Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಿ.ಸಿ.ಸಿ.ಎಸ್ 2017 ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ


ಗೌರವಾನ್ವಿತರಾದ, ಶ್ರೀಲಂಕಾದ ಪ್ರಧಾನಮಂತ್ರಿಗಳಾದ ಶ್ರೀ ರನಿಲ್ ವಿಕ್ರಮಸಿಂಘೆ ಅವರೇ

ಭಾರತದ ಮತ್ತು ವಿದೇಶದ ಮಂತ್ರಿಗಳೇ

ಐ.ಟಿ.ಯು.ನ ಮಹಾಪ್ರಧಾನ ಕಾರ್ಯದರ್ಶಿಗಳೇ

ಇತರ ವಿಶೇಷ ಅತಿಥಿ ಗಣ್ಯರೇ

120 ದೇಶಗಳಿಂದ ಬಂದಿರುವ ಪ್ರತಿನಿಧಿಗಳೇ,

ವಿದ್ಯಾರ್ಥಿಗಳೇ,

ಮಹಿಳೆಯರೇ ಮತ್ತು ಮಹನೀಯರೇ.

   ಸೈಬರ್ ಅವಕಾಶ (ಸೈಬರ್ ಸ್ಪೇಸ್) ಕುರಿತ ಜಾಗತಿಕ ಸಮ್ಮೇಳನಕ್ಕಾಗಿ ಹೊಸದಿಲ್ಲಿಗೆ ಬಂದಿರುವ ನಿಮಗೆಲ್ಲಾ ನಾನು ಸ್ವಾಗತ ಕೋರುತ್ತೇನೆ. ಅಂತರ್ಜಾಲದ ಮೂಲಕ ವಿಶ್ವದ ಮೂಲೆ ಮೂಲೆಗಳಿಂದ ಈ ಕಾರ್ಯಕ್ರಮಕ್ಕೆ ಸಂಪರ್ಕಗೊಂಡಿರುವವರಿಗೂ ನಾನು ಸ್ವಾಗತ ಕೋರುತ್ತೇನೆ.

 

ಸ್ನೇಹಿತರೇ.

   ಕಳೆದ ಕೆಲವು ದಶಕಗಳಲ್ಲಿ ಸೈಬರ್ ಅವಕಾಶ ವಿಶ್ವವನ್ನು ಹೇಗೆ ಬದಲಾಯಿಸಿದೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಇಲ್ಲಿರುವ ಹಿರಿಯ ತಲೆಮಾರು ಎಪ್ಪತ್ತರ ಮತ್ತು ಎಂಬತ್ತರ ದಶಕದಲ್ಲಿದ್ದ ದೊಡ್ದದಾದ ಕಂಪ್ಯೂಟರ್ ವ್ಯವಸ್ಥೆಯನ್ನು ನೆನಪಿಸಿಕೊಳ್ಳುತ್ತಿರಬಹುದು. ಆ ಬಳಿಕ ಬಹಳ ಬದಲಾವಣೆಗಳಾಗಿವೆ. ತೊಂಬತ್ತರಲ್ಲಿ  ಇ-ಮೈಲ್ (ಮಿಂಚಂಚೆ) ಮತ್ತು ವೈಯಕ್ತಿಕ ಕಂಪ್ಯೂಟರುಗಳು (ಪಿ.ಸಿ.) ಗಳು ಹೊಸ ಕ್ರಾಂತಿಯನ್ನು ತಂದಿವೆ. ಇದನ್ನು ಅನುಸರಿಸಿ ಸಾಮಾಜಿಕ ಮಾಧ್ಯಮಗಳೂ ಜನ್ಮತಾಳಿ ಬೆಳೆದವು ಮತ್ತು ಮೊಬೈಲ್ ಫೋನ್  ಸಂಪರ್ಕ ಹಾಗು ದತ್ತಾಂಶ ಸಂಗ್ರಹದ ಮುಖ್ಯ ವಾಹಕವಾಯಿತು. ಅಂತರ್ಜಾಲದ ಅಭಿವ್ಯಕ್ತಿಯಾಗಿ ಹಲವು ಹೊಸ ಕಲ್ಪನೆಗಳು ಬಂದವು. ಮತ್ತು ಕೃತಕ ಬುದ್ಧಿಮತ್ತೆ ಈಗ ಸಾಮಾನ್ಯ ಸಂಗತಿಯ ಸಾಲಿಗೆ ಸೇರಿದೆ. ಇದರ ಸೂಚನೆ ಏನೆಂದರೆ ಬದಲಾವಣೆಗಳು ಮುಂದುವರಿಯುತ್ತವೆ ಮತ್ತು ಅವು ಬಹಳ ವೇಗದಿಂದ ಸಂಭವಿಸುತ್ತವೆ.

