್ನು ಹೊಂದಿದೆ.

ನಮ್ಮ ಪ್ರಯತ್ನಕ್ಕಾಗಿ, ನಾವು ಜಾಗತಿಕವಾಗಿ ಉತ್ತಮ ಮಾನ್ಯತೆ ಪಡೆದಿದ್ದೇವೆ. ನಾನು ಅವುಗಳಲ್ಲಿ ಕೆಲವನ್ನು ಪ್ರಸ್ತಾಪಿಸ ಬಯಸುತ್ತೇನೆ.

  • ವಿಶ್ವದಾದ್ಯಂತ ಸರಾಗವಾದ ಆರ್ಥಿಕ ಭೂಪ್ರದೇಶದಲ್ಲಿ ಭಾರತವು ಪ್ರಕಾಶಮಾನವಾದ ತಾಣವಾಗಿದೆ;
  • ಕಳೆದ ಮೂರು ವರ್ಷಗಳಲ್ಲಿ ಶೇ.7ರ ದರಕ್ಕಿಂತ ಹೆಚ್ಚಿನ ಜಿಡಿಪಿಯೊಂದಿಗೆ ಭಾರತ ತ್ವರಿತವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರವಾಗಿದೆ.
  • ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ನಾವು ಕಳೆದ 2 ವರ್ಷಗಳಲ್ಲಿ 32 ಸ್ಥಾನ ಮೇಲೇರಿದ್ದೇವೆ – ಇದು ಯಾವುದೇ ದೇಶಕ್ಕೆ ಅತಿ ಉನ್ನತವಾದ್ದಾಗಿದೆ.
  • ವಿಶ್ವ ಬ್ಯಾಂಕ್ ನ 2016ರ ಲಾಜಿಸ್ಟಿಕ್ಸ್ ಪ್ರದರ್ಶನ ಸೂಚ್ಯಂಕದಲ್ಲಿ ಸಹ ಭಾರತ 19 ಸ್ಥಾನ ಮೇಲೆ ಸಾಗಿದೆ;
  • ಡಬ್ಲ್ಯುಐಪಿಓನ 2016ರ ಜಾಗತಿಕ ನಾವಿನ್ಯತೆ ಸೂಚ್ಯಂಕದಲ್ಲೂ ನಾವು 16 ಸ್ಥಾನ ಮೇಲೇರಿದ್ದೇವೆ.
  • ಯುಎನ್.ಸಿ.ಟಿ.ಎ.ಡಿಯಯ ಮೊದಲ 10 ಎಫ್.ಡಿ.ಐ. ತಾಣಗಳ ಪಟ್ಟಿಯಲ್ಲಿ ನಾವು ಮೂರನೇ ಸ್ಥಾನದಲ್ಲಿದ್ದೇವೆ.

ಇವು ಕೆಲವು ಉದಾಹಣೆಗಳು ಮಾತ್ರ. ನಮ್ಮ ಗಮನ ಸರ್ಕಾರದ ಹೊರೆ ಕಡಿಮೆ ಮಾಡಿ ಆಡಳಿತವನ್ನು ಹೆಚ್ಚಿಸುವತ್ತ ನೆಟ್ಟಿದೆ. ನಾನು ಕೆಲವು ಉದಾಹಣೆ ನೀಡುತ್ತೇನೆ.:

