ಪಿಎಂಇಂಡಿಯಾ
ಕಾಶಿಯಲ್ಲಿ ಇಂದು ಅನೇಕ ಯೋಜನೆಗಳ ಶಂಕು ಸ್ಥಾಪನೆ, ಲೋಕಾರ್ಪಣೆ, ಆರಂಭ ಮಾಡುವ ಅವಕಾಶ ನನಗೆ ದೊರೆತಿದೆ.ಇಂದು ಒಂದೇ ದಿನದಲ್ಲಿ ಸರಿಸುಮಾರು 2100ಕೋಟಿ ರೂಪಾಯಿ ಮೌಲ್ಯದ ವಿಭಿನ್ನ ಯೋಜನೆಗಳು ಕಾಶಿಗೆ ದೊರೆಯುತ್ತಿವೆ. ಇಂದು ವಿಶೇಷವಾಗಿ ಕಡುಬಡವರ ಕುಟುಂಬಗಳಿಗೂ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಗಳಲ್ಲಿ ಸೌಲಭ್ಯಗಳು ದೊರೆಯಲಿ ಅವರ ಆರೋಗ್ಯಕ್ಕಾಗಿ ಆಧುನಿಕ ಉಪಕರಣಗಳ ಸೌಲಭ್ಯ ಅವರಿಗೆ ದೊರೆಯಲಿ. ಇಂದು ESIC ಆಸ್ಪತ್ರೆಗಳ ನವೀನೀಕರಣಗೊಳಿಸುವುದು, ಮೊದಲು ಎಷ್ಟು ಸಾಮರ್ಥ್ಯವಿತ್ತೋ ಅದನ್ನು ಮೊದಲಿಗಿಂತ ಸುಮಾರು ಎರಡಕ್ಕಿಂತ ಹೆಚ್ಚು ವೃಧ್ಧಿಸಿರುವುದು, ಆಧುನಿಕತೆಯೊಂದಿಗೇ ಕಡುಬಡವರೂ ಸಾಮಾನ್ಯ ಕೂಲಿಕಾರ್ಮಿಕರೂ ಇದರಿಂದ ಚಿಕಿತ್ಸಾಸೇವೆಯ ಲಾಭವನ್ನು ಪಡೆದುಕೊಳ್ಳಲೆಂಬುದು ಇದರ ಉದ್ದೇಶ್ಯ. ಹೀಗಾಗಿ ಭಾರತ ಸರ್ಕಾರವು ಈ ಸಂಪೂರ್ಣ ಯೋಜನೆಯನ್ನು ತನ್ನ ಕೈಗೆತ್ತಿಕೊಂಡು ಇಲ್ಲಿಯ ಬಡವ, ಕೂಲಿಗಾರರಿಗೆ ಸೌಲಭ್ಯ ಒದಗಿಸುವಲ್ಲಿ ಒಂದು ಮಹತ್ವಪೂರ್ಣ ಹೆಜ್ಜೆಯನ್ನಿಟ್ಟಿದೆ. ವ್ಯವಸ್ಥೆಯಲ್ಲಿ ಆಗುತ್ತಿರುವ ಈ ವಿಸ್ತರಣೆ, ಬದಲಾವಣೆ ಆಧುನಿಕ ತಂತ್ರಜ್ಞಾನವನ್ನು ಇದರೊಡನೆ ಜೋಡಿಸುವ ದಿಕ್ಕಿನಲ್ಲಿ ಆಗುತ್ತಿರುವ ಪ್ರಯತ್ನಗಳು ಈ ಪ್ರದೇಶಕ್ಕೆ ಆರೋಗ್ಯದ ದೃಷ್ಟಿಯಲ್ಲಿ ಒಂದು ಹೊಸ ಕೊಡುಗೆಯನ್ನು ನೀಡಲಿವೆ.