 ಡಿಜಿಟಲ್ ಕ್ಷೇತ್ರದಲ್ಲಿ ಈ ತ್ವರಿತ ಗತಿಯ ಬೆಳವಣಿಗೆಗಳು ಭಾರತದಲ್ಲಿಯೂ ಬದಲಾವಣೆಗಳನ್ನು ಪ್ರತಿಫಲಿಸಿವೆ. ಭಾರತದ ಮಾಹಿತಿ ತಂತ್ರಜ್ಞಾನ ಪ್ರತಿಭೆಗಳು ವಿಶ್ವವ್ಯಾಪೀ ಮನ್ನಣೆ ಪಡೆದಿವೆ. ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಜಾಗತಿಕವಾಗಿ ತಮ್ಮ ಹೆಸರನ್ನು ಸ್ಥಾಪಿಸಿಕೊಂಡಿವೆ.

  ಇಂದು ಡಿಜಿಟಲ್ ತಂತ್ರಜ್ಞಾನ ದೊಡ್ಡ ಶಕ್ತಿಯಾಗಿ , ಸಾಮರ್ಥ್ಯವಾಗಿ ಮೂಡಿ ಬಂದಿದೆ. ಇದು ಸಮರ್ಥ ಸೇವಾ ಪೂರೈಕೆ ವ್ಯವಸ್ಥೆ ಮತ್ತು ಆಡಳಿತ, ಮೇಲುಸ್ತುವಾರಿ ವ್ಯವಸ್ಥೆಗೆ ಹಾದಿ ಮಾಡಿಕೊಟ್ಟಿದೆ. ಅದು ಶಿಕ್ಷಣದಿಂದ ಹಿಡಿದು ಆರೋಗ್ಯ ಕ್ಶೇತ್ರದವರೆಗೆ ಎಲ್ಲಾ ಕಾರ್ಯಕ್ಷೇತ್ರಗಳಲ್ಲೂ  ಸಂಪರ್ಕ/ಲಭ್ಯತೆಯ ಅವಕಾಶವನ್ನು ಸುಧಾರಿಸಿದೆ. ಮತ್ತು ಅದು ವ್ಯಾಪಾರೋದ್ಯಮದ ಭವಿಷ್ಯ  ಮತ್ತು ಆರ್ಥಿಕತೆಯನ್ನು ರೂಪಿಸಲು ಸಹಾಯ ಮಾಡುತ್ತಿದೆ. ಮತ್ತು ಈ ಪ್ರತೀ ಹಾದಿಗಳ ಮೂಲಕ ಅದು ಸಮಾಜದ ಅಂಚಿನಲ್ಲಿರುವ, ದುರ್ಬಲ ವಲಯಗಳಿಗೂ ಸಮಾನ ಸ್ಪರ್ಧೆಯ ಅವಕಾಶವನ್ನು ಒದಗಿಸಿದೆ. ವಿಸ್ತಾರ ವ್ಯಾಪ್ತಿಯಲ್ಲಿ ಗಮನಿಸಿದಾಗ , ಅದು ಚಪ್ಪಟೆ ಅಥವಾ ಸಮಾನಾಂತರ ವಿಶ್ವ ರೂಪುಗೊಳ್ಳಲು ಕೊಡುಗೆ ಕೊಡುತ್ತಿದೆ .ಇಲ್ಲಿ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳು, ಅಭಿವೃದ್ಧಿ ಹೊಂದಿದ ದೇಶಗಳ ಜತೆ  ಸಮಾನ ನೆಲೆಯಲ್ಲಿ ಸ್ಪರ್ಧಿಸಬಹುದಾಗಿದೆ.