  • ನಾವು ಡಿಜಿಟಲ್ ಆರ್ಥಿಕತೆಯಡೆಗೆ ವೇಗವಾಗಿ ಸಾಗುತ್ತಿದ್ದೇವೆ;
  • ಜಿಎಸ್ಟಿ ಭಾರತ ಕೈಗೊಂಡ ಐತಿಹಾಸಿಕ ಸುಧಾರಣೆಗಳಲ್ಲಿ ಪ್ರಮುಖವಾಗಿದ್ದಾಗಿದೆ – ಮತ್ತು ಇದು ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ;
  • ಕಳೆದ ಎರಡು ವರ್ಷಗಳಲ್ಲಿ ವೈಯಕ್ತಿಕ ಮತ್ತು ಸಾಂಸ್ಥಿಕ ಎರಡೂ ಕಡೆ ನಾವು ಕಡಿಮೆ ತೆರಿಗೆ ವ್ಯವಸ್ಥೆಯಡೆಗೆ ಸಾಗಿದ್ದೇವೆ;
  • ನಾವು ಸಾಂಸ್ಥಿಕ ತೆರಿಗೆಯನ್ನು ಅದರಲ್ಲೂ ಹೊಸ ಹೂಡಿಕೆ ಮತ್ತು ಅದೇ ಸ್ವರೂಪದ ಸಹಯೋಗಕ್ಕೆ ಶೇ.30ರಿಂದ 25ಕ್ಕೆ ಇಳಿಸಿದ್ದೇವೆ;
  • ದಿವಾಳಿತನ ಮತ್ತು ದಿವಾಳಿಗಾಗಿ ಹೊಸ ಕಾನೂನು ಮತ್ತು ಸಂಸ್ಥೆಗಳನ್ನು ಜೊತೆಗೆ ಐಪಿಆರ್ ಮತ್ತು ಮಧ್ಯಸ್ಥಿಕೆಯ ಸೌಲಭ್ಯ ತಂದಿದ್ದೇವೆ;
  • ಸುಲಭವಾಗಿ ವಾಣಿಜ್ಯ ನಡೆಸಲು ಏಳು ಸಾವಿರ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ;
  • 36 ಶ್ವೇತ ಕೈಗಾರಿಕೆಗಳಿಗೆ ಪರಿಸರ ಅನುಮೋದನೆಯ ಅವಶ್ಯಕತೆಯನ್ನು ತೆಗೆದುಹಾಕಲಾಗಿದೆ;
  • ಅದೇ ರೀತಿ 50ಕ್ಕೂ ಹೆಚ್ಚು ವಸ್ತುಗಳನ್ನು ರಕ್ಷಣೆಯ ಪಟ್ಟಿಯಿಂದ ಹೊರತೆಗೆಯಲಾಗಿದೆ;
  • ಕೈಗಾರಿಕಾ ಪರವಾನಗಿ ಸಿಂಧುತ್ವದ ಅವಧಿಯನ್ನು 15 ವರ್ಷಗಳಿಗೆ ಹೆಚ್ಚಿಸಲಾಗಿದೆ;
  • 19 ಕೇಂದ್ರಗಳಲ್ಲಿ ಮತ್ತು 17 ಏರ್ ಕಾರ್ಗೋ ಸಮುಚ್ಛಯಗಳಲ್ಲಿ ಸೀಮಾಸುಂಕ ಅನುಮೋದನೆಯನ್ನು 24X7 ಮಾಡಲಾಗಿದೆ;
  • ಡಿಐಎನ್, ಪ್ಯಾನ್, ಟ್ಯಾನ್ ಮತ್ತು ಸಿಐಎನ್ ನೊಂದಿಗೆ ಕಂಪನಿ ಆರಂಭಿಸುವುದು ಈಗ ಒಂದೇ ಒಂದು ದಿನದ ಕಾರ್ಯವಾಗಿದೆ;
  • 15 ದಿನಗಳ ಒಳಗಾಗಿ ವಿದ್ಯುತ್ ಸಂಪರ್ಕ ಒದಗಿಸಲಾಗುತ್ತಿದೆ;
  • ವಿದ್ಯುತ್ ಪಡೆಯುವ ವಿಶ್ವ ಬ್ಯಾಂಕ್ ಮಾನದಂಡದಲ್ಲಿ ಭಾರತ ಈಗ 111 ಸ್ಥಾನ ಮೇಲೇರಿದೆ.

