Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜೋಹಾನ್ಸ್ ಬರ್ಗ್ ನಲ್ಲಿ ಸಮುದಾಯದ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿಯವರು ಮಾಡಿದ ಭಾಷಣ , 08 ಜುಲೈ 2016

ಜೋಹಾನ್ಸ್ ಬರ್ಗ್ ನಲ್ಲಿ ಸಮುದಾಯದ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿಯವರು ಮಾಡಿದ ಭಾಷಣ  , 08 ಜುಲೈ 2016


ನಮಸ್ತೆ ,

ಇಲ್ಲಿ ಹಾಜರಿರುವ ಎಲ್ಲರಿಗೂ,

ವಿವಿಧ ರಾಜಕೀಯ ಪಕ್ಷಗಳ ನಾಯಕರೇ,

ಸೋದರರೇ ಮತ್ತು ಸೋದರಿಯರೇ,

ಸನಿಬೋನಾನಿ, ನಮಸ್ಕಾರ್, ವಣಕ್ಕಂ, ಕೇಮ್ಚೋ..

ದಕ್ಷಿಣ ಆಫ್ರಿಕಾದಲ್ಲಿ ಇರಲು ನನಗೆ ಸಂತಸವಾಗುತ್ತಿದೆ.

ಇಲ್ಲಿ ಬಂದು ನಿಮ್ಮೆಲ್ಲರನ್ನೂ ಭೇಟಿ ಆಗುತ್ತಿರುವುದು ಸಂತಸದ ವಿಷಯವಾಗಿದೆ. ನೀವೆಲ್ಲರೂ ನನ್ನನ್ನು ಹರಸಲು ದೂರ ದೂರದಿಂದ ಬಂದಿದ್ದೀರಿ. ನಿಮ್ಮೆಲ್ಲರನ್ನೂ ಭೇಟಿ ಮಾಡುವ ಸೌಭಾಗ್ಯ ನನಗೆ ದೊರೆತಿದೆ, ಜೋಹಾನ್ಸ್ ಬರ್ಗ್, ಡರ್ಬನ್, ಬ್ಲೋಯೆಂಫಾಂಟೇನ್, ಕೇಪ್ ಟೌನ್ ನಿಂದ …

ಮತ್ತು ಇನ್ನೂ ಕೆಲವರು ಬೋಟ್ಸ್ವಾನಾ ಮತ್ತು ಲೆಥೋಸೊ ಪ್ರದೇಶದಿಂದ ಬಂದಿದ್ದೀರಿ.

ನಾನು ನಿಮ್ಮೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ನೀವೆಲ್ಲರೂ ನಿಮ್ಮ ನಿಮ್ಮ ಕೆಲಸದಲ್ಲಿ ನಿರತರಾಗಿದ್ದೀರಿ ಹಾಗೂ ನಿಮಗೆ ನಿಮ್ಮದೇ ಜವಾಬ್ದಾರಿಗಳಿವೆ. ಆದಾಗ್ಯೂ ನೀವೆಲ್ಲರೂ ನಿಮ್ಮ ಕಾರ್ಯಕ್ರಮದ ನಡುವೆ ಬಿಡುವು ಮಾಡಿಕೊಂಡು ನನ್ನನ್ನು ಭೇಟಿ ಮಾಡಲು ಬಂದಿದ್ದೀರಿ ಧನ್ಯವಾದಗಳು.

ನನ್ನನ್ನು ಆತ್ಮೀಯವಾಗಿ ಹಾಗೂ ಮಮಕಾರದಿಂದ ಬರಮಾಡಿಕೊಂಡಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತ್ಯಾದರಗಳು ಈ ದೇಶಕ್ಕೆ ನಾನು ನೀಡಿದ ಭೇಟಿಯನ್ನು ವಿಶೇಷಗೊಳಿಸಿವೆ. ವಿಶಾಲವಾದ ಹಿಂದೂ ಮಹಾಸಾಗರದಾಚೆಯಿಂದ ನಾನು ನನ್ನೊಂದಿಗೆ 125 ಕೋಟಿ ಜನರ ಸ್ನೇಹ ಮತ್ತು ಶುಭ ಹಾರೈಕೆ ತಂದಿದ್ದೇನೆ.

ನನ್ನ ಭೇಟಿ ಆರಂಭಿಸುವ ಮುನ್ನ ನಾನು ನಿಮ್ಮೆಲ್ಲರಿಗೂ ವೈಯಕ್ತಿಕವಾಗಿ ಇ ಮೇಲ್ ಮಾಡಿ, ನನ್ನ ಇಂದಿನ ಭಾಷಣಕ್ಕೆ ನಿಮ್ಮ ಸಲಹೆ ಮತ್ತು ಕಲ್ಪನೆಗಳನ್ನು ಆಹ್ವಾನಿಸಿದ್ದೆ. ನರೇಂದ್ರ ಮೋದಿ ಆಪ್ ನಲ್ಲಿ ನಾನು ಸಾವಿರಾರು ನಾವಿನ್ಯತೆಯಿಂದ ಕೂಡಿದ ಮತ್ತು ಉಪಯುಕ್ತ ಸಲಹೆಗಳನ್ನು ಸ್ವೀಕರಿಸಿದೆ. ಈ ಎಲ್ಲವೂ ಇಂದು ನಾನು ನಿಮ್ಮೊಂದಿಗೆ ಉತ್ಕೃಷ್ಟವಾಗಿ ಸಂವಾದ ನಡೆಸಲು ಸಹಕಾರಿಯಾಯಿತು.

ಸ್ನೇಹಿತರೆ,

• ನಾವು ದೂರದ ತೀರಗಳಲ್ಲಿ ವಾಸಿಸುತ್ತಿರಬಹುದು;

• ವಿಭಿನ್ನ ಕಾಲಮಾನದಲ್ಲಿರಬಹುದು; ಮತ್ತು

•ವಿಭಿನ್ನ ಗೋಳಾರ್ಧದಲ್ಲಿರಬಹುದು;

•ನಮ್ಮ ಪೂರ್ವಜರು ಇತಿಹಾಸದಲ್ಲಿ ಪ್ರತ್ಯೇಕಗೊಂಡಿರಬಹುದು;

•ನಮ್ಮ ರಾಷ್ಟ್ರೀಯತೆಗಳು ಬೇರೆಯದೇ ಇರಬಹುದು; ಮತ್ತು

•ಬೇರೆ ಬೇರೆ ಕ್ರಿಕೆಟ್ ತಂಡಗಳಿಗೆ ನಮ್ಮ ಬೆಂಬಲ ಇರಬಹುದು

ಆದರೆ, ನಮ್ಮ ಸಮಾನ ಸಂಸ್ಕೃತಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆ ನಾವು ಹತ್ತಿರವಾಗಿ ಮತ್ತು ಸಂಪರ್ಕಿತವಾಗಿರುವುದನ್ನು ಖಾತ್ರಿಪಡಿಸಿದೆ. ಅದೂ ನಮ್ಮ ಹೃದಯದಲ್ಲಿ ಮತ್ತು ಮನದಲ್ಲಿ.

ಸ್ನೇಹಿತರೇ,

ನಾಡಿದ್ದು, ಜುಲೈ 10. ಆ ದಿನದ ಮಹತ್ವವನ್ನು ನೀವು ಬಲ್ಲವರಾಗಿದ್ದೀರಿ. 1991ರ ಈ ದಿನ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮೇಲೆ ಹೇರಲಾಗಿದ್ದ ಅಂತಾರಾಷ್ಟ್ರೀಯ ನಿಷೇಧ ತೆಗೆಯಲಾಯಿತು. ಮತ್ತು ಅದಾದ ಕೆಲವು ತಿಂಗಳುಗಳ ಬಳಿಕ ದಕ್ಷಿಣ ಆಫ್ರಿಕಾ ತಂಡವು ತನ್ನ ಮೊದಲ ಕ್ರಿಕೆಟ್ ಪಂದ್ಯವನ್ನು ಭಾರತದೊಂದಿಗೆ ಆಡಿತು.