  ಸ್ನೇಹಿತರೇ.

 ತಂತ್ರಜ್ಞಾನ ವಿಭಜನೆಯ ಗೋಡೆಗಳನ್ನು , ತಡೆಬೇಲಿಗಳನ್ನು ಒಡೆದು ಹಾಕಿದೆ. ಅದು ವಿಶ್ವವೇ ಒಂದು ಕುಟುಂಬ ಎಂಬ ಭಾರತೀಯ ತತ್ವವಾದ “ವಸುದೈವ ಕುಟುಂಬಕಂ”ನ್ನು ನಂಬುವ ನಮ್ಮ ಸಿದ್ಧಾಂತವನ್ನು ಅದು ಪುಷ್ಟೀಕರಿಸುತ್ತದೆ. ಈ ಭಾವನೆ/ವಿವರಣೆ ನಮ್ಮ ಪ್ರಾಚೀನ ಮತ್ತು ಒಳಗೊಳ್ಳುವ ಸಂಪ್ರದಾಯವನ್ನು ಪ್ರತಿಫಲಿಸುತ್ತದೆ. ತಂತ್ರಜ್ಞಾನದ ಮೂಲಕ , ನಾವು ಈಗ ಈ ಭಾವನೆಗೆ ಅರ್ಥ ಕೊಡಲು ಸಮರ್ಥರಾಗಿದ್ದೇವೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯ್ಗಗಳಿಗೆ ಕೂಡಾ ನಿಶ್ಚಯವಾಗಿ ಅರ್ಥ ಕೊಡಲು ಅರ್ಹತೆ ಹೊಂದಿದ್ದೇವೆ.

  ನಾವು ಭಾರತದಲ್ಲಿ ತಂತ್ರಜ್ಞಾನದ ಮಾನವೀಯ ಮುಖಕ್ಕೆ ಸರ್ವೋತ್ಕೃಷ್ಟತೆಯನ್ನು ಕೊಡುತ್ತೇವೆ. ಮತ್ತು ಅದನ್ನು “ಜೀವಿಸಲು ಅನುಕೂಲಕರ ವಾತಾವರಣ” ನಿರ್ಮಿಸಲು ಬಳಸುತ್ತೇವೆ. ಡಿಜಿಟಲ್ ವ್ಯವಸ್ಥೆ ಲಭ್ಯತೆಯ ಮೂಲಕ ಸಶಕ್ತೀಕರಣ ಭಾರತ ಸರಕಾರದ ಪ್ರಮುಖ ಉದ್ದೇಶವಾಗಿದ್ದು, ವಿಶೇಷವಾಗಿ  “ಡಿಜಿಟಲ್ ಇಂಡಿಯಾ”ವು ವಿಶ್ವದ ಅತ್ಯಂತ ದೊಡ್ಡ ತಂತ್ರಜ್ಞಾನ ಆಧಾರಿತ ಪರಿವರ್ತನಾ ಕಾರ್ಯಕ್ರಮವಾಗಿದ್ದು, ನಮ್ಮ ನಾಗರಿಕರಿಗೆ ಡಿಜಿಟಲ್ ಸೇವೆಗಳನ್ನು ಒದಗಿಸುವ ಮಹತ್ವಾಕಾಂಕ್ಷೆ ಹೊಂದಿದೆ.. ನಾವು ಮೊಬೈಲ್ ಶಕ್ತಿಯನ್ನು ಅಥವಾ ಎಂ-ಶಕ್ತಿಯನ್ನು ನಾಗರಿಕರ ಸಶಕ್ತೀಕರಣಕ್ಕಾಗಿ ಬಳಸುತ್ತಿದ್ದೇವೆ.

