ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾಮೂಹಿಕವಾಗಿ ಬಳಸುವ ದೊಡ್ಡ ಸಂಖ್ಯೆಯ ಪದಾರ್ಥಗಳ ಮೇಲಿನ ಜಿಎಸ್ಟಿ ದರಗಳನ್ನು ನಿನ್ನೆಯಿಂದ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ತತ್ ಕ್ಷಣದಿಂದ ಅದರ ಅನುಸರಣೆಗಾಗಿ
ಜಿಎಸ್ಟಿ ಅಡಿಯಲ್ಲಿ ರಾಷ್ಟ್ರೀಯ ಲಾಭಕೋರತನ ವಿರೋಧಿ ಪ್ರಾಧಿಕಾರ (ಎನ್.ಎ.ಎ.)ದ ಅಧ್ಯಕ್ಷರು ಮತ್ತು ತಾಂತ್ರಿಕ ಸದಸ್ಯ ಹುದ್ದೆ ಸೃಷ್ಟಿಗೆ ತನ್ನ ಅನುಮೋದನೆ ನೀಡಿದೆ. ಇದು ಈ ಸರ್ವೋಚ್ಚ ಕಾಯವನ್ನು ತತ್ ಕ್ಷಣವೇ ಸ್ಥಾಪಿಸಲು ದಾರಿ ಮಾಡಿಕೊಡಲಿದ್ದು, ಸರಕು ಅಥವಾ ಸೇವೆಗಳಲ್ಲಿ ಕಡಿತ ಮಾಡಿರುವ ಜಿಎಸ್ಟಿ ದರದ ಲಾಭ ಕಟ್ಟ ಕಡೆಯ ಗ್ರಾಹಕನಿಗೆ ದೊರಕುವುದನ್ನು ಖಾತ್ರಿಪಡಿಸಿಕೊಳ್ಳಲಿದೆ.
ಸ್ಥಾಪನೆಯಾಗಲಿರುವ ಎನ್.ಎ.ಎ.ಯ ನೇತೃತ್ವವನ್ನು ಭಾರತ ಸರ್ಕಾರದ ಕಾರ್ಯದರ್ಶಿ ಮಟ್ಟದ ಹಿರಿಯ ಅಧಿಕಾರಿ ವಹಿಸಲಿದ್ದು, ಕೇಂದ್ರ ಮತ್ತು/ಅಥವಾ ರಾಜ್ಯಗಳ ನಾಲ್ವರು ತಾಂತ್ರಿಕ ಸದಸ್ಯರಿರುತ್ತಾರೆ, ಜಿಎಸ್ಟಿಯ ಜಾರಿಯಿಂದ ಸರಕು ಮತ್ತು ಸೇವೆಗಳ ದರ ಇಳಿಕೆಯ ಲಾಭ ಗ್ರಾಹಕರಿಗೆ ತಲುಪುವುದನ್ನು ಖಾತ್ರಿ ಪಡಿಸಿಕೊಳ್ಳಲು ಸರ್ಕಾರ ಎಲ್ಲ ಸಾಧ್ಯ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿರುವ ನಿಟ್ಟಿನಲ್ಲಿ ಮತ್ತೊಂದು ಕ್ರಮವಾಗಿದೆ.
2017ರ ನವೆಂಬರ್ 14ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ 178 ಸರಕುಗಳ ಮೇಲಿದ್ದ ಶೇ.28ರಷ್ಟು ಜಿ.ಎಸ್.ಟಿ.ದರವನ್ನು ಶೇ.18ಕ್ಕೆ ಇಳಿಕೆ ಮಾಡಲಾಗಿದೆ ಎಂಬುದನ್ನು ಸ್ಮರಿಸಬಹುದು. ಇದರೊಂದಿಗೆ ಈಗ ಕೇವಲ 50 ಸರಕುಗಳು ಮಾತ್ರವೇ ಶೇ.28ರ ಜಿಎಸ್ಟಿ ವ್ಯಾಪ್ತಿಯಲ್ಲಿವೆ. ಅದೇ ರೀತಿ ದೊಡ್ಡ ಸಂಖ್ಯೆಯ ವಸ್ತುಗಳ ಜಿಎಸ್ಟಿ ದರವನ್ನು ಶೇ.18ರಿಂದ 12ಕ್ಕೆಇಳಿಕೆಯನ್ನು ಕಂಡಿವೆ ಮತ್ತು ಕೆಲವು ವಸ್ತುಗಳು ಜಿಎಸ್ಟಿಯಿಂದ ವಿನಾಯತಿ ಪಡೆದಿವೆ.ಲಾಭಕೋರತನ ವಿರೋಧಿ ಕ್ರಮಗಳು ಜಿಎಸ್ಟಿ ಕಾನೂನಿನಲ್ಲಿ ಅಳವಡಿಸಲಾಗಿದ್ದು, ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಮತ್ತು ಜಿಎಸ್ಟಿ ದರ ಕಡಿತದ ಸಂಪೂರ್ಣ ಲಾಭ ಸರಕು ಅಥವಾ ಸೇವೆಯ ಹರಿವಿನಲ್ಲಿ ಗ್ರಾಹಕರಿಗೆ ದೊರಕಿಸುವುದನ್ನು ಖಾತ್ರಿಪಡಿಸಲು ಅದಕ್ಕೆ ಸಾಂಸ್ಥಿಕ ಸ್ವರೂಪ ನೀಡಲಾಗಿದೆ. ಎನ್.ಎ.ಎ.ಯ ಈ ಸಾಂಸ್ಥಿಕ ಚೌಕಟ್ಟು, ಒಂದು ಸ್ಥಾಯಿ ಸಮಿತಿ, ಪ್ರತಿ ರಾಜ್ಯದಲ್ಲೂ ಸ್ಕ್ರೀನಿಂಗ್ ಸಮಿತಿ ಮತ್ತು ಅಬಕಾರಿ ಮತ್ತು ಸೀಮಾ ಸುಂಕ ಕುರಿತ ಕೇಂದ್ರೀಯ ಮಂಡಳಿಯಲ್ಲಿ (ಸಿಬಿಇಸಿ) ಸಂರಕ್ಷಣೆ ಕುರಿತ ಮಹಾ ನಿರ್ದೇಶನಾಲಯವನ್ನು ಒಳಗೊಂಡಿರುತ್ತದೆ.
