Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಾರ್ಖಂಡ್ ನಲ್ಲಿನ ಜಾಗತಿಕ ಹೂಡಿಕೆದಾರರ ಮೇಳ 2017ಕ್ಕೆ ಶುಭ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜಾರ್ಖಂಡ್ ನಲ್ಲಿ ನಡೆದಿರುವ ಜಾಗತಿಕ ಹೂಡಿಕೆದಾರರ ಮೇಳ 2017ಕ್ಕೆ ಶುಭ ಕೋರಿದ್ದಾರೆ.

“ಇನ್ವೆಸ್ಟ್ ಜಾರ್ಖಂಡ್ ಗೆ ಶುಭಾಶಯಗಳು. ಈ ಶೃಂಗದಲ್ಲಿ ನಡೆಯಲಿರುವ ಚರ್ಚೆಗಳ ಫಲಶ್ರುತಿ ಜಾರ್ಖಂಡ್ ಪ್ರಗತಿಗೆ ಕೊಡುಗೆ ನೀಡುವಂತಾಗಲಿ.

ಇನ್ವೆಸ್ಟ್ ಜಾರ್ಖಂಡ್ ನಲ್ಲಿ ಆಗುವ ಹೂಡಿಕೆ ರಾಜ್ಯದ ಜನತೆಗೆ ಹಲವು ಅವಕಾಶಗಳನ್ನು ತರಲಿದೆ ಮತ್ತು ಅವರ ಆಶೋತ್ತರಗಳಿಗೆ ರೆಕ್ಕೆಯನ್ನು ಮೂಡಿಸಲಿದೆ.

ಜಾರ್ಖಂಡ್ ಜನತೆಯ ಕೌಶಲ ಮತ್ತು ನಿರ್ಣಯಗಳು ಹಾಗೂ ಜಾರ್ಖಂಡ್ ಪರವಾದ ಸರ್ಕಾರದ ಪ್ರಯತ್ನಗಳು ರಾಜ್ಯದಲ್ಲಿ ದಾಖಲೆಯ ಅಭಿವೃದ್ಧಿಯನ್ನು ತರುತ್ತಿವೆ.”, ಎಂದು ಪ್ರಧಾನಿ ತಿಳಿಸಿದ್ದಾರೆ..

***