ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಈ ಕೆಳಕಂಡ ಪ್ರಸ್ತಾಪಗಳನ್ನು ಅನುಮೋದಿಸಿದೆ:
(a)ಕರಡು ಮಸೂದೆಯಲ್ಲಿ ಪ್ರಸ್ತಾಪಿಸಿರುವಂತೆ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ಕಾಯಿದೆ, 1981ರ ತಿದ್ದುಪಡಿ ಪ್ರಸ್ತಾಪವು ಶಾಸನ ಇಲಾಖೆಯು ಅಗತ್ಯ ಎಂಬುದಾಗಿ ಪರಿಗಣಿಸಿರುವ ಇಂತಹ ಬದಲಾವಣೆಯೊಂದಿಗೆ ಮತ್ತು ಸಾಂದರ್ಭಿಕ ಸ್ವರೂಪದಿಂದ ಕೂಡಿದೆ. ಈ ತಿದ್ದುಪಡಿಗಳಲ್ಲಿ ನಬಾರ್ಡ್ ನ ಅಧಿಕೃತ ಬಂಡವಾಳವನ್ನು 5,000 ಕೋಟಿ ರೂಪಾಯಿಗಳಿಂದ 30ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಳ ಮಾಡುವ ಮತ್ತು ಅಗತ್ಯ ಬಿದ್ದರೆ ಆರ್.ಬಿ.ಐ.ನೊಂದಿಗೆ ಸಮಾಲೋಚಿಸಿ ಕಾಲಾನು ಕಾಲಕ್ಕೆ ಅದನ್ನು 30,000 ಕೋಟಿ ರೂಪಾಯಿಗಿಂತಲೂ ಹೆಚ್ಚು ಮಾಡುವುದಕ್ಕೆ ಅವಕಾಶ ನೀಡುವುದನ್ನೂ ಒಳಗೊಂಡಿದೆ.
(b)ನಬಾರ್ಡ್ ನಲ್ಲಿ ಆರ್.ಬಿ.ಐ. ಹೊಂದಿರುವ ಶೇ.0.4ರಷ್ಟು ಅಂದರೆ 20 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿಯನ್ನು ಭಾರತ ಸರ್ಕಾರಕ್ಕೆ ವರ್ಗಾವಣೆ ಮಾಡುವುದಕ್ಕೆ.
ನಬಾರ್ಡ್ ಕಾಯಿದೆಯ ಈ ಉದ್ದೇಶಿತ ತಿದ್ದುಪಡಿಗಳು ನಬಾರ್ಡ್ ಮ್ಯಾಂಡೇಟ್ ನಲ್ಲಿರುವ ಮಧ್ಯಮ ಉದ್ದಿಮೆ ಮತ್ತು ಕೈಮಗ್ಗಗಳಿಗೆ ಸಂಬಂಧಿಸಿದಂತೆ ದೀರ್ಘ ಶೀರ್ಷಿಕೆ ಮತ್ತು ಕೆಲವು ಸೆಕ್ಷನ್ ಗಳ ಇತರ ತಿದ್ದುಪಡಿಯನ್ನೂ ಒಳಗೊಂಡಿದೆ.
ಅಧಿಕೃತ ಬಂಡವಾಳವನ್ನು ಹೆಚ್ಚಳ ಮಾಡುವ ಉದ್ದೇಶಿತ ಪ್ರಸ್ತಾಪವು, ನಬಾರ್ಡ್ ಕೈಗೊಂಡಿರುವ ಬದ್ಧತೆಗಳಿಗೆ ಅದರಲ್ಲೂ ದೀರ್ಘಕಾಲೀನ ನೀರಾವರಿ ನಿಧಿ ಮತ್ತು ಸಹಕಾರಿ ಬ್ಯಾಂಕ್ ಗಳಿಗೆ ಸಾಲ ನೀಡುವ ಕುರಿತು ಇತ್ತೀಚೆಗೆ ಸಂಪುಟ ಕೈಗೊಂಡ ನಿರ್ಣಯಕ್ಕೆ ಸ್ಪಂದಿಸಲು ಅವಕಾಶ ನೀಡುತ್ತದೆ. ಜೊತೆಗೆ, ಇದು ನಬಾರ್ಡ್ ಗೆ ಹೆಚ್ಚಿನ ಉದ್ಯೋಗ ಸೃಷ್ಟಿಯೂ ಸೇರಿದಂತೆ ಸಮಗ್ರ ಗ್ರಾಮೀಣ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶದ ಪ್ರಗತಿಯನ್ನು ಸಾಧಿಸಲು ತನ್ನ ವಾಣಿಜ್ಯವನ್ನು ಮತ್ತು ತನ್ನ ಚಟುವಟಿಕೆಗಳಿಗೆ ವೇಗ ನೀಡಲು ಅವಕಾಶ ನೀಡುತ್ತದೆ.
ಆರ್.ಬಿ.ಐ. ನಬಾರ್ಡ್ ನಲ್ಲಿ ಹೊಂದಿರುವ ತನ್ನೆಲ್ಲಾ ಶೇರುಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡುವುದರಿಂದ ನಬಾರ್ಡ್ ನಲ್ಲಿ ಶೇರುದಾರನಾಗಿ ಮತ್ತು ಬ್ಯಾಂಕ್ ಗಳ ನಿಯಂತ್ರಕನಾಗಿ ಆರ್.ಬಿ.ಐ. ಪಾತ್ರದ ಸಂಘರ್ಷವನ್ನು ತೆಗೆದುಹಾಕುತ್ತದೆ.
AKT/VBA/SH