ಈ ಮೇಲಿನ ಎಲ್ಲ ಉದಾಹರಣೆಗಳ ಜೊತೆಗೆ ಸಾವಿರಾರು ಸುಧಾರಣೆಗಳನ್ನು ರಾಜ್ಯಗಳು ಮಾಡಿವೆ.  ಒಕ್ಕೂಟ ಸರ್ಕಾರದ ಜೊತೆಗೆ ರಾಜ್ಯಗಳು ಕೂಡ ಇಂಥ ಸುಧಾರಣೆ ಕೈಗೊಳ್ಳಲು ಆಸಕ್ತಿ ತಳೆದಿವೆ. ನಾನು ಕೆಲವು ಉದಾಹರಣೆ ನೀಡುತ್ತೇನೆ :

  • ನಾನು ಕೆಲವು ರಾಜ್ಯಗಳನ್ನು ಪ್ರಸ್ತಾಪಿಸುತ್ತಿದ್ದೇನೆ, ಇಲ್ಲಿ ಸ್ಪರ್ಧೆಯ ರೂಪದಲ್ಲಿ, ಸುಧಾರಣೆಗಳ ಪ್ರವೃತ್ತಿ ಎಲ್ಲಾ ರಾಜ್ಯಗಳಿಗೂ ವೇಗವಾಗಿ ಹರಡುತ್ತಿದೆ.
  • ಈ ಸುಧಾರಣೆಗಳು ಕೆಳಗಿನವುಗಳನ್ನು ಒಳಗೊಂಡಿದೆ –
  • ಪಾವತಿ ಮತ್ತು ಅನುಮೋದನೆಗಾಗಿ 16 ರಾಜ್ಯಗಳಲ್ಲಿ ಶೇ.100ರಷ್ಟು ಏಕ ಗವಾಕ್ಷಿ ವ್ಯವಸ್ಥೆಯ ಜಾರಿ;
  • 13 ರಾಜ್ಯಗಳಲ್ಲಿ ಶೇ.100ರಷ್ಟು ತೆರಿಗೆ ನಿರ್ಧರಣೆ ಸಲ್ಲಿಕೆಗೆ ಇ-ಫೈಲಿಂಗ್;
  • 13 ರಾಜ್ಯಗಳಲ್ಲಿ ಸ್ವಯಂಚಾಲಿತ ಆನ್ ಲೈನ್ ಕಟ್ಟಡ ನಕ್ಷೆ ಮಂಜೂರು ವ್ಯವಸ್ಥೆ;
  • ವಾಣಿಜ್ಯ ವ್ಯಾಜ್ಯಗಳ ಇ ಫೈಲಿಂಗ್ ವ್ಯವಸ್ಥೆಯನ್ನು 11 ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ;
  • 13 ರಾಜ್ಯಗಳಲ್ಲಿ ಜಿಲ್ಲಾಮಟ್ಟದಲ್ಲಿ ವಿಶೇಷ ವಾಣಿಜ್ಯ ನ್ಯಾಯಾಲಯಗಳ ಸ್ಥಾಪನೆ;

 

ಸ್ನೇಹಿತರೇ

 

ಭಾರತ ಪ್ರಸ್ತುತ ಅತ್ಯಂತ ಉದಾರೀಕೃತ ಎಫ್.ಡಿ.ಐ. ನೀತಿಯ ವ್ಯವಸ್ಥೆ ಇರುವ ರಾಷ್ಟ್ರವಾಗಿದೆ. ಶೇ.90ರಷ್ಟು ವಿದೇಶೀ ಹೂಡಿಕೆಯ ಹರಿವು ಸ್ವಯಂಚಾಲಿತ ಮಾರ್ಗದಲ್ಲಿ ಬರುತ್ತದೆ. ಎಫ್.ಡಿ.ಐ. ಪ್ರಸ್ತಾವನೆಗಳ ಪರಿಶೀಲನೆಗಾಗಿ 1990ರಲ್ಲಿ ಸ್ಥಾಪಿಸಲಾಗಿದ್ದ  ವಿದೇಶೀ ಹೂಡಿಕೆ ಉತ್ತೇಜನ ಮಂಡಳಿಯನ್ನು ನಾವು ವಿಧ್ಯುಕ್ತವಾಗಿ ರದ್ದು ಮಾಡಲು ಕಳೆದ ವಾರ ನಿರ್ಧರಿಸಿದ್ದೇವೆ. ಭಾರತೀಯ ಆರ್ಥಿಕತೆಯಲ್ಲಿ ಸಾಗರೋತ್ತರ ಹೂಡಿಕೆದಾರರ ಕಾರ್ಯಕ್ರಮವನ್ನು ವಿಸ್ತರಿಸುವುದು ಇದರ ಕಲ್ಪನೆಯಾಗಿದೆ. ಇದಕ್ಕಾಗಿ ನಮ್ಮ ಎಫ್.ಡಿ.ಐ. ಮೇಲ್ನೋಟ ಶ್ರೇಣಿಯು ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಧನಾತ್ಮಕವಾಗಿ ಮೇಲೇರಿದೆ.