ಇದೀಗ ನಾನು ಕಾಶಿವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಅಲ್ಲಿ ಒಂದು ಕ್ಯಾನ್ಸರ್ ರೀಸರ್ಚ ಇನ್ಸಿಟಿಟ್ಯೂಟ್ ನ ಶಂಕುಸ್ಥಾಪನೆ ಮಾಡಿದೆ. ಈ ಪ್ರದೇಶದಲ್ಲಿ ಎಲ್ಲಿ ಕ್ಯಾನ್ಸರ್ ರೋಗ ಕಂಡುಬಂದರೂ ಮುಂಬಯಿಗೆ ಹೋಗಬೇಕಾಗುತ್ತದೆ. ಮುಂಬಯಿಯ ಆಸ್ಪತ್ರೆಗಳಲ್ಲಿ ಎಷ್ಟು ಸಮಯದನಂತರ ನಿಮ್ಮ ನಂಬರ್ ಬರುವುದೆಂಬುದು ನನಗೆ ಗೊತ್ತು. ಏಕೆ ನಾವು ಮುಂಬಯಿಯಲ್ಲಿನ ಆಸ್ಪತ್ರೆಗಳಲ್ಲಿರುವಂತೆ ಉತ್ತಮ ಸೌಲಭ್ಯಗಳನ್ನೊಳಗೊಂಡ ಆಸ್ಪತ್ರೆಯನ್ನು ಉತ್ತರಪ್ರದೇಶದಲ್ಲೇಕೆ ತೆರೆಯಬಾರದು. ವಿಶೇಷವಾಗಿ ಪೂರ್ವೀ ಉತ್ತರಪ್ರದೇಶದಲ್ಲಿರಲಿ. ಇದರ ಲಾಭ ನೆರೆಯ ಜಾರ್ಖಂಡ ಹಾಗೂ ಬಿಹಾರಗಳಿಗೂ ದೊರೆಯಬಹುದಲ್ಲ. ಇಂಥ ದೊಡ್ಡದೊಂದು ಯೋಜನೆಯ ಶಂಕುಸ್ಥಾಪನೆಯನ್ನು ನಾನಿಂದು ಕಾಶಿವಿಶ್ವವಿದ್ಯಾಲಯದಲ್ಲಿಯ ಕಾರ್ಯಕ್ರಮದಲ್ಲಿ ಮಾಡಿರುತ್ತೇನೆ. ಇದರಿಂದ ಇಡೀ ಪ್ರದೇಶಕ್ಕೆ ಲಾಭ ದೊರೆಯಲಿದೆ. ಆರೋಗ್ಯದ ಕ್ಷೇತ್ರದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕೆಲಸಮಾಡುವ ವಿಚಾರದಲ್ಲಿ ಸಾರ್ವಜನಿಕ ಖಾಸಗಿ ಪಾಲುದಾರಿಕೆಯ ಮಾದರಿ ಕೂಡ ಖಾಸಗಿ ಆಸ್ಪತ್ರೆಗಳಷ್ಟೇ ಮಹತ್ವ ಪಡೆದುಕೊಳ್ಳುತ್ತದೆ. ಭಾರತದ ಪುತ್ರರಾದ ಶ್ರೀಮಾನ್ ಶೆಟ್ಟಿಯವರು ಕರ್ನಾಟಕದಲ್ಲಿ ನೆಲೆಸಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಹಾಗೂ ಅನೇಕ ಕಡೆಗಳಲ್ಲಿ ಆಸ್ಪತ್ರೆಗಳನ್ನು ನಡೆಸುತ್ತಾರೆ. ಆದರೆ ಅವರು ಆರೋಗ್ಯದ ಕ್ಷೇತ್ರದಲ್ಲಿ ಅತಿ ಬಹಳ ವಿಸ್ತೃತವಾದ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಅವರೂ ಕೂಡ ಕಾಶಿಯಿಂದ ಆಕರ್ಷಿತರಾಗಿ ತಮ್ಮ ಒಂದು ಖಾಸಗಿ ಆಸ್ಪತ್ರೆಯನ್ನು ಕಾಶಿಯಲ್ಲಿ ತೆರೆಯಲಿದ್ದಾರೆ. ಇಂದು ಅದರ ಶಂಕು ಸ್ಥಾಪನೆ ಮಾಡುವ ಅವಕಾಶ ಸಹ ನನಗೆ ದೊರೆತಿದೆ. 