Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಮ್ಮ ಪಿಟ್ನೆಸ್ ವಿಡಿಯೋ ಹಂಚಿಕೊಂಡ ಪ್ರಧಾನಿ; ಫಿಟ್ನೆಸ್ ಸವಾಲಿಗೆ ಐಪಿಎಸ್ ಅಧಿಕಾರಿಗಳ ನಾಮಾಂಕನ


 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿರಾಟ್ ಕೊಹ್ಲಿ ಒಡ್ಡಿದ್ದ ಫಿಟ್ನೆಸ್ ಸವಾಲು ಅಂಗೀಕರಿಸಿದ್ದು, ಇಂದು ತಮ್ಮ ಫಿಟ್ನೆಸ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

“ನನ್ನ ಬೆಳಗಿನ ವ್ಯಾಯಾಮದ ಕೆಲವು ಕ್ಷಣಗಳು ಇಲ್ಲಿವೆ. ಯೋಗದ ಹೊರತಾಗಿ, ನಾನು ಪಂಚತತ್ವ ಅಥವಾ ಪೃಥ್ವಿ, ಜಲ, ವಾಯು, ಅಗ್ನಿ, ಆಕಾಶವೆಂಬ ಪಂಚಭೂತಗಳ ಸ್ಫೂರ್ತಿಯಿಂದ ಪಥದಲ್ಲಿ ನಡೆಯುತ್ತೇನೆ. ಇದು ಸಂಪೂರ್ಣವಾಗಿ ಪುನಶ್ಚೇತನ ಮತ್ತು ಉಲ್ಲಾಸಕರ. ಜೊತೆಗೆ ನಾನು ಶ್ವಾಸದ ವ್ಯಾಯಾಮವನ್ನೂ ಅಭ್ಯಾಸ ಮಾಡುತ್ತೇನೆ. #HumFitTohIndiaFit. 

ದೃಢತೆಗಾಗಿ ದಿನದ ಕೆಲ ಭಾಗವನ್ನು ಮುಡಿಪಾಗಿಡುವಂತೆ ನಾನು ಪ್ರತಿಯೊಬ್ಬ ಭಾರತೀಯರಿಗೂ ಮನವಿ ಮಾಡುತ್ತೇನೆ.

ನಿಮಗೆ ಸೂಕ್ತವೆನಿಸುವ ಯಾವುದೇ ರೀತಿಯ ವ್ಯಾಯಮ ಅಭ್ಯಾಸ ಮಾಡಿ, ನಿಮ್ಮ ಬದುಕಿನಲ್ಲಿ ಅದು ತರುವ ಧನಾತ್ಮಕವಾದ ಬದಲಾವಣೆಯನ್ನು ಆಗ ನೀವೇ ಕಾಣುತ್ತೀರಿ.! #FitnessChallenge #HumFitTohIndiaFit.”

ಫಿಟ್ನೆಸ್ ಸವಾಲನ್ನು ಮುಂದುವರಿಸುವ ನಿಟ್ಟಿನಲ್ಲಿ ಪ್ರಧಾನಿಯವರು, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಎಚ್.ಡಿ. ಕುಮಾರಸ್ವಾಮಿ, ಟೇಬಲ್ ಟೆನಿಸ್ ಆಟಗಾರ್ತಿ ಕುಮಾರಿ ಮಾನಿಕಾ ಬಾತ್ರಾ ಮತ್ತು ಇಡೀ ಐಪಿಎಸ್ ಸಮುದಾಯ ಅದರಲ್ಲೂ 40 ವರ್ಷ ಮೀರಿದ ಐಪಿಎಸ್ ಬಳಗವನ್ನು ಫಿಟ್ನೆಸ್ ಸವಾಲಿಗೆ ನಾಮಾಂಕನ ಮಾಡಿದ್ದಾರೆ.

“ನಾನು ಈ ಕೆಳಗಿನವರುಗಳನ್ನು ಫಿಟ್ನೆಸ್ ಗೆ ನಾಮಾಂಕನ ಮಾಡಲು ಹರ್ಷಿಸುತ್ತೇನೆ #FitnessChallenge:

ಕರ್ನಾಟಕ ಮುಖ್ಯಮಂತ್ರಿ ಶ್ರೀ ಎಚ್.ಡಿ. ಕುಮಾರಸ್ವಾಮಿ

2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಅತಿ ಹೆಚ್ಚು ಪದಕ ಗೆದ್ದುಕೊಟ್ಟವರಲ್ಲಿ ಒಬ್ಬರಾದ ಭಾರತದ ಹೆಮ್ಮೆಯ ಮಾನಿಕಾ ಬಾತ್ರಾ

ಇಡೀ ಅದರಲ್ಲೂ 40 ವರ್ಷ ಮೀರಿದ ಐ.ಪಿ.ಎಸ್. ಸಮುದಾಯ”, ಎಂದು ಪ್ರಧಾನಿ ತಿಳಿಸಿದ್ದಾರೆ.