 

ಕಳೆದ ಮೂರು ವರ್ಷಗಳಲ್ಲಿ ಎಫ್.ಡಿ.ಐ. ಹರಿವು ಅದ್ಭುತ ವೃದ್ಧಿ ಸಾಧಿಸಿದೆ ಮತ್ತು ಅದು 2016-17ನೇ ಸಾಲಿನಲ್ಲಿ 60 ಶತಕೋಟಿ ಅಮೆರಿಕನ್ ಡಾಲರ್ ತಲುಪಿದೆ.

ಸ್ನೇಹಿತರೇ

 

ಭಾರತ ಬೃಹತ್ ರಾಷ್ಟ್ರ. ಅಭಿವೃದ್ಧಿಯ ವಿಚಾರ ಬಂದಾಗ ಅದಕ್ಕೆ ಯಾವುದೂ ಸಾಕಾಗುವುದಿಲ್ಲ. ನಮಗೆ ಹಲವು ಕನಸುಗಳಿವೆ. ಆ ಕನಸುಗಳೂ ದೊಡ್ಡದಾಗಿವೆ. ಆದರೆ ಅದಕ್ಕೆ ಕಡಿಮೆ ಅವಧಿ ಇದೆ. ಇದು ನಮ್ಮ ಆದ್ಯತೆಯಾಗಿದೆ.

 

ಈ ಅವಕಾಶಗಳು ಲಕ್ಷಾಂತರ ಮನೆಗಳಿಂದ ನೂರಾರು ಸ್ಮಾರ್ಟ್ ನಗರ ನಿರ್ಮಾಣದವರೆಗೆ, ರೈಲ್ವೆ ಜಾಲದ ಆಧುನೀಕರಣ ಮತ್ತು ನಿಲ್ದಾಣಗಳಿಂದ ಹೈ ಸ್ಪೀಡ್ ಕಾರಿಡಾರ್ ನಿರ್ಮಾಣದವರೆಗೆ, ನವೀಕರಿಸಬಹುದಾದ ಇಂಧನ ಉತ್ಪಾದನೆಯಿಂದ ಸರಬರಾಜು ಮತ್ತು ವಿತರಣಾ ಜಾಲ ನಿರ್ಮಾಣದವರೆಗೆ ಇದೆ. ಇದರ ಜೊತೆಗೆ ರಾಷ್ಟ್ರೀಯ ಹೆದ್ದಾರಿ, ಸೇತುವೆಗಳು ಮತ್ತು ಸಮೂಹ ನಗರ ಸಾರಿಗೆ ವ್ಯವಸ್ಥೆ, ಶಾಲೆಗಳು, ಆಸ್ಪತ್ರೆ ಮತ್ತು ಕೌಶಲ ತರಬೇತಿಸಂಸ್ಥೆಗಳ ಅಗತ್ಯವೂ ಹೆಚ್ಚುತ್ತಿದೆ.

ನಾವು ಡಿಜಿಟಲ್ ಇಂಡಿಯಾ ಮತ್ತು ಕೌಶಲ ಭಾರತದಂಥ ಅಭಿಯಾನದ ಮೂಲಕ ನಮ್ಮ ಜನರಿಗೆ ಈ ಸಾಮರ್ಥ್ಯದ ಸಾಕಾರದೊಂದಿಗೆ ಸಬಲೀಕರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಯುವಜನರ ಶಕ್ತಿಯನ್ನು ಸಂಪೂರ್ಣ ಬಳಸಿಕೊಳ್ಳಲು ನಾವು ನವೋದ್ಯಮ ಭಾರತ ಮತ್ತು ಸ್ಟಾಂಡ್ ಅಪ್ ಇಂಡಿಯಾ ಅಭಿಯಾನ ಆರಂಭಿಸಿದ್ದೇವೆ.