500 ಹಾಸಿಗೆಗಳ ಆಸ್ಪತ್ರೆಯನ್ನು ಕಾಶಿಯಲ್ಲಿ ತೆರೆಯುವುದು ಕಾಶಿಗೆ ಬಹಳ ವಿಶೇಷವಾದ ಕೊಡುಗೆಯೇ ಸರಿ. 500 ಹಾಸಿಗೆಗಳ ಆಸ್ಪತ್ರೆಯಲ್ಲಿ 200 ಹಾಸಿಗೆಗಳನ್ನು ಸಂಪೂರ್ಣವಾಗಿ ಬಡವರಿಗಾಗಿಯೇ ಮೀಸಲಿಡಲಾಗಿದೆ, ಇನ್ನುಳಿದ 300 ಹಾಸಿಗೆಗಳು super speciality ಸೇವೆಗಳಿಗಾಗಿ. ಈ ರೀತಿ ಒಂದುರೀತಿಯಲ್ಲಿ ಬಡವರ ಕಲ್ಯಾಣಕಾರ್ಯವಾದಂತಾಯಿತು, ಈ ಪ್ರದೇಶದಲ್ಲಿ ಇಷ್ದು ದೊಡ್ಡ ಆಸ್ಪತ್ರೆ ಆರಂಭಗೊಂಡನಂತರ ಸಾವಿರಾರು ಯುವಕರಿಗೆ ಕೆಲಸ ಸೃಷ್ಟಿಯಾಗಲಿದೆ. ಆರೋಗ್ಯ ವಲಯದಲ್ಲಿ ಕೆಲಸ ಮಾಡುವ ಒಂದು ಹೊಸ ಪ್ರಕ್ರಿಯೆ ಪ್ರಾರಂಭ ಆಗುತ್ತದೆ. Paramedical ಆಗಿರಬಹುದು, ಶುಶ್ರೂಷಾ ಸಿಬ್ಬಂದಿ ಆಗಿರಬಹುದು, ಆಸ್ಪತ್ರೆಯ ನಿರ್ವಹಣೆಯಿರಬಹುದು, ಈ ಬಂಡವಾಳದಿಂದ ಈ ಕ್ಷೇತ್ರಕ್ಕೆ ಬಹು ದೊಡ್ಡ ಪ್ರಮಾಣದ ಲಾಭವಾಗಲಿದೆ.
ಇಂದು ನಾನು ಉದ್ಘಾಟನೆಮಾಡಿದ ಯೋಜನೆಗಳನ್ನು ಮುಂದುವರೆಸುವ ದಿಕ್ಕಿನಲ್ಲಿ ನಮ್ಮ ಮಂತ್ರಿಯಾದ ಶ್ರೀಮತಿ ಸ್ಮೃತಿ ಇರಾನಿಯವರು ಬಹಳ ಸೂಕ್ಷ್ಮತೆ, ಹಾಗೂ ಪರಿಶ್ರಮಗಳೊಡನೆ, ತನು ಮನಗಳೊಡನೆ ಕಾರ್ಯನಿರ್ವಹಿಸಿರುತ್ತಾರೆ. ಅವರ ನಿರಂತರ ಪ್ರಯತ್ನದ ಪರಿಣಾಮದಿಂದಲೇ ನನಗೆ ಇಷ್ಟು ಕಡಿಮೆ ಸಮಯಾವಧಿಯಲ್ಲಿ ಮೊದಲ ಹಂತದ ಉದ್ಘಾಟನೆ ಮಾಡುವ ಸೌಭಾಗ್ಯ ಲಭಿಸಿತು. ನಾನು ಸ್ಮೃತಿಯವರನ್ನು ಹಾಗೂ ಅವರ ಸಂಪೂರ್ಣ ತಂಡವನ್ನು ಹಾಗೂ ಈ ವಿಭಾಗಕ್ಕೆ ಈ ಮೊದಲು