ವಿಭಿನ್ನ ದೃಷ್ಟಿಕೋನದ ಬಗ್ಗೆ ಗಮನ ಹರಿಸಿ, ವರ್ಣಭೇದವಿದ್ದ ಅವಧಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಬಹಿಷ್ಕರಿಸಿದ್ದ ಭಾರತ, ವರ್ಣಭೇದ ರಹಿತ ದಕ್ಷಿಣ ಆಫ್ರಿಕಾವನ್ನು ಮೊದಲು ಒಪ್ಪಿದ್ದೂ ಭಾರತವೇ.

ಸ್ನೇಹಿತರೆ,

ನಾನು ನಿಮ್ಮನ್ನು ನೋಡಿದಾಗ, ನಿಮ್ಮ ಪೂರ್ವಜರು ಅನುಭವಿಸಿರಬಹುದಾದ ನೋವನ್ನು ನಾನು ಸ್ಮರಿಸಿಕೊಳ್ಳುತ್ತೇನೆ, ಅವರು ತೋರಿದ ಧೈರ್ಯಕ್ಕೆ ನಾನು ಗೌರವ ನೀಡುತ್ತೇನೆ.

ಶತಮಾನಗಳ ಹಿಂದೆ, ನಮ್ಮ ಪೂರ್ವಜರು ಕೂಡ ದಕ್ಷಿಣ ಆಫ್ರಿಕಾದ ಅಪರಿಚಿತ ತೀರಗಳಿಗೆ ಪ್ರಯಾಣ ಮಾಡಿದ್ದಾರೆ. ಅವರು ಹಲವು ಕಷ್ಟ ಮತ್ತು ತೀವ್ರ ಬಡತನ ಎದುರಿಸಿದ್ದಾರೆ. ಆದರೂ ಅವರು ಅಸ್ತಿತ್ವ ಉಳಿಸಿಕೊಂಡು ಮುನ್ನಡೆದಿದ್ದಾರೆ. ವರ್ಣಭೇದ ಚದುರಿದ ಬಳಿಕ ದಶಕಗಳಲ್ಲಿ ಅವರು ಅವರು ಕೇವಲ ತಮ್ಮ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯವನ್ನಷ್ಟೇ ಸಂರಕ್ಷಿಸಿಲ್ಲ.

ಅವರು ಅದರ ಏಳಿಗೆಗೆ ಹೊಸ ಶಕ್ತಿ ತುಂಬಿದ್ದಾರೆ. ಮತ್ತು ಇಂದು, ದಕ್ಷಿಣ ಆಫ್ರಿಕಾದ ಸಮಾಜದ ಎಳೆಯಲ್ಲಿ ಹಿಂದಿ, ತಮಿಳ್, ಗುಜರಾತಿ, ಉರ್ದು ಮತ್ತು ತೆಲುಗು ತನ್ನ ಸೌಂದರ್ಯ ಮುಂದುವರಿಸಿದೆ. ಹೋಲಿಯ ಬಣ್ಣಗಳು, ದೀಪಾವಳಿಯ ಪಟಾಕಿ, ಪೊಂಗಲ್ ರುಚಿ ಮತ್ತು ಈದ್ ಹಬ್ಬ ಕೇವಲ ಭಾರತೀಯ ಸಾಂಸ್ಕೃತಿಕ ಪರಂಪರೆಯ ಕಾಮನಬಿಲ್ಲುಗಳಷ್ಟೇ ಅಲ್ಲ, ಅವು ದಕ್ಷಿಣ ಆಫ್ರಿಕಾದ ವೈವಿಧ್ಯತೆಯ ಪ್ರತೀಕವೂ ಆಗಿವೆ. ಈ ದೇಶದಲ್ಲಿ ನಿಮ್ಮ ಪೂರ್ವಿಕರ ಕಥೆಗಳು ಬಡತನ ಮತ್ತು ತುಳಿತದಿಂದ ಕೂಡಿರಬಹುದು. ಆದರೆ, ಅವರ ತ್ಯಾಗ ಮತ್ತು ಹೆಮ್ಮೆ ಅವರ ಹಿರಿಮೆಯಾಗಿದೆ. ಅದು ನಿಮ್ಮ ಯಶಸ್ಸು ಮತ್ತು ಪ್ರಗತಿಯಲ್ಲಿ ಪ್ರತಿಬಿಂಬಿಸಿದೆ. ಅಲ್ಲದೆ ಈ ರಾಷ್ಟ್ರದ ಸಾಮಾಜಿಕ ಒಳಿತು ಮತ್ತು ಆರ್ಥಿಕತೆಯಲ್ಲಿ ನಿಮ್ಮ ಅಪಾರ ಕೊಡುಗೆಯ ಫಲಿತಾಂಶವೂ ಆಗಿದೆ. ವಸುದೈವ ಕುಟುಂಬಕಂ ಎಂಬ ಭಾರತೀಯ ನಿಜ ತತ್ವದಂತೆ, ಇಡೀ ವಿಶ್ವವೇ ಒಂದು ಕುಟುಂಬ, ನೀವು ಇತರರ ಬಗ್ಗೆ ಕಾಳಜಿ ಉಳ್ಳವರಾಗಿದ್ದೀರಿ. ಮತ್ತು ಹಾಗೆ ಮಾಡುವಾಗ ನೀವು ದಕ್ಷಿಣ ಆಫ್ರಿಕಾದ ತತ್ವ ಉಮುಂತು ನಗುಮುಂತು ನಗಬಂತು (ನೀವು ಏನಾಗಿದ್ದೀರೋ ಅದಕ್ಕೆಕಾರಣ ಇತರ ವ್ಯಕ್ತಿಗಳು) ಪ್ರತಿಧ್ವನಿಸುತ್ತೀರಿ.

ಸ್ನೇಹಿತರೆ,

ನಿಮ್ಮಲ್ಲಿ ಹಲವು ಜನರು ಗುರುತಿಸದೆ ಇರಬಹುದು, ಆದರೆ ನಿಮ್ಮ ಪೂರ್ವಜರ ಒಂದು ಕೊಡುಗೆ ಇದೆ, ಅದಕ್ಕಾಗಿ ನೀವು ಹೆಮ್ಮೆ ಪಡಬೇಕು. ನಿಮ್ಮ ಪೂರ್ವಜರು ಭಾರತದ ತೀರವನ್ನು ಬಿಟ್ಟ ಮೊದಲಿಗರಾಗಿದ್ದಾರೆ. ಅವರ ತ್ಯಾಗ, ತಮ್ಮ ಸಾಂಸ್ಕೃತಿಕ ಬೇರುಗಳನ್ನು ಕಾಪಾಡಬೇಕೆಂಬ ಅವರ ಸಂಕಲ್ಪ, ಮತ್ತು ತೊಡಕುಗಳ ನಡುವೆಯೂ ದಕ್ಷಿಣ ಆಫ್ರಿಕಾದ ಭಾರತೀಯರ ತಲೆಮಾರುಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ವಿಶ್ವಾದ್ಯಂತದ ಭಾರತೀಯ ಸಮುದಾಯದ ಮನೋಸ್ಥಿತಿಯ ಮೇಲೆ ಪ್ರಭಾವ ಬೀರಿದೆ ಮತ್ತು ಮಾರ್ಗದರ್ಶನ ಮಾಡಿದೆ. ಎಲ್ಲ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ನಿಮ್ಮ ಹಿಂದಿನವರು ಸಾಧನೆ ಮಾಡಿದ್ದರಿಂದಲೇ ಇಂದು ಭಾರತೀಯ ಸಮುದಾಯ ವಿಶ್ವದಾದ್ಯಂತ ಹಲವು ಮಾರ್ಗಗಳಲ್ಲಿ ಎದ್ದು ನಿಲ್ಲುವಂತಾಗಿದೆ.