ಬಾಧಿತ ಗ್ರಾಹಕರಿಗೆ, ತಾವು ಯಾವುದೇ ಸರಕು ಮತ್ತು ಸೇವೆಯನ್ನು ಖರೀದಿಸಿದಾಗ, ಕಡಿತಗೊಳಿಸಲಾದ ದರದ ಲಾಭ ತಮಗೆ ಸಿಗಲಿಲ್ಲ ಎಂದು ಅನಿಸಿದಲ್ಲಿ, ಅವರು, ಆಯಾ ರಾಜ್ಯದ ಸ್ಕ್ರೀನಿಂಗ್ ಸಮಿತಿಯಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ. ಆದಾಗ್ಯೂ,ಲಾಭಕೋರತನ ಘಟನೆಯು ‘ಅಖಿಲ ಭಾರತ’ ವಿಘಟನೆಯೊಂದಿಗೆ ಸಾಮೂಹಿಕ ಪ್ರಭಾವದ ವಿಷಯಕ್ಕೆ ಸಂಬಂಧಿಸಿದ್ದಾದರೆ, ಆಗ ಅರ್ಜಿಯನ್ನು ನೇರವಾಗಿ ಸ್ಥಾಯಿ ಸಮಿತಿಗೆ ನೀಡಬಹುದು. ಮೇಲ್ನೋಟಕ್ಕೆ ಲಾಭಕೋರತನ ಗೋಚರಿಸಿದರೆ, ಸ್ಥಾಯಿ ಸಮಿತಿಯು, ವಿವರವಾದ ತನಿಖೆಗಾಗಿ ಸಂರಕ್ಷಣೆ ಕುರಿತ ಮಹಾ ನಿರ್ದೇಶನಾಲಯಕ್ಕೆ ಶಿಫಾರಸು ಮಾಡಬಹುದು, ಅದು ತನ್ನ ಅಭಿಪ್ರಾಯಗಳನ್ನು ಎನ್.ಎ.ಎ.ಗೆ ತಿಳಿಸುತ್ತದೆ.
ಎನ್.ಎ.ಎ. ಲಾಭಕೋರತನ ನಿಗ್ರಹಕ್ಕೆ ಕ್ರಮ ಅಗತ್ಯ ಎಂದು ಖಾತ್ರಿಪಡಿಸಿದಲ್ಲಿ, ಆಗ ಸರಕು ಅಥವಾ ಸೇವೆ ಪಡೆದ ಅರ್ಜಿದಾರನಿಗೆ ವಿತರಕರು/ಸಂಬಂಧಿತ ವಾಣಿಜ್ಯವು ತಾನು ಪಡೆದ ಅನಗತ್ಯ ಲಾಭದ ಹಣವನ್ನು ಬಡ್ಡಿ ಸಹಿತ ಹಿಂತಿರುಗಿಸಲು ಅಥವಾ ದರ ಇಳಿಕೆ ಮಾಡುವಂತೆ ಅದಕ್ಕೆ ಸೂಚಿಸಬಹುದು. ಅನಗತ್ಯ ಲಾಭವನ್ನು ಗ್ರಾಹಕನಿಗೆ ವರ್ಗಾಯಿಸಲು ಆಗದಿದ್ದಲ್ಲಿ, ಗ್ರಾಹಕ ಕಲ್ಯಾಣ ನಿಧಿಗೆ ಅದನ್ನು ಠೇವಣಿ ಮಾಡಲೂ ಆದೇಶಿಸಬಹುದು. ವಿಶೇಷ ಪ್ರಕರಣಗಳಲ್ಲಿ, ತಪ್ಪೆಸಗಿದ ವಾಣಿಜ್ಯ ಕಾಯಗಳಿಗೆ ದಂಡ ವಿಧಿಸಲು ಮತ್ತು ಜಿಎಸ್ಟಿ ಅಡಿಯಲ್ಲಿ ಅದರ ನೋಂದಣಿಯನ್ನು ರದ್ದುಗೊಳಿಸಲು ಆದೇಶಿಸುವ ಅಧಿಕಾರ ಎನ್.ಎ.ಎ.ಗೆ ಇದೆ.
ಎನ್.ಎ.ಎ. ಸ್ಥಾಪನೆಯು, ಇತ್ತೀಚಿನ ಜಿಎಸ್ಟಿ ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ಅವರಲ್ಲಿ ಜಿಎಸ್ಟಿ ಬಗ್ಗೆ ವಿಶ್ವಾಸವನ್ನು ವೃದ್ಧಿಸುತ್ತದೆ.
***
GST anti-profiteering authority gets Cabinet approval. https://t.co/w2ePB3q0LU
— PMO India (@PMOIndia) November 17, 2017
via NMApp pic.twitter.com/gk1wLPuQWS