ಮಂತ್ರಿಗಳಾಗಿದ್ದ ಗಂಗ್ವಾರ್ ರವರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಇಂದು ನಿರ್ಧರಿಸಿದ ಸಮಯಾವಧಿಯಲ್ಲಿ ಮೊದಲ ಹಂತ ಇದು ಬರೀ ಕಾಶಿಯ ಜನತೆಗಷ್ಟೇ ಅಲ್ಲ, ಆಕ್ಕ ಪಕ್ಕದ ಪ್ರದೇಶಕ್ಕೆಲ್ಲಾ , ಈ ರೀತಿಯ ಕೈ ಕೆಲಸಮಾಡುವವರಿಂದ ದೊರೆತಿರುವ ಲಾಭವೆನ್ನಬಹುದು. ಕಾಶಿ ಒಂದು ಪವಿತ್ರ ಕ್ಷೇತ್ರ ಮಾತ್ರವಲ್ಲ, ಒಂದು ಪ್ರವಾಸಿ ತಾಣವೂ ಹೌದು. ಇಂಥದ್ದೊಂದು ವ್ಯವಸ್ಥೆಯು ಕಾಶಿಯನ್ನು ವಿಶ್ವಕ್ಕೆ ಪರಿಚಯಿಸಬಲ್ಲ ಬಹು ದೊಡ್ಡ ಆಧಾರವೂ ಕುಶಲ ಕಲೆ ಆಗಬಹುದು. ಈಗ ಕಾಶಿಗೆ ಬರುವ ಜನರನ್ನು ಅಲ್ಲಿಗೂ ಕರೆದುಕೊಂಡು ಹೋಗಬೇಕಾಗುವುದು. ಇಲ್ಲಿಯ ರಿಕ್ಷಾವಾಲಗಳಿಗೆ, ಟ್ಯಾಕ್ಸಿವಾಲಗಳಿಗೂ ಆ ಸ್ಥಾನ ಗೊತ್ತಿರಲೇಬೇಕು. ಅಲ್ಲಿಗೆ ಹೋಗಿ ಆ ಪ್ರವಾಸಿಗಳು ಈ ಪ್ರದೇಶದ ಜನರ ಕೈಲಿ ಯಾವರೀತಿ ಕುಶಲತೆಯಿದೆ ಎಂಬ ಜ್ಞಾನ ಪಡೆಯುತ್ತಾರೆ. ಎಂಥೆಂಥ ವಸ್ತುಗಳನ್ನು ತಯಾರು ಮಾಡುತ್ತಾರೆ ಆ ವಸ್ತುವಿಗೆ ವಿಶ್ವ ಮಾರುಕಟ್ಟೆ ದೊರೆಯಲಿ, ಅವರು ಅನುಸರಿಸುವ ವಿಧ-ವಿಧಾನಗಳಿಗೂ ಮಾನ್ಯತೆ ದೊರೆಯಲಿ, ಭಾರತದ ಈ ಮಹಾನ್ ಪರಂಪರೆಯನ್ನು ಕಾಶಿಯ ಜನತೆ ಹೇಗೆ ಕಾಪಾಡಿಕೊಂಡು ಬಂದಿದೆ ಎಂಬುದರ ಪರಿಚಯನೀಡುವ ಉತ್ತಮ ಕಾರ್ಯಕ್ಕಾಗಿಯೇ ಈ ವ್ಯಾಪಾರ ಮಾಳಿಗೆ ಹಾಗೂ ಮ್ಯುಜಿಯಂಗಳನ್ನು ನಿರ್ಮಿಸಿರುವುದು. ನಿನ್ನೆ ರಾತ್ರಿ ಕೆಲವು ಚಿತ್ರಗಳನ್ನು ಇಲ್ಲಿಯ ಜನರು ನನಗೆ ಕಳಿಸಿದ್ದರು. ಅದು ಕಾಶಿಯ ನೆಲದಲ್ಲಿ ಇಂಥದ್ದೊಂದರ ನಿರ್ಮಾಣವೂ ಇಷ್ಟು ಕಡಿಮೆ ಸಮಯದಲ್ಲಿ ಆಗುವುದೆಂಬ ಬಹಳ ಅದ್ಭುತ ನೋಟವಾಗಿತ್ತು. ಇಷ್ಟೊಂದು ಪುರಾತನ ನಗರದೊಡನೆ ಆಧುನಿಕ ಕಟ್ಟಡ, ಪ್ರಾಚೀನ ಕಲೆಯೊಡನೆ ಆಧುನಿಕ ಪರಿಚಯ. ಹೀಗೆ ಇಂದು ಶುಭಯೋಗದೊಡನೆ ಜವಳಿ ಕ್ಷೇತ್ರಕ್ಕೆ ಕಾಶಿಯ ವಿಶೇಷ ಪರಿಚಯವಾಗುತ್ತಿದೆ. ಕುಶಲ ಕಲೆ ಕಾಶಿಯ ವಿಶಿಷ್ಟ ಪರಿಚಯವೇ ಆಗಿದೆ. ಈ ನೆಲದಲ್ಲಿರುವ ಕೈ ಬೆರಳಿನ ಚಾಕಚಕ್ಯತೆಯೊಡನೆ ಅತ್ಯದ್ಭುತವಾಗಿ ಒಂದು ವಸ್ತುವನ್ನು ನಿರ್ಮಿಸುವ ಸಾಮರ್ಥ್ಯವನ್ನು ಇಡೀ ವಿಶ್ವವೇ ಬೆಕ್ಕಸ ಬೆರಗಾಗಿ ನೋಡಲಿದೆ ಹಾಗೂ ಗುರುತಿಸಲಿದೆ.
ನಮ್ಮ ಬಳಿ ಪುರಾತನ ಪರಂಪರೆಯ ಸಾಧನಗಳಿವೆ ಅವುಗಳಲ್ಲಿ ಬದಲಾವಣೆ ತರುವುದು ಅವಶ್ಯಕ. ತಾಂತ್ರಿಕ ಹಸ್ತಕ್ಷೇಪ (Technological Intervention) ಅವಶ್ಯಕವಾಗುತ್ತದೆ. ಹಸ್ತಕ್ಷೇಪ (Intervention) ಅವಶ್ಯಕವಾಗುತ್ತದೆ. ಇಂದು ಕೆಲವು ಸಂಗತಿಗಳು ನನಗೆ ಕೈ ಮಗ್ಗ ಹಾಗೂ ಅದರ ಸಹಕಾರವನ್ನು ಪರಿಚಯಿಸಿದರು. ಬೇರೆ-ಬೇರೆ ತಯಾರಿಕೆಗಳಲ್ಲಿ ಕೈ ಮಗ್ಗವನ್ನು ಉಪಯೋಗಮಾಡಲಾಗುತ್ತದೆ. ಅದರಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಆಧುನಿಕ ವ್ಯವಸ್ಥೆಯ ಕಾರಣದಿಂದಾಗಿ ಅದರ ಸರಳತೆ ಹೆಚ್ಚಿ, ಆದಾಯವೂ ಹೆಚ್ಚಾಗುತ್ತದೆ. ಆ ವಸ್ತುಗಳ ಬಗ್ಗೆ ಅದರಲ್ಲಿ ವಿಶೇಷ ಒತ್ತುಕೊಡಲು ಪ್ರಯತ್ನಿಸಲಾಗಿದೆ. ಇಡೀ ದೇಶದಲ್ಲಿ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒಂದು ಗುರುತಿನ ಚೀಟಿ ನೀಡುವ ಪ್ರಚಾರ ನಡೆದಿದೆ. ನಮ್ಮ ದೇಶದ ಬಳಿ ಬೇಕಾದಷ್ಟು ಸಾಮರ್ಥ್ಯವಿದೆ ಆದರೆ ಅದೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಅದರ ದಾಖಲೆ ಇಲ್ಲ ಅಥವಾ ಗುರುತೂ ಇಲ್ಲದಂತಾಗಿದೆ. ನಮ್ಮ ಸಾಮರ್ಥ್ಯ, ಒಬ್ಬ ಕಳೆದುಹೋದ ವ್ಯಕ್ತಿಯಂತಾಗಿದೆ. ಇದರಿಂದ ಕೂಡ ನಮಗೆ ಅನೇಕಬಾರಿ ಬಹಳ ದೊಡ್ಡ ನಷ್ಟವುಂಟಾಗುತ್ತದೆ. ಯಾವುದಕ್ಕೆ ಗುರುತು ಇರುತ್ತೋ ಅದು ಬ್ರಾಂಡ್ ಆಗಿ ಬಿಡುತ್ತೆ. ಆಗ ಅದರ ಮೌಲ್ಯ ತಂತಾನೇ ವೃಧ್ಧಿಯಾಗುತ್ತದೆ. ಭಾರತದ ಕಡುಬಡವನ ಬಳಿ ಪ್ರತಿಭೆ ಇದ್ದರೆ, ಕೌಶಲ್ಯ ಇದ್ದರೆ, ಕೆಲಸ ಮಾಡುವ ಮನಸ್ಥಿತಿ ಇದ್ದರೆ ಅವನಿಗೊಂದು ಗುರುತು (Identity) ಯಾಕಿರಬಾರದು. ಅವನೇ ಸ್ವತಃ ಒಂದು ಬ್ರಾಂಡ್ ಆಗಿರುತ್ತಾನೆ. ನಮ್ಮ ದೇಶದಲ್ಲಿ ಈ ರೀತಿಯ ಕೆಲಸ ಮಾಡುವ ಕೋಟಿ ಕೋಟಿ ಜನರು ಸ್ವತಃ ತಮ್ಮಲ್ಲಿತಾವೇ ಒಂದು ಬ್ರಾಂಡ್ ಆಗಿರುತ್ತಾರೆ. ಈ ಬ್ರಾಂಡನ್ನು ನಾವಿನ್ನೂ ವಿಶ್ವಕ್ಕೆ ಪರಿಚಯಿಸಲಾಗಿಲ್ಲ. ಈ ಗುರುತಿನ ಮೂಲಕ ಅವರ ಸಾಮರ್ಥ್ಯಕ್ಕೆ ಶಕ್ತಿ ನೀಡುವ ಕೆಲಸವನ್ನು, ಇದೇ ಕ್ಷೇತ್ರವನ್ನು ವಿಕಾಸಗೊಳಿಸುವ ಕಾರ್ಯವನ್ನು ಮಾಡುವುದಾದಲ್ಲಿ “ನೋಡಿ ಈ ಗುರುತಿನ ಇಷ್ಟು ಮಂದಿ ನಮ್ಮಲ್ಲಿದ್ದಾರೆ . ಇವರಿಗಾಗಿ ಯೋಜನೆಗಳನ್ನು ಮಾಡಿರಿ, ಇವರಿಗೆ ಅವಕಾಶ ನೀಡಿರಿ “.ಎಂಬುದಾಗಿ ತಕ್ಷಣ ನಿರ್ಧಾರಿಸಬಹುದು. ಇದರಿಂದ ಇದ್ದಕ್ಕಿದ್ದಂತೆ ಅವರ ಕೆಲಸಗಳಿಗೆ ಪ್ರೋತ್ಸಾಹ ದೊರೆಯುತ್ತದೆ. ಆಧುನಿಕ ತಂತ್ರಜ್ಞಾನದ ಮೂಲಕ ವ್ಯಕ್ತಿಗಳನ್ನು ಗುರುತಿಸುತ್ತಾ, ಅವರ ಸಾಮರ್ಥ್ಯವನ್ನು ಈ ಗುರುತಿನ ಚೀಟಿ ನೀಡುವ ಅವಕಾಶ ಕೂಡ ನನಗೆ ಇಂದು ದೊರೆತಿದೆ. ಕಾರ್ಪೆಟ್ ಮಾಡುವವರಿಗೆ ಹೋಸ ಆಧುನಿಕ ಮಗ್ಗ ನೀಡಿ ಅದರಿಂದ ಅವರು ರಫ್ತು ಮಾಡಬಲ್ಲ ಮಟ್ಟದ ನೆಲಹಾಸುಗಳನ್ನು ಮಗ್ಗದ ಸಹಾಯದಿಂದ ತಯಾರು ಮಾಡಬಲ್ಲರು. ಆ ಮಗ್ಗಗಳ ವಿತರಣೆಯ ಅವಕಾಶವೂ ಸಹ ನನಗೆ ದೊರೆತಿದೆ.
