Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಟೆಕ್ಸ್ ಟೈಲ್ ಇಂಡಿಯಾ 2017 ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ

s20170630110422

s20170630110420


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಜವಳಿ, ವಸ್ತ್ರ ಮತ್ತು ಪ್ಯಾಷನ್ ವಲಯದಲ್ಲಿನ ಸಹಕಾರಕ್ಕಾಗಿ ಜವಳಿ ಸಚಿವಾಲಯ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರ ಮತ್ತು ವಾಣಿಜ್ಯ ಇಲಾಖೆಯೊಂದಿಗೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು ಜವಳಿ ಮತ್ತು ಫ್ಯಾಷನ್ ವಲಯದಲ್ಲಿ ಪರಸ್ಪರ ಹಿತದ ಮತ್ತು ಪಾಲ್ಗೊಳ್ಳುವವರಿಗೆ ಲಾಭ ತರುವಂಥ ಸಹಕಾರವನ್ನು ನೀಡುತ್ತದೆ.

ಇದರಲ್ಲಿ ಭಾಗಿಯಾಗುವವರು ಜಂಟಿಯಾಗಿ ಆಸ್ಟ್ರೇಲಿಯಾ ಮತ್ತು ಭಾರತೀಯ ಜವಳಿ ಮತ್ತು ಫ್ಯಾಷನ್ ವಲಯ ಸಂಪರ್ಕಿಸಲು; ಈ ವಲಯದ ನಡುವೆ ಅಂತಾರಾಷ್ಟ್ರೀಯ ಕಾರ್ಯಕ್ರಮ ಮತ್ತು ಸಹಯೋಗ ಉತ್ತೇಜಿಸಲು; ಈ ವಲಯದಲ್ಲಿನ ಪ್ರತಿಭೆ ಮತ್ತು ಕೌಶಲವನ್ನು ಬಳಕೆ ಮಾಡಿಕೊಳ್ಳಲು; ಆರ್ಥಿಕ ಅವಕಾಶ ಉತ್ತೇಜಿಸಲು ಮತ್ತು ಎರಡೂ ದೇಶಗಳಲ್ಲಿ ಈ ಕ್ಷೇತ್ರದಿಂದ ಹೊರಹೊಮ್ಮಿದ ಉತ್ಪನ್ನಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಸೂಕ್ತ ಕ್ರಮಗಳನ್ನು ಗುರುತಿಸುತ್ತಾರೆ. ಆದಾಗ್ಯೂ ಎರಡೂ ಕಡೆಗಳ ಬೌದ್ಧಿಕ ಆಸ್ತಿ ಹಕ್ಕನ್ನು ಸಂರಕ್ಷಿಸಲಾಗುತ್ತದೆ.

ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಕೈಗೊಳ್ಳುವ ಚಟುವಟಿಕೆಗಳಿಂದ ಪೂರಕ ಕಾರ್ಮಿಕರೂ ಸೇರಿದಂತೆ ನೇಕಾರರು ಲಾಭ ಪಡೆಯಲಿದ್ದಾರೆ.

ಕೈಮಗ್ಗ ವಲಯದ ಒಟ್ಟಾರೆ ಅಭಿವೃದ್ಧಿಗಾಗಿ ಮಾರುಕಟ್ಟೆ ಸಂಪರ್ಕ ಸ್ಥಾಪನೆ ಮೂಲಕ ಕೈಮಗ್ಗ ವಸ್ತ್ರಗಳ ಉತ್ಪಾದನೆ ಹೆಚ್ಚಳ, ವಿನ್ಯಾಸ ಸಾಮರ್ಥ್ಯ ಸುಧಾರಣೆಗಾಗಿ ವಿನ್ಯಾಸ ಮತ್ತು ತಂತ್ರಗಾರಿಕೆಯಲ್ಲಿ ನಾವನ್ಯತೆಯ ಉತ್ತೇಜನ, ಉತ್ಪನ್ನಗಳಲ್ಲಿ ವೈವಿಧ್ಯತೆ ಮತ್ತು ಮೌಲ್ಯವರ್ಧನೆ, ದೇಶೀಯ ಮತ್ತು ರಫ್ತು ಮಾರುಕಟ್ಟೆಗೆ ಉತ್ತಮ ಪ್ರವೇಶ ಒದಗಿಸುವ ಗುರಿಯನ್ನು ಉಪಕ್ರಮ ಒಳಗೊಂಡಿದೆ. ಇದರಿಂದ ನೇಕಾರರು ನಿರಂತರವಾಗಿ ಉದ್ಯೋಗ ಪಡೆಯುವುರಲ್ಲದೆ ಅವರ ಜೀವನ ಮಟ್ಟ ಸುಧಾರಣೆ ಆಗಲಿದೆ.

ಭಾರತ ಸರ್ಕಾರದ ಜವಳಿ ಸಚಿವಾಲಯವು ಕೈಮಗ್ಗ ವಲಯದಲ್ಲಿ ಹಲವಾರು ನಾವಿನ್ಯವನ್ನು ಅನುಷ್ಠಾನಗೊಳಿಸುವ ಮೂಲಕ ಈ ವಲಯದ ಒಟ್ಟಾರೆ ಅಭಿವೃದ್ಧಿಗೆ ಹೊಣೆಗಾರನಾಗಿದೆ. ಯುವ ಪೀಳಿಗೆಯಲ್ಲಿ ಕೈಮಗ್ಗದ ಉತ್ಪನ್ನಗಳನ್ನು ಜನಪ್ರಿಯಗೊಳಿಸುವುದು ಜವಳಿ ಸಚಿವಾಲಯದ ಪ್ರಯತ್ನವಾಗಿದೆ. ಆಸ್ಟ್ರೇಲಿಯಾದ ಫ್ಯಾಷನ್ ವಿನ್ಯಾಸಕಾರರು ಭಾರತ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಗಳಿಗಾಗಿ ಭಾರತದ ನೇಯ್ದ ಮತ್ತು ಇತರ ಭಾರತೀಯ ಜವಳಿಯನ್ನು ಬಳಸಿ ಉಡುಗೆಯನ್ನು ಸಿದ್ಧಪಡಿಸುತ್ತಿದ್ದಾರೆ, ಅವರು ಕೈಮಗ್ಗ ವಲಯದಲ್ಲಿ ಅತ್ಯಾಧುನಿಕ ಉತ್ಪನ್ನ ನೀಡಲು, ಜವಳಿ, ಕೈಮಗ್ಗ ವಲಯಗಳೊಂದಿಗೆ ಸಹಕಾರ, ಜವಳಿ ಮತ್ತು ಕೈಮಗ್ಗ ಉತ್ಪನ್ನಗಳ ವಿನ್ಯಾಸ ಮತ್ತು ಭಾರತ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಒದಗಿಸುವ ಸಲುವಾಗಿ ಭಾರತೀಯ ಭಾದ್ಯಸ್ಥರ ಜೊತೆ ಕೆಲಸ ಮಾಡಲು ಆಸಕ್ತಿ ತೋರಿಸಿದ್ದಾರೆ. ವಿದೇಶಾಂಗ ವ್ಯವಹಾರ ಹಾಗೂ ವಾಣಿಜ್ಯ (ಆಸ್ಟ್ರೇಲಿಯಾ ಸರ್ಕಾರ) ಇಲಾಖೆ ಭಾರತದ ಜವಳಿ ಸಚಿವಾಲಯದೊಂದಿಗೆ ಈ ನಿಟ್ಟಿನಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಉದ್ದೇಶಿಸಿದೆ.