ಸ್ನೇಹಿತರೇ,

ಈ ನಗರ ಮತ್ತು ಇಲ್ಲಿನ ಜನತೆ ಹೆಚ್ಚು ಆಪ್ತರಾಗಿದ್ದಾರೆ. ಇಲ್ಲಿಂದಲೇ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ಪರಿಕಲ್ಪನೆಯನ್ನು ಕಂಡಿದ್ದು. ಇದು ಸತ್ಯಾಗ್ರಹದ ಜನ್ಮಸ್ಥಳ. ದಕ್ಷಿಣ ಆಫ್ರಿಕಾ ಮೋಹನದಾಸರನ್ನು ಮಹಾತ್ಮರನ್ನಾಗಿ ಪರಿವರ್ತಿಸಿತು. ಜನಾಂಗೀಯ ದಬ್ಬಾಳಿಕೆಯ ವಿರುದ್ಧ ಗಾಂಧಿ ಅವರು ಹೋರಾಟ ಮಾಡಿದಾಗ ಒಂಟಿಯಾಗಿರಲಿಲ್ಲ. ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿಮ್ಮೊಂದಿಗೆ ಹಲವು ನಾಯಕರಿದ್ದಾರೆ. 16 ವರ್ಷ ವಯಸ್ಸಿನ ವಲ್ಲಿಯಮ್ಮ, ಭಯವಿಲ್ಲದ ತಂಬಿ ನೈಡೋ ಮತ್ತು ನಿಸ್ವಾರ್ಥಿ ಮೊಹಮದ್ ಚಚಾಲಿಯಾ ಅವರನ್ನು ಯಾರಾದರೂ ಮರೆಯಲು ಸಾಧ್ಯವೇ? ಇಂದು ಬೆಳಗ್ಗೆ ಅಹ್ಮದ್ ಕತರ್ಡಾ ಅವರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಅವರು ನೆಲ್ಸನ್ ಮಂಡೇಲಾ ಅವರೊಂದಿಗೆ 26 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ರೊಬ್ಬೆನ್ ದ್ವೀಪದ ಜೈಲಿನ ಒರಟುತನಕ್ಕೆ ಲಾಲು ಚಿಬಾ, ಮ್ಯಾಕ್ ಮಹಾರಾಜ ಅಥವಾ ಬಿಲ್ಲೆ ನಾಯರ್ ಅವರನ್ನು ಬಗ್ಗಿಸಲು ಆಗಲಿಲ್ಲ.

ನನಗೆ ಅವರೆಲ್ಲರನ್ನೂ ಕಾಣುವ ಅವಕಾಶ ಸಿಕ್ಕಿದ್ದು ಇದೊಂದು ಸಂತಸದ ಕಾರ್ಯಕ್ರಮ. ಅವರು ಎಷ್ಟೇ ಶೋಷಣೆಗೆ ಒಳಗಾಗಿದ್ದಾಗ್ಯೂ ಅವರ ಮುಖದಲ್ಲಿ ಸಂತಸ ಇದೆ, ನಾನು ಅದನ್ನು ನನ್ನೊಂದಿಗೆ ಭಾರತಕ್ಕೆ ತೆಗೆದುಕೊಂಡು ಹೋಗುತ್ತೇನೆ. ತಮ್ಮ ಮೌಲ್ಯ ಮತ್ತು ನೀತಿಗಳಿಗೆ ಕಷ್ಟವನ್ನು ಎದುರಿಸಿದವರ ಬಗ್ಗೆ ಭಾರತೀಯರು ಹೆಮ್ಮ ಪಡುತ್ತಾರೆ.

ತಮ್ಮ ಆಫ್ರಿಕಾದ ಸೋದರ ಮತ್ತು ಸೋದರಿಯರ ಜೊತೆಗೆ, ಭಾರತೀಯರ ಪೀಳಿಗೆಯೂ ನಡೆಸಿದ ಹೋರಾಟ ಮತ್ತು ಅವರ ತ್ಯಾಗದಿಂದಾಗಿ ಎಲ್ಲ ದಕ್ಷಿಣ ಆಫ್ರಿಕನ್ನರೂ ನೆಮ್ಮದಿಯಾಗಿ ಉಸಿರಾಡುತ್ತಿದ್ದಾರೆ. ನಾನು ನಿಮ್ಮೆಲ್ಲರಿಗೂ ಹಾಗೂ ಈ ದೇಶಕ್ಕಾಗಿ ಸಮರ್ಪಿಸಿಕೊಂಡ ಅಸಂಖ್ಯಾತರಿಗೆ ಗೌರವ ವಂದನೆ ಸಲ್ಲಿಸುತ್ತೇನೆ. ನೀವೆಲ್ಲರೂ ಭಾರತೀಯ ಪರಂಪರೆಯ ಹೆಮ್ಮೆಯ ಪುತ್ರ ಮತ್ತು ಪುತ್ರಿಯರಾಗಿದ್ದೀರಿ. ನೀವೆಲ್ಲರೂ ದಕ್ಷಿಣ ಆಫ್ರಿಕಾದ ಹೆಮ್ಮೆಯ ಮತ್ತು ನಿಷ್ಠ ಪ್ರಜೆಗಳಾಗಿದ್ದೀರಿ. ನೀವೆಲ್ಲರೂ ಕಷ್ಟಪಟ್ಟು ಮತ್ತು ನಿಷ್ಠೆಯಿಂದ ದುಡಿಯುವ ದಕ್ಷಿಣ ಆಫ್ರಿಕಾದ ಪ್ರಜೆಗಳಾಗಿದ್ದೀರಿ. ಜೊತೆಗೆ ನೀವು ವಿಕಸಿಸುತ್ತಿರುವ ಜಾಗತಿಕ ಭಾರತೀಯ ಕುಟುಂಬದ ಭಾಗವಾಗಿದ್ದೀರಿ. ನೀವು ನಮ್ಮ ಎರಡು ದೇಶಗಳ ನಡುವಿನ ಅನನ್ಯ ಕೊಂಡಿಯಾಗಿದ್ದೀರಿ. ನಮ್ಮ ವಿನಿಮಯಿತ ಮೌಲ್ಯ ಮತ್ತು ಹೋರಾಟದಿಂದ ಒಂದು ಬೆಸುಗೆ ಮೂಡಿದೆ. ನಾವು ಅವರ ತಳಹದಿಯ ಮೇಲೆ ನಮ್ಮ ಉಜ್ವಲ ಭವಿಷ್ಯವನ್ನು ಕಟ್ಟುತ್ತಿದ್ದೇವೆ.