ಇಲ್ಲಿ ಕೆಲವು ಯುವಕರಿಗೆ ನಾನು ಆಟದ ಕಿಟ್ಟುಗಳನ್ನು ನೀಡುತ್ತಿದ್ದೇನೆ, ಆಟವು ನಮ್ಮ ಯುವಕರ ಜೀವನದ ಭಾಗವಾಗಬೇಕು. ಹೀಗಾದಾಗಲೇ ಇಲ್ಲಿ ಬೇರೆಯ ವಾತಾವರಣದ ಸೃಷ್ಟಿಯಾಗುತ್ತದೆ. ಕ್ರೀಡಾಪಟು ಎಲ್ಲರಿಗೂ ಇಷ್ಟವಾದದ್ದು, ಆದರೆ ಕ್ರೀಡೆಯೆ ಇಲ್ಲದೇ . ಕ್ರೀಡಾಪಟು ಸಂಭವವಾಗಲಾರದು. ಆದ್ದರಿಂದ ಆಟಕ್ಕೆ ಉತ್ತೇಜನ ನೀಡಬೇಕೆಂದು ನಾವುಗಳು ಪ್ರಯತ್ನಿಸುತ್ತಿದ್ದೇವೆ. ಇಂದು ಇಲ್ಲಿ ಅನೇಕ ಯೋಜನೆಗಳನ್ನು ಲೋಕಾರ್ಪಣೆಗೊಳಿಸುವ ಅವಕಾಶ ದೊರೆತಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಯಾವ ಯೋಜನೆಗಳು ಇಂದು ಶಂಕುಸ್ಥಾಪನೆಗೊಂಡು ಆರಂಭಗೊಂಡಿವೆಯೋ ಅವನ್ನೆಲ್ಲ ನಿರ್ದಿಷ್ಟ ಸಮಯಕ್ಕೆ ಮುಂಚೆ ಅಥವಾ ನಿಗಧಿತ ಸಮಯದೊಳಗೆ ಪೂರ್ಣಗೊಳಿಸುವೆವು ಹಾಗೂ ಇಲ್ಲಿಯ ಜನತಾ ಜನಾರ್ಧನರ ಸೇವೆಗೆ ಸಮರ್ಪಿಸುವೆವು ಎಂಬ ನಂಬಿಕೆ ನನಗಿದೆ. ನಾನು ನಿಮ್ಮೆಲ್ಲರಿಗೂ ತುಂಬಾ ಕೃತಜ್ಞನಾಗಿರುತ್ತೇನೆ. ಧನ್ಯವಾದಗಳು.
If someone is suffering from cancer, why should one go far for treatment. We decided a cancer research institute should come up here: PM
— PMO India (@PMOIndia) December 22, 2016
This land of Kashi is of spiritual importance and has tremendous tourism potential. It is also a trade centre: PM @narendramodi
— PMO India (@PMOIndia) December 22, 2016
Let us make sports an essential part of our lives: PM @narendramodi in Varanasi
— PMO India (@PMOIndia) December 22, 2016
With beneficiaries of various Government schemes. Our Government is constantly and tirelessly working for the poor, middle class & youth. pic.twitter.com/fKzMhrDLZ1
— Narendra Modi (@narendramodi) December 22, 2016