 

ಛಾನ್ಸಲರ್ ಮಾರ್ಕಲ್ ಮತ್ತು ಸ್ನೇಹಿತರೆ, 

 

ನಾವು ಏಪ್ರಿಲ್ 2015ರಲ್ಲಿ ಮಾತನಾಡಿದಾಗ, ನಮ್ಮ ಸುಧಾರಣೆಯ ಪ್ರಕ್ರಿಯೆ ಆಗಷ್ಟೇ ಆರಂಭವಾಗಿತ್ತು. ಈಗ, ನಾನು ಅದರಲ್ಲಿ ದೊಡ್ಡ ಪ್ರಮಾಣವನ್ನು ಪೂರ್ಣಗೊಳಿಸಿದ್ದೇವೆಂದು ಧೈರ್ಯದಿಂದ ಹೇಳುತ್ತೇನೆ. ಆದಾಗ್ಯೂ, ನಾವು ಇನ್ನೂ ಹೆಚ್ಚಿನದನ್ನು ವೇಗವಾಗಿ ಮತ್ತು ಉತ್ತಮವಾಗಿ ಮಾಡಲು ಬದ್ಧರಾಗಿದ್ದೇವೆ. ನಾವು ಸಾಂಸ್ಥಿಕ ಜಾಲವನ್ನು ಸೃಷ್ಟಿಸಬೇಕು ಎಂದು ನಾನು ಬಲವಾಗಿ ನಂಬುತ್ತೇನೆ ಮತ್ತು ಅಂಥ ಸಾಧರಣೆಗೆ ಒತ್ತು ನೀಡುತ್ತೇನೆ. ನಮ್ಮ ಎರಡೂ ದೇಶಗಳ ಆರ್ಥಿಕ ಸಾಮರ್ಥ್ಯದ ಬಳಕೆಗೆ ಇದು ಅವಶ್ಯವಾಗಿದೆ. ಕೊನೆಯಲ್ಲಿ ನಾನು ಹೆಚ್ಚುಹೆಚ್ಚು ಜರ್ಮನಿಯ ಸಹೋದ್ಯೋಗಿಗಳನ್ನು ಮತ್ತು ಕಂಪನಿಗಳನ್ನು ಭಾರತಕ್ಕೆ ಆಹ್ವಾನಿಸುತ್ತೇನೆ.

 

ನಮ್ಮ ಆಶೋತ್ತರ, ದೃಷ್ಟಿಕೋನ ಮತ್ತು ಕನಸುಗಳು ಅದ್ಭುತ ವಾಣಿಜ್ಯ ಅವಕಾಶಗಳನ್ನು ಸೃಷ್ಟಿಸುತ್ತವೆ. ಭಾರತ ವಾಣಿಜ್ಯಕ್ಕೆ ಹಿಂದೆಂದಿಗಿಂತ ಹೆಚ್ಚು ಸಜ್ಜಾಗಿದೆ. ನಾವು ಉಡಾವಣೆಯ ಹಂತದಲ್ಲಿದ್ದೇವೆ. ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಸದಾ ಜಾಗೃತವಾಗಿರುವ ನ್ಯಾಯಾಂಗ ವ್ಯವಸ್ಥೆ ನಿಮ್ಮ ಹೂಡಿಕೆದಾರರ ಸುರಕ್ಷತೆಯನ್ನು ಒದಗಿಸುತ್ತಿದೆ.

 

ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲು ನಾವು ಕೈಜೋಡಿಸಿ ಶ್ರಮಿಸುತ್ತೇವೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ.

ಧನ್ಯವಾದಗಳು!

 ***

 AKT/SH/AK