ಪಿಎಂಇಂಡಿಯಾ
ತಾಂಜೇನಿಯಾ ಮತ್ತು ಇತರ ಕೆಲವು ಆಫ್ರಿಕಾದ ದೇಶಗಳ 30 ಸೌರ ತಾಯಂದಿರು ಸೌರ ಲಾಂದ್ರಗಳ ಮತ್ತು ಮನೆ ಬಳಕೆಯ ವಿದ್ಯುತ್ ವ್ಯವಸ್ಥೆಯ ನಿರ್ಮಾಣ, ದುರಸ್ತಿ ಮತ್ತು ನಿರ್ವಹಣೆ ಕುರಿತಂತೆ ಪ್ರಧಾನಮಂತ್ರಿಯವರಿಗೆ ಇಂದು ತಮ್ಮ ಕೌಶಲ ಪ್ರದರ್ಶಿಸಿದರು. ಅವರು ತಮ್ಮ ಜೇನು ಸಂಗ್ರಹಣೆ ಮತ್ತು ಹೊಲಿಗೆಯ ಅಭ್ಯಾಸವನ್ನೂ ಪ್ರದರ್ಶಿಸಿದರು ಮತ್ತು ‘ವೀ ಶೇಲ್ ಓವರ್ ಕಮ್’ ಎಂಬ ಹಾಡನ್ನೂ ಹಾಡಿದರು.
ಭಾರತ ಸರ್ಕಾರದ ಬೆಂಬಲಿತ ಕಾರ್ಯಕ್ರಮದ ಅಡಿ ಆಫ್ರಿಕಾದಲ್ಲಿ ಸೌರ ಲಾಂದ್ರಗಳ ಮತ್ತು ಮನೆ ಬಳಕೆಯ ಸೌರ ವಿದ್ಯುತ್ ತಯಾರಿಕೆ, ಸ್ಥಾಪನೆ, ನಿರ್ವಹಣೆ, ಬಳಕೆ, ದುರಸ್ತಿಯ ಬಗ್ಗೆ ಬೇರ್ಫುಟ್ ಕಾಲೇಜ್, ತಿಲೋನಿಯಾ (ರಾಜಾಸ್ಥಾನ್) ಗ್ರಾಮೀಣ ಮಹಿಳಾ ಸೌರ ಎಂಜಿನಿಯರು(ಸೋಲಾರ್ ಮಾಮ್ಸ್) ಗಳನ್ನು ಉತ್ತೇಜಿಸಿ ಮತ್ತು ತರಬೇತಿಗೊಳಿಸುತ್ತಿದೆ. ಸೌರ ವಿದ್ಯುದ್ದೀಕರಣ ಕೌಶ (ತರಬೇತಿ) ಮತ್ತು ಸೌರ ಕಿಟ್ ಗಳನ್ನು ತರಬೇತುದಾರರಿಗೆ ವಿತರಿಸಲು ಅವರು ಬೇರ್ ಫುಟ್ ಮಹಿಳಾ ವೃತ್ತಿ ತರಬೇತಿ ಕಾಲೇಜನ್ನು ತಾಂಜೇನಿಯಾದ ದ್ವೀಪ ಜಂಜಿಬರ್ ನಲ್ಲಿ ಮತ್ತು ಆಫ್ರಿಕಾದ ಇತರ ರಾಷ್ಟ್ರಗಳಲ್ಲಿ ಸ್ಥಾಪಿಸಿದ್ದಾರೆ. ಈ ಕಾಲೇಜುಗಳು ಜೇನು ಸಾಕಣೆ, ಹೊಲಿಕೆ ಇತ್ಯಾದಿ ವಿವಿಧ ಉದ್ಯಮಶೀಲತಾ ಕೌಶಲಗಳನ್ನು ಬೆಂಬಲಿಸುತ್ತವೆ. ಸೋಲಾರ್ ಮಾಮ್ಸ್ ಸೌರ ಕಿಟ್ ಗಳನ್ನು ಸ್ಥಾಪಿಸಿದ್ದಾರೆ, ಮತ್ತು ಈ ಸೌರ ವಿದ್ಯುತ್ ಸಾಧನಗಳನ್ನು ತಮ್ಮ ಸಮುದಾಯದಲ್ಲಿ ತಾವೇ ನಿರ್ವಹಿಸುತ್ತಿದ್ದಾರೆ.
AKT
An interaction with the Solar Mamas is next on the PM's schedule. pic.twitter.com/LviacKfR02
— PMO India (@PMOIndia) July 10, 2016
The hardwork & dedication of the Solar Mamas impressed me. Enjoyed interacting with them. pic.twitter.com/G79TjC2PnB
— Narendra Modi (@narendramodi) July 10, 2016