ಸ್ನೇಹಿತರೇ,

ದಕ್ಷಿಣ ಆಫ್ರಿಕಾ ಒಂದು ಪವಿತ್ರ ಭೂಮಿ. ಇದು ಮಡಿಬಾರ ನೆಲ , ಮತ್ತು ಮಹಾತ್ಮಾ ಗಾಂಧಿ ಅವರ ಕರ್ಮಭೂಮಿ. ಈ ಇಬ್ಬರು ಶ್ರೇಷ್ಠರು ನಮಗೆ ತೋರಿರುವ ದಾರಿ ಮತ್ತು ಅವರು ನಮಗಾಗಿ ಗಳಿಸಿಕೊಟ್ಟಿರುವ ಸ್ವಾತಂತ್ರ್ಯ, ಇಡೀ ಮನುಕುಲಕ್ಕೇ ಪ್ರೇರಣೆಯಾಗಿದೆ. ಅವರ ಅವಿಶ್ರಾಂತ ಚೈತನ್ಯ, ಧೈರ್ಯ ಮತ್ತು ನೈತಿಕ ಶಕ್ತಿ ಮುಂಬರುವ ಪೀಳಿಗೆಗೆ ಕೂಡ ಒಂದು ಮಾರ್ಗದರ್ಶಿ ಸಂಕೇತವಾಗಿ ನಿಲ್ಲಲಿದೆ. ಮಹಾತ್ಮಾ ಗಾಂಧಿ ನೇತೃತ್ವದ ಭಾರತದ ಸ್ವಾತಂತ್ರ್ಯ ನಡಿಗೆ, ಆಧುನಿಕ ಭಾರತಕ್ಕೆ ಜನ್ಮ ನೀಡಿತು. ನೆಲ್ಸನ್ ಮಂಡೇಲಾ ಅವರ ಕ್ಷಮೆ ಮತ್ತು ಸ್ವಾತಂತ್ರ್ಯದ ಕಡೆಗೆ ದೀರ್ಘ ನಡಿಗೆ, ಕಾಮನಬಿಲ್ಲಿನ ರಾಷ್ಟ್ರದ ಉದಯಕ್ಕೆ ಕಾರಣವಾಯಿತು. ಗಾಂಧಿ ಅವರು ದಕ್ಷಿಣ ಆಫ್ರಿಕಾವನ್ನು ತಮ್ಮ ಹೃದಯಕ್ಕೆ ಹತ್ತಿರವಾಗಿಟ್ಟುಕೊಂಡಿದ್ದರು.
ಮಹಾತ್ಮಾ ಗಾಂಧಿ ಅವರು ಈ ನೆಲ ತಮಗೆ ಮರು ಜನ್ಮ ನೀಡಿತು ಎಂದೇ ನಂಬಿದ್ದರು

1914ರಲ್ಲಿ ದಕ್ಷಿಣ ಆಫ್ರಿಕಾದಿಂದ ಬೀಳ್ಕೊಡುವಾಗ ಅವರು ಹೀಗೆ ಹೇಳಿದ್ದರು.: “ಈ ಉಪಖಂಡವು ನನ್ನ ಮಾತೃಭೂಮಿಯ ಬಳಿಕ ನನಗೆ ಪವಿತ್ರ ಮತ್ತು ಆತ್ಮೀಯ ನೆಲವಾಗಿದೆ. ನಾನು ದಕ್ಷಿಣ ಆಫ್ರಿಕಾದ ತೀರವನ್ನು ಭಾರ ಹೃದಯದಿಂದ ಬಿಡುತ್ತಿದ್ದೇನೆ, ಮತ್ತು ದೂರವು ನನ್ನನ್ನು ದಕ್ಷಿಣ ಆಫ್ರಿಕಾದಿಂದ ಪ್ರತ್ಯೇಕಿಸುತ್ತಿದೆ, ಆದರೆ ನನ್ನನ್ನು ಹತ್ತಿರ ತರುತ್ತಿದೆ, ಮತ್ತು ಇದರ ಕಲ್ಯಾಣ ಸದಾ ಉತ್ತಮ ಕಳಕಳಿಯ ವಿಷಯವಾಗಿದೆ.”. ಶತಮಾನದ ಬಳಿಕವೂ ನಾವು ದಕ್ಷಿಣ ಆಫ್ರಿಕದ ಬಗ್ಗೆ ಚಿಂತಿಸಿದಾಗ, ನಿಮ್ಮ ಬಗ್ಗೆ ಚಿಂತಿಸಿದಾಗ ಈ ಪದಗಳು ನಮ್ಮ ಮನದಲ್ಲಿ ಸುಳಿಯುತ್ತವೆ.

ಸಹೋದರರೇ ಮತ್ತು ಸಹೋದರಿಯರೇ,

ನಾವು ಪರಸ್ಪರ ಅವಲಂಬಿತವಾದ ಮತ್ತು ಅತ್ಯಂತ ಸಂಪರ್ಕಿತ ವಿಶ್ವದಲ್ಲಿ ಜೀವಿಸುತ್ತಿದ್ದೇವೆ. ನಿಮ್ಮಲ್ಲಿ ಅನೇಕರು ಭಾರತದ ಅಭಿವೃದ್ಧಿಯಲ್ಲಿ ನಿರತರಾಗಿದ್ದೀರಿ. ನಿಮ್ಮ ಪೂರ್ವಿಕರ ನೆಲದೊಂದಿಗೆ ಸಂಪರ್ಕ ಹೊಂದುವ ನಿಮ್ಮ ಬಯಕೆ ಒಂದು ಭಾವನಾತ್ಮಕ ಇಚ್ಛೆಯಾಗಿದೆ. ಆದರೆ ನೀವು ಅದನ್ನು ಅದೊಂದಕ್ಕೇ ಸೀಮಿತಗೊಳಿಸಬೇಡಿ.

ಭಾರತವು ಇಂದು ಯಾರು ಬಯಸುತ್ತಾರೋ ಅವರಿಗೆ ಅವಕಾಶಗಳ ನಾಡಾಗಿದೆ:

• ಸಂಪರ್ಕ ಮತ್ತು ಸಹಯೋಗ;

• ನಾವಿನ್ಯ ಮತ್ತು ರಚನಾತ್ಮಕ;

• ವಾಣಿಜ್ಯ ಮತ್ತು ಹೂಡಿಕೆ; ಮತ್ತು

•ಉತ್ಪಾದನೆ ಮತ್ತು ಎಂಜಿನಿಯರ್..

ಭಾರತವು ಇಂದು ಜಾಗತಿಕ ಆರ್ಥಿಕತೆಯ ಒಂದು ಉಜ್ವಲ ತಾಣವಾಗಿದೆ. ಆರ್ಥಿಕ ಹಿನ್ನಡೆ, ಇಳಿಕೆಯಾಗುತ್ತಿರುವ ವೃದ್ಧಿದರ ನೋಡುತ್ತಿರುವ ವಿಶ್ವದಲ್ಲಿ ಭಾರತವು ಹೆಚ್ಚಿನ ವೃದ್ಧಿ ದರ ಶೇ.7.6ರನ್ನು ಈ ವರ್ಷ ಸಾಧಿಸಿದೆ. ನಾವು ಮುಂಬರುವ ವರ್ಷಗಳಲ್ಲಿ ಶೇ.8 ಮತ್ತು ಅದಕ್ಕಿಂತ ಹೆಚ್ಚು ವೃದ್ಧಿ ಸಾಧಿಸಲು ಶ್ರಮಿಸುತ್ತಿದ್ದೇವೆ. ಭಾರತದ ಚೈತನ್ಯ ಕೇವಲ ಪದಗಳಲ್ಲ. ಅದು ಸಮಗ್ರ ಕ್ರಿಯೆಯೊಂದಿಗೆ ಮುನ್ನಡೆದಿದೆ. ಮತ್ತು ಅದು ಭಾರತದ ಆರ್ಥಿಕತೆಯ ವೇಗವನ್ನು ಬದಲಾಯಿಸುವ ನಮ್ಮ ಬದ್ಧತೆಯಿಂದ ವೇದ್ಯವಾಗುತ್ತದೆ. ಕೇವಲ ತ್ವರಿತವಾದ ಸುಸ್ಥಿರ ಆರ್ಥಿಕ ಪ್ರಗತಿಯಷ್ಟೇ ಅಲ್ಲ, ಆದರೆ, ಅದು ಬಹು ಹಂತದ ಪರಿವರ್ತನೆಯ ಮೂಲಕ ನಡೆದಿದೆ.