 ನನಗೆ ಖಚಿತವಿದೆ, ನಿಮ್ಮಲ್ಲಿ ಹೆಚ್ಚಿನವರಿಗೆಲ್ಲಾ ಆಧಾರ್ ಬಗ್ಗೆ ಈಗಾಗಲೇ ಗೊತ್ತಿರಬಹುದು, ಇದೊಂದು ವ್ಯಕ್ತಿಯ ವಿಶೇಷ ಬಯೋಮೆಟ್ರಿಕ್ ಗುರುತಿಸುವಿಕೆ. ನಾವು ಈ ಗುರುತಿಸುವಿಕೆ ತಂತ್ರಜ್ಞಾನವನ್ನು ನಮ್ಮ ಜನರನ್ನು ಸರತಿಯ ಸಾಲಿನಿಂದ ಪಾರು ಮಾಡಲು ಮತ್ತು ತೊಡಕಿನ ಪ್ರಕ್ರಿಯೆಗಳಿಂದ ಪಾರು ಮಾಡಲು ಬಳಸಿದ್ದೇವೆ. ಇದರಲ್ಲಿ ಮೂರು ಅಂಶಗಳಿವೆ: ಮೊದಲನೇಯದ್ದು, ನಮ್ಮ ಜನ ಧನ ಬ್ಯಾಂಕ್ ಖಾತೆಗಳ ಮೂಲಕ ಹಣಕಾಸು ಸೇರ್ಪಡೆ; ಎರಡನೇಯದ್ದು ಆಧಾರ್ ವೇದಿಕೆ ಮತ್ತು ಮೂರನೇಯದ್ದು ಮೊಬೈಲ್ ಫೋನ್, ಇವು ಭ್ರಷ್ಟಾಚಾರವನ್ನು ದೊಡ್ಡ ಪ್ರಮಾಣದಲ್ಲಿ ಇಳಿಸಲು ಸಹಾಯ ಮಾಡಿವೆ. ನಾವು ಇವುಗಳನ್ನು ಜೆ.ಎ.ಎಂ ಅಥವಾ ಜಾಮ್ ತ್ರೀತ್ರಯ ಎನ್ನುತ್ತೇವೆ. ಸಬ್ಸಿಡಿಗಳ ಮೇಲೆ ಗುರಿ ಇಡುವ ಮೂಲಕ ಈ ಜಾಮ್ ತ್ರೀತ್ರಯ ವ್ಯವಸ್ಥೆ ಸುಮಾರು 10 ಬಿಲಿಯನ್ ಡಾಲರುಗಳ ಸೋರಿಕೆಯನ್ನು ಇದುವರೆಗೆ ತಡೆಹಿಡಿದಿದೆ. 

  ಡಿಜಿಟಲ್ ತಂತ್ರಜ್ಞಾನ ಹೇಗೆ “ಜೀವಿಸಲು ಅನುಕೂಲಕರ ವಾತಾವರಣ” ನಿರ್ಮಾಣ ಮಾಡಲು ಅನುಕೂಲಕರವಾಗಿದೆ ಎಂಬುದರ ಕುರಿತಂತೆ ಕೆಲವು ಉದಾಹರಣೆಗಳನ್ನು ನಾನು ಹಂಚಿಕೊಳ್ಳುತ್ತೇನೆ.

  ಇಂದು ರೈತರು ಹಲವಾರು ಸೇವೆಗಳನ್ನು ಇದರ ಮೂಲಕ ಪಡೆಯಬಹುದಾಗಿದೆ. ಮಣ್ಣಿನ ಪರೀಕ್ಷೆಯ ಫಲಿತಾಂಶ, ತಜ್ಞರ ಸಲಹೆ , ಮತ್ತು ಅವರ ಉತ್ಪಾದನೆಗೆ ಉತ್ತಮ ಬೆಲೆಯನ್ನು ಗುಂಡಿಯೊಂದನ್ನು ಒತ್ತುವ ಮೂಲಕ ಪಡೆಯಬಹುದು. ಆದ್ದರಿಂದ ಡಿಜಿಟಲ್ ತಂತ್ರಜ್ಞಾನ ಕೃಷಿ ಆದಾಯ ಹೆಚ್ಚಳಕ್ಕೂ ಕಾಣಿಕೆ ಕೊಡುತ್ತಿದೆ.

 

(ಮುಂದಿನ ಭಾಗ ಭಾಷಾಂತರ ಹಂತದಲ್ಲಿದ್ದು ಸಂಪೂರ್ಣ ಪಠ್ಯ ಕೆಲವೇ ನಿಮಿಷಗಳಲ್ಲಿ ಪ್ರಕಟಗೊಳ್ಳಲಿದೆ)

 

###