Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೀರ್ಘಾವಧಿ ವೀಸಾದಡಿ ಭಾರತದಲ್ಲಿ ವಾಸಿಸುತ್ತಿರುವವರಿಗೆ ಸೌಲಭ್ಯ ವಿಸ್ತರಣೆಗೆ ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೀರ್ಘಕಾಲದ ವೀಸಾ ಅಡಿಯಲ್ಲಿ ಆಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ  ಅಲ್ಪಸಂಖ್ಯಾತರು ಅಂದರೆ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಭಾರತದಲ್ಲಿ ಈ ಕೆಳಗಿನ ಸೌಲಭ್ಯಗಳನ್ನುಒದಗಿಸಲು ತನ್ನ ಸಮ್ಮತಿ ಸೂಚಿಸಿದೆ. ಅವರು ಅನುಭವಿಸಿದ ಸಂಕಷ್ಟಗಳನ್ನು ತಗ್ಗಿಸುವುದು ಈ ನಡೆಯ ಉದ್ದೇಶವಾಗಿದೆ ಮತ್ತು ಇದು ಈ ಕೆಳಗಿನವುಗಳನ್ನು ಒಳಗೊಂಡಿದೆ:-

· ಬ್ಯಾಂಕ್ ಖಾತೆ ತೆರೆಯುವುದು
· ಸ್ವಂತ ವಾಸಕ್ಕಾಗಿ ಆಸ್ತಿ ಖರೀದಿಗೆ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ಸೂಕ್ತ ಅನುಕೂಲತೆ ಮಾಡಿಕೊಳ್ಳಲು ಅನುಮತಿ
· ಸ್ವಯಂ ಉದ್ಯೋಗ ಕೈಗೊಳ್ಳಲು ಅನುಮತಿ
· ಆಧಾರ್ ಸಂಖ್ಯೆ, ಪ್ಯಾನ್ ಕಾರ್ಡ್ ಮತ್ತು ಚಾಲನಾ ಪರವಾನಗಿ ಪಡೆಯಲು ಅನುಮತಿ
· ತಾವು ನೆಲೆಸಿರುವ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಮುಕ್ತವಾಗಿ ಓಡಾಡಲು ಅವಕಾಶ
· ಒಂದು ರಾಜ್ಯದಿಂದ ಮತ್ತೊಂದಕ್ಕೆ ಎಲ್.ಟಿ.ವಿ. ದಾಖಲೆಗಳ ವರ್ಗಾವಣೆ
· ಅಲ್ಪಾವಧಿ/ಎಲ್.ಟಿ.ವಿ.ಯನ್ನು ನಿಗದಿತ ಅವಧಿಯೊಳಗೆ ವಿಸ್ತರಣೆ ಮಾಡಿಸಿಕೊಳ್ಳದ್ದಕ್ಕೆ ಹಾಕುವ ದಂಡ ಮನ್ನಾ
· ಅನುಮತಿ ಇಲ್ಲದೆ ಬೇರೆ ಪ್ರದೇಶಕ್ಕೆ ಅರ್ಜಿದಾರರು ಹೋಗಿ ನೆಲೆಸಿದ್ದಲ್ಲಿ ಹಾಲಿ ಇರುವ ನಿವಾಸದಿಂದ ಎಲ್.ಟಿ.ವಿ.ಗೆ ಅರ್ಜಿ ಹಾಕಿಕೊಳ್ಳಲು ಅವಕಾಶ

ಪೌರತ್ವ ಕಾನೂನು 2009ಕ್ಕೆ ತಿದ್ದುಪಡಿ ತರುವ ಮೂಲಕ ಅಂಥ ವ್ಯಕ್ತಿಗಳಿಗೆ ಪೌರತ್ವ ಪಡೆಯಲು ಅವಕಾಶ, ಈ ಅವಕಾಶಗಳು ಈ ಕೆಳಗಿನಂತೆ ನೆರವಾಗಲಿವೆ:-

· ಜಿಲ್ಲಾಧಿಕಾರಿ/ ಡಿಎಂ ಅವರು ಅರ್ಜಿದಾರನಿಗೆ ರಾಜನಿಷ್ಠೆಯ ಪ್ರಮಾಣ ವಚನ ಬೋಧಿಸಲು ಉಪ ವಿಭಾಗಾಧಿಕಾರಿ ದರ್ಜೆಗಿಂತ ಕಡಿಮೆ ಇಲ್ಲದ ಅಧಿಕಾರಿಗೆ ಅಧಿಕಾರ ನೀಡುವ ಹಕ್ಕುಳ್ಳವರಾಗಿರುತ್ತಾರೆ

· ಭಾರತದಲ್ಲಿ ಪ್ರಜೆಗಳ ನೋದಣಿಗಾಗಿ 2 ವರ್ಷಗಳ ಅವಧಿಗೆ  ಈ ಕೆಳಗಿನ 7 ರಾಜ್ಯಗಳ 16 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ಅಧಿಕಾರವನ್ನು ನೀಡಲಾಗಿದೆ

1

ಛತ್ತೀಸಗಢ

ರಾಯಪುರ

2

ಗುಜರಾತ್

ಅಹ್ಮದಾಬಾದ್, ಗಾಂಧಿನಗರ ಮತ್ತು ಕಚ್

3

ಮಧ್ಯಪ್ರದೇಶ

ಭೋಪಾಲ್ ಮತ್ತು ಇಂದೋರ್

4

ಮಹಾರಾಷ್ಟ್ರ

ನಾಗ್ಪುರ, ಮುಂಬೈ, ಪುಣೆ ಮತ್ತು ಥಾಣೆ

5

ದೆಹಲಿ

ಪಶ್ಚಿಮ ದೆಹಲಿ ಮತ್ತು ದಕ್ಷಿಣ ದೆಹಲಿ

6

ರಾಜಾಸ್ಥಾನ

ಜೋದ್ಪುರ ಮತ್ತು ಜೈಪುರ

7

ಉತ್ತರ ಪ್ರದೇಶ

ಲಖನೌ

ಕ್ರ ಸಂ ರಾಜ್ಯಗಳು ಜಿಲ್ಲೆ
 

 

 

 

 

 

 

 

 

 

· ಭಾರತೀಯ ಪೌರತ್ವಕ್ಕೆ ನೋಂದಣಿಯ ಶುಲ್ಕವನ್ನು ಹಾಲಿ ಇರುವ ರೂ.3000ದಿಂದ ರೂ.15000 ಶ್ರೇಣಿಯಿಂದ ರೂ.100ಕ್ಕೆ ಇಳಿಕೆ.

ಹಿನ್ನೆಲೆ:

ದೇಶಗಳಿಗೆ ಸೇರಿದ ಅಲ್ಪಸಂಖ್ಯಾತ ಸಮುದಾಯದವರು ನೆಲೆಸಲು ಕಳೆದ 2 ವರ್ಷಗಲಿಂದ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಆದಾಗ್ಯೂ, ಆಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಸೇರಿದ ಅಲ್ಪಸಂಖ್ಯಾತ ಸಮುದಾಯದವರು ಅಂದರೆ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರು ಭಾರತದಲ್ಲಿ ದೀರ್ಘಾವಧಿ ವೀಸಾದಲ್ಲಿ ವಾಸಿಸುತ್ತಿದ್ದು, ಜೀವನದ ಹಲವು ವಿಷಯಗಳಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಸಚಿವ ಸಂಪುಟದ ಈ ನಿರ್ಧಾರ ಅವರನ್ನು ಈ ಸಂಕಷ್ಟದಿಂದ ದೂರ ಮಾಡುತ್ತದೆ.