ಹೀಗಾಗಿಯೇ ನಾನು ನೀವು ಭಾರತಕ್ಕೆ ಭೇಟಿ ನೀಡಿ ಮತ್ತು ಭಾರತದಲ್ಲಿ ಪರಿವರ್ತನೆ ಹೇಗೆ ನಡೆಯುತ್ತಿದೆ ಎಂಬುದನ್ನು ನೋಡಿ ಎಂದು ಹೇಳುವುದು.
ಈ ಪರಿವರ್ತನೆಯು ಮೇಲೆತ್ತುವ ಗುರಿ ಹೊಂದಿದೆ.:

• ಭಾರತದ 125 ಕೋಟಿ ಜನತೆ;

• ಅದರ 500 ನಗರಗಳು; ಮತ್ತು

• ಅದರ ಆರು ನೂರು ಸಾವಿರ ಹಳ್ಳಿಗಳು.

ನಾವುದೇಶ ಬೆಳೆಯಲು ಉದ್ದಿಮೆಗಳು ಏಳಿಗೆ ಆಗಬೇಕು, ವ್ಯವಹಾರಗಳು ವೃದ್ಧಿಸಬೇಕು ಎಂದು ಬಯಸುತ್ತೇವೆ. ಇದಕ್ಕಾಗಿ ನಾವು, ವಿಶ್ವದ ಇತರ ರಾಷ್ಟ್ರಗಳೊಂದಿಗೆ ಹೂಡಿಕೆಯ ಪಾಲುದಾರಿಕೆ, ನಾವಿನ್ಯ, ಉತ್ಪಾದನೆ ಮತ್ತು ವಾಣಿಜ್ಯ ನಿರ್ಮಾಣಕ್ಕಾಗಿ ನಾವು ನೀತಿಯ ಚೌಕಟ್ಟನ್ನು ಈಗಾಗಲೇ ಬಲಪಡಿಸಿದ್ದೇವೆ. ಭಾರತದಲ್ಲಿ ಸಾರ್ವಜನಿಕ, ಖಾಸಗಿ ಮತ್ತು ವೈಯಕ್ತಿಕ ವ್ಯಾಪಾರ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಬೆಳೆಯುವುದನ್ನು ಖಾತ್ರಿ ಪಡಿಸಲು ಸುಲಭವಾಗಿ ವ್ಯಾಪಾರ ನಡೆಸುವತ್ತ ನಮ್ಮ ಗಮನ ಹರಿಸಲಾಗಿದೆ. ಮತ್ತು ನಾವು ಅತ್ಯಾಧುನಿಕ ಮೂಲಸೌಕರ್ಯದೊಂದಿಗೆ ಇದನ್ನು ಮುಂದೆ ಕೊಂಡೊಯ್ಯಲು ಇಚ್ಛಿಸುತ್ತೇವೆ. ಮೂಲಸೌಕರ್ಯಗಳು ಅತ್ಯಾವಶ್ಯಕವಾದ ಮನೆ, ವಸತಿ, ವಿದ್ಯುತ್, ನೀರು ಮತ್ತು ಶೌಚಾಲಯವನ್ನಷ್ಟೇ ಜನರಿಗೆ ನೀಡುವುದಿಲ್ಲ. ಆದರೆ, ಅದರ ಜೊತೆಗೆ ನಮ್ಮ ಜನರ ಆರ್ಥಿಕ ಪ್ರಗತಿಗಾಗಿ ಅತ್ಯಾಧುನಿಕ ಬಂದರು, ವಿಮಾನ ನಿಲ್ದಾಣ, ರೈಲು ಮತ್ತು ರಸ್ತೆ ಜಾಲವನ್ನೂ ಒದಗಿಸುತ್ತದೆ. ನಮ್ಮ ಸಂಪನ್ಮೂಲ ಮತ್ತು ಸುಲಭವಾದ ವಾತಾರಣದಲ್ಲಿ, ಸುಸ್ಥಿರವಾದ, ನಗರೀಕರಣ ಸಮಾಜದ ನಿರ್ಮಾಣದಗುರಿಯೊಂದಿಗೆ, 100 ಸ್ಮಾರ್ಟ್ ಸಿಟಿಗಳನ್ನು ರೂಪಿಸುವುದು ನಮ್ಮ ಯೋಜನೆಯಾಗಿದೆ. ವಿಶ್ವದ ಉತ್ತಮ ಮಾಹಿತಿ ತಂತ್ರಜ್ಞಾನ ತಜ್ಞರ ಬಲದ ಬೆಂಬಲದೊಂದಿಗೆ, ನಾವು ಡಿಜಿಟಲ್ ಕ್ರಾಂತಿಯನ್ನೂ ರೂಪಿಸಿದ್ದೇವೆ.

ಈ ಕ್ರಾಂತಿಯು ದಿಕ್ಕನ್ನೇ ಬದಲಾಯಿಸುತ್ತದೆ:

•ನಾಗರಿಕರೊಂದಿಗೆ ಸಕ್ರಿಯವಾದ ಸರ್ಕಾರ.;

• ತನ್ನ ಆಶ್ರಿತರೊಂದಿಗೆ ವಾಣಿಜ್ಯ ಸಂವಾದ; ಮತ್ತು

•ತನ್ನ ಹಳೆಯ ಮತ್ತು ಹೊಸ ವಿನ್ಯಾಸಕ್ಕೆ ಹೊಂದಿಕೊಳ್ಳುವ ಸಮಾಜ.

ಮಾಹಿತಿಯ ಹೆದ್ದಾರಿಯಲ್ಲಿಮಾಹಿತಿ, ನಾವೀನ್ಯತೆ ಮತ್ತು ಕಲ್ಪನೆಗಳ ಮುಕ್ತ ಹರಿವಿಗೆ ಅವಕಾಶ ನೀಡುವ ಡಿಜಿಟಲ್ ಮೂಲಸೌಕರ್ಯದ ಮೇಲೆ ಒಂದು ಕ್ರಾಂತಿಯೇ ನಿಂತಿದೆ.

ಸ್ನೇಹಿತರೆ,

ಭಾರತದಂತೆಯೇ ದಕ್ಷಿಣ ಆಫ್ರಿಕಾ ಕೂಡ ಯುವಜನರ ರಾಷ್ಟ್ರ. ನಮ್ಮ 800 ದಶಲಕ್ಷ ಯುವಕರ ಶಕ್ತಿ ಮತ್ತು ಚಲನೆ, ನಮ್ಮ ಇಡೀ ದೇಶದ ಆಶಯಗಳು ಮತ್ತು ಬಯಕೆಗಳ ದರ್ಪಣ ಮತ್ತು ಇಂಧನವಾಗಿದೆ. ಭಾರತದ ಆರ್ಥಿಕತೆ ಮತ್ತು ಸಮಾಜವನ್ನು ಎಳೆಯ ಬಲ್ಲ ಇಂಜಿನ್ ಅದಾಗಬೇಕು ಎಂದು ನಾವು ಬಯಸುತ್ತೇವೆ. ಮತ್ತು ಇದಕ್ಕಾಗಿ ಭಾರತದ ಯುವಕರನ್ನು ಕುಶಲಿಗಳನ್ನಾಗಿ ಮಾಡಲು ನಾವು ಪ್ರಚಾರದ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. 2022ರಹೊತ್ತಿಗೆ ಭಾರತದಲ್ಲಿ 500 ದಶಲಕ್ಷ ಉದ್ಯೋಗ ಸೃಷ್ಟಿಸುವುದು ನಮ್ಮ ಯೋಜನೆಯಾಗಿದೆ. ಭಾರತದ ಅಗತ್ಯವನ್ನು ಪೂರೈಸಲಷ್ಟೇ ನಾವದನ್ನು ಬಯಸುತ್ತಿಲ್ಲ, ಆದರೆ, ಅದರ ಜೊತೆಗೆ ಹೆಚ್ಚುತ್ತಿರುವ ಜಾಗತಿಕ ಕುಶಲ ಮಾನವ ಶಕ್ತಿಯ ಬೇಡಿಕೆಯನ್ನೂ ಪೂರೈಸಲಿದ್ದೇವೆ. ಇದು ಕೇವಲ ಮುಂದೆ ಸಾಗುತ್ತಿರುವುದು ಆರ್ಥಿಕತೆ ಮತ್ತು ಸಮಾಜವಷ್ಟೇ ಅಲ್ಲ. ನಮ್ಮ ಜನರ ಮನೋಸ್ಥಿತಿಯೂ ಬದಲಾಗುತ್ತಿದೆ. ಮತ್ತು ನಾನು ಮಾತನಾಡುತ್ತಿರುವ ಬದಲಾವಣೆ ಕೇವಲ ಕಾಗದದ ಮೇಲಿಲ್ಲ. ಬದಲಾಗಿ ಅದು ನಮ್ಮ ಯೋಜನಗಳಲ್ಲಿದೆ. ಇದು ಈಗಾಗಲೇ ಕಣ್ಣಿಗೂ ಗೋಚರಿಸುತ್ತಿದೆ. ನಮ್ಮ ಹಳ್ಳಿಗಳಲ್ಲಿ ಹೊಸ ಚಾಲನೆಯ ಅಲೆಗಳಿವೆ. ನಮ್ಮ ನಗರಗಳಲ್ಲಿ ಪೂರ್ಣವಾಗಿ ಉದ್ದಿಮೆ ಮತ್ತು ಶಕ್ತಿಯಿಂದ ತುಂಬಿವೆ. ನಮ್ಮ ಯುವಕರಲ್ಲಿ ಆತ್ಮ ವಿಶ್ವಾಸವಿದೆ. ಮತ್ತು ಭಾರತದ ಪ್ರಜೆಗಳು ಆಶಾವಾದ ಹೊಂದಿದ್ದಾರೆ.

ಭಾರತದ ಉದಯ ಒಂದು ಗಾಥೆ:

• ಅಪರೂಪದ ಸ್ಥಿತಿಸ್ಥಾಪಕತ್ವ

• ಪುನರ್ ನವೀಕೃತ;

• ಭವ್ಯವಾದ ವೇಗ; ಮತ್ತು

• ಅದ್ಭುತ ಮಾನದಂಡ.

ಭಾರತದ ಕಥೆಯನ್ನು ನಾಲ್ಕು ಅಕ್ಷರಗಳಲ್ಲಿ ವಿವರಿಸಬಹುದು, ಮತ್ತು ಈ ಅಕ್ಷರಗಳು -HOPE .

ಇಂದು, ಭಾರತದ ಯಶೋಗಾಥೆಯನ್ನು ಕೇವಲ ನಾಲ್ಕು ಅಕ್ಷರಗಳಲ್ಲಿ ಹೇಳಬಹುದು. ಅವು HOPEನ ಅಕ್ಷರಗಳಾಗಿವೆ:

• H ಅಂದರೆ : Harmony ಸಹಿಷ್ಣುತೆ;

• O ಅಂದರೆ: Optimism ಆಶಾವಾದ;

• P ಅಂದರೆ: Potential ಸಾಮರ್ಥ್ಯ; ಮತ್ತು

• E ಎಂದರೆ: Energy ಶಕ್ತಿ..

ಮತ್ತು ಇದರ ಶ್ರೇಯ ಮೋದಿಗೆ ಮಾತ್ರ ಹೋಗುವುದಿಲ್ಲ. ಇದು ಭಾರತದ 125 ಕೋಟಿ ಜನರಿಗೂ ಸಲ್ಲುತ್ತದೆ. ಮತ್ತು ವಾಸ್ತವವಾಗಿ ಅವರು ನನ್ನ ಸರ್ಕಾರದ ಮೇಲೆ ವಿಶ್ವಾಸ ಇಟ್ಟಿದ್ದಾರೆ ಮತ್ತು ಸರ್ಕಾರಕ್ಕೆ ಜನಾದೇಶವನ್ನೂ ನೀಡಿದ್ದಾರೆ.

ಹೀಗೆ ಮಾಡಲು ಅವರು ಆಯ್ಕೆ ಮಾಡಿಕೊಂಡಿದ್ದಾರೆ:

• ಪದಗಳ ಮೇಲೆ ಕ್ರಿಯೆ

• ಋಣಾತ್ಮಕ ವಿಧಾನಗಳ ಮೇಲೆ ಸಕಾರಾತ್ಮಕತೆ;

•ಮಂದಗತಿಯ ಭಾವನೆಯ ಮೇಲೆ ಗಮನ ಮತ್ತು ಉದ್ದೇಶ

• ಅಂತಾರಾಷ್ಟ್ರೀಯ ಕಾರ್ಯಸೂಚಿಗಳಿಗೆ ಪ್ರತಿಕ್ರಿಯಿಸುವ ಬದಲು, ಅದಕ್ಕೆ ರೂಪ ನೀಡುವ ಇಚ್ಛೆ; ಮತ್ತು

• ಬಡ್ತಿಯ ಬದಲಾವಣೆಯ ಬದಲು ಪರಿವರ್ತನೆಯ ಜಿಗಿತ

ನನ್ನ ಸಹೋದರ ಸಹೋದರಿಯರೇ,

ನಮ್ಮ ಎರಡು ರಾಷ್ಟ್ರಗಳಿಗೂ ಒಂದೇ ತೆರನಾದ ಬಯಕೆ ಮತ್ತು ಸವಾಲುಗಳಿವೆ. ಈ ದೇಶದಲ್ಲಿನ ಸ್ವಾತಂತ್ರ್ಯಕ್ಕಾಗಿ ನಡೆದ ಅಂತಾರಾಷ್ಟ್ರೀಯ ಚಳವಳಿಯಲ್ಲಿ ಭಾರತವೂ ಒಂದು ನಾಯಕನಾಗಿತ್ತು. ವರ್ಣಭೇದದ ವಿರುದ್ಧದ ಹೋರಾಟದಲ್ಲಿ ನಾವು ಮುಂದಾಳತ್ವವನ್ನೇ ವಹಿಸಿದ್ದೆವು. ಆದರೆ, ನಾನು ಈ ಮೊದಲೇ ಹೇಳಿದಂತೆ, ಒಂದು ವರ್ಣಮಯ ರಾಷ್ಟ್ರದ ಉದಯವಾಯಿತು. ಆತ್ಮೀಯ ಗೆಳೆತನದ ಅಪ್ಪುಗೆಯನ್ನು ನೀಡುವುದರಲ್ಲಿ ನಾವೂ ಮೊದಲಿಗರಲ್ಲಿ ಒಬ್ಬರಾದೆವು.

ಮತ್ತು ಆ ನಂತರ ಏನನ್ನು ಅನುಸರಿಸಲಾಯಿತೋ ಅದು ಬೇರೆಯ ಮಾತು.

