Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಾಗತಿಕ ಅಸ್ತಿತ್ವ ಸ್ಥಾಪಿಸಲು ರತ್ನ ಮತ್ತು ಆಭರಣ ಕೈಗಾರಿಕೆಗೆ ಪ್ರಧಾನಿ ಕರೆ

ಜಾಗತಿಕ ಅಸ್ತಿತ್ವ ಸ್ಥಾಪಿಸಲು  ರತ್ನ ಮತ್ತು ಆಭರಣ ಕೈಗಾರಿಕೆಗೆ ಪ್ರಧಾನಿ ಕರೆ


ರತ್ನ ಮತ್ತು ಆಭರಣ ವಲಯ ದೇಶೀಯ ಮಾರುಕಟ್ಟೆಯ ಹೊರಗಿ ದೃಷ್ಟಿಯಿಟ್ಟು ಜಾಗತಿಕ ಅಸ್ತಿತ್ವ ಸ್ಥಾಪಿಸಬೇಕು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರೆ ನೀಡಿದ್ದಾರೆ.

ಅಖಿಲ ಭಾರತ ರತ್ನ ಮತ್ತು ಆಭರಣ ವ್ಯಾಪಾರ ಒಕ್ಕೂಟ ತಮಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಅವರು, ಈ ಉದ್ದೇಶ ಸಾಧನೆಗಾಗಿ ನಾವಿನ್ಯತೆ ಮತ್ತು ಕೌಶಲ ಅಭಿವೃದ್ಧಿಗೂ ಕರೆ ನೀಡಿದರು. ಕೈಯಿಂದ ಮಾಡಿದ ಆಭರಣಗಳಿಗೆ ಜಾಗತಿಕ ಬೇಡಿಕೆ ಹೆಚ್ಚಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದರು.

ಅಬಕಾರಿ ಸುಂಕಕ್ಕೆ ಸಂಬಂಧಿಸಿದ ಇತ್ತೀಚಿನ ವಿಚಾರಗಳನ್ನು ಸ್ಮರಿಸಿದ ಪ್ರಧಾನಿ, ಈ ವಿಷಯಗಳು ರತ್ನ ಮತ್ತು ಆಭರಣ ಕೈಗಾರಿಕೆಗೆ ಸರ್ಕಾರದ ಕಾರ್ಯವನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ, ಮತ್ತು ಅದೇ ರೀತಿ ಸರ್ಕಾರಕ್ಕೂ ಈ ವಲಯದ ತೊಡಕು ಅರ್ಥೈಸಿಕೊಳ್ಳುವ ಅವಕಾಶ ನೀಡಿದೆ ಎಂದರು. ಇಬ್ಬರೂ ಪರಸ್ಪರರ ಮೇಲೆ ಜಯ ಸಾಧಿಸಿದ್ದಾರೆಂದರು.

ತಮ್ಮ ಆದಾಯವನ್ನು ಘೋಷಿಸಿಕೊಳ್ಳದವರು, ಸೆಪ್ಟೆಂಬರ್ 30ರ ಗಡುವಿನೊಳಗೆ ಆದಾಯ ಘೋಷಿಸಿಕೊಳ್ಳುವಂತೆ ಪ್ರಧಾನಿ ಮನವಿ ಮಾಡಿದರು.

AKT/AK