ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ತಾಂತ್ರಿಕ ಇನ್ಟರ್ನ್ ತರಬೇತಿ ಕಾರ್ಯಕ್ರಮ (ಟಿಐಟಿಪಿ)ಗಾಗಿ ಭಾರತ ಮತ್ತು ಜಪಾನ್ ನಡುವೆ ಸಹಕಾರ ಒಪ್ಪಂದ (ಎಂ.ಓ.ಸಿ.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಭಾರತದ ಗೌರವಾನ್ವಿತ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವರು 2017ರ ಅಕ್ಟೋಬರ್ 16-18ರ ಅವಧಿಯಲ್ಲಿ ಟೋಕಿಯೋಗೆ ಭೇಟಿ ನೀಡುವ ವೇಳೆ ಈ ಎಂ.ಓ.ಸಿ.ಗೆ ಅಂಕಿತ ಹಾಕುವ ನಿರೀಕ್ಷೆ ಇದೆ. ತಾಂತ್ರಿಕ ಇನ್ಟರ್ನ್ ತರಬೇತಿ ಕಾರ್ಯಕ್ರಮ (ಟಿಐಟಿಪಿ)ವು ಭಾರತೀಯ ತಾಂತ್ರಿಕ ತರಬೇತಿ ಆಕಾಂಕ್ಷಿಗಳನ್ನು ಮೂರರಿಂದ ಐದು ವರ್ಷಗಳ ಕಾಲಾವಧಿಗೆ ವೃತ್ತಿ ತರಬೇತಿಗಾಗಿ ಜಪಾನ್ ಗೆ ಕಳುಹಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ಈ ಎಂ.ಓ.ಸಿ.ಯು ಎರಡೂ ದೇಶಗಳ ನಡುವೆ ಕೌಶಲ ಅಭಿವೃದ್ಧಿ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ದಾರಿ ಮಾಡಿಕೊಡಲಿದೆ ಎಂದು ನಿರೀಕ್ಷಿಸಲಾಗಿದೆ.
******