ಇದರೊಂದಿಗೆ, ನಾವು ನಮ್ಮ ಬಾಂಧವ್ಯದಲ್ಲಿ ಹೊಸ ಹಾಗೂ ವೈಭವದ ಅಧ್ಯಾಯ ಆರಂಭಿಸಿದ್ದೇವೆ. ನಮ್ಮ ಆರ್ಥಿಕ ಆಯ್ಕೆಗಳಲ್ಲಿ, ನಮ್ಮ ಜನರಿಗೆ ಮತ್ತು ಯುವಕರಿಗೆ ನಾವು ಒಟ್ಟಿಗೆ ಹಲವು ಕಾರ್ಯ ಮಾಡಬಹುದಾದಿಗೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡಕ್ಕೂ ದೊಡ್ಡ ಜನಸಂಖ್ಯೆಯ ಅವಕಾಶವಿದೆ. ನಮ್ಮ ಎರಡೂ ರಾಷ್ಟ್ರದಲ್ಲಿ ಯುವ ಜನಸಂಖ್ಯೆ ಇದೆ. ಭಾರತದಲ್ಲಿರುವ ಜನಸಂಖ್ಯೆಯಲ್ಲಿ ಮೂರನೇ ಎರಡು ಭಾಗ 35 ವರ್ಷ ವಯಸ್ಸಿನೊಳಗಿದ್ದಾರೆ. ಅದೇ ಸ್ಥಿತಿ ಆಫ್ರಿಕಾ ಖಂಡದಲ್ಲೂ ಮತ್ತು ದಕ್ಷಿಣ ಆಫ್ರಿಕಾದಲ್ಲೂ ಇದೆ. ನಾವು ನಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು,

ನಮ್ಮ ಪಾಲುದಾರಿಕೆ ಮತ್ತು ನಮ್ಮ ತಜ್ಞತೆಯನ್ನು ನಮ್ಮ ಅಭಿವೃದ್ಧಿಯ ಗುರಿ ಸಾಧನೆಗೆ ಬಳಸಿಕೊಳ್ಳಬೇಕು. ದಕ್ಷಿಣ ಆಫ್ರಿಕಾ ಆರ್ಥಿಕ ಪ್ರಗತಿ, ಸುರಕ್ಷತೆ ಮತ್ತು ಜನರ ಸುರಕ್ಷತೆಯತ್ತ ಕಾರ್ಯೋನ್ಮುಖವಾಗಿದೆ, ಈ ನಿಟ್ಟಿನಲ್ಲಿ ಅದು ಭಾರತದಲ್ಲಿ ವಿಶ್ವಾಸಾರ್ಹ ಹಾಗೂ ನಂಬಿಕಾರ್ಹ ಪಾಲುದಾರನನ್ನು ಕಾಣಬಹುದು. ಭಾರತವು ಈ ಪಯಣದಲ್ಲಿ ನಿಮ್ಮೊಂದಿಗೆ ಸೇರಲು ಸಿದ್ಧವಿದೆ. ನಮ್ಮ ಅಭಿವೃದ್ಧಿ ಮತ್ತು ವಾಣಿಜ್ಯ ಪಾಲುದಾರಿಕೆಯು ಈಗಾಗಲೇ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ನಾವು ಅವು ಇನ್ನು ಹೆಚ್ಚು ಜಿಗಿಯಲು, ಜಿಂಕೆಯಂತೆ ವೇಗವಾಗಿ ಓಡಲು ಸಹಾಯ ಮಾಡಬೇಕು. ಒಟ್ಟಾಗಿ ನಾವು ಹೊಸ ಉದ್ಯಮಗಳನ್ನು, ಹೊಸ ಕೌಶಲವನ್ನು ಮತ್ತು ಹೊಸ ಸಮಾಜಿಕ ಮೌಲ್ಯಗಳನ್ನು ಸೃಷ್ಟಿಸಬಹುದಾಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾಗಳು ಕಾರ್ಯತಂತ್ರಾತ್ಮಕ ಪಾಲುದಾರರಾಗಿದ್ದೇವೆ. ನಾವು ಮಾನವ ಪ್ರಯತ್ನ ಚಾಚಿರುವಂಥ ಒಂದು ಪಾಲುದಾರಿಕೆಯನ್ನು ಸೃಷ್ಟಿಸಬೇಕು.

ವೈವಿಧ್ಯಮಯ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಏರಬಲ್ಲ ಪಾಲುದಾರಿಕೆ ಅದಾಗಿರಬೇಕು:

•ಕೃಷಿಯಿಂದ ಆರೋಗ್ಯ ರಕ್ಷಣೆವರೆಗೆ; •ಸಂಸ್ಕೃತಿಯಿಂದ ವಾಣಿಜ್ಯದವರೆಗೆ; •ಸಂಪ್ರದಾಯದಿಂದ ವ್ಯಾಪಾರದವರೆಗೆ; •ಕೈಗಾರಿಕೆಯಿಂದ ಸಂಸ್ಥೆ ಕಟ್ಟುವವರೆಗೆ; •ಹೂಡಿಕೆಯಿಂದ ಮಾಹಿತಿ ತಂತ್ರಜ್ಞಾನದವರೆಗೆ; •ಗಣಿಗಾರಿಕೆಯಿಂದ ಉತ್ಪಾದನೆವರೆಗೆ; •ಕ್ರೀಡೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನದವರೆಗೆ; ಮತ್ತು •ರಕ್ಷಣೆಯಿಂದ ಅಭಿವೃದ್ಧಿವರೆಗೆ.

ನಾವು ಪ್ರಾದೇಶಿಕ ಪಾಲುದಾರಿಕೆಯ ಸಕ್ರಿಯ ಚಾಲಕರಾಗಿದ್ದೇವೆ. ಒಟ್ಟಿಗೆ ನಾವು,ಆಫ್ರಿಕಾದಲ್ಲಿರುವ ನಮ್ಮ ಸ್ನೇಹಿತರಿಗೆ ಹೊಸ ಮೌಲ್ಯವನ್ನು ಕಟ್ಟಿಕೊಡಬಹುದು. ನಮ್ಮ ಕಂಪನಿಗಳು ಈಗಾಗಲೇ ಪಾಲುದಾರರಾಗಿದ್ದು, ನಮ್ಮ ಜನರಿಗೆ ಆರ್ಥಿಕ ಲಾಭ ತರುತ್ತಿವೆ. ಅವು ಈ ಖಂಡದಲ್ಲಿ ಬದಲಾವಣೆ ತರುವ ಸಾಧನಗಳಾಗಿವೆ. ನಾವು ನಮ್ಮ ಯುವಕರನ್ನು ಸಬಲೀಕರಿಸಲು, ಕಾಯಿಲೆ, ಹಸಿವು, ಬಡತನದ, ಅಪೌಷ್ಟಿಕತೆ ವಿರುದ್ದ ಹೋರಾಡಲು ಒಟ್ಟಿಗೆ ಶ್ರಮಿಸಬಹುದು, ಮತ್ತೊಮ್ಮೆ ಕೇವಲ ನಮ್ಮ ದೇಶಗಳಷ್ಟೇ ಅಲ್ಲ, ಆದರೆ ಆಫ್ರಿಕಾ ಮತ್ತು ಇತರ ಅಭಿವೃದ್ಧಿಶೀಲ ವಲಯಗಳಾದ್ಯಂತ ಈ ಕಾರ್ಯ ಮಾಡಬಹುದು. ನಾವು ಜಾಗತಿಕ ಸವಾಲುಗಳ ಯುಗದಲ್ಲಿ ವಾಸಿಸುತ್ತಿದ್ದೇವೆ. ಭಯೋತ್ಪಾದನೆ ಮತ್ತು ಕಡಲ್ಗಳ್ಳತನ, ಏಡ್ಸ್ ಮತ್ತು ಎಬೋಲಾ ವಿರುದ್ಧದ ಹೋರಾಟ ನಮ್ಮ ಪಾಲುದಾರಿಕೆಯ ಪ್ರಮುಖ ಆದ್ಯತಾ ವಲಯಗಳಾಗಿವೆ. ಆರ್ಥಿಕ ಪ್ರಗತಿಗಾಗಿ ನಮ್ಮ ಪಾಲುದಾರಿಕೆ ಹವಾಮಾನ ಬದಲಾವಣೆಗೂ ಸಂವೇದಿಯಾಗಿದೆ. ನಾವು ಪ್ಯಾರಿಸ್ ನಲ್ಲಿ ಇದಕ್ಕೆ ಮೈಲಿಗಲ್ಲಾಗುವಂಥ ಒಪ್ಪಂದಕ್ಕೆ ಒಪ್ಪಿದ್ದೇವೆ. ನಾವೀಗ ಹೊಸ ಇಂಧನದ ಹಾದಿಯಲ್ಲಿ ಮತ್ತು ಸ್ಮಾರ್ಟ್ ಹವಾಮಾನದ ವಿಶ್ವದ ತಾಂತ್ರಿಕ ಪರಿಹಾರಕ್ಕೆ ಬಲವಾದ ಪಾಲುದಾರರಾಗಿ ಒಗ್ಗೂಡಿ ಶ್ರಮಿಸಬೇಕಾಗಿದೆ. ಜಾಗತಿಕ ಕ್ರಿಯೆಯನ್ನು ಹುರಿದುಂಬಿಸಲು, ಭಾರತವು ಅಂತಾರಾಷ್ಟ್ರೀಯ ಸೌರ ಸಹಯೋಗವನ್ನು ಆರಂಭಿಸಿದೆ, ಇದಕ್ಕೆ 120 ರಾಷ್ಟ್ರಗಳ ಬೆಂಬಲವೂ ದೊರೆತಿದೆ. ಸೌರ ಶಕ್ತ ದಕ್ಷಿಣ ಆಫ್ರಿಕಾ ಈ ಕಾರ್ಯಕ್ರಮದಲ್ಲಿ ಪ್ರಮುಖ ಪಾಲುದಾರನಾಗಿದೆ. ಐ.ಬಿ.ಎಸ್.ಎ. (ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ) ಮತ್ತು ಬ್ರಿಕ್ಸ್ ನಡುವೆಯೂ ನಮ್ಮ ಪಾಲುದಾರಿಕೆ ಜಾಗತಿಕ ಕಾರ್ಯಕ್ರಮ ಪಟ್ಟಿಯಲ್ಲಿ ನಮ್ಮ ಆದ್ಯತೆಗಳನ್ನು ರೂಪಿಸುತ್ತಿದೆ.

ಸಹೋದರರೆ ಮತ್ತು ಸಹೋದರಿಯರೇ,

ಪುನರ್ ಉದಯಿಸಿದ ಭಾರತ ನಿಮಗಾಗಿ ಕಾಯುತ್ತಿದೆ. ಮತ್ತು ನಾವು ಪ್ರವೇಶದ ತಡೆಗಳನ್ನು ನಿವಾರಿಸಲು ಹಲವು ಹೆಜ್ಜೆ ಇಟ್ಟಿದ್ದೇವೆ. ಓಸಿಐ ಮತ್ತು ಪಿಐಓ ಯೋಜನೆಗಳು ಚಾಲನೆಯಾಗಿರುವ ಕಾರ್ಯದಲ್ಲಿ ಒಂದಾಗಿದೆ. ಈ ವರ್ಷ ಫೆಬ್ರವರಿಯಲ್ಲಿ ನಾವು, ದಕ್ಷಿಣ ಆಫ್ರಿಕಾಕ್ಕೆ ಇ ವಿಸಾ ಆರಂಭಿಸಿದ್ದೇವೆ. ನೀವೀಗ ನಿಮ್ಮ ಮನೆಯಲ್ಲಿಯೇ ಕುಳಿತು, ನಿಮ್ಮ ಇಮೇಲ್ ಮೂಲಕ ಭಾರತೀಯ ವೀಸಾ ಪಡೆಯಬಹುದು, ಮತ್ತು ಅದೂ ಯಾವುದೇ ವೆಚ್ಚ ಇಲ್ಲದೆ!

ಸಹೋದರರೇ ಮತ್ತು ಸಹೋದರಿಯರೇ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಿಕಟ ಪಾಲುದಾರಿಕೆಯಿಂದ ಹೆಚ್ಚು ಲಾಭ ಗಳಿಸಬಹುದಾಗಿದೆ. ನೀವು ಭಾರತದ ಪರಂಪರೆಗೆ, ನಮ್ಮ ಸಿದ್ಧಾಂತಕ್ಕೆ ಮತ್ತು ನಮ್ಮ ಮೌಲ್ಯಗಳಿಗೆ ಗವಾಕ್ಷಿ ಆಗಿದ್ದೀರಿ, ನಿಮ್ಮ ಪೂರ್ವಜರು ದಕ್ಷಿಣ ಆಫ್ರಿಕಾದ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ, ಇಂದು ನೀವು ದಕ್ಷಿಣ ಆಪ್ರಿಕಾದ ಆರ್ಥಿಕ ಪ್ರಗತಿಯ ನಡಿಗೆಗೆ ದೊಡ್ಡ ಕಾಣಿಕೆ ಕೊಡಬಹುದಾಗಿದೆ. ಮತ್ತು ಈ ನೆಲದೊಂದಿಗೆ ನಮ್ಮ ಬಾಂಧವ್ಯಕ್ಕೆ ನೀವು ಒಂದು ಮಹತ್ವದ ಜೀವಸೆಲೆಯನ್ನೂ ರೂಪಿಸಬಹುದಾಗಿದೆ.

ಕೊನೆಯದಾಗಿ, ನಿಮ್ಮ ಸಾಧನೆಗಳು, ನಿಮ್ಮ ಕೊಡುಗೆ ಮತ್ತು ನಿಮ್ಮ ಯಶಸ್ಸು ನಮ್ಮೆಲ್ಲರಿಗೆ ಹೆಮ್ಮೆ ತಂದಿದೆ. ನಿಮ್ಮೊಂದಿಗೆ ಸಂಪರ್ಕ ಹೊಂದುವುದು ನನಗೆ ಗೌರವದ ಸಂಗತಿಯಾಗಿದೆ. ಇದೊಂದು ಶ್ರೇಷ್ಠ ಅವಕಾಶ. ನೀವು ಸದಾ ನನ್ನೊಂದಿಗೆ ಸಂಪರ್ಕದಲ್ಲಿರಬಹುದು. ನಾನು ಸಾಮಾಜಿಕ ತಾಣದಲ್ಲಿ ಸುಲಭವಾಗಿ ಸಿಗುತ್ತೇನೆ.

ನೀವು ನರೇಂದ್ರ ಮೋದಿ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಮತ್ತು ನನ್ನೊಂದಿಗೆ ಸಂಪರ್ಕದಲ್ಲಿರಬಹುದು. ನನಗೆ ಇಲ್ಲಿ ಬಂದಿದ್ದು ಉತ್ತಮ ಅನುಭವ ನೀಡಿದೆ.

ಧನ್ಯವಾದಗಳು,